ಪರ್ಯಾಯ ಮಹೋತ್ಸವಕ್ಕೆ ಕೇಸರಿ ಧ್ವಜದಿಂದ ಚಾಲನೆ! : ಜಿಲ್ಲಾಧಿಕಾರಿ ನಡೆಗೆ ಕಾಂಗ್ರೆಸ್ ವಿರೋಧ, ಬಿಜೆಪಿ ಬೆಂಬಲ!

ಉಡುಪಿ ಪರ್ಯಾಯ ಮಹೋತ್ಸವಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕೇಸರಿ ಧ್ವಜವನ್ನು ಕೈಯಲ್ಲಿ ಹಿಡಿದು ಹಾರಿಸುವ ಮೂಲಕ ಚಾಲನೆ ನೀಡಿದ್ದರು. ಜಿಲ್ಲಾಧಿಕಾರಿಗಳ ಈ ನಡೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಆದರೇ, ಡಿಸಿ ಬೆಂಬಲಕ್ಕೆ ಬಿಜೆಪಿ ನಿಂತಿದೆ.

author-image
Chandramohan
UDUPI PARYAYA UTSAV LAUNCH CONTRAVERSY

ಉಡುಪಿ ಪರ್ಯಾಯ ಉತ್ಸವಕ್ಕೆ ಭಗವಾ ಧ್ವಜ ಹಿಡಿದು ಡಿಸಿ ಚಾಲನೆ

Advertisment
  • ಉಡುಪಿ ಪರ್ಯಾಯ ಉತ್ಸವಕ್ಕೆ ಭಗವಾ ಧ್ವಜ ಹಿಡಿದು ಡಿಸಿ ಚಾಲನೆ
  • ಜಿಲ್ಲಾಧಿಕಾರಿ ಭಗವಾ ಧ್ವಜ ಹಿಡಿದು ಚಾಲನೆ ನೀಡಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ
  • ಡಿಸಿ ಸ್ವರೂಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಎಂ, ಸಿಎಸ್‌ಗೆ ಕಾಂಗ್ರೆಸ್ ಪತ್ರ

ಪರ್ಯಾಯ ಮಹೋತ್ಸವದಲ್ಲಿ ಉಡುಪಿ ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪಾ ಅವರು ಭಗವಾಧ್ವಜ ಹಿಡಿದು ಮೆರವಣಿಗೆಗೆ ಚಾಲನೆ ನೀಡಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.. ಉಡುಪಿ ಡಿಸಿ ನಡೆಗೆ ಕಾಂಗ್ರೆಸ್​​ ಆಕ್ಷೇಪ ವ್ಯಕ್ತಪಡಿಸಿದೆ.. ಆದ್ರೆ, ಬಿಜೆಪಿ ಈ ನಡೆಯನ್ನ ಸಮರ್ಥಿಸಿದೆ.. ಈ ಕುರಿತ ರಿಪೋರ್ಟ್​ ಇಲ್ಲಿದೆ.. 
ಶೀರೂರು ಮಠದ ಪರ್ಯಾಯ ಮಹೋತ್ಸವ ಹೊಸ ವಿವಾದವನ್ನ ಸೃಷ್ಟಿಸಿದೆ.. ಉಡುಪಿಯ ಜೋಡುಕಟ್ಟೆಯಿಂದ ಆರಂಭವಾದ ಮೆರವಣಿಗೆಗೆ ಕೇಸರಿ ಧ್ವಜ ತೋರಿಸಿ ಜಿಲ್ಲಾಧಿಕಾರಿಗಳಿಂದ ಚಾಲನೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.. ಸರ್ಕಾರಿ ಸೇವಾ ನಿಯಮಗಳ ಉಲ್ಲಂಘನೆ ಮತ್ತು ಜಾತ್ಯತೀತ ತತ್ವಗಳಿಗೆ ವಿರುದ್ಧವಾದುದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಪರ್ಯಾಯ ಮಹೋತ್ಸವಕ್ಕೆ ಕೇಸರಿ ಧ್ವಜದಿಂದ ಚಾಲನೆ!
ಜಿಲ್ಲಾಧಿಕಾರಿ ನಡೆಗೆ ಕಾಂಗ್ರೆಸ್ ವಿರೋಧ, ಬಿಜೆಪಿ ಬೆಂಬಲ!
ಬಿಜೆಪಿ ಶಾಸಕ ಯಶಪಾಲ್ ಸುವರ್ಣ ನೀಡಿದ್ದ ಕೇಸರಿ ಧ್ವಜವನ್ನು ಪಡೆದಿದ್ದ ಡಿಸಿ ಸ್ವರೂಪ ಟಿ. ಕೆ. ಅದನ್ನು ತೋರಿಸುವ ಮೂಲಕ ಪರ್ಯಾಯ ಮೆರವಣಿಗೆಗೆ ಚಾಲನೆ ನೀಡಿದ್ದರು. ಇದೇ ವಿಚಾರಕ್ಕೀಗ ಉಡುಪಿ ಜಿಲ್ಲಾ ಕಾಂಗ್ರೆಸ್​​ ಸಮಿತಿ ಆಕ್ಷೇಪ ತೆಗೆದಿದೆ.. ಅಲ್ಲದೆ ಮುಖ್ಯಮಂತ್ರಿಗಳಿಗೆ ದೂರು ನೀಡಿರೋದು ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ.. 

