/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ಹಳೆಯ ಸ್ನೇಹಿತರಿಂದ ಅಪಮಾನ ಆಗಬಹುದು
- ನಿಮ್ಮ ಧೈರ್ಯ ಬೇರೆಯವರಿಗೆ ಮಾದರಿಯಾಗಲಿದೆ
- ಬೇರೆಯವರಿಂದ ಏನನ್ನು ನಿರೀಕ್ಷಿಸಬೇಡಿ
- ಪ್ರಯಾಣದಿಂದ ಆನಂದ ಆಗಲಿದೆ
- ಸರ್ಕಾರದಿಂದ ಲಾಭದ ಸೂಚನೆ ಇದೆ
- ವಿರೋಧಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾರೆ
- ಹಗುರವಾದ ಮಾತುಕತೆಯಿಂದ ಬೇಸರ ಆಗಬಹುದು
- ವನದುರ್ಗಾ ಆರಾಧನೆ ಮಾಡಿ
ವೃಷಭ
- ಪ್ರೇಮಿಗಳಿಗೆ ಕಷ್ಟದ ಪರಿಸ್ಥಿತಿ, ಸ್ಥಳ ಬದಲಾವಣೆ
- ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ದೊಡ್ಡ ಅನಾಹುತ ಆಗಬಹುದು
- ಆರೋಗ್ಯದಲ್ಲಿ ತಕ್ಷಣ ಏರು ಪೇರು ಆಗಬಹುದು
- ಆದಾಯದಲ್ಲಿ ಇಳಿಕೆಯಾಗುವುದರಿಂದ ಬೇಸರ, ಆತಂಕ ಆಗಲಿದೆ
- ಅನಗತ್ಯ ಸಲಹೆ, ವಾದ ಬೇಡ
- ಬಂಡವಾಳದಲ್ಲಿ ನಷ್ಟ ಮೂಲಕ್ಕೆ ಧಕ್ಕೆ ಉಂಟಾಗಬಹುದು
- ಸೂರ್ಯನಾರಾಯಣನನ್ನು ಪ್ರಾರ್ಥಿಸಿ
ಮಿಥುನ
- ನಿಮ್ಮ ಹಟ ಸ್ವಭಾವದಿಂದ ಅವಮಾನ ಆಗಬಹುದು
- ತಾಯಿ ಮತ್ತು ಅಜ್ಜಿಯವರಿಗೆ ತೊಂದರೆಯಿದೆ ಎಚ್ಚರವಹಿಸಿ
- ಕೆಲವು ಸಹಾಯಕರಿಂದ ವಂಚನೆ ಬೇಸರ ಆಗಬಹುದು
- ನಿದ್ರಾಹೀನತೆ ಆರೋಗ್ಯದ ಬಗ್ಗೆ ನಿಗಾ ಇರಬೇಕು
- ಪ್ರಯಾಣದ ಆಯಾಸದಿಂದ ಕೆಲಸ ಮುಂದೂಡುತ್ತೀರಿ
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ಆಂಜನೇಯ ಸ್ವಾಮಿಯ ಉಪಾಸನೆ ಮಾಡಿ
ಕಟಕ
- ಅಧಿಕಾರಿ ವರ್ಗದವರೊಂದಿಗೆ ವಾದ ಬೇಡ
- ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ ಮಾಡಿ
- ಮಕ್ಕಳ ಸಮಸ್ಯೆಯನ್ನು ಬಗೆಹರಿಸಿ
- ಹಣದ ಅಭಾವ, ಮಾನಸಿಕ ಒತ್ತಡ ಉಂಟಾಗಬಹುದು
- ಪ್ರೇಮಿಗಳ ವಿವಾಹಕ್ಕೆ ವಿಚಾರ ಮಾಡಿ
