Rashi Bhavishya: ಹಳೆಯ ಶತ್ರುಗಳ ಕಾಟ, ಕುಟುಂಬದಲ್ಲಿ ಸಣ್ಣಪುಟ್ಟ ಕಲಹ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಪುಷ್ಯ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಸ್ವಾತಿ ನಕ್ಷತ್ರ. ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇಷ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಳೆಯ ಶತ್ರುಗಳ ಕಾಟ ಇಂದು ತಲೆದೋರಬಹುದು
  • ಕುಟುಂಬದಲ್ಲೂ ಕೂಡ ಸಣ್ಣಪುಟ್ಟ ಸಮಸ್ಯೆಗಳು ಉದ್ಭವವಾಗಬಹುದು
  • ನಿಮ್ಮ ಶಕ್ತಿ ಮೀರಿದ ವ್ಯವಹಾರ,ಸಂಬಂಧ,ಸಂಪರ್ಕಗಳಿಂದ ಅವಮಾನ ಸಾಧ್ಯತೆ ಇದೆ
  • ವೈಯಕ್ತಿಕ ವಿಚಾರಕ್ಕೆ ಮನೆಯವರಿಗೆಲ್ಲಾ ಅವಮಾನ ಮಾಡುವ ಸಂದರ್ಭವಿರಬಹುದು
  • ಮಾನಸಿಕವಾಗಿ ನೀವು ತುಂಬಾ ಕುಗ್ಗಿ ಹೋಗುತ್ತೀರಿ
  • ವ್ಯಾಯಾಮದಿಂದ ದೇಹಕ್ಕೂ ಧ್ಯಾನದಿಂದ ಮನಸ್ಸಿಗೂ ನೆಮ್ಮದಿ ಸಿಗಬಹುದು
  • ಶತ್ರು ಸಂಹಾರಕ ಹಿಡುಂಬ ಮಂತ್ರ ಜಪ ಮಾಡಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕಾರ್ಯಕ್ಷೇತ್ರಗಳಲ್ಲಿ, ವ್ಯಾಪಾರಗಳಲ್ಲಿ ಪೈಪೋಟಿಯಿಂದ ತೊಂದರೆಯ ಸೂಚನೆ ಇದೆ
  • ಬೇರೆಯವರನ್ನು ತೃಪ್ತಿ ಪಡಿಸಲು ಹಣ ಖರ್ಚಾಗಬಹುದು
  • ನಿಯಮಿತ ಆಹಾರ ಸೇವನೆ ಒಳಿತು
  • ಶರೀರದ ನೋವು ನಿಮ್ಮನ್ನು ಕಾಡಬಹುದು
  • ಕೂರುವುದಕ್ಕೆ, ಓಡಾಡಲು ತುಂಬಾ ಪ್ರಯಾಸ ಪಡಬೇಕಾಗುತ್ತದೆ
  • ಮನಸ್ಸಿಗೆ ಯಾವುದೇ ರೀತಿಯ ಆಯಾಸ ಕಾಣುವುದಿಲ್ಲ, ವ್ಯಾವಹಾರಿಕವಾಗಿಯೇ ಚಿಂತೆ ಮಾಡುತ್ತಿರುತ್ತೀರಿ 
  • ಆರೋಗ್ಯ ಬಹಳ ಮುಖ್ಯ ನಂತರ ವ್ಯವಹಾರ ಅನ್ನೋದನ್ನ ಅರಿಯಬೇಕಾಗುತ್ತದೆ
  • ಬಿಳಿ ಎಕ್ಕದ ಗಿಡವನ್ನು ಪೂಜಿಸಿ

ಮಿಥುನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನಸ್ಸಿಗೆ ಒಪ್ಪುವಂತಹ ಕೆಲಸವನ್ನು ಮಾಡಿ
  • ಹತ್ತು ಹಲವು ಆಲೋಚನೆಗಳು ಬೇಡ, ಒಂದು ತೀರ್ಮಾನಕ್ಕೆ ಬದ್ಧರಾಗಿರಿ
  • ಸಂಬಂಧಿಕರು ಮತ್ತು ಸ್ನೇಹಿತರ ಒತ್ತಡ ಕೆಲಸ ನಿಮಿತ್ತ ಹೆಚ್ಚಾಗಿರುತ್ತದೆ
  • ಉನ್ನತ ಹುದ್ದೆಯಲ್ಲಿರುವವರ ದಾಕ್ಷಿಣ್ಯಕ್ಕೆ ಕೆಲಸ ಮಾಡಬೇಕಾಗುತ್ತದೆ ಜಾಗ್ರತೆ ಇರಲಿ
  • ಹಣ ಅಥವಾ ದ್ರವ್ಯಕ್ಕೆ ಆಸೆ ಪಟ್ಟು ಅವಮಾನವಾಗುವ ಸಾಧ್ಯತೆ ಇದೆ
  • ಪ್ರಾಮಾಣಿಕ ಪ್ರಯತ್ನ ಮಾಡಿ ಶುಭವಾಗುತ್ತದೆ
  • ಕರ್ತವ್ಯ ಲೋಪ ಮಾಡಬೇಡಿ
  • ಚೌಡೀ ದೇವಿಯನ್ನು ಆರಾಧಿಸಿ

ಕಟಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನೆಯಲ್ಲಿರುವ ಹಿರೀಕರ, ಉದ್ಯೋಗಿಗಳು ತಮ್ಮ ಮೇಲಾಧಿಕಾರಿಗಳ ವಿಶ್ವಾಸಕ್ಕೆ ಭಾಜನರಾಗುತ್ತೀರಿ
  • ಪ್ರೇಮಿಗಳಿಗೆ ತುಂಬಾ ಕುತೂಹಲಕರ ಸಮಯ ಎಂದು ಹೇಳಬಹುದು
  • ಆಸಕ್ತಿಗನುಗುಣವಾಗಿ ಕೆಲಸಗಳು ಸಿಗಬಹುದು
  • ಅಲಂಕಾರ ಸಾಮಗ್ರಿಗಳಿಗೆ,ಉಡುಗೊರೆಗಳಿಗೆ ತುಂಬಾ ಹಣ ಖರ್ಚು ಮಾಡಬೇಕಾದ ಸಮಯ
  • ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ಸೃಷ್ಟಿಯಾಗಬಹುದು
  • ಹೆಣ್ಣು ಮಕ್ಕಳಿಗೆ ಸಾಯಂಕಾಲ ಹೊತ್ತಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು ಎಚ್ಚರಿಕೆ
  • ರೇಣುಕಾಂಬಾ ದೇವಿಯನ್ನು ಪ್ರಾರ್ಥಿಸಿ

ಸಿಂಹ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಚಿಕ್ಕ ಮಕ್ಕಳು ಅಥವಾ ವಿದ್ಯಾರ್ಥಿಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು ನಿಗಾವಹಿಸಿ
  • ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗಬಹುದು
  • ಮನಸ್ಸು ಬೇರೆ ಬೇರೆ ಕಡೆಗೆ ಎಳೆದುಕೊಂಡು ಹೋಗುತ್ತದೆ
  • ನಕಾರಾತ್ಮಕ ವಿಷಯಗಳೇ ಹೆಚ್ಚು ಗಮನ ಸೆಳೆಯುವಂತಹದ್ದು
  • ಮನಸ್ಸು ಅತೃಪ್ತಿಯಿಂದ ಕೂಡಿರುತ್ತದೆ 
  • ಇಲ್ಲಿ ಸಮಾಧಾನ, ತಾಳ್ಮೆ ಬೇಕಾಗುತ್ತದೆ
  • ಮಾಡಬೇಕಾದ ಕರ್ತವ್ಯದಲ್ಲಿ, ಕೆಲಸದಲ್ಲಿ ಬಲಹೀನರಾಗಬಹುದು
  • ನಾವೆಲ್ಲವನ್ನು ಕಳೆದುಕೊಂಡೆ ಎಂಬ ನೋವು ಮನಸ್ಸಿನಲ್ಲಿರುತ್ತದೆ ಇದನ್ನ ಮನಸ್ಸಿನಿಂದ ತೆಗೆದುಹಾಕಬೇಕು
  • ರಕ್ತೇಶ್ವರೀ ಮಂತ್ರ ಶ್ರವಣ ಮಾಡಿ

ಕನ್ಯಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಣ್ಣ ಸಣ್ಣ ವಿಚಾರಗಳಿಗೆ ಮನಸ್ಸು ವಿಕೃತವಾಗುವುದು
  • ಎಲ್ಲದಕ್ಕೂ ಜಗಳವೇ ಪರಿಹಾರವಲ್ಲ ಎಂಬುದನ್ನು ಅರಿಯಬೇಕಾಗುತ್ತದೆ
  • ನಿಮ್ಮ ಕಾರ್ಯಕೇತ್ರ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಡೆತಡೆ ಕಾಣಬಹುದು
  • ವಯಸ್ಸಿನ ಅರಿವಿಲ್ಲದ ಯುವ ಪ್ರೇಮಿಗಳಿಗೆ ತೊಂದರೆಯಿದೆ ಜಾಗ್ರತೆ
  • ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಗೆ ಸಿಲುಕಿಕೊಳ್ಳುತ್ತೀರಿ
  • ಮನಸ್ಸಿನಲ್ಲಿ ಕಲ್ಮಶಗಳಿಲ್ಲದಿದ್ದರೂ ಹೊಸದಾಗಿ ಹುಟ್ಟುವ ಸಾಧ್ಯತೆಗಳಿರುತ್ತವೆ
  • ಮನೋಭವ ಮಂತ್ರ ಜಪಿಸಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅವಕಾಶಗಳ ಲಾಭವನ್ನು ಪಡೆಯಲು ಮುಂದಾಗಬೇಡಿ  ಅವಮಾನವಾಗುವ ಸೂಚನೆಗಳಿರುತ್ತದೆ
  • ರಾಯಭಾರೀ ಕೆಲಸ ಮಾಡುವವರಿಗೆ ಫಲವಿದೆ
  • ರಾಜಕೀಯ ವ್ಯಕ್ತಿಗಳು ತಮ್ಮ ಶಕ್ತಿ ಸಾಮಥ್ರ್ಯವನ್ನು ತಮ್ಮ ಕ್ಷೇತ್ರದಲ್ಲಿ ಪ್ರದರ್ಶಿಸಲು ಮುಂದಾಗುತ್ತಾರೆ 
  • ಪೂರ್ವಿಕರ ವ್ಯಾಪಾರ ಅಭಿವೃದ್ಧಿಯಾಗಲಿದೆ
  • ಹಳೆಯ ನೆನಪು ಎಚ್ಚರಿಕೆಯಾಗಿ ಪರಿಣಮಿಸಬಹುದು
  • ಸಂಬಂಧಿಕರ ಬೆಂಬಲ ಮಧ್ಯಮವಾಗಿರುವಂತಹುದು ಅದು ಬಹಳ ಮುಖ್ಯ
  • ಸಂಬಂಧಿಕರ ಬಾಂಧವ್ಯ ಗಟ್ಟಿ ಮಾಡಿಕೊಳ್ಳಿ, ವಿರೋಧ ಮಾಡಿಕೊಳ್ಳಬೇಡಿ
  • ಸುಮುಚೀ ದೇವಿಯನ್ನು ಪ್ರಾರ್ಥಿಸಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಈ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ 
  • ನಿಮ್ಮ ಸಹಪಾಠಿಗಳಿಗೆ, ಸ್ನೇಹಿತರಿಗೆ ವಸ್ತು ಅಥವಾ ಹಣವನ್ನು ದಾನ ಮಾಡುವುದಕ್ಕೆ ಮುಂದಾಗುತ್ತೀರಿ
  •  ಸಾಲ ಬಾಕಿ ಬರುವವರಿಗೆ ಇಂದು ಹಣ ಕೈ ಸೇರಬಹುದು
  • ಮುಖ್ಯವಾಗಿ ಮಾಡಬೇಕಾದ ಕೆಲಸಗಳು ಮಂದಗತಿಯನ್ನು ಹೊಂದುತ್ತದೆ
  • ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಸಾಯಂಕಾಲ ಅಷ್ಟು ಚೆನ್ನಾಗಿರುವ ವಾತಾವರಣ ಇರುವುದಿಲ್ಲ
  • ಕುಂಭ ಕಂಠನೀ ಮಂತ್ರ ಜಪ ಪಠಿಸಿ

ಧನುಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದವರ ಸಂತೋಷಕ್ಕಾಗಿ ನೀವು ತ್ಯಾಗ ಮಾಡಬೇಕಾಗಬಹುದು
  • ತುಂಬಾ ಒತ್ತಡದ ಕೆಲಸಗಳು,ಬೇಸರ,ಆಯಾಸವಿದ್ದರೂ ಮನೆಯವರಿಗೆ ನಿಮ್ಮ ಸಮಯವನ್ನು ಮೀಸಲಿಡಬೇಕು
  • ತುಂಬಾ ವಿಶ್ರಾಂತಿಯ ಅಗತ್ಯವಿರುತ್ತದೆ
  • ಆರೋಗ್ಯದ ಬಗ್ಗೆ ಗಮನವಿರಲಿ 
  • ಆತುರದಲ್ಲಿ ಯಾವುದೇ ನಿರ್ಧಾರಗಳು ಬೇಡ 
  • ನಿಮ್ಮ ಕಾರ್ಯವೈಖರಿಯ ಗುಟ್ಟನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ 
  • ಸ್ನೇಹಿತರ ಕೆಲವು ವಿಚಾರಗಳು,ಸ್ವಬಾವಗಳನ್ನು ಕೇಳಿ ನೋವನ್ನು ಅನುಭವಿಸುತ್ತೀರಿ
  • ಏಕಾಕ್ಷರ ' ಮಾಯಾ' ಮಂತ್ರವನ್ನು ಪಠನೆ ಮಾಡಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವ್ಯಾಪಾರಸ್ಥರಿಗೆ ಶುಭ -ಲಾಭಗಳಾಗುವ ದಿನ 
  • ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನಿರೀಕ್ಷೆ ಮಾಡಬಹುದಾದ ದಿನ
  • ಕಡಿಮೆ ಸಮಯದಲ್ಲಿ ಹೆಚ್ಚು ಗುಣಮಟ್ಟ ಕೆಲಸ ಮಾಡಿ ಸಮರ್ಥರು ಅಂತ ಕರೆಸಿಕೊಳ್ಳುತ್ತೀರಿ
  • ಸಂಬಳ ಪಡೆಯುವ ಖಾಸಗಿ ನೌಕರರಿಗೆ ಸ್ವಲ್ಪ ಹಿನ್ನಡೆ, ಗೊಂದಲಗಳಾಗುತ್ತವೆ
  • ಮಿಥುನ ರಾಶಿಯವರು ಎಲ್ಲಾ ದಾಖಲೆ ಪತ್ರಗಳನ್ನು ಸರಿಯಾದ ರೀತಿಯಲ್ಲಿಟ್ಟುಕೊಳ್ಳಬೇಕು
  • ಅಗತ್ಯ ಬಿದ್ದರೆ ದಾಖಲೆಗಳನ್ನು ತಿದ್ದುಪಡಿ ಮಾಡಿಸಬೇಕು
  • ಪರಂಜೋತ್ಯಿ ಕೋಶಾಂಬಾ ಮಂತ್ರ ಪಡಿಸಿ

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಣ್ಣ ಸಣ್ಣ ವಿಚಾರಗಳಿಗೆ ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
  • ತುಂಬಾ ಅನಗತ್ಯ ವಿಚಾರಕ್ಕೆ ಜಗಳ ಮಾಡಿಕೊಳ್ಳುತ್ತೀರಿ
  • ತುಂಬಾ ಅಗತ್ಯವಿರುವ ಕೆಲಸಗಳು ವಿಳಂಬವಾಗಬಹುದು 
  • ಇದರಿಂದ ಮಾನಸಿಕವಾಗಿ ಬೇಸರ, ಮನೆಯಲ್ಲಿಯೂ ನಿಮ್ಮ ಕೆಲಸದಲ್ಲಿಯೂ ನೆಮ್ಮದಿ ಇರೋದಿಲ್ಲ
  • ಕೆಲವು ನಿರ್ಧಾರಗಳಿಂದ ಬೇರೆ ಬೇರೆ ರೀತಿಗಳಲ್ಲಿ ದೋಷಗಳುಂಟಾಗಬಹುದು
  • ಬೇರೆಯವರ ಕೆಲಸದಲ್ಲಿ ತಪ್ಪು ಹುಡುಕಬೇಡಿ
  • ಕುಟುಂಬ ಸದಸ್ಯರ ಸಹಕಾರ ತುಂಬಾ ಅಗತ್ಯವಿರುತ್ತದೆ
  • ತಂದೆಗೆ ಹೃದಯ ಸಂಬಂಧಿ ತೊಂದರೆ ಕಾಣಬಹುದು ತಾತ್ಸಾರ ಮಾಡಬೇಡಿ
  • ಮಹಾದಹರ ಮಂತ್ರ ಶ್ರವಣ ಮಾಡಿ

ಮೀನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಂಗಳ ಕಾರ್ಯದ ಸೂಚನೆ ಈ ದಿನ ಕಾಣುತ್ತದೆ 
  • ಮಂಗಳವಾರ ಆಗಿರೋದ್ರಿಂದ ವಾರದೋಷ ಅಂತ ವಿಷಯ ಮುಂದಕ್ಕೆ ಹೋಗಬಹುದು
  • ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಅವಕಾಶವಿದೆ
  • ಬೇರೆ ವ್ಯವಹಾರ, ಕುಟುಂಬದಲ್ಲಿ ಕೈಗೊಂಡಿರುವ ವ್ಯವಹಾರವನ್ನ ವಿಸ್ತರಣೆ ಮಾಡಿಕೊಳ್ಳಲು ಚಿಂತನೆ ಮಾಡಬಹುದು
  • ಕೌಟುಂಬಿಕವಾಗಿ ಉತ್ತಮ ವಾತಾವರಣವಿರುತ್ತದೆ
  • ಅವಿವಾಹಿತ ಹೆಣ್ಣು ಮಕ್ಕಳಿಗೆ ಶುಭ ಸೂಚನೆ ಇದೆ
  • ಅನಾರೋಗ್ಯ ಪೀಡಿತರಿಗೆ ಈ ದಿನ ಸುಧಾರಣೆಯಿದೆ 
  • ಮಾಧ್ಯಮದಲ್ಲಿ ಕೆಲಸ ನಿರ್ವಹಿಸುವವರಿಗೆ ಶುಭವಿದೆ
  • ಭಗವತೀ ಉಪಾಸನೆ ಮಾಡಿ

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment