/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ರಸ್ತೆ ಪಕ್ಕ ಕಾರ್ ನಿಲ್ಲಿಸಿಕೊಂಡು ನಿಂತಿದ್ದೇ ತಪ್ಪಾಯ್ತು : BMW ಕಾರ್ ಹಿಂದಿನಿಂದ ಡಿಕ್ಕಿ ಹೊಡೆದು ಮಲ್ಲಿಕಾ ದಾರುಣ ಸಾವು
ಮೇಷ
- ಮನೆಯಲ್ಲಿ ಮನೆಯವರಾಗಿರಿ ವ್ಯವಹಾರ ಬೇಡ
- ತುಂಬಾ ಧನಾತ್ಮಕವಾದ ದಿನ
- ಉದ್ಯಮಿಗಳಿಗೆ ತುಂಬಾ ಅನುಕೂಲ
- ಆರೋಗ್ಯದ ಬಗ್ಗೆ ಚಿಂತೆಬೇಡ
- ಈ ದಿನ ಕೋಪ ಕಡಿಮೆ ಇರಲಿ
- ಹಣಕೋಪ ಒಟ್ಟಿಗೆ ಇರುವುದರಿಂದ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಬಹುದು ಎಚ್ಚರಿಕೆ
- ಮಕ್ಕಳಿಗೆ ಉತ್ತಮ ತಿಳುವಳಿಕೆ ನೀಡಿ ಅನರ್ಥವಾಗಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ
ವೃಷಭ
- ಕಾನೂನು ರೀತಿಯ ಕೆಲಸಕ್ಕೆ ಜಯವಿದೆ ಅಭಿಮಾನವಿಲ್ಲ
- ಅನುಪಯುಕ್ತ ವಿಷಯದಲ್ಲಿ ನಿಮ್ಮ ಸಮಯ ವ್ಯರ್ಥ
- ಯಾವುದೋ ಅಹಂಭಾವ ಎಲ್ಲದಿಂದ ದೂರವಿರುವಂತೆ ಮಾಡಬಹುದು
- ಸಂತೋಷ ನೆಮ್ಮದಿಯನ್ನು ಹುಡುಕುವ ದಿನ
- ನಿಮ್ಮ ಕೈಯಲ್ಲಿ ಹಣವಿದೆ ಜನರಲ್ಲಿ ಬಂಧುಗಳಲ್ಲಿ ಬೇಸರ
- ಇಂದು ಆತುರದ ನಿರ್ಧಾರ ಬೇಡ
- ತಾಪಸ ಮನ್ಯುವನ್ನು ಪ್ರಾರ್ಥಿಸಿ
ಮಿಥುನ
- ಸ್ವಂತ ಬುದ್ದಿ ಕೆಲಸಕ್ಕೆ ಬರಲಿ
- ವಿದ್ಯಾವಂತರೊಂದಿಗೆ ವಾದ ಮಾಡಿ ತಪ್ಪಿಗೆ ಸಿಲಿಕಬೇಡಿ
- ಶಾಂತಿಯುತವಾಗಿ ದಿನ ಕಳೆಯಿರಿ
- ನಿಮ್ಮ ತಪ್ಪುಗಳ ಅರಿವಾಗುತ್ತದೆ ಸರಿಪಡಿಸಿಕೊಳ್ಳಿ
- ಬೇರೆಯವರಿಗೆ ಮಾತು ಕೊಟ್ಟಿದ್ದರೆ ಅದನ್ನು ಉಳಿಸಿಕೊಳ್ಳಿ
- ನಿಮ್ಮ ಸಂಬಂಧಿಕರು ನಿಮ್ಮನ್ನು ಹೊಗಳುವುದಿಲ್ಲ ಬೇಸರ ಆಗಬಹುದು
- ಈಶ್ವರನನ್ನು ಬಿಲ್ಪಪತ್ರೆಯಿಂದ ಅರ್ಚಿಸಿ
ಕಟಕ
- ಮನೆಯ ಕೆಲಸದಲ್ಲಿ ಹೆಚ್ಚು ಒತ್ತಡ
- ಸಮಾಜದಲ್ಲಿ ಹೇಗಿರಬೇಕೆಂಬ ಗೊಂದಲ
- ಪ್ರಾಮಾಣಿಕತೆಗೆ ಬೆಲೆಯಿಲ್ಲದ ದಿನ ಎನಿಸಬಹುದು
