/newsfirstlive-kannada/media/media_files/2026/03/07/wife-murders-husband-in-tumkauru-2026-03-07-14-13-56.jpg)
ಪರಮೇಶ್ ಜೊತೆ ಮೊದಲ ಮದುವೆ, ಬಳಿಕ ಚಂದ್ರಪ್ಪ ಜೊತೆ 2ನೇ ಮದುವೆ
ಸತ್ತು ಹೋದ 20 ದಿನದ ಬಳಿಕ ಸಿಕ್ತು ಕೊಲೆಯ ರಹಸ್ಯ! - ಹೂತಿಟ್ಟ ಶವ ಹೊರತೆಗೆದಾಗ ಬಯಲಾಗಿದ್ದು ನೌಟಂಕಿ ಆಟ! - ಅವಳ ಮರು ಮದುವೆ.. ಆತನ ಜೊತೆ ಸೇರಿ ಮಾಡಿದ್ದೇನು?
ಅಲ್ಲೊಬ್ಬ ತೀರಿ ಹೋಗಿ ಇನ್ನೂ ತಿಂಗಳು ಕಳೆದಿಲ್ಲ.. ಮನೆಯಲ್ಲಿ ಸೂತಕದ ಛಾಯೆ.. ಪಾಪ ಗಂಡನನ್ನು ಕಳಕೊಂಡು ಹೆಂಡತಿ, ಅಪ್ಪನನ್ನ ಕಳೆದುಕೊಂಡ ಮಕ್ಕಳ ಮನಸಲ್ಲಿ ನೋವು ಇನ್ನೂ ಹಸಿ ಹಸಿಯಾಗೇ ಇತ್ತು. ಆದ್ರೆ ಅದೇ ಹೊತ್ತಲ್ಲಿ ಅಲ್ಲೊಂದು ಜೋಡಿ ಮದುವೆಯಾಗಿತ್ತು ನೋಡಿ. ಸತ್ತು ಹೋಗಿದ್ದ ಆತನ ಶವ ಮತ್ತೇ ಎದ್ದು ಬರುವಂತೆ ಮಾಡಿತ್ತು. ಅದೊಂದು ಮದುವೆ, ಮಣ್ಣಲ್ಲಿ ಹುದುಗಿ ಹೋಗಿದ್ದ ಸಾವಿನ ಕಾರಣ ಹೇಳಿತ್ತು.. ಅಷ್ಟಕ್ಕೂ ಅಲ್ಲಿ ಮದುವೆಯಾಗಿದ್ದಾದ್ರೂ ಯಾರು? ಯಾರದ್ದೋ ಮದುವೆಗೂ, ಈ ಸಾವಿಗೂ ಏನ್ ಕಾರಣ ಅಂತಾ ಹೇಳ್ತೀವಿ.. ಈ ರೋಚಕ ಕಿಲ್ಲರ್ ಸ್ಟೋರಿ ಓದಿ.
ಅಲ್ಲಿ ಒಂದು ಸಾವು ಅದೆಷ್ಟು ದುಃಖ ತಂದಿತ್ತು.. ಒಳ್ಳೆ ಮನುಷ್ಯ ಕಣಪ್ಪಾ ಸತ್ತು ಹೋದವ ಅಂತಾ ನೂರಾರು ಜನ ಮಾತನಾಡಿಕೊಳ್ಳುತ್ತಿದ್ರು. ಹೀಗಿರುವಾಗ್ಲೇ ಅಲ್ಲಿಗೆ ಬಂದ ಪೊಲೀಸ್ ಸಾವಿನ ಕೇಸ್‌ಗೆ ಟ್ವಿಸ್ಟ್ ಕೊಟ್ಟಿದ್ದಾರೆ. ಮೊದ್ಲೇ ನೋವಿನಲ್ಲಿದ್ದ ಕುಟುಂಬಕ್ಕೂ, ಆ ಊರಿನೋರಿಗೂ ಬರಸಿಡಿಲು ಬಡಿದಂತಾಗಿತ್ತು. ಯಾಕಂದ್ರೆ ಹೂತಿಟ್ಟಿದ್ದ ಆ ವ್ಯಕ್ತಿ ಶವವನ್ನು ಮತ್ತೇ ಹೊರ ತೆಗೆಯಲಾಗಿತ್ತು.
ಸತ್ತು ಹೋಗಿದ್ದ ವ್ಯಕ್ತಿಯ ಶವ ಹೊರಗೆ ತೆಗೆಯೋ ಕಾರ್ಯಾಚರಣೆಯನ್ನು ಪೊಲೀಸರು, ತಹಸೀಲ್ದಾರ್ ನಡೆಸಿದ್ದರು. ಅಷ್ಟಕ್ಕೂ ಅಲ್ಲಿ ತೀರಿ ಹೋಗಿದ್ದು ಯಾರು ಗೊತ್ತಾ? ಈತನೇ ನೋಡಿ ಪರಮೇಶ್. ತುಮಕೂರು ತಾಲೂಕಿನ ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ವಾಸವಿದ್ದ ಇದೇ ಪರಮೇಶ್ ಜನವರಿ 30ರಂದು ಸಾವನ್ನಪ್ಪಿದ್ದ.
/filters:format(webp)/newsfirstlive-kannada/media/media_files/2026/03/07/wife-murders-husband-in-tumakuru-2-2026-03-07-14-17-05.jpg)
ಹೆಂಡತಿ ಆಶಾ, ಆಕೆಯ ಪ್ರಿಯಕರನಿಂದ ಹತ್ಯೆಯಾದ ಪರಮೇಶ್
ಅದು ಹೃದಯಾಘಾತದಿಂದ ಆದ ಸಾವು ಅಂತ ಹೆಂಡತಿ ಆಶಾ ಹೇಳಿದ್ದಳು. ಮನೆಯ ಮಗ ಏಕಾಏಕಿ ಮಸಣ ಸೇರಿದ್ದನ್ನ ಕೇಳಿ ಸಂಬಂಧಿಕರಿಗೆ ದಿಗ್ಭ್ರಮೆಯಾಗಿತ್ತು. ಹೀಗೆ, ಪರಮೇಶ್ ಸಾವು ಇನ್ನೂ ಹಸಿಹಸಿ ಇರುವಾಗ್ಲೇ ನೋಡಿ ಅಲ್ಲೊಂದು ಮದುವೆ ನಡೆದು ಹೋಗಿತ್ತು. ಆ ಮದುವೆ ಯಾರದ್ದು ಗೊತ್ತಾ? ಆ ಮದುವೆ ಸತ್ತು ಹೋಗಿದ್ದ ಪರಮೇಶ್ ಸಮಾಧಿಯನ್ನು ಮತ್ತೇ ಅಗೆಯುವಂತೆ ಮಾಡಿದ್ದು. ಮಣ್ಣಿನಲ್ಲಿ ತಣ್ಣಗೆ ಮಲಗಿದ್ದ ಪರಮೇಶ್‌ನ ಶವ ಮತ್ತೇ ಎದ್ದು ಕೂರುವಂತೆ ಮಾಡಿದ್ದು. ಪರಮೇಶ್‌ನ ಜೊತೆಗೆ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ಅದೊಂದು ಸತ್ಯ, ಮದುವೆ ಬಳಿಕ ರಿವೀಲ್ ಆಗಿದೆ. ಹಾಗಾದ್ರೆ ಯಾರದ್ದು ಆ ಮದುವೆ? ಈ ಕ್ರೈಮ್ ಕಿಲ್ಲರ್ ಕಥೆಯನ್ನ ನೀವು ಕೇಳಲೇಬೇಕು. ಅಷ್ಟು ರೋಚಕವಾಗಿದೆ ಈ ಸ್ಟೋರಿ.
ತಿಂಗಳ ಹಿಂದೆ ಸತ್ತು ಹೋಗಿದ್ದ ಪರಮೇಶ್‌ನ ಸಾವಿನ ರಹಸ್ಯ ಬಯಲಿಗೆಳೆದಿದ್ದು ಪರಮೇಶ್ ಪತ್ನಿ ಆಶಾ ಹೊಸ ಮದುವೆ.
