/newsfirstlive-kannada/media/media_files/2025/11/05/udupi-laksha-deepotsava-13-2025-11-05-07-56-58.jpg)
/newsfirstlive-kannada/media/media_files/2025/11/05/udupi-laksha-deepotsava-6-2025-11-05-07-57-23.jpg)
ದೇವರ ಸ್ವಾಗತಕ್ಕೆ ಉಡುಪಿಯ ಅಷ್ಟಮಠಗಳ ರಥಬೀದಿ ಸಜ್ಜಾಗಿದೆ.. ಕೃಷ್ಣನೂರು ಉಡುಪಿ ದೀಪಗಳಿಂದ ಕಂಗೊಳಿಸ್ತಿದೆ.. ಕೃಷ್ಣನಿಗೆ ಹಣತೆಯಲ್ಲಿ ದೀಪ ಬೆಳಗಿ ಭಕ್ತರು ಸಂಭ್ರಮಿಸಿದ್ರು..
/newsfirstlive-kannada/media/media_files/2025/11/05/udupi-laksha-deepotsava-2025-11-05-07-57-44.jpg)
ಕೃಷ್ಣ ದೇವರು ಯೋಗ ನಿದ್ರೆಯಲ್ಲಿರ್ತಾನೆ ಅನ್ನೋದು ನಂಬಿಕೆ. ಉತ್ಥಾನ ದ್ವಾದಶಿಯ ದಿನ ಯೋಗ ನಿದ್ರೆ ಪೂರೈಸಿ ರಥಬೀದಿಗೆ ಬರುವ ದೇವರನ್ನ ಬರಮಾಡಿಕೊಳ್ಳಲು ನಡೆದಿರುವ ತಯಾರಿ ಇದು. ಈ ಮಹೋತ್ಸವವನ್ನ ಲಕ್ಷದೀಪೋತ್ಸವ ಎಂದು ಭಕ್ತಕೋಟಿಯ ಬಣ್ಣನೆ..
/newsfirstlive-kannada/media/media_files/2025/11/05/udupi-laksha-deepotsava-1-2025-11-05-07-58-00.jpg)
ಇಳಿ ಹೊತ್ತಿನಲ್ಲಿ ಭಕ್ತರೆಲ್ಲರೂ ರಥಬೀದಿಯಲ್ಲಿ ಸೇರಿ ಸಾವಿರಾರು ದೀಪಗಳನ್ನ ಬೆಳಗಿದರು. ಮಧ್ವ ಸರೋವರದಲ್ಲಿ ಕ್ಷೀರಾಬ್ದಿ ಪೂಜೆ ನಡೆಯಿತು..
/newsfirstlive-kannada/media/media_files/2025/11/05/udupi-laksha-deepotsava-2-2025-11-05-07-58-15.jpg)
ಬಳಿಕ ಮಠದಿಂದ ಹೊರ ಬರುವ ಕೃಷ್ಣ ದೇವರ ಉತ್ಸವ ಮೂರ್ತಿಯನ್ನ ಮಧ್ವ ಸರೋವರಕ್ಕೆ ಕೊಂಡೊಯ್ಯಲಾಯ್ತು.. ಸಾಲು ಸಾಲು ದೀಪಗಳ ನಡುವೆ ಕೃಷ್ಣ ದೇವರ ಮೆರವಣಿಗೆ ನಡೆಯಿತು.. ರಥದ ಮುಂಭಾಗದಲ್ಲಿ ಚಂಡೆಗಳ ನಾದ ವೈಭವ ಮೇಳೈಸಿತು.
/newsfirstlive-kannada/media/media_files/2025/11/05/udupi-laksha-deepotsava-3-2025-11-05-07-58-33.jpg)
ಈ ಬಾರಿಯ ಲಕ್ಷ ದೀಪೋತ್ಸವದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳ ಸಹಿತ ಹಲವು ಮಠಗಳ ಯತಿಗಳು ಭಾಗವಹಿಸಿದ್ರು..
/newsfirstlive-kannada/media/media_files/2025/11/05/udupi-laksha-deepotsava-7-2025-11-05-07-58-52.jpg)
ನೂರಾರು ಭಕ್ತರು ಸೇರಿ ಎರಡೂ ರಥಗಳನ್ನು ಎಳೆದರು. ಸಾವಿರಾರು ಸಂಖ್ಯೆ ಯಲ್ಲಿ ಕೃಷ್ಣ ಮಠಕ್ಕೆ ಬಂದ ಭಕ್ತರು ಲಕ್ಷದೀಪೋತ್ಸವದಲ್ಲಿ ಪಾಲ್ಗೋಂಡು ಭಕ್ತಿಯಲ್ಲಿ ಲೀನರಾದ್ರು..
/newsfirstlive-kannada/media/media_files/2025/11/05/udupi-laksha-deepotsava-9-2025-11-05-07-59-39.jpg)
ಒಟ್ಟಾರೆ ಲಕ್ಷದೀಪೋತ್ಸವದೊಂದಿಗೆ ಆರಂಭವಾಗುವ ಕೃಷ್ಣ ದೇವರ ರಥೋತ್ಸವ ಮುಂದಿನ ಮಳೆಗಾಲದವರೆಗೆ ನಡೆಯಲಿದೆ.
/newsfirstlive-kannada/media/media_files/2025/11/05/udupi-laksha-deepotsava-11-2025-11-05-07-59-57.jpg)
ಅಷ್ಟಮಠಗಳ ರಥಬೀದಿಯಲ್ಲಿ ಸೇವಾರೂಪದಲ್ಲಿ ನಡೆಯುವ ಉತ್ಸವದಿಂದ ದಿನವೂ ಹಬ್ಬದ ವಾತಾವರಣ ಇರಲಿದೆ..
/newsfirstlive-kannada/media/media_files/2025/11/05/udupi-laksha-deepotsava-10-2025-11-05-08-00-12.jpg)
ಮಠಾಧೀಶರ ಉಪಸ್ಥಿತಿಯಲ್ಲಿ ವೈಭವದ ನಡುವೆ ಕೃಷ್ಣನ ದೇವರ ಮೆರವಣಿಗೆ ನಡೆಸಲಾಯ್ತು. ರಥಬೀದಿಯಲ್ಲಿ ಲಕ್ಷದೀಪೋತ್ಸವ ಕಂಡು ಭಕ್ತರು ಸಂತಸಗೊಂಡರು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us