/newsfirstlive-kannada/media/media_files/2025/11/21/pak-spy-in-malpe-shipyard-2025-11-21-19-44-45.jpg)
ಪಾಕ್ ಪರ ಗೂಢಚಾರಿಕೆ ನಡೆಸಿದ ಇಬ್ಬರ ಬಂಧನ
ಕಳೆದ ವಾರ ದೆಹಲಿಯಲ್ಲಿ ನಡೆದಿದ್ದ ಸ್ಫೋಟ ಪ್ರಕಣದಲ್ಲಿ ಭಾಗಿಯಾಗಿದ್ದ ಉಗ್ರರೆಲ್ಲಾ ಡಾಕ್ಟರ್​ಗಳು.. ಅದೇ ರೀತಿ ಉಡುಪಿಯ ಮಲ್ಪೆ ಬಂದರಿನಲ್ಲಿ ಕೆಲಸ ಮಾಡ್ತಿದ್ದ ಎಜುಕೇಟೆಡ್ ಉದ್ಯೋಗಿಗಳೇ ದೇಶದ್ರೋಹ ಎಸಗಿರುವ ಆರೋಪ ಕೇಳಿ ಬಂದಿದೆ.. ಪಾಕಿಸ್ತಾನಕ್ಕೆ ನೌಕಾಪಡೆ ಹಡಗುಗಳ ರಹಸ್ಯ ಮಾಹಿತಿಗಳನ್ನು ರವಾನೆ ಮಾಡ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ..
ಮಲ್ಪೆ ಬಂದರು.. ಉಡುಪಿ ಬಳಿ ಅರಬ್ಬಿ ಸಮುದ್ರ ತೀರದಲ್ಲಿರುವ ನೈಸರ್ಗಿಕ ಬಂದರು ಹಾಗೂ ರಾಜ್ಯದ ಕರಾವಳಿಯ ಪ್ರಮುಖ ಮತ್ಸ್ಯ ಕೈಗಾರಿಕಾ ತಾಣ... ಅಲ್ಲದೇ ಉದ್ಯಾವರ ನದಿ ದಂಡೆ ಮೇಲೆ ನೆಲೆಯಾಗಿರುವ ಬೆರಗುಗೊಳಿಸುವ ಪ್ರವಾಸಿಗರ ಸ್ವರ್ಗ.. ಭಾರತೀಯ ನೌಕಾಪಡೆಯ ಹಡಗುಗಳಿಗೆ ಟಗ್​ಗಳನ್ನು ನಿರ್ಮಿಸಿ ಕೊಡುವ ಕೇಂದ್ರ ಸರ್ಕಾರದ ಸ್ವಾಮ್ಯದ ಸಂಸ್ಥೆ ಕೊಚ್ಚಿನ್ ಶಿಪ್ ಯಾರ್ಡ್ ಮಲ್ಪೆಯಲ್ಲಿದೆ.. ಖಾಸಗಿಯವರಿಗೂ ನೌಕೆಗಳನ್ನು ನಿರ್ಮಿಸಿ ಕೊಡುವ ಸಂಸ್ಥೆ ಇದಾಗಿದೆ.. ಕೇರಳದಲ್ಲಿ ಮುಖ್ಯ ಕಚೇರಿ ಹೊಂದಿರೋ ಶಿಪ್​ಯಾರ್ಡ್​​​​ನಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿಯೇ ದೇಶದ್ರೋಹದ ಕೆಲಸಕ್ಕೆ ಕೈ ಹಾಕಿರೋದು ಬಯಲಾಗಿದೆ..
ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡ್ತಿದ್ದ ಇಬ್ಬರ ಬಂಧನ
ಉಡುಪಿ ಜಿಲ್ಲೆ ಮಲ್ಪೆಯ ಶಿಪ್​ ಯಾರ್ಡ್ ಸಿಬ್ಬಂದಿ ಅರೆಸ್ಟ್​
ನೌಕಾಪಡೆ ಹಡಗುಗಳ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡ್ತಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನ ಉಡುಪಿ ಪೊಲೀಸರು ಬಂಧಿಸಿದ್ದಾರೆ.. ಇವ್ರೇ ನೋಡಿ ಆ ದ್ರೋಹಿಗಳು.. ಉತ್ತರ ಪ್ರದೇಶ ಮೂಲದ ರೋಹಿತ್ ಹಾಗೂ ಸಂತ್ರಿ ಅಂತ.. ಆರೋಪಿ ರೋಹಿತ್ ಯುಪಿಯ ಸುಲ್ತಾನ್​ಪುರ ಜಿಲ್ಲೆಯನಾಗಿದ್ರೆ ಮತ್ತೋರ್ವ ಸಂತ್ರಿ ಸುಲ್ತಾನ್​ಪುರದ ಹಂಜಾಬಾದ್ ಮೈದಾನ್ ನಿವಾಸಿ.. ಇಬ್ಬರೂ ಮಲ್ಪೆಯ ಸುಷ್ಮಾ ಮರೈನ್ ಪ್ರೈವೇಟ್ ಲಿಮಿಟೆಡ್ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಉದ್ಯೋಗಿಗಳು.. ಮಲ್ಪೆಯ ಶಿಪ್ ಯಾರ್ಡ್​​ನಲ್ಲಿ ರೋಹಿತ್ ಇನ್ಸುಲೇಟರ್ ಆಗಿ ಕೆಲಸ ಮಾಡ್ತಿದ್ರೆ, ಮತ್ತೋರ್ವ ಆರೋಪಿ ಕೇರಳದಲ್ಲಿ ಕೆಲಸ ಮಾಡ್ತಿದ್ದ.. ಕಳೆದ ಒಂದೂವರೆ ವರ್ಷದಿಂದ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸ್ತಿದ್ದು ದೇಶದ್ರೋಹದ ಆರೋಪದ ಮೇಲೆ ಪೊಲೀಸರು ಇಬ್ಬರಿಗೂ ಕೋಳ ತೊಡಿಸಿದ್ದಾರೆ.
ಗೂಢಚಾರಿಕೆಯ ಸುತ್ತ!
ಕೇರಳದಲ್ಲಿ ಕೆಲಸ ಮಾಡುವಾಗಲೂ ಪಾಕ್ ಪರ ಬೇಹುಗಾರಿಕೆ
ಮಲ್ಪೆ ಶಿಪ್ ಯಾರ್ಡ್​​ಗೆ ಬಂದ ನಂತರವೂ ಮಾಹಿತಿ ಹಂಚಿಕೆ
ಹಡಗುಗಳ ಗೌಪ್ಯ ಮಾಹಿತಿಗಳನ್ನ ವಾಟ್ಸಪ್ ಮೂಲಕ ಹಂಚಿಕೆ
ಹಣ ಪಡೆದು ಮಾಹಿತಿಗಳ ಸೋರಿಕೆ, ರೋಹಿತ್​ಗೆ ಸಂತ್ರಿ ಸಾಥ್
ಕೊಚ್ಚಿನ್ ಶಿಪ್​ಯಾರ್ಡ್​ CEO ದೂರಿನ ಆಧಾರದಲ್ಲಿ ಬಂಧನ
ಕೋರ್ಟ್​ಗೆ ಹಾಜರುಪಡಿಸಿ ಇಬ್ಬರ ವಶಕ್ಕೆ ಪಡೆದ ಪೊಲೀಸರು
ಡಿ.3ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ
ಹೆಚ್ಚಿನ ತನಿಖೆಗೆ ನ್ಯಾಷನಲ್ ಏಜೆನ್ಸಿಗಳು ಪಾಲ್ಗೊಳ್ಳುವ ಸಾಧ್ಯತೆ
ಪಾಕ್ ಜೊತೆ ಸಂಪರ್ಕ ಸಂಶಯ ಹಿನ್ನೆಲೆ, ತೀವ್ರಗೊಂಡ ತನಿಖೆ
