/newsfirstlive-kannada/media/media_files/2025/09/12/hsn_ganesha-2025-09-12-21-39-11.jpg)
ಹಾಸನ: ಗಣೇಶ ಮೆರವಣಿಗೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಗಣಪತಿ ಮೆರವಣಿಗೆ ಹೋಗುವಾಗ ಜನರ ಮೇಲೆ ಟ್ರಕ್ ನುಗ್ಗಿದ್ದರಿಂದ ಘಟನೆಯಲ್ಲಿ 7 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯು ಹಾಸನ ತಾಲೂಕಿನ ಮೊಸಳೆಹೊಸಹಳ್ಳಿಯಲ್ಲಿ ನಡೆದಿದೆ.
ಅದ್ಧೂರಿಯಾಗಿ ಗಣೇಶ ಮೆರವಣಿಗೆ ಸಾಗುತ್ತಿರುವ ವೇಳೆ ಟ್ರಕ್​ವೊಂದು ಜನರ ಮೇಲೆ ನುಗ್ಗಿದೆ. ಚಾಲಕನ ಅಜಾಗುರಕತೆಯಿಂದ ಈ ಘಟನೆ ನಡೆದಿದೆ. ಡಿವೈಡರ್​ಗೆ ಡಿಕ್ಕಿ ಆದ ಟ್ರಕ್​ ಒಂದು ಬದಿಯಿಂದ ಇನ್ನೊಂದು ಬದಿಗೆ ಬಂದು ಜನರ ಮೇಲೆ ಟ್ರಕ್ ಹರಿದಿದೆ. ಇದರ ಪರಿಣಾಮ ಮೆರವಣಿಗೆಯಲ್ಲಿದ್ದ 7 ಜನರು ಜೀವ ಬಿಟ್ಟಿದ್ದಾರೆ. ಇನ್ನು ಸಾವಿನ ಸಂಖ್ಯೆಯ ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಭಾರತದ ಫುಟ್‌ಬಾಲ್ ಅಭಿವೃದ್ಧಿಗೆ ಬೆಂಗಳೂರು FC ಮಹತ್ವದ ಹೆಜ್ಜೆ: ಹೊಸ ತರಬೇತಿ ಕೇಂದ್ರ ಉದ್ಘಾಟನೆ!
/filters:format(webp)/newsfirstlive-kannada/media/media_files/2025/09/12/hsn_ganesh-2025-09-12-21-39-23.jpg)
ಸದ್ಯ ಸ್ಥಳದಲ್ಲೇ ಸಾವು-ನೋವು ಹೆಚ್ಚಾಗುವ ಸಂಭವವಿದೆ. ಲಾರಿ ಏಕಾಏಕಿ ನುಗ್ಗಿದ್ದರಿಂದ 10 ರಿಂದ 15 ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಕೆಲವರಂತೂ ನೋವಿನಿಂದ ನರಳುತ್ತಿದ್ದಾರೆ. ಇದು ಅಪಘಾತ ವಲಯ ಎಂದು ಗೊತ್ತಿದ್ದರೂ ಟ್ರಕ್ ವೇಗವಾಗಿ ಬಂದಿದ್ದೇ ಈ ದುರಂತಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us