/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮೇಲಾಧಿಕಾರಿಗಳ ಹಾಗೂ ಕುಟುಂಬದಲ್ಲಿ ವಿಶ್ವಾಸವನ್ನು ಹಾಗೆ ಉಳಿಸಿಕೊಳ್ಳಿ
- ನೌಕರಿಯಲ್ಲಿ ತುಂಬಾ ಜವಾಬ್ದಾರಿಯುತ ಕೆಲಸ ಮಾಡಬೇಕಾದ ದಿನ
- ಸ್ತ್ರೀಯರಿಗೆ ಶುಭಫಲವಿದ್ದರೂ ಮನೆಯ ವಾತಾವರಣ ಸರಿಯಿಲ್ಲದೆ ಬೇಸರ ಉಂಟಾಗಬಹುದು
- ಶರೀರದ ಮೇಲಾಗುವ ಗಾಯದ ಮೇಲೆ ಹೆಚ್ಚು ಗಮನಹರಿಸಿ ಚಿಕಿತ್ಸೆ ಪಡೆಯಿರಿ
- ಈ ದಿನ ಎಷ್ಟೇ ಹಣ ಬಂದರೂ ಕೈಯಲ್ಲಿರುವುದಿಲ್ಲ
- ಕಬ್ಬಿಣದ ಪದಾರ್ಥಗಳಿಂದ ವಾಹನಗಳಿಂದ ಪೆಟ್ಟು ಬೀಳಬಹುದಾದ ಸೂಚನೆಗಳಿವೆ
- ಶನೈಶ್ವರ ದೇವಾಲಯಕ್ಕೆ ಎಳ್ಳೆಣ್ಣೆ ನೀಡಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಯಾವುದೇ ರೀತಿಯ ಗೊಂದಲವಿಲ್ಲದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರೆಸಬಹುದು
- ವಿಲಾಸಿ ಜೀವನಕ್ಕೆ ಹೆಚ್ಚು ಹಣ ಖರ್ಚಾಗಲಿದೆ
- ನೌಕರರಿಗೆ ವರ್ಗಾವಣೆಯ ವಿಚಾರದಲ್ಲಿ ಸ್ವಲ್ಪ ಅಡ್ಡಿಯಾಗಬಹುದು
- ಪಿತ್ರಾರ್ಜಿತ ಆಸ್ತಿ ಲಾಭದ ಸೂಚನೆಗಳಿವೆ
- ದಂಪತಿಗಳಲ್ಲಿ ವಿರಸ ಉಂಟಾಗಬಹುದು
- ಉದ್ಯೋಗದಲ್ಲಿ ಅತಂತ್ರತೆ ಇರುವಂತದ್ದು
- ವಿದ್ಯಾರ್ಥಿಗಳು ವಿದ್ಯಾಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತೀರಿ
- ಬಂಧುಗಳಲ್ಲಿ ಮಾತು ಬೆಳೆದು ನಿಷ್ಠೂರವಾಗುವ ಸಾಧ್ಯತೆಗಳಿವೆ
- ಸೌಂದರ್ಯ ವರ್ಧಕಗಳ ವ್ಯಾಪಾರಸ್ಥರಿಗೆ ಅಧಿಕ ಲಾಭವಿರುವ ದಿನ
- ಅನಗತ್ಯ ಖರ್ಚಿಗೆ ನೂರು ದಾರಿ ಎನ್ನುವಂತೆ ಹೆಚ್ಚು ದುಂದುವೆಚ್ಚವಾಗುವ ಸಾಧ್ಯತೆ
- ಗಣಪತಿಗೆ ಬಿಳಿ ಎಕ್ಕದ ಹೂ ಮತ್ತು ಗರಿಕೆ ಸಮರ್ಪಿಸಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಮರಗೆಲಸ ಮಾಡುವವರಿಗೆ ಅಧಿಕ ಲಾಭ ಸಿಗುವ ಅವಕಾಶಗಳಿವೆ
- ಅಸಹನೆಯಿಂದ ವಾದ ವಿವಾದಗಳು ಏರ್ಪಟಾಗುತ್ತದೆ
- ಮಾತಿಗೆ ಮಾತು ಬೆಳೆಯುವುದರಿಂದ ಮನಃ ಕ್ಲೇಷ ಉಂಟಾಗಲಿದೆ
- ಸ್ತ್ರೀ ವೈದ್ಯರಿಗೆ ಹೆಚ್ಚಿನ ಬೇಡಿಕೆ ಮತ್ತು ಲಾಭವಿರುವ ದಿನ
