Advertisment

ಸಂಬಳ ಹೆಚ್ಚಾಗುವ ನಿರೀಕ್ಷೆ.. ಪ್ರೇಮಿಗಳು ಇವತ್ತು ಎಚ್ಚರದಿಂದ ಇರಬೇಕು..!

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹೇಮಂತ ಋತು. ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದ್ವಿತೀಯಾ ತಿಥಿ (ಬಿದಿಗೆ), ಜ್ಯೇಷ್ಠಾ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಸರಿಯಾದ ಸಾತ್ವಿಕವಾದ ಆಹಾರ ಸೇವಿಸಿ
  • ರುಚಿಯ ಹಿಂದೆ ಬಿದ್ದು ಆರೋಗ್ಯದಲ್ಲಿ ಸಮಸ್ಯೆ ಮಾಡಿಕೊಳ್ಳಬೇಡಿ
  • ಹಣದ ವಿಚಾರದಲ್ಲಿ ಶಿಸ್ತುಬದ್ಧವಾಗಿದ್ದರೆ ಉತ್ತಮ
  • ಇಂದು ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿರಲಿ
  • ಶ್ರೀಸೂಕ್ತ ಹೋಮ ಮಾಡಿಸಿ ಒಳ್ಳೆದಾಗುತ್ತದೆ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದಿನ ನಿಮ್ಮ ದಿನಚರಿ ಶಿಸ್ತುಬದ್ಧವಾಗಿ ಆರಂಭವಾಗುತ್ತದೆ
  • ವಿಶೇಷವಾಗಿ ದೇವರ ದರ್ಶಕ್ಕೆ ದೇವಾಲಯಕ್ಕೆ ಹೋಗುವ ಸಾಧ್ಯತೆ 
  • ಆಕಸ್ಮಿಕವಾಗಿ ಮಹಾತ್ಮರ ಭೇಟಿಯಾಗಿ ಮಾರ್ಗದರ್ಶನ ಸಿಗಬಹುದು
  • ವಿದ್ಯಾರ್ಥಿಗಳಿಗೆ ತುಂಬಾ ಆತಂಕ ಉಂಟುಮಾಡುವ ದಿನ 
  • ಸಂಜೆ ವೇಳೆಗೆ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ
  • ಶನಿ ದೇವರನ್ನು ಪ್ರಾರ್ಥನೆ ಮಾಡಿ 

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ನಿಮ್ಮ ಹಣಕಾಸಿನ ವಿಚಾರ ಬಗ್ಗೆ ಹೆಚ್ಚು ಚರ್ಚೆ ಸಾಧ್ಯತೆ
  • ಇಂದು ಕುಟುಂಬದಲ್ಲಿ ತುಂಬಾ ಸಂತೋಷದ ವಾತಾವರಣವಿರುತ್ತದೆ
  • ಆಕಸ್ಮಿಕವಾಗಿ ಎದೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು ಜಾಗ್ರತೆವಹಿಸಿ
  • ಜೀವನಕ್ಕಿಂತ ಜೀವ ಮುಖ್ಯ ಎಂದು ತಿಳಿದು ಕೆಲಸ ಮಾಡಿ
  • ತ್ವರಿತ ರುದ್ರನನ್ನು ಆರಾಧಿಸಿ
Advertisment

ಕಟಕ  

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯವು ಏರ್ಪಡುವ ಸಾಧ್ಯತೆ
  • ಇಂದು ಸಂಶೋಧನಾ ವಿದ್ಯಾರ್ಥಿಗಳಿಗೆ ಶುಭದಿನ 
  • ತಾವು ಪರಿಶ್ರಮದಿಂದ ಕಲೆಹಾಕಿದ ವಿಷಯಕ್ಕೆ ಮಾನ್ಯತೆ, ಗೌರವ ದೊರೆಯುವ ದಿನ
  • ನಿಮ್ಮ ಬೇಜವಾಬ್ದಾರಿಯಿಂದ ವಾಹನ ಅಪಘಾತವಾಗುವ ಸಾಧ್ಯತೆ ಎಚ್ಚರಿಕೆ ಇರಲಿ 
  • ಮೃತ್ಯುಂಜಯನನ್ನು ಆರಾಧಿಸಿ

