ಮದುವೆ ವಿಚಾರ, ಶುಭ ಸುದ್ದಿ.. ಹೇಗಿದೆ ನಿಮ್ಮ ರಾಶಿ ಭವಿಷ್ಯ..?

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ:ರಾಜಸ್ಥಾನದಲ್ಲಿ 10 ಸಾವಿರ ಕೆ.ಜಿ. ಸ್ಪೋಟಕ ಸಾಮಗ್ರಿ, ಡೀಟೋನೇಟರ್ ವಶಕ್ಕೆ : ಓರ್ವನ ಬಂಧನ

ಮೇಷ 

  • ವೈವಾಹಿಕ ವಿಚಾರದಲ್ಲಿ ಗೊಂದಲ ಇರುವವರಿಗೆ ಸಮಸ್ಯೆ ತಿಳಿಯಾಗುವ ದಿನ 
  • ಯಾವುದೇ ಒತ್ತಡಗಳಲ್ಲದ ಮನಸ್ಸು ನಿಮಗೆ ಶಾಂತತೆ ನೀಡಲಿ 
  • ನಿಮ್ಮ ದಿನಚರಿಯಲ್ಲಿ ಬದಲಾವಣೆ  ಬೇಸರ 
  • ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ಕಾಡಬಹುದು - ಎಚ್ಚರಿಕೆಯಿರಲಿ 
  • ಬೇರೆಯವರಿಗೆ ಸಹಾಯ ಮಾಡಿದ ದಿನಗಳನ್ನು ಜ್ಞಾಪಿಸಿಕೊಳ್ಳಬಹುದು 
  • ಬೇರೆಯವರ ವಿಚಾರಕ್ಕೆ ಹೋಗಬಾರದು 
  • ದಂಪತಿಗಳಲ್ಲಿ ಜಗಳ ಬೇಡ 
  • ಸ್ವಯಂವರ ಪಾರ್ವತಿ ಜಪ  ಮಾಡಿ

ವೃಷಭ 

  • ಹೊಸ ಆಲೋಚನೆಗಳಲ್ಲಿ ಯಶಸ್ಸಿದೆ 
  • ದೂರದ ಪ್ರಯಾಣಕ್ಕೆ ತೊಂದರೆ ಕಾಣಬಹುದು 
  • ನಿಮ್ಮ ಬಂಧುಗಳಲ್ಲಿ ಆತ್ಮೀಯತೆ ಬೆಳೆಸಿಕೊಳ್ಳಬೇಕು 
  • ಆರೋಗ್ಯದ ಬಗ್ಗೆ ಹಳೆಯ ನೋವಿನ ಬಗ್ಗೆ ಹೆಚ್ಚು ಗಮನಿಸಿ 
  • ಆತ್ಮವಿಶ್ವಾಸ ಶಕ್ತಿಯಿಂದ ನಿಮ್ಮ ಇರುವಿಕೆ ಎಂದೇ ಹೇಳಬೇಕು 
  • ವ್ಯವಹಾರಿಕ ಫಲಿತಾಂಶ ಉತ್ತಮವಾಗಿರುತ್ತದೆ 
  • ಆಂಜನೇಯ ಸ್ವಾಮಿಯನ್ನು ಪೂಜಿಸಿ

ಮಿಥುನ 

  • ವೃತ್ತಿ ಜೀವನದಲ್ಲಿ ತುಂಬಾ ಉತ್ಸುಕರಾಗಿರುವ ನಿಮಗೆ ಹಿನ್ನಡೆ ಭಯವಿರುತ್ತದೆ 
  • ಕೆಲವು ವಿಚಾರಗಳಲ್ಲಿ ಹಿಂಜರಿಕೆಯ ಭಾವನೆ ಕಾಡಬಹುದು 
  • ಸ್ವಂತಿಕೆಯಿಂದ ಯೋಚಿಸಿ ನಿರ್ಧಾರಮಾಡಿ ಯಶಸ್ಸಿದೆ 
  • ನಿಮ್ಮ ಪ್ರಾಮಾಣಿಕತೆ ದಕ್ಷತೆ ಗಟ್ಟಿಯಾಗಬೇಕು 
  • ನಿಮ್ಮ ತಪ್ಪುಗಳೇ ನಿಮಗೆ ಶತ್ರುಗಳಾಗಬಹುದು 
  • ಬೇರೆಯವರನ್ನು ಅನುಸರಿಸಿ ಅನುಕರಿಸಬೇಡಿ 
  • ತಾಪಸ ಮನ್ಯುವನ್ನು ಉಪಾಸನೆ ಮಾಡಿ 

