/newsfirstlive-kannada/media/media_files/2025/08/09/udupi-nirmala-sitharaman-sudha-murthy-8-2025-08-09-22-28-53.jpg)
/newsfirstlive-kannada/media/media_files/2025/08/09/udupi-nirmala-sitharaman-sudha-murthy-10-2025-08-09-22-29-38.jpg)
ಈ ವೇಳೆ ವಿತ್ತ ಸಚಿವೆಗೆ ‘ಭಾರತ ಲಕ್ಷ್ಮಿ’ ಅನ್ನೋ ಬಿರುದನ್ನ ನೀಡಲಾಯ್ತು. ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರರು ಬಿರುದು ಘೋಷಣೆ ಮಾಡಿದ್ದು, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ಬಿರುದು ಪ್ರಧಾನ ಮಾಡಿದ್ರು. ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯಸಭಾ ಸದಸ್ಯೆ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಸಾಥ್ ನೀಡಿದರು.
/newsfirstlive-kannada/media/media_files/2025/08/09/udupi-nirmala-sitharaman-sudha-murthy-6-2025-08-09-22-30-09.jpg)
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯೆ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಕೂಡ ಹಾಜರಿದ್ದರು. ಇಬ್ಬರೂ ಚಂದ್ರ ಶಾಲೆಯಲ್ಲಿ ಕುಳಿತು ದೇವರ ಸೇವೆಗೆ ಹೂವು ಕಟ್ಟಿದರು. ಸುಧಾ ಮೂರ್ತಿ ಸ್ವತಃ ಹೂಮಾಲೆ ತಯಾರಿಸಿ ಕೃಷ್ಣನಿಗೆ ಅರ್ಪಿಸಿದರು.
/newsfirstlive-kannada/media/media_files/2025/08/09/udupi-nirmala-sitharaman-sudha-murthy-5-2025-08-09-22-30-28.jpg)
ನಿರ್ಮಲಾ ಸೀತಾರಾಮನ್ ಅವರು ಸಾಮಾನ್ಯ ಗೃಹಿಣಿಯರಂತೆ ದೇವರ ನೈವೇದ್ಯದ ಪಾತ್ರೆಗಳನ್ನು ತೊಳೆದು ಸ್ವಚ್ಛಗೊಳಿಸಿದರು. ಬಳಿಕ ಅನ್ನಬ್ರಹ್ಮನ ಸನ್ನಿಧಿಯಲ್ಲಿ ಆಹಾರ ತಯಾರಿಯಲ್ಲೂ ಭಾಗವಹಿಸಿದರು. ಶ್ರೀ ಕೃಷ್ಣ ಮಠದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ತೋರಿಸಿದ ಸರಳತೆ ಮತ್ತು ಭಕ್ತಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
/newsfirstlive-kannada/media/media_files/2025/08/09/udupi-nirmala-sitharaman-sudha-murthy-4-2025-08-09-22-30-50.jpg)
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿರುವ ನಿರ್ಮಲಾ ಸೀತಾರಾಮನ್.. ಶ್ರೀ ಕೃಷ್ಣನ ಸಂದೇಶಗಳನ್ನು ಪಸರಿಸುವಲ್ಲಿ ಪುತ್ತಿಗೆ ಮಠದ ಕೊಡುಗೆ ಅನನ್ಯ. ಪ್ರತಿದಿನ ಜನರಿಂದ ಭಗವದ್ಗೀತೆ ಬರೆಯಿಸುವುದು ಒಂದು ಮಹಾಯಜ್ಞದಂತೆ ನಡೆಯುತ್ತಿದೆ. ಒಂದು ಕೋಟಿ ಭಗವದ್ಗೀತೆಯ ಬರಹಗಳ ಸಂಗ್ರಹ ಶ್ಲಾಘನೀಯ ಕಾರ್ಯ. ಇದರಿಂದ ಶ್ರೀ ಕೃಷ್ಣನ ಸಂದೇಶವು ಪ್ರಪಂಚದಾದ್ಯಂತ ಹರಡಲಿದೆ ಎಂದರು.
/newsfirstlive-kannada/media/media_files/2025/08/09/udupi-nirmala-sitharaman-sudha-murthy-2025-08-09-22-31-11.jpg)
ರಕ್ಷಾಬಂಧನದ ದಿನ ಶ್ರೀ ಕೃಷ್ಣನ ಆಶೀರ್ವಾದ ಪಡೆಯಲು ಬಂದಿರುವುದಾಗಿ ತಿಳಿಸಿದ ಸಚಿವರು ನಾವು ಭಾರತೀಯರು ಯಾವತ್ತೂ ಒಗ್ಗಟ್ಟಾಗಿರಬೇಕು. ಮನುಷ್ಯ ಸೇವೆಯೇ ದೇಶ ಸೇವೆ, ದೇಶ ಸೇವೆಯೇ ಭಗವಂತನ ಸೇವೆ ಎಂದು ಬಾವುಕರಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಅಷ್ಟಮಠಾಧೀಶರಿಗೆ ಕೈಮುಗಿದು ಆಶೀರ್ವಾದ ಪಡೆದ ವಿತ್ತ ಸಚಿವೆ, ಕಾರ್ಯಕ್ರಮದ ನೆನಪನ್ನು ಜೀವನದ ಅಮೂಲ್ಯ ಕ್ಷಣವೆಂದು ವರ್ಣಿಸಿದರು.