ಸಿಂಹ  

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಸಾಧ್ಯತೆ 
  • ಮೇಲಾಧಿಕಾರಿಗಳ ಜೊತೆ ವಾದ-ವಿವಾದ ಮಾಡದೇ ಇದ್ದರೆ ಒಳ್ಳೆಯದು
  • ಇಂದು ಯಾವುದೇ ವಿಚಾರವನ್ನ ಹೆಚ್ಚಿಗೆ ಚರ್ಚೆ ಮಾಡದಿದ್ದರೆ ಉತ್ತಮ
  • ವಿದೇಶಿವಾಸಿಗಳಲ್ಲಿ ಕೆಲಸ ಮಾಡುವವರಿಗೆ ತಮ್ಮ ನೌಕರಿಯಲ್ಲಿ ಅಸ್ಥಿರತೆ ಕಾಣಬಹುದು
  • ನಿಮ್ಮ ಮಾತಿನ ಮೇಲೆ ಹಿಡಿತವಿರಲಿ, ಇಲ್ಲದಿದ್ದರೆ ತೊಂದರೆಯಾಗಬಹುದು
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಪಾರಾಯಣ ಮಾಡಿ 

ಕನ್ಯಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳಾಗುವ ಸಾಧ್ಯತೆ
  • ನಿಮ್ಮ ಉದ್ಯೋಗ ಬದಲಾಗಬಹುದು ಬಡ್ತಿ ದೊರೆಯಬಹುದು ಸಂಬಳ ಹೆಚ್ಚಾಗಬಹುದು
  • ಆದರೆ ಮಾನಸಿಕವಾಗಿ ಯಾವುದೇ ಬದಲಾವಣೆ ಇಲ್ಲದೆ ತಟಸ್ಥವಾಗಿರುತ್ತೀರಿ
  • ನಿಮ್ಮ ಪಿತೃದೇವತೆಗಳನ್ನ ಪ್ರಾರ್ಥನೆ ಮಾಡಿ
Advertisment

ತುಲಾ 

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ರಾಜಕಾರಣಿಗಳು ತಮ್ಮ ರಾಜತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉತ್ತಮ ದಿನ
  • ನಿಮ್ಮ ಪ್ರಾಮಾಣಿಕ ಕೆಲಸಗಳಿಂದ ಗೌರವ, ಸ್ಥಾನಬಲ ದೊರೆಯುತ್ತದೆ
  • ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುವಂತೆ ಕಾಣುತ್ತದೆ
  • ಆದರೆ ಯಾವ ಕೆಲಸವೂ ಆಗಿರುವುದಿಲ್ಲ ಎಚ್ಚರಿಕೆವಹಿಸಿ
  • ಯಾವುದೇ ಕಾರಣಕ್ಕೂ ಕ್ಷುಲ್ಲಕ ರಾಜಕಾರಣವನ್ನು ಮಾಡಬೇಡಿ
  • ಮೇಧಾ ದಕ್ಷಿಣಾಮೂರ್ತಿಯನ್ನು ಉಪಾಸನೆ ಮಾಡಿ

ವೃಶ್ಚಿಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಮನಸ್ಸಿನಲ್ಲಿ ಹತ್ತು ಹಲವು ಆಲೋಚನೆಗಳು ಬರುವ ಸಾಧ್ಯತೆ 
  • ಆದರೆ ಯಾವುದೇ ತೀರ್ಮಾನಕ್ಕೆ ಬರದೆ ಗೊಂದಲ ಸಾಧ್ಯತೆ
  • ಮನೆಯಲ್ಲಿ ಈ ಹಿಂದೆ ಖರೀದಿಸಿದ್ದ ವಸ್ತುವಿನ ಬಗ್ಗೆ ತಿಳಿದು ಕೋಪ ಸಾಧ್ಯತೆ
  • ನಿಮ್ಮ ಕೋಪದಿಂದ ಮನಸ್ತಾಪಗಳಾಗಬಹುದು
  • ಇಂದು ತಾಳ್ಮೆಯಿಂದಿರಿ ಕೋಪದಿಂದ ಅನಾಹುತಕ್ಕೆ ಕಾರಣವಾಗಬಹುದು
  • ಭಗವಂತನ ದಶಾವತಾರ ಸ್ಮರಣೆ ಮಾಡಿ