ಕಟಕ 

  • ಕುಟುಂಬದ ಜವಾಬ್ದಾರಿಯನ್ನು ನಿಷ್ಠೆಯಿಂದ ಪೂರೈಸಬೇಕು 
  • ಋಣಾತ್ಮಕ ವಿಷಯಗಳಿಂದ ದುಃಖ ಇರಬಹುದು  
  • ಉನ್ನತ ಶಿಕ್ಷಣ ಪಡೆಯಬೇಕಾದವರಿಗೆ ಸಮಸ್ಯೆಗಳು ಆಗಬಹುದು   
  • ಅನಗತ್ಯ ಸಲಹೆ ಮಾತಿನಿಂದ ಅವಮಾನಿತರಾಗಬಹುದು
  • ಸಂಬಂಧಿಕರ ಮನೆಯ ಮದುವೆ ವಿಚಾರಕ್ಕೆ ಮಾತಾಡಬಾರದು - ಅವಮಾನ
  • ನಿಮ್ಮ ಉದಾರಭಾವ ಬೇರೆಯವರಿಗೆ ಅನುಕೂಲವಿರುತ್ತದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ

ಸಿಂಹ 

  • ವೈಯಕ್ತಿಕ ವಿಚಾರದಲ್ಲಿ ಕೆಲವು ಸುಧಾರಣೆಯ ಅಗತ್ಯ ಕಾಣಬಹುದು
  • ನಾಟಕೀಯ ಬುದ್ಧಿಯಿಂದ ನಿಮಗೆ ಹಿನ್ನೆಡೆ
  • ಎದುರಾಳಿಗಳ ಶತ್ರುಗಳ ಬಲ ತಿಳಿದು ವ್ಯವಹರಿಸಿ 
  • ಬೇರೆಯವರ ತಪ್ಪನ್ನು ಹೇಳಬೇಡಿ 
  • ಅನೇಕ ಕೆಲಸಗಳಲ್ಲಿ ತುಂಬಾ ಗಮನಕೊಟ್ಟು ವ್ಯವಹರಿಸಬೇಕು 
  • ಮನಸ್ಸಿನ ಗೊಂದಲಗಳು ದೂರವಾದರೆ ನಿಂತ ಕೆಲಸಗಳು ಚಾಲನೆ ಪಡೆಯುತ್ತದೆ 
  • ನವಗ್ರಹರನ್ನು ವಿಶೇಷವಾಗಿ ಚಂದ್ರಗ್ರಹವನ್ನು ಪ್ರಾರ್ಥಿಸಿ

ಕನ್ಯಾ

  • ಪ್ರೇಮ ವಿವಾಹದ ವಿಚಾರದಿಂದ ಮನೆಯಲ್ಲಿ ಅಲ್ಲೋಲ- ಕಲ್ಲೋಲ - ಜಗಳ 
  • ಏನು ಮಾಡಿದರೂ  ಎಷ್ಟು ಗಳಿಸಿದರೂ ತೃಪ್ತಿಯಿರದ ದಿನ 
  • ಮನೆಯ ಹೊಸ ವಸ್ತು ತಂದು ನಷ್ಟವಾಗಬಹುದು ಅಧಿಕಬೆಲೆ 
  • ಮಾನಸಿಕ ಸಮಾಧಾನವಿಲ್ಲದಿರುವುದು 
  • ಮನೆಗೆ ಬಂಧುಗಳ ಆಗಮನ 
  • ಬೇರೆ ಉಪಯುಕ್ತ ಯೋಜನೆಗಳ ಬಗ್ಗೆ ಚಿಂತೆ 
  • ಶ್ರೀಸೂಕ್ತದ 16 ಮಂತ್ರಗಳನ್ನು ಶ್ರವಣ  ಮಾಡಿ 

ತುಲಾ 

  • ನಿಮ್ಮ ಮಾತು ಕೆಟ್ಟ ಪರಿಣಾಮ ಬೀರುತ್ತದೆ 
  • ಅಹಂಕಾರದ ಭಾವನೆ ತ್ಯಜಿಸಿ 
  • ಏಕನಕ್ಷತ್ರ  ಏಕರಾಗಿಯ ದಂಪತಿಗಳ ವೈಯಕ್ತಿಕ ವಿಚಾರ ಕಹಿಯಾಗಿರುತ್ತದೆ
  • ನಿಮ್ಮ ತಪ್ಪು ಗ್ರಹಿಕೆಯಿಂದ ಜನರ ಕೋಪಕ್ಕೆ ಗುರಿಯಾಗಿರುತ್ತೀರಿ 
  • ಯಾವುದೇ ವಿಚಾರದಲ್ಲಿ ಅನುಮಾನ ಬೇಡ  ಪರಾಮರ್ಶಿಸಿ 
  • ಕುಟುಂಬ ಕಲಹ ಮಿತಿಮೀರಬಹುದು 
  • ದುರ್ಗಾದೇವಿ ಪ್ರಾರ್ಥನೆ ಮಾಡಿ

ವೃಶ್ಚಿಕ 

  • ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಬೆಲೆ ಎಂಬುದನ್ನು ಅರಿಯಬೇಕು 
  • ಭಾವನೆಗಳು ಕೆಲಸಕ್ಕೆ ಬರುವುದಿಲ್ಲ 
  • ಪರೀಕ್ಷಾ ದೃಷ್ಠಿಯಿಂದ ಅಧ್ಯಯನ ಮಾಡಿದವರಿಗೆ ಹಿನ್ನಡೆ 
  • ಬೇರೆ ಮಾರ್ಗದಲ್ಲಿ ಆಲೋಚಿಸುವವರಿಗೆ ತುಂಬಾ ಹಿನ್ನಡೆ ಕಾಣಬಹುದು
  • ಪ್ರಯಾಣದಲ್ಲಿ ವ್ಯತ್ಯಯ ಆಗಬಹುದು
  • ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ಮನಸ್ಸಿರುವುದಿಲ್ಲ - ಅನಿವಾರ್ಯ 
  • ಪಾರಿಜಾತ ಸರಸ್ವತಿಯನ್ನು ಆರಾಧಿಸಿ 

ಧನುಸ್ಸು 

  • ಭಾವನಾತ್ಮಕ ವಿಷಯ  ವಾತಾವರಣ ಬೇಡ 
  • ಸಹೋದ್ಯೋಗಿಗಳನ್ನು ಪೂರ್ಣವಾಗಿ ಅವಲಂಬಿಸಬೇಡಿ 
  • ಬೇರೆ ದಿನಕ್ಕಿಂತ ನಿಮ್ಮ ವೃತ್ತಿಯಲ್ಲಿ ಪ್ರಗತಿ 
  • ನಿಮ್ಮ ಆಸಕ್ತಿ ಹೆಚ್ಚಿದಷ್ಟು ಕೆಲಸದಿಂದ ಆದಾಯವಿದೆ 
  • ಮನೆಯವರ ಪ್ರೀತಿ ಅಭಿಮಾನಕ್ಕೆ ಪ್ರಯತ್ನಿಸಿ ವಿಫಲರಾಗುತ್ತಿರಿ 
  • ಕೆಲಸ ಮಾಡುತ್ತೀರಿ ಧೈರ್ಯ ಕಡಿಮೆ ಇರಬಹುದು 
  • ಮಾರುತಿಯನ್ನು ಉಪಾಸನೆ ಮಾಡಿ 

