/newsfirstlive-kannada/media/media_files/2025/12/28/droupadi-murmu-1-2025-12-28-12-27-19.jpg)
/newsfirstlive-kannada/media/media_files/2025/12/28/droupadi-murmu-2025-12-28-12-27-36.jpg)
ಕಾರವಾರದಲ್ಲಿ ರಾಷ್ಟ್ರಪತಿ
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿದ್ದಾರೆ. ರಾಷ್ಟ್ರಪತಿಯವರನ್ನ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಆತ್ಮೀಯವಾಗಿ ಬರಮಾಡಿಕೊಂಡರು.
/newsfirstlive-kannada/media/media_files/2025/12/28/droupadi-murmu-3-2025-12-28-12-28-08.jpg)
ರಾಷ್ಟ್ರಪತಿ ಸಮುದ್ರಯಾನ
ಈ ವೇಳೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳು ಎಸ್ ವೈದ್ಯ, ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಯಂತಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಎಡಿಜಿಪಿ ಹಿತೇಂದ್ರ, ಐಜಿಪಿ ಅಮಿತ್ ಸಿಂಗ್, ಎಸ್ಪಿ ದೀಪನ್ ಎಂ.ಎನ್ ಉಪಸ್ಥಿತಿ ಇದ್ದರು. ಜೊತೆಗೆ ಕಾರವಾರ ನೌಕಾನೆಲೆಯ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಹಾಗೂ ನೌಕಾಪಡೆಯ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.
/newsfirstlive-kannada/media/media_files/2025/12/28/droupadi-murmu-2-2025-12-28-12-28-52.jpg)
ಸೇನಾ ಅಧಿಕಾರಿಗಳಿಂದ ಗೌರವ ಸ್ವೀಕಾರ
ಬೆಳಿಗ್ಗೆ 10 ಗಂಟೆ ಸುಮಾರಿಗೆ ನೌಕಾನೆಲೆಗೆ ಪ್ರವೇಶಿಸಿರುವ ಅವರು ನೌಕಾಪಡೆಯ ಹಿರಿಯ ಅಧಿಕಾರಿಗಳಿಂದ ವಂದನೆ ಸ್ವೀಕರಿಸಿದರು. ಭಾರತೀಯ ನೌಕಾಪಡೆಯ ಸ್ಥಳೀಯ ಕಲ್ವರಿ ವರ್ಗದ ಜಲಾಂತರ್ಗಾಮಿ ಐಎನ್ಎಸ್ ವಾಘಶೀರ್ (Kalvari class submarine INS Vaghsheer) ನಲ್ಲಿ ಸಮುದ್ರಯಾನ ಮಾಡಿದರು. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರು ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಅವರೊಂದಿಗೆ ಇದ್ದಾರೆ.
/newsfirstlive-kannada/media/media_files/2025/12/28/droupadi-murmu-1-2025-12-28-12-29-30.jpg)
ಲ್ವರಿ ವರ್ಗದ ಜಲಾಂತರ್ಗಾಮಿ ನೌಕೆ
ಇದೇ ಮೊದಲ ಬಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಲ್ವರಿ ವರ್ಗದ ಜಲಾಂತರ್ಗಾಮಿ ನೌಕೆಯಲ್ಲಿ ವಿಹಾರ ಮಾಡಿದ್ದಾರೆ. ಈ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ನಂತರ ಭಾರತದ ರಾಷ್ಟ್ರಪತಿಗಳು ನಡೆಸಿದ ಎರಡನೇ ಸಮುದ್ರಯಾನವಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us