- ಇಂದು ಅತಿ ಹೆಚ್ಚು ಖರ್ಚಿನ ದಿನವಾಗಿರುತ್ತದೆ
- ಕೋರ್ಟ್ ಕಚೇರಿಗಳಲ್ಲಿನ ಕೇಸ್​ಗಳಿಗೆ ಇಂದು ಜಯ ಸಿಗಲಿದೆ
- ಮನಸ್ಸಿಗೆ ಯಾವುದೊ ಒಂದು ಹಿಂಸೆ ಕಾಡುವ ದಿನ
- ಚಿಕ್ಕ ಮಕ್ಕಳು ಬಿದ್ದು ಪೆಟ್ಟಾಗುವ ಸಾಧ್ಯತೆ ಎಚ್ಚರವಹಿಸಿ
- ಇಂದು ಬಂಧುಗಳ ಜೊತೆಯಲ್ಲಿ ಜಗಳವಾಗಬಹುದು
- ಲಲಿತಾ ಸಹಸ್ರ ನಾಮವನ್ನು ಶ್ರವಣ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಚಟುವಟಿಕೆಗಳ ಕಡೆ ಗಮನ ಹರಿಸಿದರೆ ಮನಸ್ಸಿಗೆ ಸಮಾಧಾನ ಸಿಗಲಿದೆ
- ಮನಸ್ಸಿನ ನೋವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕಾಗುವ ಸಂದರ್ಭ
- ಹಣದ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ
- ಅಳುವುದರಿಂದ ಆಥವಾ ಬೇಸರ ಮಾಡಿಕೊಳ್ಳವುದರಿಂದ ಪ್ರಯೋಜನವಿಲ್ಲ
- ಖುಷಿಯಿಂದ ಯೋಜನೆ ಮಾಡಿದ್ದ ಪ್ರಯಾಣ ಮುಂದೂಡಲ್ಪಡುತ್ತದೆ
- ಕುಟುಂಬದಲ್ಲಿ ಕಲಹ ಕಿರಿಕಿರಿ ಮನಸ್ಸಿಗೆ ಬೇಸರವನ್ನುಂಟು ಮಾಡಲಿದೆ
- ಅವಮಾನಕ್ಕೆ ಗುರಿಯಾಗುವ ಸಾಧ್ಯತೆಗಳಿವೆ
- ಶಾಸ್ತ್ರೀಯ ಸಂಗೀತನನ್ನು ಕೇಳಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ರಾತ್ರಿಯ ಹೊತ್ತಿಗೆ ನಿಮಗೆ ಜ್ಞಾನೋದಯವಾಗಬಹುದು
- ಇಂದು ಆಲಸ್ಯ ಹೆಚ್ಚಾಗಿ ಕಾಡಬಹುದು
- ಮನೆಯವರ ಮಾತನ್ನು ಕೇಳದೆ ನೀವು ನಷ್ಟವನ್ನು ಅನುಭವಿಸುತ್ತೀರಿ
- ನಿಮ್ಮ ಮನಸ್ಸು ಶುದ್ಧವಾಗಿರದ ಕಾರಣ ಮೋಸಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿವೆ
- ಅಪರಿಚಿತರಿಂದ ನಿಮಗೆ ಮೋಸ ಮಾಡುವ ಯೋಜನೆಯನ್ನು ಹಾಕಿಕೊಂಡಿರುತ್ತಾರೆ
- ಅಕಾಲ ಭೋಜನ ವಿರೋಧಿಗಳಿಂದ ತೊಂದರೆ ಸಾಧ್ಯತೆ
- ಕೆಲಸದ ಒತ್ತಡದಿಂದ ನಿದ್ರಾಭಂಗ ಆಗಬಹುದು
- ಈ ದಿನ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತೀರಿ
- ಕೆಲಸಗಳಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ
- ಆಕಸ್ಮಿಕ ಅವಘಡಗಳಿಂದ ಹೆಚ್ಚು ಹಣ ಖರ್ಚಾಗಬಹುದು