- ಜನ ಮೋಸ ಮಾಡದಿದ್ದರೆ ತುಂಬಾ ಒಳ್ಳೆಯ ದಿನ ಎಚ್ಚರ
- ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ
- ಹಿರಿಯರಿಂದ ಒಳ್ಳೆಯ ಸುದ್ದಿ ಸಂತೋಷ ಸಿಗಲಿದೆ
- ಇಷ್ಟದೇವತಾ ಆರಾಧನೆ ಮಾಡಿ
ಸಿಂಹ
- ವೃತ್ತಿಯ ಬಗ್ಗೆ ಎಚ್ಚರಿಕೆ ವಹಿಸಿ
- ದೈನಂದಿನ ಕೆಲಸಗಳಲ್ಲಿ ಅಡ್ಡಿ ಸಮಸ್ಯೆ ಕಾಣಬಹುದು
- ಆರೋಗ್ಯ ನಿಮ್ಮ ಕೈಯಲ್ಲಿರುತ್ತದೆ ಆರೋಗ್ಯ ಕೆಡಿಸಿಕೊಳ್ಳಬೇಡಿ
- ದಾಂಪತ್ಯದಲ್ಲಿ ಹೊಸ ಚೈತನ್ಯ ಕಾಣಬಹುದು
- ನಿಮ್ಮ ತ್ಯಾಗ ಬುದ್ದಿ ಮನೆಯವರಿಗೆ ಸಂತೋಷ ತರಬಹುದು
- ಧರ್ಮಕಾರ್ಯದಲ್ಲಿ ಭಾಗಿಯಾಗಲು ಅವಕಾಶಗಳಿವೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ಕನ್ಯಾ
- ಸಾಲ ಪ್ರಕ್ರಿಯ ಈ ದಿನ ಬೇಡ
- ಬರಹಗಾರರಿಗೆ ಶುಭವಿದೆ
- ಕಲೆ-ಸಾಹಿತ್ಯ ವಿಚಾರಧಾರಿಗಳಿಗೆ ಸಮಸ್ಯೆ
- ತ್ವರಿತ ತೀರ್ಮಾನದಿಂದ ಆರ್ಥಿಕ ನಷ್ಟ
- ಪರಿಶ್ರಮದ ಫಲ ನಿಮ್ಮನ್ನು ಕಾಪಾಡುವ ತೃಪ್ತಿ ತರಬಹುದು
- ಅನಗತ್ಯ ಕೆಲಸಕ್ಕಾಗಿ ಸಮಯ ವ್ಯರ್ಥ
- ಕುಲದೇವತಾ ಆರಾಧನೆ ಮಾಡಿ
ತುಲಾ
- ದಂಪತಿಗಳಲ್ಲಿ ಪರಸ್ಪರ ಶೀತಲ ಸಮರ
- ನಿಮ್ಮ ಸ್ವಾರ್ಥಕ್ಕಾಗಿ ಬೇರೆಯವರಿಗೆ ಹಿಂಸೆ ಬೇಸರ
- ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪ್ರಭಾವ ತೋರಬಹುದು
- ಸ್ವಂತ ಕಾರ್ಯಕ್ಕಾಗಿ ಖರ್ಚು ಮಾಡುತ್ತೀರಿ
- ಕುಟುಂಬದವರ ತಿಳುವಳಿಕೆ ಕಹಿ ಎನಿಸಬಹು
- ನಿಮ್ಮ ಭಾವನೆಗಳು ತಪ್ಪಿನೆಡೆಗೆ ಕರೆದೊಯ್ಯಬಹುದು
- ಧ್ಯಾನಮಾಡಿ
ವೃಶ್ಚಿಕ
- ಕಠಿಣ ಪರಿಶ್ರಮವಿದ್ದರೂ ಸಾರ್ಥಕತೆ ಇಲ್ಲ
- ವೈವಾಹಿಕ ವಿಚಾರದಲ್ಲಿ ಕಲಹ
- ಇಂದು ವ್ಯವಸ್ಥಿತವಾದ ದಿನ
- ನಕಾರಾತ್ಮಕ ಅಭಿಪ್ರಾಯ ಹೇಳುವವರನ್ನು ಅವಲಂಬಿಸಬೇಡಿ
- ಮಕ್ಕಳು ಪೋಷಕರಿಗೆ ದುಃಖದಾಯಕರು
- ಹಿರಿಯರ ಮಾರ್ಗದರ್ಶನ ಆಶೀರ್ವಾದ ಪಡೆಯಿರಿ
