ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್ ನಿಧನ: ನಾಳೆಯ ಬೆಂಗಳೂರು ಚಲೋ ಮುಂದೂಡಿಕೆ

ಸಾರಿಗೆ ನೌಕರರ ಮುಖಂಡರಾಗಿದ್ದ ಅನಂತ ಸುಬ್ಬರಾವ್ ಬೆಂಗಳೂರಿನಲ್ಲಿ ಇಂದು ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ವಿಜಯನಗರದ ಗ್ಲೋಬಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ನಾಳೆ ನಡೆಯಬೇಕಾಗಿದ್ದ ಸಾರಿಗೆ ನೌಕರರ ಮುಷ್ಕರ, ಬೆಂಗಳೂರು ಚಲೋವನ್ನು ಮುಂದೂಡಲಾಗಿದೆ.

author-image
Chandramohan
anantha subbarao is no more
Advertisment

ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ (85) ನಿಧನ ಹೊಂದಿದ್ದಾರೆ. ಇಂದು ಸಂಜೆ 5ಕ್ಕೆ ಹೃದಯಾಘಾತದಿಂದ ಅನಂತ್ ಸುಬ್ಬರಾವ್ ನಿಧನ ಹೊಂದಿದ್ದಾರೆ. ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಅನಂತ್ ಸುಬ್ಬರಾವ್ ಕೆಲಸ ಮಾಡುತ್ತಿದ್ದರು.  ಅನಂತ ಸುಬ್ಬರಾವ್ ನೇತೃತ್ವದಲ್ಲೇ ನಾಳೆ ಮುಷ್ಕರ ಹಾಗೂ ಬೆಂಗಳೂರು ಚಲೋ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದರು. ಅನಂತ್ ಸುಬ್ಬರಾವ್ ಅವರು, ನಾಳೆ ಸಾರಿಗೆ ನೌಕರರಿಂದ ಬೆಂಗಳೂರು ಚಲೋಗೆ ಕರೆ ನೀಡಿದ್ದರು.
ಆದರೇ, ಅನಂತ್ ಸುಬ್ಬರಾವ್ ಅವರೇ ವಿಧಿವಶರಾಗಿದ್ದಾರೆ. ಬೆಂಗಳೂರಿನ ವಿಜಯನಗರದ ಗ್ಲೋಬಲ್ ಆಸ್ಪತ್ರೆಯಲ್ಲಿ ಅನಂತ್ ಸುಬ್ಬರಾವ್ ವಿಧಿವಶರಾಗಿದ್ದಾರೆ. ಸಾರಿಗೆ ನೌಕರರ ಧ್ವನಿಯಾಗಿ ಅನಂತ್ ಸುಬ್ಬರಾವ್ ಕೆಲಸ ಮಾಡಿದ್ದಾರೆ. ಅನಂತ್ ಸುಬ್ಬರಾವ್ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನವರು. 
ಅನಂತ್ ಸುಬ್ಬರಾವ್ ನಿಧನರಾದ ಹಿನ್ನಲೆಯಲ್ಲಿ ನಾಳೆ ನಡೆಯಬೇಕಾಗಿದ್ದ ಸಾರಿಗೆ ನೌಕರರ ಮುಷ್ಕರ ಹಾಗೂ ಬೆಂಗಳೂರು ಚಲೋವನ್ನು ಮುಂದೂಡಲಾಗಿದೆ.

anantha subbarao is no more (1)




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Transport strike Transport Minister ANANTHA SUBBARAO IS NO MORE
Advertisment