/newsfirstlive-kannada/media/media_files/2025/11/17/metro-connectivity-to-tumakuru-2025-11-17-12-37-25.jpg)
ಮಾದಾವರದಿಂದ ತುಮಕೂರಿನವರೆಗೂ ಮೆಟ್ರೋ ವಿಸ್ತರಣೆ!
ಬೆಂಗಳೂರು ಮೆಟ್ರೋ ರೈಲು ಸಂಪರ್ಕವನ್ನು ಬೆಂಗಳೂರು ನಗರದಿಂದ ಆಚೆಗೂ ವಿಸ್ತರಿಸುವ ಪ್ರಯತ್ನಕ್ಕೆ ಈಗ ವೇಗ ಸಿಕ್ಕಿದೆ. ಅಂತರ್ ಜಿಲ್ಲಾ ಮೆಟ್ರೋ ಸಂಪರ್ಕ ನೀಡಲು ಬಿಎಂಆರ್‌ಸಿಎಲ್ ಮುಂದಾಗಿದೆ. ಬೆಂಗಳೂರಿನ ತುಮಕೂರು ರಸ್ತೆಯ ಮಾದಾವರದಿಂದ ನೆಲಮಂಗಲ, ಡಾಬಸ್ ಪೇಟೆ ಮೂಲಕ ತುಮಕೂರು ನಗರದವರೆಗೂ ಮೆಟ್ರೋ ಸಂಪರ್ಕ ವಿಸ್ತರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಮಾದಾವರ ಮೆಟ್ರೋ ನಿಲ್ದಾಣದಿಂದ ತುಮಕೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೂ 59.6 ಕಿ.ಮೀ. ಮಾರ್ಗದಲ್ಲಿ ಮೆಟ್ರೋ ವಿಸ್ತರಣೆಗೆ ಈಗಾಗಲೇ ಫಿಸಿಬಲಿಟಿ ಸ್ಟಡಿ ನಡೆಸಲಾಗಿತ್ತು. ಈಗ ಬಿಎಂಆರ್‌ಸಿಎಲ್ , ಈ ಮಾರ್ಗದ ಮೆಟ್ರೋ ರೈಲು ಸಂಪರ್ಕ ವಿಸ್ತರಣೆಗಾಗಿ ಡೀಟೈಲ್ ಪ್ರಾಜೆಕ್ಟ್ ರಿಪೋರ್ಟ್ ಅಥವಾ ಡಿಪಿಆರ್ ಸಿದ್ದಪಡಿಸಲು ಟೆಂಡರ್ ಕರೆದಿದೆ. ಈ ಉದ್ದೇಶಿತ ಮಾರ್ಗದಲ್ಲಿ 25 ನಿಲ್ದಾಣಗಳನ್ನು ನಿರ್ಮಿಸಬೇಕಾಗಿದೆ.
ಇನ್ನೂ ನೆಲಮಂಗಲದಿಂದ ತುಮಕೂರು ನಗರದವರೆಗೂ ಗ್ರಾಮಾಂತರ ಪ್ರದೇಶಗಳ ಹಳ್ಳಿಗಳೇ ಇವೆ. ಡಾಬಸ್ ಪೇಟೆಯೂ ದೊಡ್ಡ ಪಟ್ಟಣವೇನೂ ಅಲ್ಲ. ಆದರೇ, ದಾಬಸ್ ಪೇಟೆಯಿಂದ ದೊಡ್ಡಬಳ್ಳಾಪುರದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ನಲ್ಲಿ ಕ್ವಿನ್ ಸಿಟಿ ನಿರ್ಮಾಣವಾಗುತ್ತಿದೆ. ಹೀಗಾಗಿ ದಾಬಸ್ ಪೇಟೆಗೆ ಮೆಟ್ರೋ ಮಾರ್ಗ ನಿರ್ಮಾಣವಾದರೇ, ಕ್ವಿನ್ ಸಿಟಿಗೂ ಅನುಕೂಲವಾಗುತ್ತೆ.
ಇನ್ನೂ ನೆಲಮಂಗಲದಿಂದ ತುಮಕೂರಿನವರೆಗೂ 40 ಕಿ.ಮೀ. ಮಾರ್ಗದಲ್ಲಿ ಯಾವ ಮೋಡ್ ಟ್ರಾನ್ಸ್ ಪೋರ್ಟ್ ಉತ್ತಮ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ. ಮೆಟ್ರೋ, ಸಬ್ ಆರ್ಬನ್, ಆರ್‌ಆರ್‌ಟಿಎಸ್ ಅಥವಾ ಬೇರೆ ಇನ್ನಾವುದು ಉತ್ತಮ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಡಿಪಿಆರ್ ನಲ್ಲಿ ಈ ಬಗ್ಗೆ ಅಧ್ಯಯನ ಮಾಡಿ ಉಲ್ಲೇಖಿಸಲಾಗುತ್ತೆ. ನೆಲಮಂಗಲದಿಂದ ತುಮಕೂರು ಸಿಟಿಯವರೆಗೂ ಹೈ ಸ್ಪೀಡ್ ಮೆಟ್ರೋ ಎಂದು ಡಿಪಿಆರ್ ಸಿದ್ದಪಡಿಸಲು ಕರೆದ ಟೆಂಡರ್ ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಮಾದಾವರದಿಂದ ನೆಲಮಂಗಲದವರೆಗೂ ನಾರ್ಮಲ್ ಮೆಟ್ರೋ ಟ್ರೇನ್ ಸಂಪರ್ಕ ಸಿಗಲಿದೆ. ಬಳಿಕ ನೆಲಮಂಗಲದಿಂದ ಹೈ ಸ್ಪೀಡ್ ಮೆಟ್ರೋ ಟ್ರೇನ್ ಸಂಪರ್ಕಕ್ಕಾಗಿ ಈಗ ಡಿಪಿಆರ್ ಸಿದ್ದಪಡಿಸಬಹುದು.
