/newsfirstlive-kannada/media/media_files/2026/01/08/mother-in-law-suicide-at-gubbi-2026-01-08-13-51-58.jpg)
ಸಾಮಾನ್ಯವಾಗಿ ಅತ್ತೆಯ ಕಾಟದಿಂದ ಸೊಸೆ ಆತ್ಮಹತ್ಯೆಗೆ ಶರಣಾಗುವುದು, ಮನೆ ಬಿಟ್ಟು ತವರು ಮನೆಗೆ ಹೋಗುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೇ, ಸೊಸೆಯ ಕಾಟ, ಕಿರುಕುಳದಿಂದ ಅತ್ತೆಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಾರೇಕುರ್ಚಿ ಗ್ರಾಮದಲ್ಲಿ ಅಂಬಿಕಾ ಅಲಿಯಾಸ್ ಭ್ರಮರಾಂಬಿಕ (66) ಎಂಬ ವೃದ್ದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಭ್ರಮರಾಂಬಿಕಾ ಅವರು ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಜಿಎಸ್ ಬಸವರಾಜ್ ಅವರ ಆಪ್ತರಾದ ಕುಂದರನಹಳ್ಳಿ ರಮೇಶ್ ಅವರ ಸ್ವಂತ ಸೋದರಿ. ಕಾರೇಕುರ್ಚಿ ಗ್ರಾಮದ ಮನೆಯಿಂದ ಸ್ಪಲ್ಪ ದೂರದ ಪಂಪ್ ಹೌಸ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಭ್ರಮರಾಂಬಿಕ ಶವ ಪತ್ತೆಯಾಗಿತ್ತು.
ನೇಣು ಬಿಗಿದ ಸ್ಥಿತಿಯಲ್ಲಿದ್ದ ಶವವನ್ನು ನೋಡಿದ ಮಗ ಮನುಕುಮಾರ್ ನೇಣು ಕುಣಿಕೆಯಿಂದ ಇಳಿಸಿದ್ದಾರೆ.
ಮಧ್ಯರಾತ್ರಿ 1.45 ರಲ್ಲಿ ಭ್ರಮರಾಂಬಿಕಾ ತಾವೇ ತಮ್ಮ ಮನೆಯಿಂದ ಹೊರಗೆ ಬಂದು ನಡೆದುಕೊಂಡು ಸೀದಾ ಪಂಪ್ ಹೌಸ್ ಗೆ ಹೋಗಿ ನೇಣು ಹಾಕಿಕೊಂಡಿದ್ದಾರೆ. ಈ ಸಾವಿನ ಬಳಿಕ ಸೊಸೆ ಕಾವ್ಯಶ್ರೀ ವಿರುದ್ಧ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಸೊಸೆ ಕಾವ್ಯಶ್ರೀ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಕೇಸ್ ದಾಖಲಾಗಿದೆ.
ಅಂಬಿಕಾ ಅಲಿಯಾಸ್ ಭ್ರಮರಾಂಬಿಕಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಎಎಸ್ಪಿ ಪುರುಷೋತ್ತಮ ಹಾಗೂ ಚೇಳೂರು ಪೊಲೀಸ್ ಠಾಣೆಯ ಪೊಲೀಸರು, ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us