ಮಕರ 

  • ಬೇರೆಯವರ ಬೇಡದ ವಿಚಾರದಿಂದ ನಿಮಗೆ ಸಂತೋಷ 
  • ಮಕ್ಕಳೊಂದಿಗೆ ಕುಟುಂಬದ ಸದಸ್ಯರೊಂದಿಗೆ ಅನಗತ್ಯ ವಿಚಾರ ಚರ್ಚೆ 
  • ಮನೆಯಲ್ಲಿಯ ವಾತಾವರಣ ಹಾಸ್ಯಾಸ್ಪದವಾಗಬಹುದು 
  • ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಶುಭವಿದೆ 
  • ಆಧ್ಯಾತ್ಮಿಕ  ಧಾರ್ಮಿಕ ವಿಚಾರಗಳು ಬಂದಾಗ ತಾತ್ಸಾರವಾಗಿ ನೋಡಬಹುದು 
  • ನಿಮ್ಮ ಆಲೋಚನೆ ಬೇರೆ,  ನಡೆಯುವುದೇ ಬೇರೆಯಾಗುವುದರಿಂದ ಬೇಸರ  ಆಗಲಿದೆ
  • ಪುಣ್ಯಕ್ಷೇತ್ರಗಳ ದರ್ಶನ ಮಾಡಿ 

ಕುಂಭ 

  • ಆರೋಗ್ಯದ ಬಗ್ಗೆ ಗಮನಿಸಿ 
  • ಸುಮಾರು 2 ವರ್ಷಗಳಿಂದ ಅನುಭವಿಸುತ್ತಿರುವ ಕಾಲು ನೋವು ತೊಂದರೆ ಮಾಡಬಹುದು 
  • ಹೊಸವಾಹನ ಖರೀದಿಯ ಮಾತು ಬರುತ್ತದೆ
  • ಸಣ್ಣ ಪುಟ್ಟ ವಿಚಾರಗಳಿಗೆ ಮನೆಯಲ್ಲಿ ಕಲಹ 
  • ಆತುರದ ಕೆಲಸದಿಂದ ವಸ್ತು ನಷ್ಟ 
  • ನಿಮ್ಮ ಕೋಪ ಮಕ್ಕಳ ಮೇಲೆ ಬೇಡ - ತೊಂದರೆಯಾಗಬಹುದು 
  • ಇಂದ್ರಾಕ್ಷೀ ಸ್ತೋತ್ರ ಪಠಿಸಿ 

ಮೀನ 

  • ಶಾಂತ ಮನಸ್ಥಿತಿಯಲ್ಲಿರಬೇಕೆಂದು ಯೋಚಿಸಿದರೂ ಆಗುವುದಿಲ್ಲ 
  • ವ್ಯಾಪಾರ  ವ್ಯವಹಾರದಲ್ಲಿ ಲಾಭ 
  • ದಾಂಪತ್ಯ ಜೀವನದಲ್ಲಿ ಕೋಪ ಬೇಡ 
  • ಮನೆಯವರ ಸಲಹೆ ಉಪಯುಕ್ತ ಎಂಬುದನ್ನು ಅರಿಯಬೇಕಾಗುತ್ತದೆ
  • ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ 
  • ನಿಮ್ಮ ಕಿರಿಯರು ಭಯದಿಂದ ಗೌರವಿಸಬಹುದು 
  • ಧ್ಯಾನದ ಮೊರೆ ಹೋಗಿ 

ಇದನ್ನೂ ಓದಿ: ಹಿಟ್ ಅಂಡ್ ರನ್‌ಗೆ ಗೃಹಿಣಿ ನವಮಿ ಬಲಿ : ಆಲ್ದೂರು ಹಿಂದೂ ಸಮಾಜೋತ್ಸವ ಮುಂದೂಡಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment