/newsfirstlive-kannada/media/media_files/2025/08/08/market-2025-08-08-08-47-15.jpg)
ಬೆಂಗಳೂರು: ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಎಲ್ಲರ ಮನೆಯಲ್ಲೂ ಸಡಗರ, ಸಂಭ್ರಮ ಮನೆ ಮಾಡಿದ್ದು ದೇವತೆ ಮಹಾಲಕ್ಷ್ಮಿನ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥಿಸುತ್ತಾರೆ. ಹಬ್ಬದ ಹಿನ್ನೆಲೆಯಲ್ಲಿ ಮಾರ್ಕೆಟ್ ಅಂತೂ ಫುಲ್ ಬ್ಯುಸಿಯಾಗಿದೆ. ಎಲ್ಲಿ ನೋಡಿದರೂ ಕಾಯಿ, ಕರ್ಪೂರಗಳು, ಹೂವು, ಹಣ್ಣು ಬಾಳೆಗಳು ತುಂಬಿವೆ.
ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಮಾರ್ಕೆಟ್ನಲ್ಲಿ ಗ್ರಾಹಕರ ಖರೀದಿ ಕೂಡ ಜೋರಾಗಿದೆ. ಹಣ್ಣು, ಹೂವು ಖರೀದಿಗೆಂದು ಜನರು ಮುಗಿಬಿದ್ದಿದ್ದಾರೆ. ಇದರ ಜೊತೆಗೆ ಅವುಗಳ ಬೆಲೆ ಕೇಳಿ ಫುಲ್ ಶಾಕ್ ಆಗುತ್ತಿದ್ದಾರೆ. ಹೌದು ಮಾರ್ಕೆಟ್ನಲ್ಲಿ ಹೂವು, ಹಣ್ಣು, ತರಕಾರಿ, ಪೂಜಾ ಸಾಮಾನುಗಳ ಬೆಲೆಯಲ್ಲಿ ಭಾರೀ ಏರಿಕೆ ಆಗಿದ್ದು ಯಾವುದೋ ಕೊಂಡುಕೊಳ್ಳುವುದೋ ಏನೋ ಅಂತ ಜನರ ತಲೆ ಗಿರ್ರ್.. ಎನ್ನುತ್ತಿದೆ.
ಇದನ್ನೂ ಓದಿ: ಇಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ.. ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್
ಹೂವುಗಳ ಇಂದಿನ ದರ?
ಕನಕಾಂಬರ | 1600 ರೂ |
ಮಲ್ಲಿಗೆ, ಮಳ್ಳೆ ಹೂವು | 900 ರೂ |
ಕಾಕಡ ಹೂವು | 800 |
ಸೇವಂತಿಗೆ | 800 |
ಗುಲಾಬಿ | 500 |
ಕಣಗಲೆ | 500 |
ಸುಗಂಧರಾಜ | 500 |
ತಾವರೆ ಹೂವು (ಜೋಡಿ) | 150 |
ಜೋಡಿ ಬಾಳೆಕಂದು | 80 ಬೆಲೆ ಡಬಲ್ |
ಹಣ್ಣುಗಳ ಬೆಲೆ ಎಷ್ಟು ಇದೆ?
ಹಣ್ಣು | ಪ್ರಸ್ತುತ ದರ. | ಹಿಂದಿನ ದರ |
ಸೇಬು | 300 | 180 |
ದಾಳಬೆ | 280 | 150 |
ಕಿತ್ತಳೆ | 200 | 120 |
ಮೂಸಂಬಿ | 150 | 70 |
ಸಪೋಟ | 150 | 100 |
ದ್ರಾಕ್ಷಿ | 200 | 150 |
ಸೀತಾಫಲ | 200 | 60 |
ತರಕಾರಿ ಬೆಲೆ ಎಷ್ಟು ಇದೆ?
ತರಕಾರಿ | ಪ್ರಸ್ತುತ ದರ | ಹಿಂದಿನ ದರ |
ಹುರುಳಿಕಾಯಿ | 150 | 80 |
ಕ್ಯಾಪ್ಸಿಕಂ | 80 | 40 |
ಬೀನ್ಸ್ | 80 | 40 |
ಬದನೆಕಾಯಿ | 60 | 40 |
ಹೂಕೋಸು | 30 | 15 |
ತೊಂಡೆಕಾಯಿ | 45 | 30 |
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