( ಕೇರಳದಲ್ಲಿ ಕೆಲಸ ಮಾಡುವಾಗಲೂ ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡ್ತಿದ್ದ ಆರೋಪಿ ರೋಹಿತ್ ಮಲ್ಪೆ ಶಿಪ್ ಯಾರ್ಡ್​​ಗೆ ಬಂದ ನಂತರವೂ ಮಾಹಿತಿ ಸೋರಿಕೆ ಮಾಡ್ತಿದ್ದ.. ಹಡಗುಗಳ ಗೌಪ್ಯ ಮಾಹಿತಿಗಳನ್ನ ವಾಟ್ಸಪ್ ಮೂಲಕ ಹಂಚಿಕೆ ಮಾಡ್ತಿದ್ದ ಎನ್ನಲಾಗಿದೆ.. ಗೂಢಚಾರಿಕೆಗೆ ಹಣ ಪಡೆದು ಮಾಹಿತಿಗಳನ್ನು ಸೋರಿಕೆ ಮಾಡ್ತಿದ್ದ ರೋಹಿತ್​ಗೆ ಕೇರಳದಲ್ಲಿದ್ದ ಸಂತ್ರಿ ಸಾಥ್ ನೀಡ್ತಿದ್ದ.. ಸದ್ಯ ಕೊಚ್ಚಿನ್ ಶಿಪ್​ಯಾರ್ಡ್​ CEO ದೂರಿನ ಆಧಾರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.. ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು ವಶಕ್ಕೆ ಪಡೆದಿದ್ದಾರೆ.. ಡಿಸೆಂಬರ್ 3ರವರೆಗೆ ಕೋರ್ಟ್​ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದೆ.. ಇನ್ನು ಹೆಚ್ಚಿನ ತನಿಖೆಗೆ ನ್ಯಾಷನಲ್ ಏಜೆನ್ಸಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ.. ಪಾಕಿಸ್ತಾನದ ಜೊತೆ ಜೊತೆ ಸಂಪರ್ಕ ಇರುವ ಸಂಶಯ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಂಡಿದೆ.. )
/filters:format(webp)/newsfirstlive-kannada/media/media_files/2025/11/21/pak-spy-in-malpe-shipayard02-2025-11-21-19-49-50.jpg)
‘3 ಸೆಕ್ಷನ್​ಗಳಡಿ ಎಫ್​ಐಆರ್’
‘ಇನ್ನು ಹೆಚ್ಚಿನ ತನಿಖೆ ನಡೀತಿದೆ’
ಕೆಲ ದಿನಗಳ ಹಿಂದೆ ನಡೆದಿದ್ದ ದೆಹಲಿ ಬ್ಲಾಸ್ಟ್​​​​ನಲ್ಲಿ ಭಾಗಿಯಾಗಿದ್ದವರು ವೈಟ್​​ಕಾಲರ್ ಉದ್ಯೋಗಿಗಳು.. ಈ ಆರೋಪಿಗಳು ಕೂಡ ಎಜುಕೇಟೆಡ್​ಗಳಾಗಿದ್ದು ದೇಶದ್ರೋಹ ಬಗೆದಿದ್ದಾರೆ.. ಇಂತಹ ವಿಶ್ವಾಸಘಾತುಕರಿಗೆ ಕಾನೂನು ಪ್ರಕಾರ ತಕ್ಕ ಶಿಕ್ಷೆಯಾಗಬೇಕಿದೆ.. ದೇಶದ್ರೋಹ ಮಾಡುವವರಿಗೆ ಪಾಠ ಕಲಿಸಬೇಕಿದೆ..
ಪರೀಕ್ಷಿತ್, ನ್ಯೂಸ್​​​ಫಸ್ಟ್​, ಉಡುಪಿ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us