- ದುರ್ಗಾದೇವಿಯ ಅಷ್ಟೋತ್ತರ ಪಠಿಸಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ನೀರಸ ಭಾವನೆ ಮನೆಯವರ ಮೇಲೆ ಪ್ರಭಾವ ಬೀರಬಹುದು
- ಈ ದಿನ ವೈರಾಗ್ಯದ ಮಾತು ಬೇಡ
- ಮನೆಯವರಿಗೆ ಮಕ್ಕಳಿಗೆ ಸ್ಫೂರ್ತಿದಾಯಕರಾಗಿರಬೇಕು
- ವೈರಾಗ್ಯ ಭಾವನೆ ಇದ್ದರೆ ಯಾವುದೇ ಕೆಲಸದಲ್ಲೂ ಕೂಡ ಉತ್ಸಾಹ ಇರೋದಿಲ್ಲ
- ಮನಃ ಶಾಂತಿಗಾಗಿ ದೇವರ ಪೂಜೆಗೆ ಶರಣಾಗುವಿರಿ
- ನಿಮ್ಮ ಪ್ರಿಯರನ್ನು ಭೇಟಿಯಾಗುವ ದಿನ
- ನಿಮಗೆ ಕೆಲಸದಲ್ಲಿ ಆಸಕ್ತಿ ಇಲ್ಲ ಅನ್ನೋದನ್ನ ಯಾರಿಗೂ ಕೂಡ ತೋರಿಸಬಾರದು
- ವೈರಾಗ್ಯದ ಭಾವ ನಿಮ್ಮನ್ನು ಅಧಿಕವಾಗಿ ಕಾಡಬಹುದು
- ಆರೋಗ್ಯದ ಬಗ್ಗೆ ಕಾಳಜಿವಹಿಸಿ ವೈದ್ಯರ ಸಲಹೆ ಪಡೆಯಿರಿ
- ಇಂದು ಆದಾಯದಷ್ಟೇ ಖರ್ಚು ಇರುತ್ತದೆ
- ಧ್ಯಾನ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ವಿರೋಧಿಗಳು ಶತ್ರುಗಳು ನಿಮ್ಮ ಬೆಳವಣಿಗೆ ನೋಡಿ ಹೊಟ್ಟೆಕಿಚ್ಚು ಪಡುತ್ತಾರೆ
- ವಿರೋಧ ಮತ್ತು ದ್ವೇಷವನ್ನು ಹೆಚ್ಚು ಮಾಡಿಕೊಳ್ಳುವ ಸ್ಥಿತಿ ತಲುಪುತ್ತೀರಿ
- ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ
- ಉತ್ತಮವಾದ ಬುದ್ಧಿ ಶಕ್ತಿಯನ್ನು ಪ್ರಯೋಗಿಸಿ ಶುಭ ಫಲಗಳನ್ನು ಹೊಂದುತ್ತೀರಿ
- ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಬೇಕಾಗುತ್ತದೆ
- ಈ ದಿನ ಅಹಂಕಾರ ಬೇಡ
- ಸೋಲನ್ನು ಮೆಟ್ಟಿ ನಿಲ್ಲುವ ಶಕ್ತಿ ನಿಮಗೆ ಇರುತ್ತದೆ
- ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನವಾಗಿದೆ
- ನಿಮ್ಮ ಗುರುಗಳ ಮಾರ್ಗದರ್ಶನ ಪಡೆಯಿರಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಯಾವುದೊ ನಿರ್ಧಾರ ತೆಗೆದುಕೊಂಡು ಅದರಿಂದ ಬೇಸರ ಪಡುತ್ತೀರಿ
- ಸರಿ ತಪ್ಪುಗಳ ಬಗ್ಗೆ ವಿವೇಚನೆ ಇಲ್ಲದೆ ವ್ಯವಹರಿಸಬೇಕಾಗುತ್ತದೆ
- ಯತ್ನ ಕಾರ್ಯದಲ್ಲಿ ನಿಮಗೆ ಜಯಪ್ರದವಾಗಲಿದೆ
- ಕಠಿಣ ನಿರ್ಧಾರಗಳಿಂದ ಉತ್ತಮ ಫಲ ಸಿಗುವ ದಿನ
- ಮಕ್ಕಳಿಂದ ಸ್ವಲ್ಪ ಕಿರಿಕಿರಿ ಉಂಟಾಗಬಹುದು
- ಇಲ್ಲ ಸಲ್ಲದ ಅಪವಾದಗಳಿಗೆ ಗುರಿಯಾಗುತ್ತೀರಿ
- ವೈದ್ಯರ ಸಲಹೆಯನ್ನು ನಿರ್ಲಕ್ಷ ಮಾಡುವುದರಿಂದ ಆರೋಗ್ಯದಲ್ಲಿ ಏರು-ಪೇರಾಗಬಹುದು
- ಸಾಯಂಕಾಲದಲ್ಲಿ ಕೆಲವು ವೈಯಕ್ತಿಕ ವಿಚಾರಗಳಿಗೆ ಅಡ್ಡಿಯಾಗುವ ಸಾಧ್ಯತೆಗಳಿವೆ
- ವಿದ್ಯಾರ್ಥಿಗಳಿಗೆ ಆರೋಗ್ಯ ದೃಷ್ಟಿಯಿಂದ ಸಣ್ಣ ಪುಟ್ಟ ಹಿನ್ನಡೆಯಾಗಬಹುದು
- ಈ ದಿನ ಕೆಲಸದಲ್ಲಿ ಅತಿಯಾದ ಒತ್ತಡ ಉಂಟಾಗಬಹುದು
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥಿಸಿ
ಧನುಸ್
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲವಾಗುವಂತಹ ದಿನ
- ಮಕ್ಕಳಿಂದ ಬೇಸರ ನೋವು ಆಗುವ ದಿನ
- ಅನಾವಶ್ಯಕವಾಗಿ ದ್ವೇಷ ಬೆಳೆಯಬಹುದಾದ ಸಾಧ್ಯತೆ
- ವ್ಯವಹಾರದಲ್ಲಿ ನಂಬಿಕೆ ಉಳಿಸಿಕೊಳ್ಳಲು ತುಂಬಾ ಸಾಹಸ ಪಡಬೇಕಾಗುತ್ತದೆ
- ಕಮಿಷನ್ ಏಜೆಂಟರುಗಳಿಗೆ ಸ್ವಲ್ಪ ಹಿನ್ನಡೆಯಾಗಬಹುದು
- ಹಳೆಯ ವ್ಯಾಪಾರ ವ್ಯವಹಾರಗಳಿಂದ ಧನಹಾನಿಯಾಗುವ ಸಾಧ್ಯತೆ
- ಕೃಷಿ ಕ್ಷೇತ್ರದಲ್ಲಿರುವ ವ್ಯಾಪಾರಸ್ಥರಿಗೆ ಅನುಕೂಲ ಉಂಟಾಗುತ್ತದೆ
- ಹಣದ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು
- ಮಿತ್ರರಲ್ಲಿ ಜಗಳ ಆಗಬಹುದು
- ದುರ್ಗಾ ಪ್ರಾರ್ಥನೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಹಿಳೆಯರಿಗೆ ವ್ಯಾಪಾರದ ದೃಷ್ಟಿಯಿಂದ ಮೋಸವಾಗುವ ಸಾಧ್ಯತೆಗಳಿವೆ
- ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ವಾದ ವಿವಾದಗಳನ್ನು ಮಾಡಬೇಡಿ
- ದಿಢೀರ್ ಪ್ರಯಾಣ ಮಾಡುವುದರಿಂದ ತೊಂದರೆಯಾಗಬಹುದು
- ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಹಿತಶತ್ರುಗಳಿಂದ ತೊಂದರೆ ಆಗುವ ಸಂಭವಗಳು ಹೆಚ್ಚಾಗಿ ಕಾಣಲಿದೆ
- ಆರೋಗ್ಯದ ದೃಷ್ಟಿಯಿಂದ ಶುಭಕಾರ್ಯಗಳನ್ನು ಮುಂದೂಡಿದರೆ ಒಳ್ಳೆಯದು
- ಋಣಬಾಧೆಯಿಂದ ಮುಕ್ತರಾಗಬಹುದು
- ವಿದ್ಯಾರ್ಥಿಗಳಿಗೆ ಮುನ್ನಡೆಯಿಂದ ಯಶಸ್ಸನ್ನು ಕಾಣುತ್ತೀರಿ
- ಅನಗತ್ಯವಾದ ವಸ್ತುಗಳ ಖರೀದಿ ಮಾಡುವಾಗ ಜಾಗ್ರತೆ ಇರಲಿ
- ಉಗ್ರ ನರಸಿಂಹನನ್ನು ಪ್ರಾರ್ಥಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೌಕರಿಯಲ್ಲಿರುವವರು ವರ್ಗಾವಣೆಗೆ ಪ್ರಯತ್ನಿಸುತ್ತಿದ್ದರೆ ಅವರಿಗೆ ಅನುಕೂಲವಾಗುತ್ತದೆ
- ಪಲಾಪೇಕ್ಷೆ ಇಲ್ಲದೆ ಮಾಡಿರುವ ದಾನ ಸಂಪೂರ್ಣವಾದ ಫಲ ಸಿಗುತ್ತದೆ
- ಯಾರಿಗಾದರೂ ಸಹಾಯ ಮಾಡಿದರೆ ಅವರಿಂದ ನಮಗೆ ಏನು ಅನುಕೂಲವಾಗುತ್ತದೆ ಅನ್ನೋ ಯೋಚನೆಗಳು ಬರಬಹುದು
- ಈ ದಿನ ಸಾಲವನ್ನು ತೀರಿಸುವ ಅವಕಾಶವಿರುತ್ತದೆ
- ಪ್ರಯಾಣವನ್ನು ಮುಂದೂಡಬೇಕಾದ ಸಂದರ್ಭ ಬರಬಹುದು
- ದಾನ ಧರ್ಮಗಳಲ್ಲಿ ಆಸಕ್ತಿ ಬಂದರೂ ದುರಾಲೋಚನೆಗಳು ಜೊತೆ ಜೊತೆಯಾಗಿರುತ್ತದೆ
- ಪಾಲುದಾರಿಕೆ ಹಣ ಹೂಡಿಕೆಯಲ್ಲಿ ಆರ್ಥಿಕ ಸಂಕಷ್ಟವನ್ನು ತಮಗೆ ತಾವೇ ತಂದುಕೊಳ್ಳುವ ಪರಿಸ್ಥಿತಿ ಇದೆ
- ನ್ಯಾಯಾಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಶುಭ ಫಲವಿದೆ
- ಕುಟುಂಬದಲ್ಲಿ ವಾಗ್ವಾದ ನಡೆಯಬಹುದು
- ವಿಷ್ಣು ಸಹಸ್ರ ನಾಮ ಪಠಿಸಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಹಿಳಾ ನೌಕರರಿಗೆ ಶುಭ ಸುದ್ಧಿಯಿದೆ
- ಹಿರಿಯರ ಮಾತಿಗೆ ಗೌರವ ನೀಡಿ
- ನೀವು ಹೊರಗಡೆ ಕೆಲಸಕ್ಕೆ ಹೋದರೂ ನಿಮಗೆ ಮಾನಸಿಕ ನೆಮ್ಮದಿಯಿರುವುದಿಲ್ಲ
- ಹಿರಿಯರ ಕೋಪಕ್ಕೆ ಒಳಗಾಗಬಹುದು
- ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಎಲ್ಲಾ ರೀತಿಯಲ್ಲಿಯೂ ಒಳ್ಳೆಯದು
- ಈ ದಿನ ಆರೋಗ್ಯದ ಕಡೆ ಗಮನಹರಿಸಿ
- ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರೀಕರಿಸಿ ಹೆಚ್ಚು ಓದಲು ಅವಕಾಶವನ್ನು ಮಾಡಿಕೊಡದೆ ಇರುವ ಸಂದರ್ಭ ಇದಾಗಿರುತ್ತದೆ
- ಬೇರೆಯವರ ಮಾತಿಗೆ ಮರುಳಾಗಬೇಡಿ
- ವಿದ್ಯಾರ್ಥಿಗಳು ಬಹಳ ಜಾಗ್ರತೆಯಿಂದಿರಬೇಕು
- ಈ ದಿನ ನಿಮ್ಮ ಮಕ್ಕಳಿಂದ ತೊಂದರೆಯಾಗಬಹುದು
- ನಿಮ್ಮ ತೀರ್ಮಾನವನ್ನು ಸ್ಥಿರವಾಗಿರಿಸಿಕೊಂಡರೆ ವ್ಯವಹಾರದಲ್ಲಿ ಲಾಭವಿದೆ\
- ಗುರುಗಳನ್ನು ಪ್ರಾರ್ಥಿಸಿ
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us