ಏನಿದು ಕೇಸರಿ ಕಿಚ್ಚು?
ಜನವರಿ 18ರ ಮುಂಜಾನೆ ಸುಮಾರು 3 ಗಂಟೆಗೆ ಪರ್ಯಾಯ ಉತ್ಸವ
ಜೋಡುಕಟ್ಟೆಯಿಂದ ಶ್ರೀ ಕೃಷ್ಣ ಮಠದವರೆಗೆ ಪರ್ಯಾಯ ಮೆರವಣಿಗೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಡುಪಿಯ ಜಿಲ್ಲಾಧಿಕಾರಿ ಸ್ವರೂಪ
ಮೆರವಣಿಗೆ ಆರಂಭಕ್ಕೂ ಮುನ್ನ ಶಾಸಕರಿಂದ ಭಗವಾ ಧ್ವಜ ಹಸ್ತಾಂತರ
ಜಿಲ್ಲಾಧಿಕಾರಿಯವ್ರ ಕೈಗೆ ಹಸ್ತಾಂತರಿಸಿದ್ದ ಶಾಸಕ ಯಶಪಾಲ್​​ ಸುವರ್ಣ
ಧ್ವಜವನ್ನು ಕೈಯಲ್ಲಿ ಹಿಡಿದು ಮೇಲಕ್ಕೆತ್ತಿ ಸಾರ್ವಜನಿಕವಾಗಿ ಪ್ರದರ್ಶನ
ಡಿಸಿ ಅವರ ನಡೆ ಸರ್ಕಾರಿ ಸೇವಾ ನಿಯಮಗಳಿಗೆ ವಿರುದ್ಧ ಅಂತ ಕಿಡಿ
ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಕಾಂಗ್ರೆಸ್​​​ನ ​ ಆಗ್ರಹ 

ಜನವರಿ 18ರ ಮುಂಜಾನೆ ಸುಮಾರು 3 ಗಂಟೆಗೆ ಉಡುಪಿ ನಗರದ ಜೋಡುಕಟ್ಟೆಯಿಂದ ಶ್ರೀ ಕೃಷ್ಣ ಮಠದವರೆಗೆ ಪರ್ಯಾಯ ಮೆರವಣಿಗೆ ನಡೆದಿದೆ.. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರು ಭಾಗವಹಿಸಿದ್ದರು. ಪರ್ಯಾಯ ಮೆರವಣಿಗೆ ಆರಂಭಕ್ಕೂ ಮೊದಲು ಉಡುಪಿ ಶಾಸಕರು ಭಗವಾ ಧ್ವಜವನ್ನ ಜಿಲ್ಲಾಧಿಕಾರಿಯವರ ಕೈಗೆ ಹಸ್ತಾಂತರಿಸಿದ್ದಾರೆ.. ಅದೇ ಧ್ವಜವನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಎತ್ತಿ ಡಿಸಿ ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾರೆ.. ಡಿಸಿ ಅವರ ಈ ನಡೆ ಸರ್ಕಾರಿ ಸೇವಾ ನಿಯಮಗಳಿಗೆ ವಿರುದ್ಧ ಅಂತ ಕಾಂಗ್ರೆಸ್​​​ ಆಕ್ಷೇಪ ಎತ್ತಿದ್ದು, ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರವನ್ನ​​ ಆಗ್ರಹಿಸಿದೆ.. 





ಈ ಬಗ್ಗೆ ಆಕ್ಷೇಪಗಳು ಕೇಳಿಬಂದ ಹಿನ್ನೆಲೆ ಸ್ವರೂಪ ಅವರು ಸ್ಪಷ್ಟನೆ ನೀಡಿದ್ದಾರೆ. ಪರ್ಯಾಯ ಮಹೋತ್ಸವದ ವೇಳೆ ನಗರಸಭೆಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ.. ಇದರಲ್ಲಿ ರಾಜಕೀಯ ಪ್ರೇರಿತ ಇಲ್ಲ ಅಂತಿದ್ದಾರೆ..

ಇನ್ನು, ಉಡುಪಿ ಶಾಸಕ ಯಶಪಾಲ್ ಸುವರ್ಣ ಸಹ ಡಿಸಿ ಪರ ಬ್ಯಾಟ್​​​ ಬೀಸಿದ್ದಾರೆ.. ಅದೇನು ಪಾಕಿಸ್ತಾನ ಧ್ವಜ ಅಲ್ಲ, ಕಾರ್ಯಕ್ರಮದ ಯಶಸ್ವಿ ಸಹಿಸಲಾಗದೇ ನಡೆಸಿದ ಷಡ್ಯಂತ್ರ ಅಂತ ಕಿಡಿಕಾರಿದ್ದಾರೆ.. ಇತ್ತ, ಪರಿಷತ್​​ ಸದಸ್ಯ ಸಿಟಿ ರವಿ ಕೂಡ ಕಾಂಗ್ರೆಸ್‌ನವರಿಗೆ ಹಿಂದೂ ವಿರೋಧಿ ಮಾನಸಿಕತೆ ಅಂತ ವಾಗ್ದಾಳಿ ನಡೆಸಿದ್ದಾರೆ.. 
ಒಟ್ಟಾರೆ, ನೂರಾರು ವರ್ಷಗಳ ಇತಿಹಾಸವಿರುವ ಉಡುಪಿ ಪರ್ಯಾಯ ಮಹೋತ್ಸವದ ವೇಳೆ ಡಿಸಿ ಕೇಸರಿ ಧ್ವಜ ನಿಶಾನೆ ತೋರಿದ್ದೇ ವಿವಾದ ಸೃಷ್ಟಿಸಿದೆ.. ಈ ವಿವಾದದ ನಡುವೆ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಈ ಬಾರಿಯ ಪರ್ಯಾಯ ಮಹೋತ್ಸವ ಸಂಪನ್ನಗೊಂಡಿದೆ.. 


ಪರಿಕ್ಷಿತ್​​, ನ್ಯೂಸ್​ಫಸ್ಟ್​, ಉಡುಪಿ 

Udupi paryaya utsava
Advertisment