/newsfirstlive-kannada/media/media_files/2025/11/28/narendra-modi-in-udupi-2-2025-11-28-12-43-40.jpg)
/newsfirstlive-kannada/media/media_files/2025/11/28/narendra-modi-in-udupi-2025-11-28-12-43-58.jpg)
ಕೃಷ್ಣ ಮಠದಲ್ಲಿ ಪ್ರಧಾನಿ
ಉಡುಪಿ ಶ್ರೀಕೃಷ್ಣನ ಮಠಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಪೂಜಾ, ಕೈಂಕರ್ಯಗಳಲ್ಲಿ ಭಾಗಿಯಾಗಿ ಶ್ರೀಕೃಷ್ಣನ ಆಶೀರ್ವಾದ ಪಡೆದುಕೊಂಡರು. ಮಧ್ಯಾಹ್ನ 12 ಸುಮಾರಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತೀರ್ಥಮಂಟಪ ಅನಾವರಣದಲ್ಲಿ ಪಿಎಂ ಮೋದಿ ಭಾಗಿಯಾದರು. ಬಳಿಕ ಲಕ್ಷಕಂಠ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗಿಯಾದರು.
/newsfirstlive-kannada/media/media_files/2025/11/28/narendra-modi-in-udupi-4-2025-11-28-12-44-40.jpg)
ಪ್ರಸಾದ ಸೇವನೆ
ಮಠಕ್ಕೆ ಬರುತ್ತಿದ್ದಂತೆಯೇ ಮಠಾಧೀಶರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು. ಈ ವೇಳೆ ಮಠದ ಪರಿಸರದಲ್ಲಿ ವೈದಿಕರಿಂದ ಉಪನಿಷತ್ತು, ವೇದ, ಗೀತೆ ಪಠಣ ನಡೆಯುತ್ತಿತ್ತು. ಪ್ರಧಾನಿ ಮೋದಿಯವರಿಗೆ ಕೃಷ್ಣದೇವರ ಪ್ರಸಾದ ವಿತರಣೆ ಮಾಡಲಾಯಿತು.
/newsfirstlive-kannada/media/media_files/2025/11/28/narendra-modi-in-udupi-11-2025-11-28-12-45-45.jpg)
ಮಾಧ್ವ ಸಂಪ್ರದಾಯದ ತಿಲಕ
ನರೇಂದ್ರ ಮೋದಿ ಅವರಿಗೆ ಮಾಧ್ವ ಸಂಪ್ರದಾಯದ ತಿಲಕವನ್ನು ಇಡಲಾಯಿತು. ಪುತ್ತಿಗೆ ಶ್ರೀಗಳು ಅಂಗಾರಕ ಅಕ್ಷತೆಯನ್ನು ಇರಿಸಿದರು. ಹೋಮದ ಮಸಿಯಲ್ಲಿ ತಯಾರಿಸಿರುವ ವಿಶೇಷ ತಿಲಕವನ್ನು ಮೋದಿಗೆ ಇಟ್ಟರು.
/newsfirstlive-kannada/media/media_files/2025/11/28/narendra-modi-in-udupi-8-2025-11-28-12-46-31.jpg)
ಭೋಜನ ಶಾಲೆಯ ಮುಖ್ಯ ಪ್ರಾಣ ದೇವರ ದರ್ಶನ ಮಾಡಿದರು. ಮಠದೊಳಗಿನ ವಿವಿಧ ಗುಡಿಗಳ ದರ್ಶನ ಮಾಡಿದರು. ನಂತರ ಮಠದಿಂದ ಗೀತಾ ಮಂದಿರ ಮೋದಿ ತೆರಳಿದರು. ಈ ವೇಳೆ ವಿವಿಧ ವಾದ್ಯಗಳನ್ನು ಕಲಾವಿದರು ಪ್ರದರ್ಶನ ಮಾಡಿದರು.
/newsfirstlive-kannada/media/media_files/2025/11/28/narendra-modi-in-udupi-9-2025-11-28-12-46-47.jpg)
ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆಯನ್ನು ಅನಾವರಣ ಮಾಡಿದರು. ಬಳಿಕ ಧ್ಯಾನ ಮಂದಿರ ವೀಕ್ಷಣೆಯನ್ನು ಮೋದಿ ಅವರು ಮಾಡಿದರು.
/newsfirstlive-kannada/media/media_files/2025/11/28/narendra-modi-in-udupi-12-2025-11-28-12-47-01.jpg)
ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಶಿರೂರು ವೇದವರ್ಧನ ತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿ ಇದ್ದರು.
/newsfirstlive-kannada/media/media_files/2025/11/28/narendra-modi-in-udupi-2-2025-11-28-12-48-34.jpg)
ಕನಕದಾಸರ ವಿಗ್ರಹಕ್ಕೆ ಹೂಮಾಲೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಕಿದರು. ಕನಕನ ಕಿಂಡಿಯ ಮೇಲಿರುವ ಶ್ರೀ ಕೃಷ್ಣನ ಮೂರ್ತಿಗೆ ಮೋದಿ ನಮಸ್ಕಾರ ಮಾಡಿದರು. ಬಳಿಕ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಣೆಗೆ ತಿಲಕವಿಟ್ಟು ಪ್ರಸಾದ ನೀಡಿದರು. ತೀರ್ಥದ ಜೊತೆ ತುಳಸಿ ಮಣಿಯನ್ನು ಮೋದಿ ಅವರಿಗೆ ನೀಡಲಾಯಿತು.
/newsfirstlive-kannada/media/media_files/2025/11/28/narendra-modi-in-udupi-7-2025-11-28-12-48-57.jpg)
18 ಸಾವಿರ ಜನ ಭಾಗಿ
ಉಡುಪಿಯ ಕೃಷ್ಣ ಮಠದಲ್ಲಿ ಲಕ್ಷ ಕಂಠ ಭಗವದ್ಗೀತೆ ಪಠಣ ನಡೆದಿದೆ. ಭಗವದ್ಗೀತೆಯ 18 ಅಧ್ಯಾಯಗಳನ್ನ ಭಕ್ತರು ಪಠಿಸಿದ್ದಾರೆ. 15ನೇ ಅಧ್ಯಾಯ ಪುರುಷೋತ್ತಮ ಸೂಕ್ತ ಮೋದಿ ಪಠಿಸಲಿದ್ದಾರೆ. ಸುಮಾರು 18 ಸಾವಿರ ಜನ ಭಗವದ್ಗೀತೆ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.
/newsfirstlive-kannada/media/media_files/2025/11/28/narendra-modi-in-udupi-1-2025-11-28-12-49-40.jpg)
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಏರ್ಪೋರ್ಟ್ಗೆ ಬಂದಿಳಿದ್ರು. ಏರ್ಪೋರ್ಟ್ಗೆ ಆಗಮಿಸಿದ ಮೋದಿಯನ್ನ ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ವಾಗತಿಸಿದ್ರು. ಬಳಿಕ ಸೇನಾ ಹೆಲಿಕಾಪ್ಟರ್ ಮೂಲಕ ಮೋದಿ ಉಡುಪಿಯತ್ತ ಪ್ರಯಾಣ ಬೆಳೆಸಿದ್ರು.
/newsfirstlive-kannada/media/media_files/2025/11/28/narendra-modi-in-udupi-5-2025-11-28-12-50-04.jpg)
ಸೇನಾ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಆಗಮಿಸಿದ ಮೋದಿ ಒಂದು ಕಿಲೋಮೀಟರ್ ರೋಡ್ ಶೋ ನಡೆಸಿದ್ರು.. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ನೂರಾರು ಮಂದಿ ಮೋದಿ ಮೇಲೆ ಹೂಮಳೆ ಸುರಿಸಿದ್ರು.
/newsfirstlive-kannada/media/media_files/2025/11/28/narendra-modi-in-udupi-6-2025-11-28-12-50-23.jpg)
ವಿವಿಧ ಜಾನಪದ ಕಲಾತಂಡಗಳಿಂದ ಮೋದಿಗೆ ಅದ್ಧೂರಿ ಸ್ವಾಗತಕೋರಲಾಯ್ತು. ಮೋದಿ ಮೋದಿ ಅಂತ ಹರ್ಷೋದ್ಘಾರ ಮೊಳಗಿಸಿದ ಅಭಿಮಾನಿಗಳ ಮೋದಿ ಕಂಡು ಖುಷಿಪಟ್ಟರು.. ಈ ವೇಳೆ ಪ್ರಧಾನಿ ಮೋದಿ ಸಹ ಅಭಿಮಾನಿಗಳನ್ನ ಕೈಬೀಸಿ ಮಂದಹಾಸದ ನಗೆ ಬೀರಿದ್ರು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us