ಧನಸ್ಸು 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಆರೋಗ್ಯದ ದೃಷ್ಟಿಯಿಂದ ಸಮಸ್ಯೆ ಸಾಧ್ಯತೆ ಗಮನವಿರಲಿ
  • ನಿದ್ರಾಹೀನತೆ ಮತ್ತು ನರಗಳ ನೋವು ನಿಮ್ಮನ್ನ ಕಾಡಬಹುದು 
  • ನೀವೇ ಯಾವುದೇ ಆರೈಕೆ ಮಾಡಿಕೊಳ್ಳದೆ ಸರಿಯಾದ ವೈದ್ಯರ ಸಲಹೆ ಪಡೆಯಿರಿ 
  • ನಿಮ್ಮ ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಜಗಳ ಸಾಧ್ಯತೆ
  • ಪ್ರೇಮಿಗಳು ಪರಸ್ಪರ ಅಸಹನೆಯಿಂದ ಜಗಳವಾಗಬಹುದು ಎಚ್ಚರಿಕೆ 
  • ಇಂದು ನಿಮ್ಮ ಮಾತು ಮೃದುವಾಗಿರಲಿ
  • ನಿಮ್ಮ ಪ್ರೀತಿ ಪ್ರೇಮಗಳು ದೂರವಾಗಬಹುದು
  • ವೇಣುಗೋಪಾಲನನ್ನು ಪ್ರಾರ್ಥನೆ ಮಾಡಿ
Advertisment

ಮಕರ 

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಜೀವನದಲ್ಲಿ ನಗು ಹಾಸ್ಯಗಳಿರಲಿ ಎಂದು ತುಂಬಾ ಹಂಬಲಿಸುತ್ತೀರಿ
  • ನಿಮ್ಮ ಪೂರ್ವಜರು ಮಾಡಿದ ಆಸ್ತಿ ಸಿಗಲಿದೆ
  • ಶ್ರೀ ಕೃಷ್ಣನ ಪೂಜೆ ಆರಾಧನೆಯಿಂದ ಶುಭಯೋಗ ಲಭಿಸುವ ಸಾಧ್ಯತೆ ಇದೆ
  • ಹಾಸ್ಯ ಕಲಾವಿದರು ಮಿಮಿಕ್ರಿ ಇತ್ಯಾದಿಗಳನ್ನ ಮಾಡುವವರಿಗೆ ಶುಭದಿನ
  • ಈಶ್ವರ ವಾಹನ ನಂದೀಶ್ವರನನ್ನು ಪ್ರ್ರಾರ್ಥಿಸಿ

ಕುಂಭ  

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಬಾಡಿಗೆ ಮನೆಯಲ್ಲಿರುವವರಿಗೆ ಶುಭದಿನ ಸಾಧ್ಯತೆ
  • ಸ್ವಂತ ಮನೆ ಕಟ್ಟುವ ಕೊಳ್ಳುವ ವಿಚಾರವಾಗಿ ಚರ್ಚೆ ನಡೆಯುತ್ತವೆ
  • ಮಧ್ಯಾಹ್ನದ ವೇಳೆಗೆ ಮನೆಯ ವಿಚಾರವಾಗಿ ಶುಭ ಸೂಚನೆಯು ಸಿಗುತ್ತದೆ
  • ಇಂದು ತುಂಬಾ ಸಂತೋಷದ ದಿನ 
  • ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಾಣಬಹುದು ಎಚ್ಚರಿಕೆ ಇರಲಿ
  • ಭೂದೇವಿಯನ್ನ ಪ್ರಾರ್ಥನೆ ಮಾಡಿ 

ಮೀನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ
  • ನಿಮ್ಮನ್ನ ಆಲಸ್ಯ ಸೋಮಾರಿತನ ಕಾಡಬಹುದು
  • ಆಲಸ್ಯವೆಂಬುದು ಮನುಷ್ಯನ ಶರೀರದಲ್ಲಿಯೇ ಅಡಗಿರುವ ದೊಡ್ಡ ಶತ್ರು
  • ಆದಷ್ಟು ನಿಮ್ಮ ಕೆಲಸ ಕಾರ್ಯಗಳಲ್ಲಿ ಆಲಸ್ಯ ಬೇಡ
  • ಸಾಯಂಕಾಲದ ವೇಳೆಗೆ ಅನಿರೀಕ್ಷಿತವಾಗಿ ಹಣ ಸಿಗುವ ಸಾಧ್ಯತೆ
  • ಯಾವುದೋ ಕೀಟ ಕಚ್ಚಿ ಅಲರ್ಜಿ ನಿಮ್ಮನ್ನ ಕಾಡಬಹುದು ಜಾಗ್ರತೆ  ಇರಲಿ
  • ಪಂಚಮುಖಿ ಆಂಜನೇಯ ಸ್ವಾಮಿಯ ಸ್ಮರಣೆ ಮಾಡಿ
Advertisment

ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment
Advertisment
Advertisment