ಶತ್ರುಗಳ ಕಾಟ, ಮಾನಸಿಕವಾಗಿ ಕುಗ್ಗುತ್ತಿರಿ.. ಇವತ್ತು ನಿಮ್ಮ ಭವಿಷ್ಯ ಹೇಗಿದೆ..?

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಪುಷ್ಯ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ವಿಶಾಖ ನಕ್ಷತ್ರ. ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇಷ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರಾಮಾಣಿಕ ಪ್ರಯತ್ನಕ್ಕೆ ಸದಾಕಾಲ ಜಯ 
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಂಪೂರ್ಣ ಶ್ರದ್ಧೆ ಇರಲಿ 
  • ಅಪೇಕ್ಷಿತ ಸ್ಥಳಕ್ಕೆ  ವರ್ಗಾವಣೆಯ ಅವಕಾಶವಿದೆ
  • ನಿಮಗೆ ಸಲ್ಲಬೇಕಾದದ್ದು ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ
  • ಬಲವಂತವಾಗಿ ಯಾರನ್ನು ಕೂಡ ಏನೂ ಕೇಳಬಾರದು
  • ಸಮಾಜದ ಹಿತಕ್ಕಾಗಿ ವೈಜ್ಞಾನಿಕವಾದ ಸಂಶೋಧನೆ ಮಾಡುವವರಿಗೆ ಶುಭಫಲವಿದೆ
  • ನೌಕರಿಯಲ್ಲಿ ಕಾಡುತ್ತಿದ್ದ ಅಭದ್ರತೆ ನಿಮ್ಮಿಂದ ದೂರವಾಗಬಹುದು 
  • ಮಹಿಳಾ ಅಧಿಕಾರಿಗಳಿಗೆ ಅನಿರೀಕ್ಷಿತ ಸಹಾಯ, ಅನುಕೂಲ ಕಂಡು ಬರುವುದು
  • ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವೃಷಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬುದ್ಧಿಗೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಆಂತರಿಕ ನೋವು ಕಾಡುತ್ತದೆ
  • ನೌಕರಿಯ ವಿಚಾರದಲ್ಲಿ ಬೇರೆಯವರ ಕೈಕೆಳಗೆ ಕೆಲಸ ಮಾಡುವುದರಿಂದ ಬೇಸರ ಉಂಟಾಗಬಹುದು
  • ಧಾರ್ಮಿಕ ಮುಖಂಡರಿಗೆ ಹಿನ್ನಡೆ ಸಂಭವ ಹಾಗೆ ಅವಮಾನ ಹೆಚ್ಚಾಗುವ ಸಾಧ್ಯತೆ
  • ಕಾರ್ಯ ನಿಮಿತ್ತ ಹೆಚ್ಚು ಓಡಾಟ, ಆಯಾಸವಾದರೂ ಮನಸ್ಸಿಗೆ ತೃಪ್ತಿ
  • ಮನೋರಂಜನಾ ಕಲಾವಿದರಿಗೆ ಹೆಚ್ಚು ಬೇಡಿಕೆ ಇರುವ ದಿನ
  • ಸಾಂಸಾರಿಕವಾಗಿರುವ ಜಂಜಾಟಗಳನ್ನು ಧೈರ್ಯವಾಗಿ  ಎದುರಿಸಿ ಮುನ್ನುಗುತ್ತೀರಿ ಅದರಲ್ಲಿ ಸಫಲತೆ ಕಾಣುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ

ಮಿಥುನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿದ್ಯುತ್ ಉಪಕರಣ ಮಾರಾಟ ಮಾಡುವವರಿಗೆ ಶುಭಸೂಚನೆ ಇದೆ
  • ಈ ರಾಶಿಯ ವಕೀಲರಿಗೆ ಲಾಭದ ದಿನ
  • ಮಂದಗತಿಯಲ್ಲಿ ನಡೆಯುವ ಕೆಲಸಗಳನ್ನು ಕೈಬಿಡುವ ನಿರ್ಧಾರ ಮಾಡುತ್ತೀರಿ 
  • ಉದ್ಯೋಗ ನಿಮಿತ್ತ ಪ್ರಯಾಣವನ್ನು ಮಾಡಬೇಕಾಗಬಹುದು
  • ನಿಮ್ಮ ಕಿರಿಯರಿಗೆ ಆತ್ಮಸ್ಥೈರ್ಯ ಹಾಗೆ ಈ ಕಾರ್ಯದ ಬಗ್ಗೆ ಇರುವ ಗೌರವ ಹೆಚ್ಚಾಗಲಿದೆ
  • ಸಾಮಾಜಿಕ ಚರ್ಚೆಗಳಲ್ಲಿ ಭಾಗಿಗಳಾಗುತ್ತೀರಿ
  • ಅಷ್ಟಲಕ್ಷ್ಮಿಯನ್ನು ಪ್ರಾರ್ಥಿಸಿ

ಕಟಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಹಿಳೆಯರು ಹಟ ಸಾಧಿಸುವ ಸಂದರ್ಭ, ಸಣ್ಣ ಜಗಳ ಆಗುವ ಸಾಧ್ಯತೆ ಇದೆ
  • ಕಾರ್ಯಕ್ರಮದಿಂದ ವಾಪಸ್ಸು ಬರುವ ಆಲೋಚನೆಗಳನ್ನು ಮಾಡುವ ಸಾಧ್ಯತೆಗಳಿವೆ
  • ಕುಟುಂಬ ನಿರ್ವಹಣೆಯ ಬಗ್ಗೆ ಯಶಸ್ಸಿನ ಮಾತು ಕೇಳಿ ಬರುತ್ತದೆ
  • ಎಲ್ಲರೊಂದಿಗೆ ಹೆಚ್ಚಾಗಿ ಬೆರೆತರೆ ನಿಮ್ಮ ಕಾರ್ಯಗಳಿಗೆ ಶುಭವಿರುತ್ತದೆ
  • ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತೀರಿ ಆದರೆ ಗೌರವ ಸಿಗಲಿಲ್ಲವೆಂದು ಮನಸ್ಸಿಗೆ ಬೇಸರವಾಗುತ್ತದೆ
  • ಕಲಹದಿಂದಲೇ ಮನಸ್ಸಿಗೆ ಸಾಧಿಸಿದ ಸಮಾಧಾನ ದೊರಕುವುದು
  • ಸರಸ್ವತಿಯನ್ನು ಆರಾಧಿಸಿ