ಹೀಗೆ ಹೊಸ ಬಾಳಿಗೆ ಕಾಲಿಟ್ಟು ಮಧುಚಂದ್ರದ ಖುಷಿಯಲ್ಲಿರಬೇಕಾದ ಜೋಡಿ ಈಗ ಸೀದಾ ಸೇರಿದ್ದು ಜೈಲಿಗೆ. ಯಾಕಂದ್ರೆ ಇಲ್ಲಿ ಹಾರ ಹಾಕಿಕೊಂಡು ನಿಂತಿರೋ ಆಕೆ ಪರಮೇಶ್‌ನ ಹೆಂಡತಿ ಆಶಾ.
/filters:format(webp)/newsfirstlive-kannada/media/media_files/2026/03/07/wife-murders-husband-in-tumakuru-3-2026-03-07-14-27-38.jpg)
ಗಂಡ ಪರಮೇಶ್ ಸಾಯಿಸಿ ಬಳಿಕ ಚಂದ್ರಪ್ಪ ಜೊತೆ ಆಶಾ ಮದುವೆ
ಗಂಡ ತೀರಿ ಹೋದ 20ನೇ ದಿನಕ್ಕೆ ಹೆಂಡತಿ ಮರುಮದುವೆ!
ಪತಿಯ ಜೀವಕ್ಕೆ ‘ಮುಕ್ತಿ’ ಕೊಟ್ಟು ಹಸೆಮಣೆ ಏರಿದ್ಲಾ ಆಶಾ?
ಆಶಾ... ಜಸ್ಟ್ ತಿಂಗಳ ಹಿಂದೆ ಸತ್ತು ಹೋಗಿದ್ದ ಪರಮೇಶ್ ಅನ್ನೋನ ಹೆಂಡತಿ. ನಾವು ಎಂತೆಂಥೋ ಕಥೆ ಹೇಳಿದ್ದೀವಿ.. ಕೇಳಿದ್ದೀವಿ.. ಆದ್ರೆ, ಈ ಕ್ರೈಮ್ ಕಥೆ ಮಾತ್ರ ಎಲ್ಲದಕ್ಕಿಂತಲೂ ಭೀಕರ. ಯಾಕಂದ್ರೆ ಗಂಡ ಸತ್ತು ಹೋದ 20 ದಿನಕ್ಕೆ ಯಾವ ಹೆಂಡತಿ ತಾನೇ ಮದುವೆಯಾಗ್ತಾಳೆ ಹೇಳಿ. ಹಾಗಾದ್ರೆ ಈ ಕಥೆ ಕೇಳಿ ನಿಮಗೆ ಇಲ್ಲಿ ಏನೋ ನಡೆದಿದೆ ಅಂತಾ ಅನ್ಸುತ್ತಲ್ವಾ. ಹೌದು.. ಅದೇ ಅನುಮಾನ ಇವತ್ತು ಪೊಲೀಸರನ್ನ ಪರಮೇಶ್ ಶವ ಹೊರತೆಗೆಯುವಂತೆ ಮಾಡಿದ್ದು. ಆ ಅನುಮಾನ ಕೊನೆಗೂ ಈಗ ನಿಜವಾಗಿದೆ. ಇಲ್ಲಿ ಮೊದಲ ಗಂಡ ಪರಮೇಶ್ ಜೀವಕ್ಕೆ ಕುತ್ತು ತಂದು, ಆತ ಕಟ್ಟಿದ ತಾಳಿಗೆ ಮುಕ್ತಿ ಕೊಟ್ಟು, ಜಸ್ಟ್ 20 ದಿನದಲ್ಲೇ ಮತ್ತೇ ಹಸೆಮಣೆ ಏರಿದ್ದಾಳೆ. ಅಂದ್ಹಾಗೆ ಈಕೆ ಮಾತ್ರವಲ್ಲ, ಇಲ್ಲಿ ಪರಮೇಶ್ ಕೊಲೆಯಲ್ಲಿ ಆಶಾ ಪ್ರಿಯಕರ ಚಂದ್ರಪ್ಪನದ್ದೂ ಕೈವಾಡವಿದೆ ಅಂತಾ ಹೇಳಲಾಗ್ತಿದೆ.
ಪ್ರಿಯಕರನೊಂದಿಗೆ ಸೇರಿ ಗಂಡನಿಗೆ ಕಟ್ಟಿದ್ಲು ಚಟ್ಟ!
ಪತಿ ಸತ್ತ 20 ದಿನದಲ್ಲೇ ಮರುಮದುವೆ.. ಬಯಲಾಯ್ತು ರಹಸ್ಯ
ಅದ್ಸರಿ.. ಪತಿ ತೀರಿ ಹೋದ ಮೇಲೆ ಪತ್ನಿ ಅವನ ನೆನಪಲ್ಲೇ ಇರಬೇಕಾ? ವೀಕ್ಷಕರೇ.. ಇಲ್ಲಿ ಈಕೆ ಎರಡನೇ ಮದುವೆಯಾಗಿದ್ದು ಸುದ್ದಿಯಲ್ಲ. ಪತಿ ತೀರಿ ಹೋದ ಜಸ್ಟ್ 20 ದಿನದಲ್ಲೇ ಮತ್ತೊಂದು ಮದುವೆಯಾಗಿದ್ದಾಳೆ ಅಂದ್ರೆ ಅಲ್ಲಿ ಏನೋ ನಡೆದಿದೆ ಅನ್ನೋ ಅನುಮಾನ ಬಂದೇ ಬರುತ್ತಲ್ವಾ.. ಇತ್ತ ಪರಮೇಶ್ ಸಹೋದರಿಯರು ತಮ್ಮನ ಸಾವಿಗೆ ಮರುಕ ಪಡ್ತಿದ್ರೆ.. ಅಲ್ಲಿ ಅವನ ಹೆಂಡತಿ ಆಶಾ ಮತ್ತೊಬ್ಬನ ಜೊತೆ ಮದುವೆಯಾಗಿದ್ದಾಳೆ. ಸಹಜವಾಗಿಯೇ ಇಲ್ಲಿ ಬಂದ ಅನುಮಾನವನ್ನೇ ಬೆನ್ನತ್ತಿದ್ದಾಗ ಅಲ್ಲಿ ಆಶಾ ಮತ್ತು ಆಕೆಯ ಪ್ರಿಯಕರ ಚಂದ್ರಪ್ಪರೇ ಕೊಲೆ ಮಾಡಿದ್ದಾಗಿ ಬೆಳಕಿಗೆ ಬಂದಿದೆ. ಮೊದ ಮೊದಲಿಗೆ ಹೃದಯಾಘಾತ ಅಂತಾ ಬಿಂಬಿಸಲಾಗಿತ್ತು. ಬಳಿಕ, ಪೊಲೀಸ್ ತನಿಖೆಯಲ್ಲಿ ಆಶಾ ಮತ್ತ ಆಕೆ ಲವರ್ ಚಂದ್ರಪ್ಪ ದಿಂಬಿನಿಂದ ಉಸಿರು ಗಟ್ಟಿಸಿ ಕೊಂದು ಹಾಕಿರೋದು ಗೊತ್ತಾಗಿದೆ. ಗಂಡನಿಗೆ ಚಟ್ಟ ಕಟ್ಟಿ ಅತ್ತ ಚಂದ್ರಪ್ಪನ ಅಟ್ಟ ಏರಿದ್ದಾಕೆ ಈಗ ಜೈಲಲ್ಲಿ ಲಾಕ್ ಆಗಿದ್ದಾರೆ.
