/newsfirstlive-kannada/media/media_files/2025/08/20/sujatha-bhat3-2025-08-20-21-16-44.jpg)
ಸುಜಾತ ಭಟ್ ಬಗ್ಗೆ ಚಿಕ್ಕಲ್ಲಸಂದ್ರದ ಜನರ ಶಾಕಿಂಗ್ ಮಾತುಗಳು
ಸುಜಾತ ಭಟ್ ಎಂಬ ವೃದ್ಧ ಮಹಿಳೆಯು ಧರ್ಮಸ್ಥಳದಲ್ಲಿ ತನ್ನ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ದೂರು ನೀಡಿ ಸುದ್ದಿಯಲ್ಲಿದ್ದಾರೆ. ಸುಜಾತ ಭಟ್ ನೀಡುತ್ತಿರುವ ಹೇಳಿಕೆಗಳು ಗೊಂದಲಕಾರಿಯಾಗಿವೆ. ಅಸಲಿಗೆ ಅನನ್ಯ ಭಟ್ ಎಂಬ ಮಗಳನ್ನು ಯಾರೂ ನೋಡಿಯೂ ಇಲ್ಲ. ಸುಜಾತ ಭಟ್‌ಗೆ ಅನನ್ಯ ಭಟ್ ಎಂಬ ಮಗಳು ಇದ್ದಿದ್ದಕ್ಕೆ ಯಾವುದೇ ಸಾಕ್ಷಿ, ಆಧಾರ, ದಾಖಲೆಗಳೂ ಇಲ್ಲ. ಈಗ ಸುಜಾತ ಭಟ್ ಎಲ್ಲೆಲ್ಲಿ ವಾಸ ಇದ್ದರು ಅಲ್ಲೆಲ್ಲಾ ಸುಜಾತ ಭಟ್ ಬಗ್ಗೆ ಜನರು ಆಡುತ್ತಿರುವ ಮಾತುಗಳು ಅಚ್ಚರಿಗೆ ಕಾರಣವಾಗಿವೆ.
ಸುಜಾತ ಭಟ್ ಕುರಿತು ಮತ್ತಷ್ಟು ವಿಚಾರ ಬಯಲಾಗಿದೆ. ಮೂರು ವರ್ಷಗಳ ಹಿಂದೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ಬಳಿಯ ಚಿಕ್ಕಲ್ಲಸಂದ್ರದಲ್ಲಿ ಸುಜಾತ ಬಾಡಿಗೆ ಮನೆಯಲ್ಲಿ ವಾಸ ಇದ್ದರು. ಚಿಕ್ಕಕಲ್ಲಸಂದ್ರದ ಅಶ್ವಥ್ ಕಟ್ಟೆಯಲ್ಲಿ ಸುಜಾತ ವಾಸ ಇದ್ದರು. ಆ ವೇಳೆ ಸ್ಥಳೀಯರ ಬಳಿ ₹100-₹200 ದುಡ್ಡು ಅನ್ನು ಸುಜಾತ ಪಡೆಯುತ್ತಿದ್ದರು. ದುಡ್ಡಿಲ್ಲದಕ್ಕೆ ಚುನಾವಣಾ ಪ್ರಚಾರವನ್ನು ಕೂಡ ಸುಜಾತ ಮಾಡಿದ್ದರು. 2019,2024 ರ ಲೋಕಸಭಾ ಚುನಾವಣೆ ವೇಳೆ ಚುನಾವಣಾ ಪ್ರಚಾರವನ್ನು ರಾಜಕೀಯ ಪಕ್ಷಗಳ ಪರವಾಗಿ ಮಾಡಿದ್ದರು. ಎಲೆಕ್ಷನ್ ಕ್ಯಾಂಪೇನ್ ಗೆ ಹೋದ್ರೆ ದುಡ್ಡು ಸಿಗುತ್ತೆಂದು ನಾನೇ ಕರ್ಕೊಂಡು ಹೋಗಿದ್ದೆ ಎಂದು ಚಿಕ್ಕ ಕಲ್ಲಸಂದ್ರದ ಸ್ಥಳೀಯರಾದ ಸಣ್ಣಪ್ಪ ಹೇಳಿದ್ದಾರೆ.