ಸಿಂಹ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಯಂತ್ರೋಪಕರಣ, ವಾಹನಗಳನ್ನು ಮಾರಾಟ ಮಾಡುವವರಿಗೆ ಶುಭವಿದೆ
  • ಕೆಲಸದ ಒತ್ತಡ ಹೆಚ್ಚಾಗಬಹುದು ಮತ್ತು ಪೋಷಕರ ಬಗ್ಗೆ ಗಮನಹರಿಸಿ
  • ಕೃಷಿಕರಿಗೆ ಸಣ್ಣ  ಪ್ರಮಾಣದ ಲಾಭ ಸಿಗಬಹುದು
  • ಹಿಂದೆ ಮಾಡಿದ ತಪ್ಪಿನ ಫಲವನ್ನು ಈ ದಿನ ಅನುಭವಿಸಬೇಕಾಗಬಹುದು
  • ಮಿತ್ರರಿಂದ ನಿರೀಕ್ಷಿತ ಸಹಾಯ ದೊರಕದೆ ಅವರ ಬಗ್ಗೆ ತುಂಬಾ ಬೇಸರ ಉಂಟಾಗಲಿದೆ
  • ಹಣದ ವ್ಯವಹಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಹಿನ್ನಡೆಯಾಗುತ್ತದೆ
  • ಹಿಂದೆ ಆದಂತಹ ನಷ್ಟವನ್ನು ಸರಿದೂಗಿಸಲು ಆಗದೆ ಇರೋದ್ರಿಂದ ಮನಸ್ಸಿಗೆ ಬೇಸರವಾಗುತ್ತದೆ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಉತ್ತಮ ಅವಕಾಶಗಳು ಸದ್ವಿನಿಯೋಗವಾಗಲಿ
  • ಹೆಣ್ಣು ಮಕ್ಕಳಿಗೆ ವಾಹನದಿಂದ, ವಾಹನ ಚಾಲನೆಯಿಂದ ತೊಂದರೆಯಾಗುವ ಸಾಧ್ಯತೆ ಎಚ್ಚರಿಕೆ
  • ಪದಾರ್ಥಗಳನ್ನು ಖರೀದಿಸಿ ಬೇರೆಯವರಿಗೆ ಮಾರಾಟ ಮಾಡುವವರಿಗೆ ಲಾಭ ಇರುವುದಿಲ್ಲ 
  • ವಿದ್ಯಾರ್ಥಿಗಳಿಗೆ ಆಕಸ್ಮಿಕ ಅವಕಾಶಗಳು ಲಾಭಗಳು ಸಿಗಬಹುದು
  • ಉದ್ಯೋಗಕಾಂಕ್ಷಿಗಳಿಗೆ ಶುಭವಿದ್ದರೂ ಅನೇಕ ವಿಧವಾದ ತೊಡಕುಗಳು ಎದುರಾಗಬಹುದು
  • ತಮ್ಮ ಹಲವು ದಿನದ ಸಮಸ್ಯೆಗಳಗೆ ಇಂದು ಪರಿಹಾರ ಮಾರ್ಗ ಸಿಗಬಹುದು 
  • ಪಾಂಡುರಂಗನನ್ನು ಪ್ರಾರ್ಥನೆ ಮಾಡಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಜೀವನದ ಮಹತ್ತರ ಕನಸಿನ ಸಹಕಾರಕ್ಕೆ ತುಂಬಾ ಪರಿಶ್ರಮಬೇಕು
  • ಕೈಗಾರಿಕಾ ಉದ್ಯಮಿಗಳಿಗೆ ಸಂತಸದ ದಿನ
  • ಬೇರೆಯವರ ಬೆಂಬಲ ನಿಮಗೆ ಸ್ಫೂರ್ತಿಯಾಗತ್ತೆ, ಗುರಿಯತ್ತ ಪಯಣ ಬೆಳೆಸಬೇಕಾಗುತ್ತದೆ
  • ನಿತ್ಯ ಜೀವನ,ವ್ಯವಹಾರಗಳನ್ನು ಮರೆತು ಸಾಧನೆಗೆ ಮುಂದಾಗಬಹುದು
  • ಸ್ವಂತ ನಿರ್ಧಾರಗಳು ಮಾತ್ರ ಕೆಲಸಕ್ಕೆ ಬರುವಂತಹದ್ದು
  • ಮಹಿಳಾ ಪ್ರತಿಭೆಗಳಿಗೆ ವಿಶೇಷವಾದ ಯಶಸ್ಸು ಸಮಾಧಾನ ತರುತ್ತದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿರಂತರ ಪ್ರಯತ್ನ ಅತಿ ಉತ್ಸಾಹದಿಂದ ಜೀವನದಲ್ಲಿ ಹೊಸ ತಿರುವು ಕಾಣಬಹುದು
  • ತಮ್ಮ ವ್ಯವಹಾರ ಮುಂದುವರಿಸಲು ಹಾಗೆ ರೂಢಿಸಿಕೊಳ್ಳಲು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ
  • ಧಾರ್ಮಿಕ ಮಾರ್ಗದರ್ಶನದಿಂದ ಸ್ವಲ್ಪ ನೆಮ್ಮದಿ ಸಿಗಬಹುದು 
  • ಎಲ್ಲಾ ದೃಷ್ಟಿಯಿಂದ ಗಮನಿಸಿದಾಗ ಹೋರಾಟದ ಜೀವನ ಅಂತ ಹೇಳಬೇಕಾಗುತ್ತದೆ
  • ಲೇವಾದೇವಿ ಬಡ್ಡಿ ವ್ಯವಹಾರ ಮಾಡುವವರಿಗೆ ನಷ್ಟವಾಗುವ ಸಾಧ್ಯತೆ
  • ಬಂಧುಗಳ ಭಿನ್ನಾಭಿಪ್ರಾಯ ದೂರವಾಗಬಹುದು
  • ಮಹಾ ಗಣಪತಿಯನ್ನು ಆರಾಧಿಸಿ

ಧನಸ್ಸು 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳಿಂದ ಸಹಾಯ, ಸಹಕಾರ ದೊರಕುತ್ತದೆ
  • ಯಾವುದೇ ಗೌರವಯುತ ಕೆಲಸಗಳ ಮೇಲೆ ತಾತ್ಸಾರ ಭಾವ ತೋರಿಸಬಾರದು
  • ಸಂಗೀತಾ ಅಭ್ಯಾಸಿಗಳಿಗೆ ಸಂಗೀತ ತಜ್ಞರಿಗೆ ಯಶಸ್ಸು ಸಿಗುವ ದಿನ
  • ತಾತ್ಕಾಲಿಕ ಹುದ್ದೆಗಳಲ್ಲಿರುವವರಿಗೆ ತಕ್ಷಣ ಬದಲಾವಣೆ ಸೂಚನೆ ಬರಬಹುದು
  • ಪುರಸ್ಕಾರ, ಮರ್ಯಾದೆಗಳು ನಿಮ್ಮ ಮಡಿಲಿಗೆ ಬಂದು ಬೀಳುವ ದಿನ
  • ಹಿರಿಯ ಅಧಿಕಾರಿಗಳಿಂದ ತಿರಸ್ಕಾರ ಆಗಬಹುದು ಅದಕ್ಕೆ ಬೇಸರ ಮಾಡಿಕೊಳ್ಳಬೇಡಿ
  • ಗೃಹ ನಿರ್ಮಾಣದ ಆಲೋಚನೆ ಇರುವವರಿಗೆ ಉತ್ತಮವಾದ ದಿನ
  • ಇಷ್ಟ ದೇವತೆಯನ್ನು ಪ್ರಾರ್ಥಿಸಿ

