/newsfirstlive-kannada/media/media_files/2025/12/06/gubbi-murder-case-accussed-arrested-2025-12-06-19-55-52.jpg)
ಮಹಿಳೆ ಹತ್ಯೆಗೈದು ಪರಾರಿಯಾಗುತ್ತಿದ್ದ ಆರೋಪಿ ಬಸ್ ನಲ್ಲೇ ಆರೆಸ್ಟ್!
ಆ ಕೊಲೆ ಇಡಿ ಊರನ್ನೇ ಬೆಚ್ಚಿ ಬೀಳಿಸಿತ್ತು. ತೋಟದ ಮನೆಯಲ್ಲಿ ಮಕ್ಕಳ ಜೊತೆ ಒಂಟಿಯಾಗಿ ವಾಸವಾಗಿದ್ದ ಆ ಮಹಿಳೆಯ ಸಾವು ಹತ್ತಾರು ಅನುಮಾನಕ್ಕೆ ಕಾರಣವಾಗಿತ್ತು. ಪ್ರಕರಣ ಕೈಗೆತ್ತಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಹಂತಕನನ್ನು ಪಕ್ಕದ ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಖೆಡ್ಡಕೆ ಕೆಡವಿದ್ದು, ಕೊಲೆಯ ಹಿಂದಿನ ರಹಸ್ಯ ಬಯಲಾಗಿದೆ.
ತುಮಕೂರಿನ ಹಿಂಡೆಸೆಕೆರೆಯ ತೋಟದ ಮನೆಯಲ್ಲಿ ಮಹಿಳೆಯ ಹತ್ಯೆ ಪ್ರಕರಣ..!
ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಮಹಿಳೆ ಹತ್ಯೆಗೈದ..!
/filters:format(webp)/newsfirstlive-kannada/media/media_files/2025/12/06/gubbi-murder-case-accussed-arrested02-2025-12-06-19-58-48.jpg)
ಈ ಫೋಟೊದಲ್ಲಿರುವ ಈಕೆ ಹೆಸರು ಮಂಜುಳ. ಇದೇ ತಿಂಗಳ 1 ರಂದು ತಾನು ವಾಸವಿದ್ದ ತೋಟದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಆಕರಯನ್ನು ಕೊಲೆ ಮಾಡಲಾಗಿತ್ತು. ಈ ಹತ್ಯೆ ದಿನವೇ ಮಧು ಎಂಬಾತನ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಅದರ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರಿಗೆ ಪುಣೆಯಲ್ಲಿ ಆರೋಪಿ ಪತ್ತೆಯಾಗಿದ್ದು, ಇದೀಗ ಆತನನ್ನು ಬಂಧನ ಮಾಡಲಾಗಿದೆ.
ಮಹಿಳೆ ಹತ್ಯೆ ಬಳಿಕ ಮನೆ ದೇವರಿಗೆ ಕೂದಲು ಕೊಟ್ಟ ಆರೋಪಿ.!
ಬೆಂಗಳೂರಿನಲ್ಲಿ ಗೆಳೆಯನ ಬಳಿ ಐದು ಸಾವಿರ ಪಡೆದು ಪುಣೆಗೆ ಪರಾರಿ.!
ಅಸಲಿಗೆ ಮಂಜುಳ ಕೊಲೆಯು, ಶವ ಪತ್ತೆಯಾದ ಹಿಂದಿನ ದಿನವೇ ನಡೆದು ಹೋಗಿತ್ತು. ನವೆಂಬರ್ 30ರ ಸಂಜೆ 6:30ಕ್ಕೆ ಮಧು, ಮಂಜುಳ ಮನೆ ಬಳಿ ಬಂದಿದ್ದ. ಈ ವೇಳೆ ಮಂಜುಳ ಹಾಗೂ ಮಧು ನಡುವೆ ಗಲಾಟೆ ನಡೆದಿದೆ. ಆ ಬಳಿಕ ಮಂಜುಳ ಕೊಲೆಗೈದ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದ. ಬಳಿಕ ಆ ದಿನ ರಾತ್ರಿ ತನ್ನ ಮನೆಯಲ್ಲಿ ಪೊಷಕರ ಜೊತೆ ಇದ್ದ ಆತ ಮರು ದಿನ ಬೆಳಿಗ್ಗೆಯೇ ತನ್ನ ಕಾರ್ ಏರಿ ಕುಣಿಗಲ್ ತಾಲ್ಲೂಕಿನ ಆಲಪ್ಪನ ಗುಡ್ಡೆಗೆ ತೆರಳಿದ್ದಾನೆ. ಅಲ್ಲಿ ಮನೆ ದೇವರಿಗೆ ಕೂದಲು ಕೊಟ್ಟು ನಂತರ ನೇರವಾಗಿ ಬೆಂಗಳೂರಿಗೆ ಬಂದಿದ್ದಾನೆ. ಹೀಗೆ ಬಂದವನೇ ಗೆಳೆಯನಿಗೆ ಕಾರ್ ಕೊಟ್ಟು 5 ಸಾವಿರ ಹಣ ಪಡೆದಿದ್ದಾನೆ. ಬಳಿಕ ಹೊಸ ಮೊಬೈಲ್ ಖರೀದಿಸಿ ತಂದೆ ಜೊತೆ ಮಾತನಾಡಿ ಕಲಾಸಿಪಾಳ್ಯದಲ್ಲಿ ಪುಣೆಗೆಂದು ಖಾಸಗಿ ಬಸ್ ಏರಿದ್ದಾನೆ.
ಮತ್ತೊಂದೆಡೆ ಆತನಿಗಾಗಿ ಬಲೆ ಬೀಸಿದ್ದ ಶಿರಾ ಡಿವೈಎಸ್ಪಿ ಬಿ.ಕೆ. ಶೇಖರ್ ಹಾಗೂ ಗುಬ್ಬಿ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಆರ್. ರಾಘವೇಂದ್ರ ನೇತೃತ್ವದ ತಂಡ
ಆರೋಪಿ ಮಧುವನ್ನು ಸಂಪೂರ್ಣವಾಗಿ ಟ್ರ್ಯಾಕ್ ಮಾಡಿದೆ. ಆರೋಪಿ ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಹೋಗಿದ್ದ ವಿಚಾರ ಗೊತ್ತಾಗಿದೆ. ಸಿಸಿಟಿವಿ ಸಹಾಯದಿಂದ ಆತ ಯಾವ ಬಸ್ ಹತ್ತಿ ಎಲ್ಲಿಗೆ ಹೋಗುತ್ತಿದ್ದಾನೆ ಎಂಬುದನ್ನು ಕೂಡ ತಂತ್ರಜ್ಞಾನದ ಸಹಾಯದಿಂದ ಪತ್ತೆ ಹಚ್ಚಿದ್ದಾರೆ.
/filters:format(webp)/newsfirstlive-kannada/media/media_files/2025/12/06/gubbi-murder-case-accussed-arrested03-2025-12-06-20-27-35.jpg)
ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಆರೋಪಿ ಮಧು ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಪೊಲೀಸರಿಗೆ ಸಿಕ್ಕ ಸುಳಿವು
ಖಾಸಗಿ ಬಸ್ ನಲ್ಲಿ ಆರೋಪಿ ಮಧು, ಮಹಾರಾಷ್ಟ್ರದ ಪುಣೆಗೆ ಹೋಗುತ್ತಿರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ಆ ಖಾಸಗಿ ಬಸ್ ಚಾಲಕನ ಮೊಬೈಲ್ ನಂಬರ್ ಪಡೆದು, ಚಾಣಾಕ್ಷತನದಿಂದ ಪೊಲೀಸರು ಅಪರೇಷನ್ ನಡೆಸಿದ್ದಾರೆ. ಬಸ್ ಚಾಲಕನಿಗೆ ನಿಮ್ಮ ಬಸ್ ನಲ್ಲಿ ಕೊಲೆ ಕೇಸ್‌ನ ಆರೋಪಿ ಪ್ರಯಾಣ ಮಾಡುತ್ತಿದ್ದಾನೆ. ಆತನನ್ನು ಹತ್ತಿರದ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಬೇಕೆಂದು ಹೇಳಿದ್ದಾರೆ.
ಮಧು ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವ ವಿಚಾರ ತಿಳಿದು ಕೂಡಲೇ ಬಸ್ ಚಾಲಕನ ಮುಖಾಂತರ ಖೆಡ್ಡಾಕ್ಕೆ ಕೆಡವಿದ್ದಾರೆ. ಪ್ರಯಾಣಿಕರ ಸಹಿತ ಪುಣೆಗೆ ತೆರಳುತ್ತಿದ್ದ ಬಸ್, ನೇರವಾಗಿ ಪುಣೆಯ ವಿದ್ಯಾಪೀಠ ಪೊಲೀಸ್ ಠಾಣೆಗೆ ತೆರಳಿ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದೆ. ನಂತರ ಬಸ್ ಪ್ರಯಾಣ ಮುಂದುರಿಸಿದೆ. ಪೊಲೀಸರ ಮಾಸ್ಟರ್ ಪ್ಲ್ಯಾನ್ ಗೆ ಆರೋಪಿ ಮಧು ಶಾಕ್ ಆಗಿದ್ದಾನೆ. ಬಸ್ ನಲ್ಲಿ ಹೋಗುತ್ತಿದ್ದವನನ್ನು ಅದೇ ಬಸ್ ನಲ್ಲೇ ಆರೆಸ್ಟ್ ಆಗುವಂತೆ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಆರ್.ರಾಘವೇಂದ್ರ ಪ್ಲ್ಯಾನ್ ಮಾಡಿ ಬಸ್ ಡ್ರೈವರ್ ಮೂಲಕ ಪೊಲೀಸರಿಂದ ಆರೆಸ್ಟ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
/filters:format(webp)/newsfirstlive-kannada/media/media_files/2025/12/06/gubbi-murder-case-accussed-arrested04-2025-12-06-20-26-25.jpg)
ಪುಣೆಯ ವಿದ್ಯಾಪೀಠ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಮಧು ಬಂಧಿಸಿದ ಇನ್ಸ್ ಪೆಕ್ಟರ್ ಟಿ.ಆರ್.ರಾಘವೇಂದ್ರ ನೇತೃತ್ವದ ತಂಡ
ಸದ್ಯ ಆರೋಪಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಗಿದೆ. ತುಮಕೂರಿನ ಸಿ.ಎಸ್. ಪುರ ಪೊಲೀಸರ ತಂಡ, ಮಹಾರಾಷ್ಟ್ರದಲ್ಲಿ ಕೋರ್ಟ್ ಪ್ರಕ್ರಿಯೆ ಮುಗಿಸಿ ತುಮಕೂರಿನತ್ತ ಆರೋಪಿ ಮಧುವನ್ನು ಕರೆ ತರುತ್ತಿದೆ. ತನಿಖೆ ವೇಳೆ ಆರೋಪಿಗೆ ಮಹಿಳೆ ಜೊತೆ ಅನೈತಿಕ ಸಂಬಂಧ ಇದ್ದದ್ದು ಕೊಲೆಗೆ ಕಾರಣ ಎನ್ನಲಾಗಿದೆ., ಈ ಸಲುಗೆಯಿಂದಲೇ ಮಧುಗೆ 1 ಲಕ್ಷ ಹಣವನ್ನು ಮಂಜುಳ ನೀಡಿದ್ದಳು. ಈ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಳು, ಆದ್ರೆ ಆರೋಪಿ ಮಧು ಹಣ ವಾಪಸ್ ನೀಡದೆ ಕಿರಿಕ್ ಮಾಡಿದ್ದ ಎನ್ನಲಾಗಿದೆ.
ಒಟ್ಟಿನಲ್ಲಿ ಅನೈತಿಕ ಮತ್ತು ಹಣಕಾಸಿನ ವ್ಯವಹಾರ ಕಾರಣಕ್ಕೆ ಇಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನಿಜಕ್ಕೂ ಕೊಲೆಗೆ ಕೇವಲ ಹಣಕಾಸಿನ ವಿಚಾರವೇ ಕಾರಣವೇ ಹೊರತಾಗಿ ಬೇರೇನಾದರೂ ಕಾರಣ ಇತ್ತಾ ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
/filters:format(webp)/newsfirstlive-kannada/media/media_files/2025/12/06/gubbi-murder-case-accussed-arrested05-2025-12-06-20-30-13.jpg)
ಬಸ್ ಗೆ ಎಂಟ್ರಿ ಕೊಟ್ಟು, ಬಸ್ ನಲ್ಲೇ ಆರೋಪಿ ಬಂಧಿಸಿದ ಪೊಲೀಸರು
ಮಧು ಇಂಗಳದಾಳ್,
ನ್ಯೂಸ್ ಫಸ್ಟ್ ತುಮಕೂರು
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us