ಧನಸ್ಸು
- ಪ್ರಯತ್ನ ಪೂರ್ವಕವಾಗಿ ಸಮಾಧಾನ
- ಬುದ್ದಿವಂತಿಕೆಯು ಕೆಲಸ ಮಾಡುವುದಿಲ್ಲ
- ಕರ್ಕಾಟಕ ರಾಶಿಯ ಪ್ರೇಮಿಗಳಿಗೆ ಭಯ ದೂರವಾಗುವಿಕೆ
- ವೃತ್ತಿ ಉದ್ಯೋಗದಲ್ಲಿ ಆದಾಯ ಹೆಚ್ಚು
- ದುಡ್ಡು ಹೊರತಾಗಿ ಬೇಱವುದೂ ಕೆಲಸ ಮಾಡಲಾರದ ದಿನ
- ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ತುಂಬಾ ಗೊಂದಲ
- ಹಣದ ಚಿಂತೆಯಿಂದ ಹೊರಬರುತ್ತೀರಿ
- ಪಾರಿಜಾತ ಸರಸ್ವತಿಯನ್ನು ಮಲ್ಲಿಗೆ ಹೂಗಳಿಂದ ಅರ್ಚಿಸಿ
ಮಕರ
- ಖರ್ಚಿನ ಬಗ್ಗೆ ಮುಂದಾಲೋಚನೆ ಬೇಕು
- ನಿಮ್ಮ ವ್ಯವಹಾರದ ಬಗ್ಗೆ ಚಿಂತಿಸಿ
- ಸಣ್ಣ ವಿಚಾರ ವಿವಾದವಾಗಬಹುದು
- ನಿಮ್ಮ ಸಾಧನೆ ನಿಮಗೆ ಮುಖ್ಯ ಬೇರೆಯವರಿಗೆ ಒತ್ತಡ ಹಾಕಬಾರದು
- ನಿಮ್ಮ ತಪ್ಪುಗಳಿಗೆ ನಿಮ್ಮ ವರ್ತನೆ ಕಾರಣವಾಗಬಹುದು
- ವಿದ್ಯುತ್ ಉಪಕರಣಗಳಿಂದ ತೊಂದರೆಯ ಸೂಚನೆ
- ವಿಷ್ಣುವನ್ನು ತುಳಸಿಯಿಂದ ಅರ್ಚಿಸಿ
ಕುಂಭ
- ಮನೆಕಟ್ಟುವ ವಿಚಾರ ಪ್ರಸ್ತಾಪಕ್ಕೆ ಬರುತ್ತದೆ
- ನಿಮ್ಮ ಜೀವನ ಶೈಲಿಯನ್ನು ಪರಾಮರ್ಶಿಸಿಕೊಳ್ಳಿ
- ನಿಮ್ಮ ಮತ್ತು ಮನೆಯವರ ಆರೋಗ್ಯ ಗಮನಿಸಿ
- ಹೊಸ ಸಂಶೋಧನೆ ಪ್ರಯತ್ನಕ್ಕೆ ಅವಕಾಶ
- ನಿಮಗಿರುವ ಅನುಕೂಲವನ್ನು ಸದುಪಯೋಗ ಮಾಡಿ
- ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ
ಮೀನ
- ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಜಯವಿದೆ
- ಮನೆ ಮಡದಿ ಮಕ್ಕಳ ಬಗ್ಗೆ ಪ್ರಾಮಾಣಿಕತೆ ತೋರಬೇಕು
- ಮನೆಯವರೆಲ್ಲಾ ಹೆಚ್ಚಾಗಿ ಹೊರಗೆ ಕಳೆಯುವುದಾಗಿರುತ್ತದೆ
- ಹಿರಿಯರೊಂದಿಗೆ ಚರ್ಚೆ ಶುಭವಿದೆ
- ಮಹಿಳೆಯರಿಗೆ ಒತ್ತಡ ಖರೀದಿಯಿಂದ ಸಂತೋಷ
- ಭೂ ವ್ಯವಹಾರದಲ್ಲಿ ಎಚ್ಚರಿಕೆ
- ದುರ್ಗಾಮಾತೆಯನ್ನು ಆರಾಧಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us