ಮಕರ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಾಮಾಜಿಕ ಸೇವೆಗಳಲ್ಲಿ ನೆಪ ಮಾತ್ರಕ್ಕೆ ಭಾಗಿಯಾಗುತ್ತೀರಿ
  • ವಾದ ವಿವಾದಗಳನ್ನು ನೀವೆ ಸೃಷ್ಠಿ ಮಾಡಿಕೊಂಡು ಜಯಶೀಲರಾಗುವಂತೆ ಮಾಡಿಕೊಳ್ಳುತ್ತೀರಿ
  • ಸರ್ಕಾರಿ ಕೆಲಸದವರಿಗೆ ಅನುಕೂಲಕರ ದಿನ 
  • ಕೆಲಸ ಮಾತು ಯಾವುದರಲ್ಲೂ ಸ್ವಾತಂತ್ರ್ಯವಿರದೆ ಹಿಂಸೆ ಪಡಬೇಕಾಗತ್ತೆ
  • ಅನಾರೋಗ್ಯ ಪೀಡಿತರಿಗೆ ಭಯ ಹೆಚ್ಚಾಗಲಿದೆ ಜಾಗ್ರತೆ ಇರಲಿ
  • ಕುಟುಂಬದ ವಾತಾವರಣವು ಸಮಾಧಾನಕರವಾಗಿರುವುದಿಲ್ಲ 

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಾಧಕರಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ
  • ಮೇಲ್ದರ್ಜೆಯ ಯೋಜನೆಯನ್ನು ಹಾಕಿಕೊಳ್ಳುವುದಕ್ಕೆ ಇದು ಸದಾವಕಾಶ
  • ಸೋದರ ಮಾವನ ಆರೋಗ್ಯದಲ್ಲಿ ವ್ಯತ್ಯಾಸವಾಗಬಹದು ಗಮನಿಸಿ 
  • ಬಂಧುಗಳಿಂದ ಸಲಹೆ ಸಹಕಾರ ದೊರೆಯುತ್ತದೆ
  • ಕುಟುಂಬದ ಉನ್ನತಿ ಬಗ್ಗೆ ಚಿಂತನೆ ನಡೆಸುತ್ತೀರಿ
  • ಕಲಾವಿದರಿಗೆ ಅಲ್ಪ ಗೌರವ ಇದರಿಂದ ಅಸಮಾಧಾನವಿರುತ್ತದೆ
  • ಅನಿರೀಕ್ಷಿತ ಧನಾಗಮನದಿಂದ ಮನಸ್ಸಿಗೆ ಸಂತೋಷವಾಗುತ್ತದೆ 
  • ಮೇಲ್ದರ್ಜೆಗೆ ಇನ್ನೂ ಏರಬೇಕು ಅನ್ನೋ ಭಾವವಿದ್ದಾಗ ಅದಕ್ಕೆ ಪ್ರಯತ್ನ ನಡೆಯುತ್ತಿರುತ್ತದೆ
  • ನಿಮಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತೀರಿ
  • ಧನ್ವಂತರಿ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಮೀನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿದ್ಯಾಭ್ಯಾಸದಲ್ಲಿ ಪ್ರಗತಿ ಹಾಗೂ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
  • ಋಣಾತ್ಮಕವಾದ ಚಿಂತನೆಗಳೆ ಹೆಚ್ಚಾಗಿ ಬರುತ್ತಿರುತ್ತದೆ
  • ಪ್ರಭಾವಿ ವ್ಯಕ್ತಿಗಳ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಬಹುದಾದ ದಿನ
  • ಸಾಮಾಜಿಕ ಬದುಕಿನಲ್ಲಿ ಗೌರವವನ್ನು ಕಾಪಾಡಿಕೊಳ್ಳಬೇಕಾಗುತ್ತದೆ
  • ಮಾತಿನಿಂದ ಕಲಹ ಉಂಟಾಗಬಹುದು
  • ಬಟ್ಟೆ ವ್ಯಾಪಾರಿಗಳಿಗೆ ಆದಾಯದ ಮೂಲ ಹೆಚ್ಚಾಗಬಹುದು
  • ಉದ್ಯೋಗ ಸ್ಥಳದಲ್ಲಿ ಶತ್ರುಗಳ ಕಾಟ ಇರುತ್ತದೆ
  • ಈ ದಿನ ಮಾನಸಿಕವಾಗಿ ಕುಗ್ಗುತ್ತೀರಿ ಸಮಾಧಾನವಾಗಿರಿ
  • ದೇವಿಯನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment