ಶಿರಾದ ಮಾಗೋಡುವಿನಲ್ಲಿ ಹೂವಿನ ರಥೋತ್ಸವ : ಕಂಬದ ರಂಗನಾಥನಿಗೆ ಹೂವಿನ ಅಲಂಕಾರ

ಒಂದೊಂದು ದೇವರುಗಳಿಗೆ ಒಂದೊಂದು ಇಷ್ಟದ ವಸ್ತುವನ್ನು ಅರ್ಪಿಸಿ ಭಕ್ತರು ಹರಕೆಗಳನ್ನು ತೀರಿಸುತ್ತಾರೆ. ಅದೇ ರೀತಿ ಶಿರಾ ತಾಲ್ಲೂಕಿನ ಮಾಗೋಡು ಗ್ರಾಮದ ಕಂಬದ ರಂಗನಾಥಸ್ವಾಮಿಗೆ ಹೂವು ಅಂದರೇ, ಇಷ್ಟ. ಹೀಗಾಗಿ ಹೂವು ಅನ್ನು ದೇವರಿಗೆ ಅರ್ಪಿಸಿ ರಥೋತ್ಸವ ನಡೆಸಲಾಗಿದೆ. ಹೂವಿನ ರಥೋತ್ಸವ ಸಖತ್ತಾಗಿತ್ತು.

author-image
Chandramohan
Magodu rangantaha swamy temple (1)

ಕಂಬದ ರಂಗನಾಥಸ್ವಾಮಿಗೆ ಹೂವಿನ ರಥೋತ್ಸವ

Advertisment
  • ಕಂಬದ ರಂಗನಾಥಸ್ವಾಮಿಗೆ ಹೂವಿನ ರಥೋತ್ಸವ
  • ಶಿರಾ ತಾಲ್ಲೂಕಿನ ಮಾಗೋಡು ಗ್ರಾಮದ ಕಂಬದ ರಂಗನಾಥಸ್ವಾಮಿ ದೇವಾಲಯ
  • ಹೂವಿನಿಂದಲೇ ರಥ, ದೇವರ ಅಲಂಕರಿಸಿ ರಥೋತ್ಸವ

ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಹೂವಿನ ರಥೋತ್ಸವ ಎಂದು ಪ್ರಸಿದ್ಧವಾಗಿರುವ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾಗೋಡು ಗೊಲ್ಲರಹಟ್ಟಿಯಲ್ಲಿರೋ ಕಂಬದ ರಂಗನಾಥ ಸ್ವಾಮೀ ಜಾತ್ರೆಯ ಹೂವಿನ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿದೆ. ಮಾಗೋಡು ಶ್ರೀ ಕಂಬದ ರಂಗನಾಥ ಸ್ವಾಮಿ ಎಂದರೆ ಹೂವಿನ ಪ್ರಿಯ ಹಾಗೂ ಬ್ರಹ್ಮರಥೋತ್ಸವ ಹೂವಿಗೆ ಪ್ರಸಿದ್ಧಿ. ಇಲ್ಲಿ ತಮ್ಮ ಇಷ್ಟಾರ್ಥ ನೆರವೇರಿದರೆ ಭಕ್ತರು ಹೂವಿನ ತುಲಾಭಾರ ಮಾಡಿ ರಥೋತ್ಸವದಲ್ಲಿ ದೇವರಿಗೆ ಅರ್ಪಿಸುತ್ತಾರೆ. ಜೊತೆಗೆ ಸಾವಿರಾರು ರೂಪಾಯಿಗಳ ಹೂವನ್ನ ತಂದು ಶ್ರೀ ಕಂಬದ ರಂಗನಾಥಸ್ವಾಮಿ ರಥಕ್ಕೆ ಹಾಕುತ್ತಾರೆ. ರಥೋತ್ಸವದಲ್ಲಿ ರಥದ ತುಂಬೆಲ್ಲಾ ಹೂವಿನಿಂದ ತುಂಬಿರುತ್ತದೆ. ಶ್ರೀ ರಂಗನಾಥ ಸ್ವಾಮಿಯು ಕಂಬದಲ್ಲಿ ಮೂಡಿರುವ ಕಾರಣಗಳಿಂದ ಕಂಬದರಂಗ ಎಂದು ಕರೆದು ಆರಾಧಿಸುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kambada ranganatha swamy temple
Advertisment