- ಪ್ರಮುಖ ವ್ಯಕ್ತಿಗಳ ಜೊತೆ ಮಾತು ಸಮಯ ವ್ಯರ್ಥ ಆಗಲಿದೆ
- ಲಕ್ಷ್ಮೀಯನ್ನು 16 ಕಮಲ ಪುಷ್ಪಗಳಿಂದ ಅರ್ಚಿಸಿ
ಸಿಂಹ
- ಸ್ಪರ್ಧಾತ್ಮಕ ಜೀವನದಲ್ಲಿ ಬೇಸರ ಆಗಬಹುದು
- ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಆಗಲಿದೆ ಗಾಬರಿ ಬೇಡ
- ವಿದ್ಯಾರ್ಥಿಗಳಿಗೆ ಮನಸ್ಸು ವಿಚಲಿತವಾಗುವುದರಿಂದ ಅಧ್ಯಯನಕ್ಕೆ ತೊಂದರೆಯಾಗಬಹುದು
- ಈ ದಿನ ನಿರಾಶಾಭಾವನೆ ಬೇಡ
- ಪ್ರೇಮಿಗಳಿಗೆ ಪರಸ್ಪರ ಕಿತ್ತಾಟ ಆಗಬಹುದು
- ಇಂದು ನಿಮ್ಮ ಕರ್ತವ್ಯಕ್ಕೆ ಬದ್ಧರಾಗಿರಿ
- ಧ್ಯಾನ ಮಾಡಿ
ಕನ್ಯಾ
- ಇಂದು ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿಯಿರುವುದಿಲ್ಲ
- ನಿಮ್ಮ ಎಲ್ಲ ಕಾರ್ಯಗಳು ಯಶಸ್ವಿಯಾಗಲಿದೆ
- ಇಂದು ಕುಟುಂಬದಲ್ಲಿ ಶುಭ ವಾತಾವರಣ
- ಈ ದಿನ ಎಲ್ಲರೊಂದಿಗೆ ಸಂತೋಷವಾಗಿರಿ
- ಯಾವುದೇ ಕಾರಣಕ್ಕೂ ಅತಿಯಾದ ನಂಬಿಕೆಬೇಡ
- ಮನೋಬಲ ಹೆಚ್ಚಾಗುವ ದಿನ
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥಿಸಿ
ತುಲಾ
- ಕಲಾ ಪ್ರಪಂಚದ ಹಿರೀಕರಿಗೆ ಗೌರವ ಸಿಗಲಿದೆ
- ಪುಸ್ತಕ ವ್ಯಾಪಾರಿಗಳಿಗೆ ಲಾಭ ಮತ್ತು ಮನ್ನಣೆ ಸಿಗಲಿದೆ
- ಷೇರು ಮಾರುಕಟ್ಟೆಯಿಂದ ಲಾಭವಿದೆ, ಹಣಹೂಡಿಕೆ ಬೇಡ
- ಹಲವರ ಕೆಂಗಣ್ಣಿಗೆ ಗುರಿಯಾಗುತ್ತೀರಿ
- ನಾಯಕತ್ವ ಗೌರವ ತಂದುಕೊಡುತ್ತದೆ
- ಇಷ್ಟ ದೇವತಾ ಪ್ರಾರ್ಥನೆ
ವೃಶ್ಚಿಕ
- ಆದಾಯಕ್ಕಿಂತ ಖರ್ಚು ಅಧಿಕವಾಗಿರುತ್ತದೆ
- ವೈಯಕ್ತಿಕ ವಿಚಾರಗಳಲ್ಲಿ ಗೊಂದಲ ಬೇಡ
- ಅನುಪಯುಕ್ತ ಕೆಲಸಗಳಲ್ಲಿ ಹಣವ್ಯಯ ಆಗಬಹುದು
- ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಉಂಟಾಗಬಹುದು
- ಇಂದು ಮಾನಸಿಕ ಒತ್ತಡವನ್ನು ದೂರಮಾಡಿ
- ಈ ದಿನ ಅಪಘಾತ ಆಗಬಹುದು ಜಾಗ್ರತೆವಹಿಸಿ
- ಕಾಲ ಭೈರವನನ್ನು ಪೂಜಿಸಿ
ಧನುಸ್ಸು
- ಅಧ್ಯಯನದ ಕಡೆ ಮನಸ್ಸಿದ್ದವರಿಗೆ ಮಾತ್ರ ಜಯವಿದೆ
- ಲಾಭವಿದ್ದರೂ ಎಚ್ಚರಿಕೆ ಇರಬೇಕು
- ನಂಬಿದವರಿಂದ ಹಣ ಮೋಸ ಆಗಬಹುದು
- ವೃತ್ತಿ ಅಥವಾ ನೌಕರಿಯ ಒತ್ತಡ ಹೆಚ್ಚಾಗಿರಲಿದೆ
- ವಿದ್ಯಾರ್ಥಿ ಮತ್ತು ಉಪಾಧ್ಯಾಯರ ಮಧ್ಯೆ ವೈಮನಸ್ಸು ಏರ್ಪಡಲಿದೆ
- ಪ್ರೇಮಿಗಳಿಗೆ ಸಮಸ್ಯೆ ಉಂಟಾಗಬಹುದು
- ಉಮಾ ಮಹೇಶ್ವರರ ಆರಾಧನೆ ಮಾಡಿ
ಮಕರ
- ಹಿರಿಯರ ನಿರ್ಲಕ್ಷ್ಯ ಎಲ್ಲದಕ್ಕೂ ಅಡ್ಡಿಯಾಗಲಿದೆ
- ಪೋಷಕರನ್ನು ನಿಂದಿಸಬೇಡಿ, ಅವರ ಆಶೀರ್ವಾದ ಪಡೆಯಿರಿ
- ಸಹೋದರಿಯ ಚಿಂತೆಯಿಂದ ಬೇಸರ ಆಗಬಹುದು
- ಸ್ನೇಹಿತರ ಕೆಲಸಕ್ಕಾಗಿ ಸಮಯ ವ್ಯರ್ಥ ಆಗಲಿದೆ
- ಈ ದಿನ ಪರಸ್ಪರ ಹೊಂದಾಣಿಕೆಯಿರಲಿ
- ರಕ್ತದೊತ್ತಡ ರೋಗಿಗಳು ಎಚ್ಚರವಹಿಸಿ
- ತಿರುಪತಿ ಬೆಟ್ಟ ಹತ್ತುವುದಾಗಿ ಹರಿಸಿಕೊಳ್ಳಿ
ಕುಂಭ
- ಇಂದು ಸಮಯದ ಸದುಪಯೋಗವಾಗಲಿ
- ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಕಾಡಬಹುದು ಎಚ್ಚರಿಕೆವಹಿಸಿ
- ಹಣಕ್ಕೆ ತೊಂದರೆಯಿಲ್ಲ, ಖರ್ಚು ಅಧಿಕ
- ಇಂದು ಬಂಧುಗಳಿಂದ ಟೀಕೆ ಬರಲಿದೆ
- ಉದ್ಯೋಗ ಅಥವಾ ವೃತ್ತಿಯಲ್ಲಿ ಆತಂಕ ಉಂಟಾಗಬಹುದು
- ಆತುರದ ಕ್ರಮದಿಂದ ನಷ್ಟ ಆಗಲಿದೆ
- ಗಣಪತಿಗೆ 21 ಗರಿಕೆ ಸಮರ್ಪಿಸಿ
ಮೀನ
- ನಿಮ್ಮ ಎಲ್ಲಾ ಕಾರ್ಯಗಳನ್ನು ಯೋಜನೆಯಂತೆ ಮಾಡಿ
- ಈ ದಿನ ಉತ್ತಮ ಲಾಭವಿದೆ
- ವೈವಾಹಿಕ ವಿಚಾರದಲ್ಲಿ ನಕಾರಾತ್ಮಕ ಚಿಂತನೆ ಬೇಡ
- ಕುಟುಂಬದ ಭಿನ್ನಾಭಿಪ್ರಾಯವನ್ನು ಸರಿಪಡಿಸಿ
- ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
- ಕುಲದೇವತಾ ಪ್ರಾರ್ಥನೆ ಮಾಡಿ