/newsfirstlive-kannada/media/media_files/2025/11/25/dog-baby-shower-at-haliyala-2025-11-25-18-41-36.jpg)
ಸಾಕು ನಾಯಿಗೆ ಸೀಮಂತ ನೆರವೇರಿಸಿದ ಪ್ರೇಮಾ, ಪ್ರಭು ದಂಪತಿ!
ಮಕ್ಕಳಿಲ್ಲದ ದಂಪತಿಯೊಬ್ಬರು ತಮ್ಮ ಮನೆಯ ಶ್ವಾನವನ್ನೇ ತಮ್ಮ ಮಗಳು ಎಂದು ಸಾಕಿ ಅದರ ಚೊಚ್ಚಲ ಸೀಮಂತವನ್ನು ಅದ್ದೂರಿಯಾಗಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.
ಹೌದು.. ಹಳಿಯಾಳ ನಗರದ ಪ್ರೇಮಾ ಮತ್ತು ಪ್ರಭು ಶಿಗ್ಲಿ ದಂಪತಿಗಳಿಗೆ ಮಕ್ಕಳಿರಲಿಲ್ಲ. ಹೀಗಾಗಿ ಸ್ಥಳೀಯ ಬೀದಿ ನಾಯಿ ಮರಿಯೊಂದನ್ನು ತಂದು ತಮ್ಮ ಮನೆಯಲ್ಲಿ ಸಾಕಿದ್ದಾರೆ. ಬೀದಿನಾಯಿಯನ್ನು ಮನೆಯಲ್ಲಿ ತಮ್ಮ ಮಕ್ಕಳಂತೆ ಸಾಕಿದ್ದಾರೆ. ಅದಕ್ಕೆ ಸೋನಿ ಎಂದು ಹೆಸರಿಟ್ಟಿದ್ದರು. ಇದೀಗ ಅದು ದೊಡ್ಡದಾಗಿದ್ದು ಗರ್ಭಧರಿಸಿದೆ. ಹೀಗಾಗಿ ತಮ್ಮ ಸಂತಸ ಹಂಚಿಕೊಳ್ಳಲು ಇದರ ಮೊದಲ ಸೀಮಂತವನ್ನು ಅದ್ದೂರಿಯಾಗಿ ಆಚರಿಸಿದ್ದು, ಮನೆಯಲ್ಲಿ ಅದರ ಇಷ್ಟದ ತಿನಿಸು ಜೊತೆ ಆಭರಣ, ಸೀರೆಗಳಿಂದ ಸಿಂಗರಿಸಿ, ಆಪ್ತರನ್ನು ಕರೆದು ಮನುಷ್ಯರಿಗೆ ಸೀಮಂತ ಮಾಡುವಂತೆ ಸೀಮಂತ ನೆರವೇರಿಸಿದ್ದಾರೆ.
/filters:format(webp)/newsfirstlive-kannada/media/media_files/2025/11/25/dog-baby-shower-at-haliyala02-2025-11-25-18-43-14.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us