/newsfirstlive-kannada/media/media_files/2025/09/26/tumakura-palike-expansion-2025-09-26-20-33-36.jpg)
ತುಮಕೂರು ಪಾಲಿಕೆಗೆ 54 ಗ್ರಾಮ ಸೇರ್ಪಡೆಗೆ ಕ್ಯಾಬಿನೆಟ್ ಒಪ್ಪಿಗೆ
ತುಮಕೂರು ಮಹಾನಗರ ಪಾಲಿಕೆಗೆ ಸುತ್ತಲಿನ 14 ಗ್ರಾಮ ಪಂಚಾಯಿತಿಗಳ 54 ಗ್ರಾಮಗಳನ್ನ ಸೇರ್ಪಡೆ ಮಾಡುವುದಕ್ಕೆ ರಾಜ್ಯ ಸಚಿವ ಸಂಪುಟ( ಕ್ಯಾಬಿನೆಟ್ ) ಒಪ್ಪಿಗೆ ನೀಡಿದೆ ಎಂದು ರಾಜ್ಯದ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಡಾ.ಜಿ.ಪರಮೇಶ್ವರ್ ಮಾತನಾಡಿದ್ದಾರೆ. ಈ ವೇಳೆ ತುಮಕೂರು ಮಹಾನಗರ ಪಾಲಿಕೆಗೆ ಸುತ್ತಲಿನ 14 ಗ್ರಾಮ ಪಂಚಾಯಿತಿ ಹಾಗೂ 54 ಗ್ರಾಮಗಳನ್ನು ಸೇರ್ಪಡೆ ಮಾಡುವುದಕ್ಕೆ ರಾಜ್ಯ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ.
ಇದರಿಂದ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿ ಪ್ರಸ್ತುತ ಇರುವ 48 ಚದರ ಕಿಲೋಮೀಟರ್ ನಿಂದ 174 ಕಿಲೋಮೀಟರ್ ವರೆಗೂ ವಿಸ್ತರಣೆಯಾಗಲಿದೆ. ತುಮಕೂರು ನಗರದಿಂದ ಗುಬ್ಬಿ ರಸ್ತೆಯಲ್ಲಿ ಮಲ್ಲಸಂದ್ರದವರೆಗೂ ಪಾಲಿಕೆ ವಿಸ್ತರಣೆಯಾಗಲಿದೆ. ಬೆಳಗುಂಬ, ಅರಕೆರೆ, ಹೀರೇಹಳ್ಳಿ, ಸ್ವಾಂದೇನಹಳ್ಳಿ, ಬುಗುಡನಹಳ್ಳಿ, ದೊಡ್ಡ ನಾರವಂಗಲ, ಹೇತ್ತೇನಹಳ್ಳಿ, ಕೆಸರಮಡು, ಮೈದಾಳ, ಊರುಕೆರೆ, ಹೆಗ್ಗೆರೆ, ಗೂಳೂರು, ಕೆ.ಪಾಲಸಂದ್ರ, ಮಲ್ಲಸಂದ್ರ ಗ್ರಾಮ ಪಂಚಾಯಿತಿಗಳು ತುಮಕೂರು ಮಹಾನಗರ ಪಾಲಿಕೆಗೆ ಸೇರ್ಪಡೆಗೊಳ್ಳಲಿವೆ.
ಎರಡು ವರ್ಷಗಳಿಂದ ತುಮಕೂರು ನಗರದ ಸುತ್ತಲಿನ 14 ಗ್ರಾಮ ಪಂಚಾಯಿತಿಗಳನ್ನು ಪಾಲಿಕೆಗೆ ಸೇರ್ಪಡೆ ಮಾಡುವ ಪ್ರಕ್ರಿಯೆಯನ್ನು ತುಮಕೂರು ಮಹಾನಗರ ಪಾಲಿಕೆ, ತುಮಕೂರು ಜಿಲ್ಲಾಡಳಿತ ಹಾಗೂ ತುಮಕೂರು ಜಿಲ್ಲಾ ಪಂಚಾಯಿತಿ ನಡೆಸುತ್ತಿದ್ದವು.
ಗ್ರಾಮ ಪಂಚಾಯಿತಿಗಳು ತಮ್ಮ ಗ್ರಾಮಗಳನ್ನು ಮಹಾನಗರ ಪಾಲಿಕೆಗೆ ಸೇರ್ಪಡೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಈ ಹಿಂದೆ ಪಾಲಿಕೆಗೆ ಸೇರ್ಪಡೆಯಾದ ಗ್ರಾಮಗಳಿಗೆ ಸರಿಯಾಗಿ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿಲ್ಲ. ಇಂಥ ಸ್ಥಿತಿಯಲ್ಲಿ 54 ಗ್ರಾಮಗಳನ್ನು ಹೊಸದಾಗಿ ತುಮಕೂರು ಪಾಲಿಕೆಗೆ ಸೇರ್ಪಡೆ ಮಾಡಿಕೊಂಡರೇ, ಸರಿಯಾದ ಮೂಲಸೌಕರ್ಯ ಕಲ್ಪಿಸಲು ಪಾಲಿಕೆಯಿಂದ ಸಾಧ್ಯವಾಗಲ್ಲ. ಜೊತೆಗೆ ಗ್ರಾಮ ಪಂಚಾಯಿತಿಗಳಲ್ಲಿರುವ ಸದಸ್ಯರ ರಾಜಕೀಯ ಪ್ರಾತಿನಿಧ್ಯ ಕೂಡ ಕಡಿಮೆಯಾಗುತ್ತೆ ಎಂದು ವಿರೋಧಿಸಿದ್ದರು. ಆದರೇ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಒತ್ತಾಸೆ, ಆಸಕ್ತಿಯ ಕಾರಣದಿಂದಾಗಿ ರಾಜ್ಯ ಕ್ಯಾಬಿನೆಟ್, 14 ಗ್ರಾಮ ಪಂಚಾಯಿತಿ ಹಾಗೂ 54 ಗ್ರಾಮಗಳನ್ನು ತುಮಕೂರು ಮಹಾನಗರ ಪಾಲಿಕೆಗೆ ಸೇರ್ಪಡೆ ಮಾಡುವುದಕ್ಕೆ ಒಪ್ಪಿಗೆ ನೀಡಿದೆ.
/filters:format(webp)/newsfirstlive-kannada/media/media_files/2025/09/26/tumakura-palike-expansion02-2025-09-26-20-44-12.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us