ಯಾವಾಗ ಆಶಾ ಎರಡನೇ ಮದುವೆ ಆದ್ಲೋ, ಆಗ್ಲೇ ನೋಡಿ ಪರಮೇಶ್‌ದು ಸಹಜ ಸಾವಲ್ಲ ಅನ್ನೋದು ಅಕ್ಕಂದಿರ ಆರೋಪವಾಗಿತ್ತು. ಹೀಗಾಗಿ ಹೆಬ್ಬೂರು ಪೊಲೀಸ್ ಸ್ಟೇಷನ್‌ಗೆ ದೂರು ಕೊಟ್ಟಾಗ್ಲೇ, ಎನ್‌ಕ್ವೈರಿಗೆ ಇಳಿದ ಪೊಲೀಸರು ಮತ್ತು ತಹಶೀಲ್ದಾರ್ ರಾಜೇಶ್ವರಿ ಅವ್ರ ಸಮ್ಮುಖದಲ್ಲಿ ಪರಮೇಶ್ ಶವವನ್ನು ಮತ್ತೇ ಹೊರ ತೆಗೆದಿದ್ರು. ಬಳಿಕ ಎಫ್‌ಎಸ್‌ಎಲ್‌ಗೆ ಕಳುಹಿಸಿದಾಗ ಅಲ್ಲಿ ಪರಮೇಶ್ ಹೃದಾಯಾಘಾತದಿಂದ ಸಾವನ್ನಪ್ಪಿಲ್ಲ. ಬದಲಾಗಿ ಕೊಲೆ ಮಾಡಲಾಗಿದೆ ಅನ್ನೋ ವಿಷಯ ಬೆಳಕಿಗೆ ಬಂದಿದೆ. ಇದ್ರಲ್ಲಿ ಆಶಾ ಪ್ರಿಯಕರ ಚಂದ್ರಪ್ಪನ ಜೊತೆಗೆ ಮತ್ತೊಬ್ಬನ ಕೈವಾಡವೂ ಇದೆ ಅನ್ನೋದು ಬೆಳಕಿಗೆ ಬಂದಿದೆ.
ಹೆಂಡತಿ.. ಮಾಡಿದ್ಲು ತಿಥಿ!?
ಆಶಾ ಮತ್ತು ಪರಮೇಶ್ ಪ್ರೀತಿಸಿ ಮದುವೆಯಾಗಿ 10 ವರ್ಷ
2ನೇ ಮಗು ಬಳಿಕ ಪರಮೇಶ್-ಆಶಾ ಸಂಸಾರದಲ್ಲಿ ಬಿರುಕು
ಅಕ್ಕಂದಿರಿಂದ ದೂರವಾಗಿ ಇದ್ದ ಪರಮೇಶ್ ನಿಗೂಢ ಸಾವು
ವರ್ಷದಿಂದಲೂ ಮನೆಯಲ್ಲಿ ಜಗಳ, ಪರಮೇಶ್‌ಗಿಲ್ಲ ನೆಮ್ಮದಿ
ಪರಮೇಶ್ ಶವದ ಮೇಲೆ ಗಾಯದ ಗುರುತುಗಳು ಶಂಕೆಗೆ ದಾರಿ
ಗುಪ್ತಾಂಗ ಊದಿಕೊಂಡಿದ್ದು ಅಂದೇ ಮನೆಯವ್ರಿಗೆ ಅನುಮಾನ
ಪರಮೇಶ್ ಸಾವಿನ ಹಿಂದೆ ಹೆಂಡತಿಯ ಕೈವಾಡ ಅಂತಾ ದೂರು
ಅಂದ್ಹಾಗೆ ಈ ಆಶಾ ಮತ್ತು ಪರಮೇಶ್ ಪ್ರೀತಿಸಿಯೇ ಮದುವೆಯಾಗಿ 10 ವರ್ಷಗಳೇ ಕಳೆದು ಹೋಗಿವೆ. ಚೆನ್ನಾಗೇ ಇದ್ದ ಸಂಸಾರದಲ್ಲಿ 2ನೇ ಮಗು ಬಳಿಕ ಬಿರುಕು ಮೂಡಿದೆ. ಆಶಾ ಮಾತು ಕೇಳಿ ಪರಮೇಶ್ ಅಕ್ಕಂದಿರಿಂದ ದೂರವಾಗಿ ಇದ್ದನಂತೆ. ಹೀಗೀರಬೇಕಾದ್ರೇನೆ ಅವನ ನಿಗೂಢ ಸಾವಾಗಿದೆ. ಅಷ್ಟೇ ಅಲ್ಲದೇ, ಇಬ್ಬರ ಮಧ್ಯೆ ವರ್ಷದಿಂದಲೂ ಜಗಳ ಶುರವಾಗಿದ್ದು ಪರಮೇಶ್‌ಗೆ ನೆಮ್ಮದಿನೇ ಇರಲಿಲ್ಲವಂತೆ. ಆವತ್ತು ಪರಮೇಶ್ ಸಾವಿನ ಸುದ್ದಿ ಕೇಳಿ ಮನೆಗೆ ಹೋಗಿದ್ದ ಅಕ್ಕಂದಿರಿಗೆ ಅವನ ಶವದ ಮೇಲೆ ಗಾಯದ ಗುರುತುಗಳನ್ನ ನೋಡಿದ್ದಾರೆ. ಅಲ್ಲದೇ ಗುಪ್ತಾಂಗವೂ ಊದಿಕೊಂಡಿದ್ದು ಅವತ್ತೇ ಅವ್ರಿಗೆ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಬಂದಿತ್ತಂತೆ. ತಮ್ಮನ ಮಕ್ಕಳ ಮುಖ ನೋಡಿ ಸುಮ್ಮನಿದ್ದ ಇವ್ರಿಗೆ ಈಗ ಆಶಾ ಮರುಮದುವೆಯಾಗಿದ್ದು, ಪರಮೇಶ್ ಸಾವಿನ ಹಿಂದೆ ಏನೋ ರಹಸ್ಯ ಅಡಗಿದೆ ಅಂತಾ ಶಂಕಿಸಿದ್ರು. ಈಗ ಅದು ನಿಜ ಆಗಿದೆ.
ಆಶಾ ಪತಿ ಸಾವಿನ ಬಳಿಕ ಮಕ್ಕಳನ್ನ ಬಿಟ್ಟು ಎಲ್ಲೋ ಹೋಗಿದ್ಲಂತೆ. ಈ ವೇಳೆ ಯಾರೋ ಬಂದು ಈಕೆಯ ಎರಡನೇ ಮದುವೆಯ ವಿಡಿಯೋ ತೋರಿಸಿದ್ದಾರೆ. ಆಗ್ಲೇ ಎಲ್ಲರೂ ದಿಗ್ಭ್ರಮೆಯಾಗಿದ್ದಾರೆ. ಸದ್ಯ ಹೆಬ್ಬೂರು ಪೊಲೀಸರ ಕೈಗೆ ಲಾಕ್ ಆಗಿರೋ ಆರೋಪಿಗಳು ಮೌಖಿಕವಾಗಿ ತಪ್ಪೊಪ್ಪಿಕೊಂಡಿದ್ದಾರಂತೆ. ಈ ಮೂಲಕ ಪರಮೇಶ್ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.
/filters:format(webp)/newsfirstlive-kannada/media/media_files/2026/03/07/wife-murders-husband-in-tumakuru-2026-03-07-14-28-44.jpg)
ಪರಮೇಶ್ ಜೊತೆ 10 ವರ್ಷದ ಹಿಂದೆ ಮದುವೆಯಾಗಿದ್ದ ಆಶಾ
ಒಟ್ನಲ್ಲಿ ದುಡಿದು ತಿನ್ನುತ್ತಿದ್ದ ಪರಮೇಶ್ ತನ್ನ ಹೆಂಡತಿಯ ಪ್ರೇಮದಾಟಕ್ಕೆ ಬಲಿಯಾಗಿ ಹೋಗಿದ್ದಾನೆ. ಮಣ್ಣಲ್ಲಿ ಬೆಚ್ಚಗೆ ಮಲಗಿದ್ದ ಪರಮೇಶ್ ಸಾವಿನ ಸತ್ಯ, ಈಗ ಆತನ ಹೆಂಡತಿಯ ಮರು ಮದುವೆಯ ಬಳಿಕ ಹೊರಬಿದ್ದಿದೆ. ಇನ್ನೇನು ನಮ್ಮ ಪ್ರೇಮಕ್ಕೆ ಅಡ್ಡಿಯಾಗಿದ್ದ ಗಂಡನೇ ಸತ್ತು ಹೋದನಲ್ಲಾ ಅಂತಾ ಆಶಾ ಬೇಗ ಬೇಗನೇ ಏನೋ 2ನೇ ಮದುವೆಯಾಗಿದ್ಲು. ಆದ್ರೆ, ಅಷ್ಟೇ ವೇಗವಾಗಿ ಜೈಲು ಸೇರುವಂತಾಗಿದೆ ನೋಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us