ಸುಜಾತ ದೊಡ್ಡ ಫ್ರಾಡ್ ಎಂದು ಬೆಂಗಳೂರಿನ ಚಿಕ್ಕ ಕಲ್ಲಸಂದ್ರದ ಸ್ಥಳೀಯರು ಹೇಳಿದ್ದಾರೆ. ಕುಟುಂಬಗಳ ನಡುವೆ ತಂದಿಟ್ಟು ತಮಾಷೆ ನೋಡ್ತಿದ್ರು. ಸುಜಾತರಿಂದ ಈ ಏರಿಯಾದಲ್ಲಿ ಗಂಡ- ಹೆಂಡ್ತಿ ಗಲಾಟೆ ಮಾಡ್ತಿದ್ರು. ಬೇರೆಯವರ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದರು ಎಂದು ಸ್ಧಳೀಯರು ವೃದ್ಧೆ ಸುಜಾತ ವಿರುದ್ಧ ಈಗ ದೂರು ಹೇಳಿದ್ದಾರೆ.
ಸುಜಾತ ಮೇಲೆ ಒಮ್ಮೆ ಹಲ್ಲೆಯಾಯಿತು ಎಂದು ಬಿದ್ದಾಗ ನಾನೇ ಆಸ್ಪತ್ರೆ ಸೇರಿಸಿದ್ದೆ. ಆವತ್ತು ನಾನೇ ಆಸ್ಪತ್ರೆ ಬಿಲ್ ₹1500 ಕೊಟ್ಟಿದ್ದೆ . ನಮಗೆ ಅವರು ಸುಜಾತ ಅಂತ ಅಷ್ಟೇ ಗೊತ್ತು. ಸುಜಾತ ಭಟ್ ಅನ್ನೋದು ಗೊತ್ತಿಲ್ಲ . ಈಗ ಮಾಧ್ಯಮದಲ್ಲಿ ನೋಡಿ ಶಾಕ್ ಆಯ್ತು. ಸುಜಾತ ನಾಯಿಗಳನ್ನ ಆರೈಕೆ ಮಾಡ್ತಿದ್ದಳು ಎಂದು ಸ್ಥಳೀಯ ಸಣ್ಣಪ್ಪ ಎಂಬ ವ್ಯಕ್ತಿ ಹೇಳಿದ್ದಾರೆ.
ಇನ್ನೂ ಸುಜಾತ ಮನೆ ಖಾಲಿ ಮಾಡಿದ್ದರ ಬಗ್ಗೆ ಮನೆ ಮಾಲೀಕ ಕೂಡ ಮಾಹಿತಿ ನೀಡಿದ್ದಾರೆ. ಸುಜಾತ ಭಟ್ ನಮ್ಮ ಮನೆಯಲ್ಲಿ ವಾಸ ಇದ್ದರು. ಮೂರು ವರ್ಷಗಳ ಹಿಂದೆ ಖಾಲಿ ಮಾಡಿದ್ದರು. ಲೀಸ್ ಅಗ್ರಿಮೆಂಟ್ ಮುಗಿದಿತ್ತು. ಅದಕ್ಕೆ ಖಾಲಿಮಾಡಿದ್ದಾರೆ ಎಂದು ಸುಜಾತ ಭಟ್ ವಾಸ ಇದ್ದ ಮನೆ ಮಾಲೀಕ ಪೋನ್ ಮೂಲಕ ನ್ಯೂಸ್ ಫಸ್ಟ್ ಗೆ ಮಾಹಿತಿ ನೀಡಿದ್ದಾರೆ.