/filters:format(webp)/newsfirstlive-kannada/media/media_files/2025/11/17/metro-connectivity-2025-11-17-12-46-49.jpg)
ಈ ಹಿಂದೆ ಹೈದರಾಬಾದ್ ಕಂಪನಿಯೊಂದಕ್ಕೆ ಫಿಸಬಲಿಟಿ ಸ್ಟಡಿ ರಿಪೋರ್ಟ್ ಸಿದ್ದಪಡಿಸಲು ಜವಾಬ್ದಾರಿ ನೀಡಲಾಗಿತ್ತು. ಫಿಸಿಬಲಿಟಿ ರಿಪೋರ್ಟ್ ತಯಾರಿಸಲು 3 ಕೋಟಿ ರೂಪಾಯಿ ಹಣ ನೀಡಲಾಗಿತ್ತು.
ಇನ್ನೂ ಮಾದಾವರದಿಂದ ತುಮಕೂರು ಸಿಟಿವರೆಗೂ ಮೆಟ್ರೋ ಟ್ರೇನ್ ಸಂಪರ್ಕ ನಿರ್ಮಾಣಕ್ಕೆ 20,649 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದೆ. ಈ ವೆಚ್ಚವನ್ನು ಸರ್ಕಾರ- ಖಾಸಗಿ ಸಹಭಾಗಿತ್ವದಲ್ಲಿ ಭರಿಸಬೇಕು ಎಂಬ ಪ್ಲ್ಯಾನ್ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರದ್ದಾಗಿದೆ.
ತುಮಕೂರಿಗೆ ಮೆಟ್ರೋ ಟ್ರೇನ್ ಶುಲ್ಕ ದುಬಾರಿಯಾಗುತ್ತಾ?
ಆದರೇ ಬೆಂಗಳೂರಿನ ಮೆಜೆಸ್ಟಿಕ್ ನಿಂದ ತುಮಕೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೂ 70 ಕಿ.ಮೀ. ದೂರ ಇದೆ. ಬೆಂಗಳೂರು ಮೆಟ್ರೋ ಸದ್ಯಕ್ಕೆ 1 ಕಿ.ಮೀ. ದೂರಕ್ಕೆ 3 ರೂಪಾಯಿ ಚಾರ್ಜ್ ಮಾಡುತ್ತಿದೆ. ಬೆಂಗಳೂರಿನಿಂದ ತುಮಕೂರಿನ 70 ಕಿ.ಮೀ. ದೂರಕ್ಕೆ 210 ರೂಪಾಯಿ ಶುಲ್ಕ ವಿಧಿಸಬಹುದು. ಸದ್ಯ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು 91 ರೂಪಾಯಿ ಬಸ್ ಚಾರ್ಜ್ ಇದೆ. ಹೀಗಾಗಿ ಮೆಟ್ರೋ ಟ್ರೇನ್ ನಲ್ಲಿ ತುಮಕೂರಿಗೆ ಓಡಾಡುವವರಿಗೆ ದುಬಾರಿಯೂ ಆಗಬಹುದು. ಹೀಗಾಗಿ ತುಮಕೂರಿಗೆ ಮೆಟ್ರೋ ಟ್ರೇನ್ ವಿಸ್ತರಣೆ ಆರ್ಥಿಕವಾಗಿ ಫಿಸಿಬಲಿಟಿ ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತೆ. ಈಗ ಡಾ.ಜಿ.ಪರಮೇಶ್ವರ್ ಅವರು ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ಮೆಟ್ರೋ ಟ್ರೇನ್ ಮಾರ್ಗವನ್ನು ತುಮಕೂರಿನವರೆಗೂ ವಿಸ್ತರಿಸಬೇಕೆಂಬ ಮಹತ್ವಾಕಾಂಕ್ಷೆಯಲ್ಲಿದ್ದಾರೆ. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರ ಉದ್ದೇಶವೇನೋ ಒಳ್ಳೆಯದು. ತುಮಕೂರಿನವರೆಗೂ ಮೆಟ್ರೋ ವಿಸ್ತರಣೆಯಾದರೇ, ತುಮಕೂರಿನ ಜನರಿಗೂ ಅನುಕೂಲ. ತುಮಕೂರಿನ ಬೆಳವಣಿಗೆಗೂ ಅನುಕೂಲ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us