/newsfirstlive-kannada/media/media_files/2025/08/04/anantha_subburao_byte-2025-08-04-18-54-38.jpg)
ಬೆಂಗಳೂರು: ನಾಳೆ ಸಾರಿಗೆ ಮುಷ್ಕರ ಮಾಡುತ್ತೇವೆ. ಇದರಲ್ಲಿ ಎಲ್ಲರೂ ಭಾಗಿಯಾಗಬೇಕು. ನ್ಯಾಯಾಲಯದಿಂದ ನಮಗೆ ನಿರ್ದೇಶನ ಬಂದಿಲ್ಲ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ ಅವರು ಹೇಳಿದ್ದಾರೆ.
ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ ಅವರು, ಎರಡು ಗಂಟೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಮಾತನಾಡಿದ್ದೇವೆ. 38 ತಿಂಗಳ ವೇತನ ಕೊಡಬೇಕು ಎಂದು ನಾವು ಕೇಳಿದ್ದೇವೆ. ಈ ಹಿಂದಿನ ಸಭೆಯಲ್ಲಿ ನಾವು ಅರಿಯರ್ಸ್ ಕೊಡಬೇಕು ಎಂದಿಲ್ಲ. 4 ವರ್ಷ ಕಾಯುವಂತೆ ಹೇಳಿದ್ದರು. ಶ್ರೀನಿವಾಸ ಮೂರ್ತಿ ಸಮಿತಿ 14 ತಿಂಗಳ ಬಾಕಿ ಹಣ ಕೊಡಲು ಹೇಳಿದೆ. ಅದು 700 ಕೋಟಿಗೂ ಅಧಿಕ ಹಣ ಆಗಬಹುದು. ಅದನ್ನು ನಾವು ಕೊಡುತ್ತೇವೆ. ಈಗ ಮುಷ್ಕರವನ್ನು ವಾಪಸ್ ತಗೊಳ್ಳಿ ಅಂತ ಸಿಎಂ ಸಿದ್ದರಾಮಯ್ಯ ಎಂದಿದ್ದಾರೆ ಎಂದು ಹೇಳಿದ್ದಾರೆ.
2024ರ ಜನವರಿಯ ವೇತನ ಹೆಚ್ಚಳ ಏನಿದೆಯೋ ಅದನ್ನು ನಂತರ ಮಾತನಾಡೋಣ ಎಂದಿದ್ದಕ್ಕೆ ನಾವು ಒಪ್ಪಲಿಲ್ಲ. ಈಗ 700 ಕೋಟಿ ಹಣ ಕೊಡುತ್ತೀರಾ, ಇನ್ನು 24 ತಿಂಗಳ ಬಾಕಿ ಹಣ ಕೊಡಬೇಕು. ಅದು ಸಾವಿರ ಕೋಟಿ ರೂಪಾಯಿ ಆಗಬಹುದು. ಇದನ್ನ ಇನ್ಸ್ಟಾಲ್ಮೆಂಟ್ನಲ್ಲಿ ಕೊಡಿ ಎಂದು ಹೇಳಿದ್ದೇವು. ಇದಕ್ಕೆ ಸರ್ಕಾರ ಒಪ್ಪಲಿಲ್ಲ. ಸಷೆನ್ಸ್ ಆದ ಮೇಲೆ ಮಾತನಾಡೋಣ ಎಂದು ನಮ್ಮನ್ನ ಸಮಾಧಾನ ಮಾಡಲು ಬಂದರು ಎಂದು ಹೇಳಿದ್ದಾರೆ.
ಈ ಹಿಂದೆ ಎರಡು ಬಾರಿ ಮುಷ್ಕರ ಮುಂದಕ್ಕೆ ಹಾಕಿದ್ದೇವು. ಹಾಗಾಗಿ ಇಂದು ಸಂಧಾನ ಸಭೆ ಇಂದು ವಿಫಲ ಆಯಿತು. ನಾಳೆ ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾದ್ಯಾಂತ ಮುಷ್ಕರ ಇರುತ್ತದೆ. ಸರ್ಕಾರ ಕೇವಲ 14 ತಿಂಗಳ ಸಂಬಳ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಿಂದ ನಮಗೆ ಎರಡು ವರ್ಷದ ವೇತನ ಹೋಗುತ್ತದೆ. ನಾವು ಕೆಲಸ ಮಾಡಿ ಸಂಬಳ ಕೇಳುತ್ತಿದ್ದೇವೆ. 4 ಲಕ್ಷ ಕೋಟಿ ರೂಪಾಯಿ ರಾಜ್ಯ ಬಜೆಟ್ ಮಂಡನೆ ಮಾಡುತ್ತಾರೆ. ಸಾವಿರ ಕೋಟಿ ಹಣ ಸರ್ಕಾರಕ್ಕೆ ದೊಡ್ಡದು ಏನು ಅಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:BREAKING: ನಾಳೆ ಸಾರಿಗೆ ನೌಕರರ ಮುಷ್ಕರ ಮುಂದೂಡಿ.. ಹೈಕೋರ್ಟ್ ಸೂಚನೆ
ನ್ಯಾಯಾಲಯದ ಆದೇಶ ಏನು ಎಂಬುದನ್ನು ನಾವು ನೋಡುತ್ತೇವೆ. ಇನ್ನು ಅದು ನಮಗೆ ಸಿಕ್ಕಿಲ್ಲ. ನಮಗೆ ಯಾವುದೇ ನಿರ್ದೇಶನ ಬಂದಿಲ್ಲ. ಯಾರು ಕೋರ್ಟ್ಗೆ ಹೋಗಿ ಪಿಐಎಲ್ ಹಾಕಿದ್ದಾರೆ ಎನ್ನುವುದು ನೋಡುತ್ತೇವೆ. ಬಳಿಕ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೋರ್ಟ್ ಆದೇಶ ನಮಗೆ ಅನ್ವಯ ಹೌದೋ, ಅಲ್ಲವೋ ಎನ್ನುವುದು ನಮಗೆ ಗೊತ್ತಾಗಬೇಕು ಅಲ್ವಾ ಎಂದು ಹೇಳಿದ್ದಾರೆ.
ಕೇವಲ ಒಂದು ದಿನ ಮುಂದೂಡಿಕೆ ಮಾಡಿದರೆ ಏನು ಉಪಯೋಗ. ಸರ್ಕಾರಕ್ಕೆ ಹೇಳಿ ತಕ್ಷಣವೇ ಜಾರಿ ಮಾಡಿ ಎಂದು ನಿರ್ದೇಶನ ಕೊಟ್ಟರೇ ಚೆನ್ನಾಗಿ ಇರೋದು. ನಾಳೆ ಯಾರು ಕೂಡ ಮನೆಯಿಂದ ಹೊರಗೆ ಬರಬೇಡಿ, ಟಿವಿ ನೋಡಿಕೊಂಡು ಮನೆಯಲ್ಲಿ ಇರಿ ಎಂದು ಹೇಳಿದ್ದೇವೆ. ನಾಳೆಯ ಮುಷ್ಕರ ನೋಡಿಕೊಂಡು ಮುಂದಿನ ರ್ಯಾಲಿ, ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ. ಹೋರಾಟದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