/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ- ವಿಜಯ ದೇವರಕೊಂಡ ವಿವಾಹ ಆಗ್ತಿರುವ ಹೋಟೇಲ್ ಯಾವುದು? ವಿಲ್ಲಾ ಬಾಡಿಗೆ ಎಷ್ಟು? ಹೋಟೇಲ್ ನಲ್ಲಿ ಏನೇನಿದೆ?
ಮೇಷ
- ಆಸ್ತಿ ಬದಲಾವಣೆ ವಿಚಾರದಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
- ನಿಮ್ಮ ಬಂಧುಗಳಲ್ಲಿ ಮಂಗಳ ಕಾರ್ಯದಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
- ಕೋರ್ಟ್ ವಿಚಾರದಲ್ಲಿ ವಿಶೇಷವಾದ ಚರ್ಚೆ ಸಾಧ್ಯತೆ
- ಆರೋಗ್ಯ ಹಣದ ಸಮಸ್ಯೆ ಕುರಿತು ಸರಿಯಾದ ನಿರ್ಧಾರ ಮಾಡಿದರೆ ಒಳ್ಳೆಯದು
- ದೈಹಿಕವಾದ ಆಯಾಸದಿಂದ ಕೋಪ ಹೆಚ್ಚಾಗಬಹುದು
- ನಿಮ್ಮ ಶಕ್ತಿಯನ್ನು ಸರಿಯಾಗಿ ವಿನಿಯೋಗಿಸಿಕೊಳ್ಳಿ
- ಶ್ರೀರಾಮ ಪರಿವಾರ ದೇವರನ್ನು ಪ್ರಾರ್ಥಿಸಿ
ವೃಷಭ
- ನಿಮ್ಮ ಕೆಲಸದಲ್ಲಿ ಜಾಗ್ರತೆಯಿಂದಿರಿ
- ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ
- ಅತಿಯಾದ ಯೋಚನೆಗಳು ಆತಂಕಕಾರಿಯಾಗಬಹುದು
- ಸ್ವಸಾಮರ್ಥ್ಯದಿಂದ ಜನರ ಮೆಚ್ಚುಗೆ ದೊರೆಯಬಹುದು
- ನಿವೃತ್ತ ಜೀವನ ನಡೆಸುತ್ತಿರುವವರಿಗೆ ಬಹಳ ಶುಭದಿನ
- ಮಾಧ್ಯಮದಲ್ಲಿ ಕೆಲಸ ನಿರ್ವಹಣೆ ಮಾಡುವವರಿಗೆ ತೃಪ್ತಿ ಲಾಭವಿದೆ
- ಸಾಕು ಪ್ರಾಣಿಗಳಿಗೆ ಆಹಾರ ನೀಡಿ
ಮಿಥುನ
- ಬೇರೆಯವರನ್ನು ಅನುಸರಿಸಿ ಆದರೆ ಅನುಕರಿಸಬೇಡಿ
- ನಿಮ್ಮ ರಹಸ್ಯ ವಿಚಾರಗಳಿಂದ ನಿಮಗೇ ತೊಂದರೆ ಅವಮಾನ ಸಾಧ್ಯತೆ
- ಸ್ವಂತ ಬುದ್ದಿಯಿಂದ ನಿಮ್ಮ ಕೆಲಸವನ್ನ ಮಾಡಿ
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭ ದಿನ
- ಮಕ್ಕಳಿಂದ ತೊಂದರೆ,ಸಮಸ್ಯೆಯಿದೆ ಅದರ ಬಗ್ಗೆ ಗಮನವಿರಲಿ
- ನಿಮ್ಮ ತಪ್ಪು ನಿಮ್ಮನ್ನು ಕಾಡಬಹುದು
- ನಿಮ್ಮ ವ್ಯಾಪಾರ ವ್ಯವಹಾರ ವೇಗವಾಗಿ ನಡೆಯುವ ದಿನ
- ಸುಬ್ರಹ್ಮಣ್ಯನಿಗೆ ಭಸ್ಮದಿಂದ ಅರ್ಚನೆ ಮಾಡಿಸಿ
ಕಟಕ
- ಮಕ್ಕಳಿಂದ ಸಂತೋಷ ಸಿಗುವ ದಿನ
- ಹಣದ ಅಭಾವ ತುಂಬಾ ಬೇಸರ ವೈರಾಗ್ಯದ ಮಾತು ಉಂಟಾಗಬಹುದು
- ನಿಮ್ಮ ವ್ಯವಹಾರದ ನಿರ್ಧಾರಗಳನ್ನು ನೀವೇ ಮಾಡಿದರೆ ಒಳ್ಳೆಯದು
- ಉದ್ಯೋಗ ವೃತ್ತಿಯಲ್ಲಿ ಬದಲಾವಣೆಯಾಗಬಹುದು
- ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
- ಬೇರೆಯವರ ಸಹಾಯ ನಿರೀಕ್ಷೆಯಲ್ಲಿದ್ದರೆ ನಿರಾಸೆ ಉಂಟು ಮಾಡಬಹುದು
- ಗುರುದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಸಿಂಹ
- ಪ್ರೇಮಿಗಳಿಗೆ ಅಪಘಾತ ಸಂಭವಿಸುವ ಸೂಚನೆಯಿದೆ ಎಚ್ಚರ
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆಯಿದೆ
- ನಿಮ್ಮ ಆಸೆಗಳು ಇಂದು ಈಡೇರಬಹುದು
- ಶ್ರೀಮಂತ ಗಣ್ಯ ವ್ಯಕ್ತಿಯ ಭೇಟಿಗೆ ಅವಕಾಶವಿದೆ ಲಾಭವಿದೆ
- ಆರೋಗ್ಯದಲ್ಲಿ ಸಮಸ್ಯೆಗಳು ಬರದಂತೆ ಕಾಪಾಡಿಕೊಳ್ಳಿ
- ಮನೆಯವರಿಗೆ ಬಹಳ ವಿಧೇಯರಾಗಿ ವರ್ತಿಸಿ
- ಅಘೋರ ರುದ್ರನನ್ನು ಆರಾಧಿಸಿ
ಕನ್ಯಾ
- ವೃತ್ತಿಯಲ್ಲಿ ಲಾಭದ ಜೊತೆ ಸಾಧನೆ ಮಾಡುವ ಅವಕಾಶವಿದೆ
- ಜನ ಮನ್ನಣೆ ಗೌರವ ಪುರಸ್ಕಾರ ಸಿಗಬಹುದು
- ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಉಳಿಯಬಹುದು
- ಯಾವುದೇ ರೀತಿಯ ಬದಲಾವಣೆಯ ವಿಚಾರವನ್ನು ತಲೆಯಿಂದ ತೆಗೆದುಹಾಕಿ
- ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ
- ಸಾಧು-ಸಂತರ ಸಮಾಗಮವಾಗಬಹುದು, ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಚರ್ಚೆ ಸಾಧ್ಯತೆ
- ಮಕ್ಕಳಿಗೆ ಸಿಹಿ ಪದಾರ್ಥ ಹಂಚಿ
ತುಲಾ
- ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
- ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಬೇರೆಯವರು ಬರದಂತೆ ಗಮನಿಸಿ
- ಸಣ್ಣಪುಟ್ಟ ವಿಚಾರಗಳಿಗೆ ಜಗಳ ಮಾಡಬೇಡಿ
- ಕೆಲಸದಿಂದ ಆಯಾಸ ಬೇಸರ ಆಲಸ್ಯ ಕಾಡಬಹುದು ಜಾಗ್ರತೆವಹಿಸಿ
- ಸಾಮಾಜಿಕ ಸ್ಥಾನ ಮಾನ ಅಪೇಕ್ಷಿಸುವ ದಿನ
- ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ
- ವೃದ್ಧರಿಗೆ ಹಣ್ಣು ಕೊಡಿ
ವೃಶ್ಚಿಕ
- ಲೇಖಕರಿಗೆ ಉತ್ತಮವಾದ ದಿನ
- ಕಷ್ಟಗಳನ್ನು ನಿಮ್ಮ ಮನಸ್ಥೈರ್ಯದಿಂದ ದೂರ ಮಾಡಿಕೊಳ್ಳಬೇಕು
- ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಬರಬಹುದು
- ನೆಂಟರಿಷ್ಟರಲ್ಲಿ ಸ್ವಲ್ಪ ಅಂತರ ಕಾಯ್ದುಕೊಳ್ಳಿ ಇಲ್ಲದಿದ್ದರೆ ಅಪಮಾನ ಸಾಧ್ಯತೆ
- ಇಂದು ಪೋಷಕರಿಗೆ ಬೇಸರ ಮಾಡಬಾರದು
- ಹಳೆಯ ನೆನಪುಗಳಿಂದ ಸಂತೋಷವಾಗಬಹುದು
- ಪಾರ್ವತಿ-ಪರಮೇಶ್ವರರನ್ನು ಪ್ರಾರ್ಥಸಿ
ಧನುಸ್ಸು
- ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲ ದಿನ
- ಬಂಧುಗಳಲ್ಲಿ ವ್ಯವಹಾರಿಕ ವಿಚಾರಕ್ಕೆ ಬೇಸರ, ಕಲಹ ಸಾಧ್ಯತೆ
- ಜೀವನದಲ್ಲಿ ಅಸ್ಥಿರತೆ ಕಾಡಬಹುದು
- ಮಕ್ಕಳ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಸಾಧ್ಯತೆ
- ಇಂದು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
- ಮನೆ ಕಟ್ಟುವ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಸಾಧ್ಯತೆ
- ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥನೆ ಮಾಡಿ
ಮಕರ
- ಅಪರೂಪದ ವ್ಯಕ್ತಿಯ ಭೇಟಿ ಅಥವಾ ಆಗಮನದಿಂದ ಸಂತೋಷ ಸಾಧ್ಯತೆ
- ಮನೆ, ಮಕ್ಕಳು ತಮ್ಮ ಕರ್ತವ್ಯ ನಿರ್ವಹಿಸುವ ಕುಟುಂಬಸ್ಥರಿಂದ ನೆಮ್ಮದಿ
- ರಾಜಕಾರಣಿಗಳಿಗೆ ಶುಭವಾದ ದಿನ
- ಮನೋರಂಜನೆಗೆ ಅವಕಾಶ ಸಿಗುವ ದಿನ
- ರಾಜಕೀಯ ವಿಚಾರಗಳಲ್ಲಿ ಸ್ವಲ್ಪ ಸಮಾಧಾನ ಸಿಗುವ ದಿನ
- ಆರ್ಥಿಕ ಬಿಕ್ಕಟ್ಟು ಎದುರಾಗಬಹುದು ಆದರೆ ಸಾಯಂಕಾಲಕ್ಕೆ ಸರಿ ಹೋಗುವ ಸೂಚನೆಯಿದೆ
- ಕುಬೇರನನ್ನು ಪ್ರಾರ್ಥನೆ ಮಾಡಿ
ಕುಂಭ
- ಇಂದು ವಿನಾಕಾರಣ ಪ್ರಯಾಣ ಬೇಡವೆಂಬ ಸೂಚನೆಯಿದೆ
- ಆರೋಗ್ಯ ಸಮಸ್ಯೆ, ಆಲಸ್ಯ ಕಾಡಬಹುದು
- ಅಪರಿಚಿತರಲ್ಲಿ ಯಾವುದೇ ರೀತಿಯ ನಂಬಿಕೆ ಬೇಡ
- ಮಕ್ಕಳ ದೂರ ಪ್ರಯಾಣದ ವಿಚಾರದಲ್ಲಿ ಚರ್ಚೆ ನಡೆಯಬಹುದು
- ದಾಂಪತ್ಯದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆಯಿದೆ
- ಹಿರಿಯರ ಸಲಹೆ ಬಹಳ ಮುಖ್ಯವಾಗುತ್ತದೆ ತಾತ್ಸಾರ ಬೇಡ
- ಕುಲದೇವರಿಗೆ ತುಪ್ಪದ ದೀಪ ಹಚ್ಚಿ
ಮೀನ
- ಇಂದು ತುಂಬಾ ತಾಳ್ಮೆಯಿಂದ ವರ್ತಿಸಿ
- ವೃತ್ತಿ ಜೀವನ ಬದಲಾಯಿಸಲು ಈಗ ಸೂಕ್ತ ಸಮಯವಲ್ಲ
- ಇಂದು ಹಳೆಯ ಸ್ನೇಹಿತರು ಸಂಪರ್ಕಕ್ಕೆ ಬರಬಹುದು
- ನಿಮ್ಮ ಯೋಜನೆಗೆ ಕುಟುಂಬದವರ ಸಂಪೂರ್ಣ ಸಹಕಾರ ಸಿಗುವ ದಿನ
- ಪ್ರತೀಕ್ಷಣವು ಜಾಗರೂಕರಾಗಿರಬೇಕಾದ ದಿನ
- ಗೌರವಾನ್ವಿತ ವ್ಯಕ್ತಿಗಳು ಉತ್ತಮವಾದ ಸಲಹೆಗಳನ್ನ ನೀಡಬಹುದು
- ವಿಘ್ನೇಶ್ವರನ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us