/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ನಡವಳಿಕೆ ನಂಬಿಕೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ
- ಭಾವನೆಗಳಿಗೆ ಒಳಗಾಗಿ ಕೆಲಸ ಹಾಳಾಗಬಹುದು
- ನಿಧಾನವಾಗಿ ನಡೆಯುತ್ತಿರುವ ಕಾರ್ಯಗಳು ತಕ್ಷಣ ನಿಲ್ಲಬಹುದು
- ತಂದೆಯವರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ
- ಅತಿಯಾದ ಶಿಸ್ತು - ಕೋಪಗಳು ಬೇಡ
- ಒಟ್ಟಾರೆ ಈ ದಿನ ಚೆನ್ನಾಗಿರುವುದಿಲ್ಲ (TIME ಸರಿಯಿಲ್ಲ)
- ಹಿರಿಯರ ಆಶೀರ್ವಾದ ಪಡೆಯಿರಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ನೇಹಿತರೊಂದಿಗೆ ಕಾಲಾಹರಣ ಮಾಡುತ್ತೀರಿ
- ವ್ಯಾಪಾರದಲ್ಲಿ ವ್ಯವಹಾರದಲ್ಲಿ ಸ್ವಲ್ಪ ನಷ್ಟ ಆಗಬಹುದು
- ಭವಿಷ್ಯದಲ್ಲಿ ಮುಂದುವರಿಯುವ ಬಗ್ಗೆ ಚಿಂತನೆ ಮಾಡುತ್ತೀರಿ
- ಇಂದು ಯಾವುದೇ ಒತ್ತಡಗಳಿರುವುದಿಲ್ಲ
- ನಿಮ್ಮ ವರ್ತನೆಯಿಂದ ಹಲವರು ದೂರವಾಗಬಹುದು
- ಆರೋಗ್ಯ ಸೇವೆ ಮಾಡುವವರಿಗೆ ಶುಭದಿನ
- ಸಂಪತ್ ಲಕ್ಷ್ಮೀಯನ್ನು ಪ್ರಾರ್ಥಿಸಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಲಾಕ್ಷೇತ್ರದವರಿಗೆ ಪುರಸ್ಕಾರ ಲಭಿಸುತ್ತದೆ
- ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ನಿರಾಶೆ ಆಗಬಹುದು
- ವ್ಯವಹಾರದಲ್ಲಿ ಹೊಸ ಸಿಬ್ಬಂದಿಯ ನೇಮಕಾತಿ ಆಗಲಿದೆ
- ನಿಮ್ಮ ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸಲು ಅವಕಾಶವಿದೆ
- ಪಿತೃ ಸಂಪತ್ತು ವೃದ್ದಿಯಾಗಬಹುದು
- ಅನುಭವಿಗಳಿಂದ ವ್ಯವಹಾರದಲ್ಲಿ ಹಿನ್ನಡೆ
- ಶಾರದಾ ಪರಮೇಶ್ವರಿಯನ್ನು ಆರಾಧಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾನೂನಿನ ಹೋರಾಟದಲ್ಲಿ ಅಪಜಯ
- ಆದಾಯ ಕಡಿಮೆ ಕೆಲಸ ಹೆಚ್ಚು
- ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಗೊಂದಲದ ಮಾತು
- ತಾರ್ಕಿಕ ನಿಲುವು ಯಶಸ್ಸಿಗೆ ಕಾರಣವಾಗುತ್ತದೆ
- ಹಿರಿಯರು ನಿಮ್ಮಿಂದ ಪ್ರಭಾವಿತರಾಗುತ್ತಾರೆ
- ಉದ್ಯೋಗದಲ್ಲಿ ನಿಮ್ಮ ಸೇವೆ ಬೇರೆಯವರಿಗೆ ಮಾದರಿ
- ವರಾಹ ಸ್ವಾಮಿಯನ್ನು ಅರ್ಚಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಹೊಸ ಕೆಲಸ ಪ್ರಾರಂಭಿಸಬೇಡಿ
- ಅತಿಯಾದ ಕೋಪದ ದಿನ
- ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
- ಹಣದ ಲೆಕ್ಕಾಚಾರದಲ್ಲಿ ವ್ಯತ್ಯಾಸಯಾಗುವುದರಿಂದ ಕಿರಿ ಕಿರಿ ಅಗಬಹುದು
- ಮಾನಸಿಕ ಒತ್ತಡದಿಂದ ತೊಂದರೆ
- ಬದಲಾಗುತ್ತಿರುವ ಹವಾಮಾನದಿಂದ ಶೀತ ಜ್ವರದ ಸಮಸ್ಯೆ ಕಾಡಬಹುದು
- ಅಮೃತ ಮೃತ್ಯುಂಜಯ ಜಪ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಣಕಾಸಿನ ವಿಚಾರ ಗಂಭೀರ ಆಗಬಹುದು
- ಹೊಸ ಕೆಲಸಗಳಲ್ಲಿ ಆಸಕ್ತಿ ಇರಲಿದೆ
- ವೈಯಕ್ತಿಕ ಸಂಬಂಧಗಳಲ್ಲಿ ಗಟ್ಟಿತನದಿಂದಿರುತ್ತೀರಿ
- ವ್ಯಾಪಾರ ವ್ಯವಹಾರದವರಿಗೆ ದೊಡ್ಡ ಮೊತ್ತದ ಲಾಭ ಸಿಗಲಿದೆ
- ಕುಟುಂಬಕ್ಕೆ ಸಮಯ ನೀಡಲು ಅವಕಾಶ ಕಡಿಮೆ
- ಜವಾಬ್ದಾರಿ ಹೆಚ್ಚಾಗಿ ಆತಂಕ ಪ್ರಾರಂಭವಾಗುತ್ತದೆ
- ಐಶ್ವರ್ಯ ಲಕ್ಷ್ಮೀ ಪ್ರಾರ್ಥನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಹೋದ್ಯೋಗಿಗಳೊಂದಿಗೆ ಶಿಸ್ತನ್ನು ಕಾಪಾಡಿಕೊಳ್ಳಿ
- ಕೆಲಸದ ಒತ್ತಡ ತುಂಬಾ ಇರುತ್ತದೆ
- ಸಮಯಾಭಾವ ಅನಿಸಬಹುದು
- ವಿಶ್ರಾಂತಿಯ ಅಗತ್ಯ ತುಂಬಾ ಕಾಡುತ್ತದೆ
- ಹೃದ್ರೋಗಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಯಾವುದೇ ಹೊಸ ಕೆಲಸ ಮಾಡಬೇಡಿ
- ಸೂರ್ಯ ನಾರಾಯಣನನ್ನು ಪ್ರಾರ್ಥಿಸಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಜೀವನ ಸಾಮರಸ್ಯದಿಂದ ಕೂಡಿರುತ್ತದೆ
- ಇಂದು ನಿಮ್ಮ ಆತ್ಮ ವಿಶ್ವಾಸ ಚೆನ್ನಾಗಿರುತ್ತದೆ
- ಮನೆಯ ಜವಾಬ್ದಾರಿಯಲ್ಲಿ ಸಕ್ರಿಯರಾಗಿರುತ್ತೀರಿ
- ಬೇರೆಯವರನ್ನು ಅರ್ಥಮಾಡಿಕೊಳ್ಳಿ
- ಬೇರೆಯವರು ನಿಮ್ಮ ಆಶ್ರಯವನ್ನು ಅಪೇಕ್ಷಿಸುತ್ತಾರೆ ನಿರಾಕರಿಸಬೇಡಿ
- ದೃಢ ವಿಶ್ವಾಸದಿಂದ ಬೇರೆಯವರನ್ನು ಗೆಲ್ಲುತ್ತೀರಿ
- ಆಂಜನೇಯನನ್ನು ಪ್ರಾರ್ಥಿಸಿ
ಧನಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಭವಿಷ್ಯದ ಬಗ್ಗೆ ಚಿಂತಿಸುತ್ತೀರಿ
- ಬುದ್ದಿವಂತಿಕೆಯಿಂದ ಕೆಲಸ ಮಾಡಿ
- ಆರೋಗ್ಯ ಸಮಸ್ಯೆ ಕಾಡಬಹುದು
- ದಾಂಪತ್ಯದಲ್ಲಿ ಒತ್ತಡ ಇರಲಿದೆ
- ವಾಹನಾಪಘಾತವಾಗಬಹುದು ಎಚ್ಚರಿಕೆವಹಿಸಿ
- ಹೊಸಬರ ಪರಿಚಯ ಸಂಪರ್ಕದಿಂದ ಗೆಲುವು ಸಾಧಿಸುತ್ತೀರಿ
- ಲಕ್ಷ್ಮೀನಾರಾಯಣರ ಅನುಗ್ರಹ ಪಡೆಯಿರಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸ ಉದ್ಯೋಗಾಕಾಂಕ್ಷಿಗಳಿಗೆ ಯಶಸ್ಸು ಸಿಗಲಿದೆ
- ಪ್ರೇಮಿಗಳಿಗೆ ಅಡ್ಡಿಯಾಗುವ ದಿನ
- ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚು ಗಮನಹರಿಸಬೇಕು
- ಬೇರೆಯವರ ತಪ್ಪು ತಿದ್ದಲು ಹೋದಬೇಡಿ - ಅವಮಾನ
- ಕೇಳಿದರೆ ಮಾತ್ರ ಬೇರೆಯವರಿಗೆ ಸಲಹೆ ಕೊಡಿ
- ಮನೆಯಲ್ಲಿ ಹಣದ ಸಮಸ್ಯೆಯಾಗಬಹುದು
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ವೃತ್ತಿಗೆ ಸಂಬಂಧಿಸಿದಂತೆ ವಿಷಯ ಸಂಗ್ರಹ ಮಾಡುವ ಅವಕಾಶವಿದೆ
- ಸ್ನೇಹಿತರೊಂದಿಗಿನ ವ್ಯವಹಾರ ವೃದ್ಧಿಯಾಗಲಿದೆ
- ಶತ್ರು ಜಯ ಅನ್ನೋದು ಉತ್ತಮವಾದ ಫಲ ಕೊಡುತ್ತದೆ
- ಕಾರ್ಯ ಕ್ಷೇತ್ರದಲ್ಲಿ ಹಲವಾರು ವಿಷಯಗಳಲ್ಲಿ ನಿಯಂತ್ರಣ ಕಾರ್ಯ ನಡೆಯುತ್ತದೆ
- ಸಾಮಾಜಿಕ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತೀರಿ
- ಉದಾರ ವರ್ತನೆಯಿಂದ ಜನಪ್ರಿಯತೆಗಳಿಸುತ್ತೀರಿ
- ಕಾರ್ತಿಕೇಯನ ಆರಾಧನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಶೈಲಿ ಬದಲಿಸಿಕೊಳ್ಳಬೇಕು
- ಸರ್ಕಾರಿ ಕೆಲಸಗಳು ನಿಮಗೆ ಸಿಗುವಂತ ಅನುಕೂಲವಿದೆ
- ಸಾರ್ವಜನಿಕ ಕೆಲಸಗಳಲ್ಲಿ ಭಾಗವಹಿಸುವ ಅವಕಾಶವಿದೆ
- ನಿತ್ಯದ ಎಲ್ಲಾ ಕೆಲಸಗಳು ಕೂಡ ಸಕಾಲದಲ್ಲಿ ಆಗಲಿದೆ
- ವ್ಯಾವಹಾರಿಕವಾಗಿ ಎಲ್ಲಾ ದೌರ್ಬಲ್ಯಗಳನ್ನ ದೂರ ಮಾಡಿಕೊಳ್ಳಲು ಇದೊಂದು ಅವಕಾಶ
- ಯಾವುದೇ ಒತ್ತಡಗಳಿಲ್ಲದೆ ತುಂಬ ವಿರಾಮವಾದ ದಿನ
- ಕುಲದೇವತೆಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us