Advertisment

ಕಬ್ಬು ಬೆಳೆಯೋ ರೈತರ ಆಕ್ರೋಶಕ್ಕೆ ಕಾರಣ ಏನು? ರೈತರ ಬೇಡಿಕೆಗೆ ಸರ್ಕಾರ ಏಕೆ ಮಣಿಯುತ್ತಿಲ್ಲ?

ರಾಜ್ಯದಲ್ಲಿ ಕಬ್ಬು ಬೆಳೆಯುವ ರೈತರು ಆಕ್ರೋಶದ ಪಿತ್ತ ನೆತ್ತಿಗೇರಿದೆ. ರೈತರ ನೋವು ಬೀದಿಗೆ ಬಂದಿದೆ. ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ 3500 ರೂಪಾಯಿಗಿಂತ ಹೆಚ್ಚಿನ ಬೆಲೆ ನೀಡುತ್ತಿದ್ದಾರೆ. ಅದು ನಮ್ಮ ರಾಜ್ಯದಲ್ಲೇಕೆ ಸಾಧ್ಯವಾಗುತ್ತಿಲ್ಲ ಎಂಬುದು ರೈತರ ಪ್ರಶ್ನೆ.

author-image
Chandramohan
FARMERS_PROTEST
Advertisment

ಕಬ್ಬನ್ನ ಸವಿಯೋ ಜನರಿಗೆ, ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿಹಿ... ಆದ್ರೆ ಅದನ್ನ ಬೆಳೆಯೋ ರೈತರ ಪಾಲಿಗೆ ಅಕ್ಷರಶಃ ಕಹಿ. ಬೆಳೆ ಆರಂಭದಿಂದ ಮಾರಾಟದವರೆಗೂ ರೈತರಿಗೆ ಗೋಳಾಟ. ಕನಿಷ್ಠ ಪಕ್ಷ ನ್ಯಾಯಯುತ ಬೆಂಬಲ ಬೆಲೆ ನೀಡಿ ಅಂದ್ರೆ ಯಾರೂ ಕೇರ್‌ ಮಾಡ್ತಾ ಇರಲಿಲ್ಲ. ಇದೀಗ ಆ ರೈತರು ಸಿಡ್ಡಿದೆದ್ದಿದ್ದಾರೆ. ಪರಿಣಾಮ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಧಗಧಗಿಸ್ತಿದೆ. ಅಷ್ಟಕ್ಕೂ ರೈತರ ಬೇಡಿಕೆ ಏನಿದೆ? ರೈತರ ಕಿಚ್ಚಿನ ಹಿಂದೆ ಇರೋ ಸಿಹಿ ಕಬ್ಬಿನ ಕಹಿ ಸತ್ಯ ಏನು ಅನ್ನೋದನ್ನ ರಿವೀಲ್‌ ಮಾಡ್ತೀವಿ ಈ ರಿಪೋರ್ಟ್‌ನಲ್ಲಿ.  
ಕಬ್ಬಿನ ಜಲ್ಲೆಯನ್ನ ಬರೀ ಬಾಯಲ್ಲಿ ಜಗಿದು ತಿಂದ್ರೂ? ಮಸೀನ್‌ಗೆ ಹಾಕಿ ಹಿಂಡಿ ರಸ ಸೇವಿಸಿದ್ರೂ? ಕಾರ್ಖಾನೆಗೆ ಹಾಕಿ ಉತ್ಪನ್ನ ತಯಾರಿಸಿದ್ರೂ ಸಿಹಿ... ಆದ್ರೆ, ಬೆಳೆ ಬಿತ್ತನೆ ಮಾಡಿ, ನೀರು ಬಿಟ್ಟು, ವರ್ಷವಿಡೀ ಹೊಲ ಮನೆಗೆ ರೌಂಡ್‌ ಹೊಡೆದ್ರೂ ರೈತನಿಗೆ ಮಾತ್ರ ಕಬ್ಬು ಕಹಿ. ಅದನ್ನ ಸಹಿಸುವಷ್ಟು ಸಹಿಸಿದ್ದ ರೈತರು ಭುಗಿಲೆದ್ದಿದ್ದಾರೆ.  ಪರಿಣಾಮ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಬಾಪುರದಲ್ಲಿ ಶುರುವಾಗಿದ್ದ ಕಬ್ಬು ಬೆಳಗಾರರ ಕಿಚ್ಚು ಇದೀಗ ಇಡೀ ಉತ್ತರ ಕರ್ನಾಟಕಕ್ಕೆ ವ್ಯಾಪಿಸಿದ್ದು ಧಗಧಗಿಸ್ತಿದೆ.
ಬೆಳಗಾವಿ, ಚಿಕ್ಕೋಡಿ, ವಿಜಯಪುರದಲ್ಲಿ ಅಹೋರಾತ್ರಿ ಧರಣಿ ಶುರುವಾಗಿದೆ. ರಾಷ್ಟ್ರೀಯ ಹೆದ್ದಾರಿಗಳನ್ನ ಬಂದ್‌ ಮಾಡಿ ರೈತರು ಕಿಚ್ಚು ಹೊರಹಾಕ್ತಿದ್ದಾರೆ. ಇನ್ನು ರೈತರ ಹೋರಾಟಕ್ಕೆ ಪ್ರತಿಪಕ್ಷ ಬಿಜೆಪಿಯೂ ಸಾಥ್‌ ನೀಡಿದ್ದು, ಕರವೇ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು ಇಡೀ ಉತ್ತರ ಕರ್ನಾಟಕವೇ ಕಬ್ಬು ಬೆಳೆಗಾರರ ಕಿಚ್ಚಿಗೆ ಧಗಧಗಿಸ್ತಿದೆ... ಈ ಹೋರಾಟದಲ್ಲಿ ಮೇಲ್ನೋಟಕ್ಕೆ 3500 ರೂಪಾಯಿ ಬೆಂಬಲ ಬೆಲೆಯ ಡಿಮ್ಯಾಂಡ್‌ ಮಾತ್ರ ಕಾಣಿಸ್ತಿದೆ. ಆದ್ರೆ, ಅದರ ಹಿಂದೆ ರೈತರ ನೋವಿನ ಒಳಕಥೆ ಇದೆ. ಅದೇನು ಅನ್ನೋದನ್ನ ಹೇಳೋದಕ್ಕೂ ಮುನ್ನ ಪ್ರತಿಭಟನಾ ನಿರತ ರೈತರು ಏನ್‌ ಹೇಳ್ತಿದ್ದಾರೆ? ಸರ್ಕಾರ ಅಲರ್ಟ್‌ ಆಗಿದ್ದೇಕೆ? ಅನ್ನೋದನ್ನ ಹೇಳಿ ಬಿಡ್ತೀವಿ. 

Advertisment


ಕಾಡ್ಗಿಚ್ಚಿನಂತೆ ಹೊತ್ತಿ ಉರಿದ ರೈತರ ಕಿಚ್ಚು..ಉತ್ತರ  ಧಗಧಗ!
ಮಹಾರಾಷ್ಟ್ರದಂತೆ ಟನ್‌ಗೆ ₹3500 ಕೊಡಿ, ರೈತರ ಡಿಮ್ಯಾಂಡ್‌! 
ಸಾಮಾನ್ಯವಾಗಿ ಚಳಿಗಾಲದ ಅಧಿವೇಶನ ಬಂತು ಅಂದ್ರೆ ಬೆಳಗಾವಿ ಭಾಗದಲ್ಲಿ ಕಬ್ಬು ಬೆಳೆಗಾರರ ಹೋರಾಟ ಶುರುವಾಗುತ್ತೆ. ಹಾಗೇ ಅಧಿವೇಶನದ ಟೈಮ್‌ಗೆ ಅದು ತಾರಕಕ್ಕೇರುತ್ತೆ. ಕಾರಣ, ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯೋದ್ರಿಂದ ಸರ್ಕಾರದ ಗಮನ ಸೆಳೆಯೋದಕ್ಕೆ ಸಾಧ್ಯವಾಗುತ್ತೆ. ಹಾಗೇ ರೈತರಿಗೆ ನ್ಯಾಯ ಕೊಡಿಸಲು ಸಾಧ್ಯ ಅನ್ನೋ ಲೆಕ್ಕಾಚಾರ ರೈತ ಸಂಘಟನೆಗಳಿಗೆ ಇರಬಹುದು. ಹಾಗೇ ಇತ್ತೀಚಿನ ದಿನಗಳಲ್ಲಿ ಬೆಳಗಾವಿಯ ವಿವಿಧ ಕಾರ್ಖಾನೆಗಳ ಮುಂದೆ ರೈತರು ಪ್ರತಿಭಟನೆ ನಡೆಸ್ತಾ ಇದ್ರು. ಆಮೇಲೆ 7 ದಿನದ ಹಿಂದೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರ ಅಹೋರಾತ್ರಿ ಧರಣಿ ಶುರುವಾಗಿತ್ತು. ಇದೀಗ ಅದು ವಿವಿಧ ಜಿಲ್ಲೆಗಳಿಗೂ ವ್ಯಾಪಿಸಿದ್ದು ಇಡೀ ಉತ್ತರ ಕರ್ನಾಟಕಕ್ಕೆ ವ್ಯಾಪಿಸಿದೆ. 

ಕಷ್ಟಪಟ್ಟು ಶ್ರಮಿಸುವ ರೈತರಿಗೆ ಸೂಕ್ತ ಬೆಂಬಲ ಬೆಲೆ ಸಿಗ್ತಿಲ್ಲ!
ಸಭೆಯಲ್ಲಿ ₹2,900 ನಿಗದಿಗೆ ಒಪ್ಪಿದ ಕಾರ್ಖಾನೆ ಮಾಲೀಕರು!
3,500 ರೂಪಾಯಿ ನೀಡುವಂತೆ ಪಟ್ಟು ಹಿಡಿದ ಬೆಳೆಗಾರರು!
ಕಟಾವು, ಸಾಗಣೆ ವೆಚ್ಚದ ಹೊರತಾಗಿ ₹3,500 ನೀಡಲು ಪಟ್ಟು!
ಪಕ್ಕದ ರಾಜ್ಯಗಳಿಗೆ ಹೋಲಿಸಿದ್ರೆ ಟನ್​ಗೆ ₹300-400 ಕಡಿಮೆ!
ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಬೆಲೆ!
ರಾಜ್ಯದಲ್ಲಿ ಕಷ್ಟಪಟ್ಟು, ವರ್ಷವಿಡೀ ಶ್ರಮಿಸಿ ಕಬ್ಬನ್ನ ಬೆಳೆಯುತ್ತಿರೋ ರೈತರಿಗೆ ಸೂಕ್ತ ಬೆಂಬಲ ಬೆಲೆ ಸಿಗ್ತಾ ಇಲ್ಲ ಅನ್ನೋ ಸಿಟ್ಟು ಕೋಪ ರೈತರಲ್ಲಿದೆ. ಹೀಗಾಗಿ ಸಂಧಾನಸಭೆಯಲ್ಲಿ ಕಾರ್ಖಾನೆಯ ಮಾಲೀಕರು ಪ್ರತಿ ಟನ್‌ಗೆ 2900 ರೂಪಾಯಿ ನೀಡೋದಕ್ಕೆ ಒಪ್ಪಿಕೊಂಡಿದ್ರು. ಆದ್ರೆ, ಬೆಳೆಗಾರರು 3,500 ರೂಪಾಯಿ ನೀಡುವಂತೆ ಬಿಗಿ ಪಟ್ಟು ಹಾಕಿದ್ರು. ಕಟಾವು, ಸಾಗಣೆ ವೆಚ್ಚದ ಹೊರತಾಗಿ ₹3,500 ನೀಡಲು ಪಟ್ಟು ಹಾಕಿದ್ರು, ಅದ್ಕೆ ಮಾಲಿಕರು ಒಪ್ಪಿಕೊಂಡಿಲ್ಲ. ರೈತರ ವಾದ ಏನು ಅಂದ್ರೆ, ಪಕ್ಕದ ರಾಜ್ಯಗಳಿಗೆ ಹೋಲಿಸಿದ್ರೆ ಟನ್​ಗೆ ₹300-400 ಕಡಿಮೆಯಾಗುತ್ತೆ. ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಬೆಲೆ ನೀಡಲಾಗುತ್ತಿದೆ. ತಮ್ಗೂ ಅದೇ ಬೆಲೆ ನೀಡಬೇಕು ಅನ್ನೋದು ರೈತರ ಡಿಮ್ಯಾಂಡ್‌.
ಮಹಾರಾಷ್ಟ್ರದಲ್ಲಿ ಟನ್‌ಗೆ 3500 ರೂಪಾಯಿ ಕೊಡ್ತಾರೆ ಅಂತಾದ್ರೆ ನಮ್ಮ ರಾಜ್ಯದಲ್ಲಿ ಯಾಕೆ ಸಾಧ್ಯವಾಗಲ್ಲ? ಅನ್ನೋ ಪ್ರಶ್ನೆ ರೈತರದ್ದು. ಆದ್ರೆ, ಇದನ್ನ ರಾಜಕಾರಣಿಗಳ ಬಳಿ ಕೇಳಿದ್ರೆ ಬಿಜೆಪಿಯವರು ರಾಜ್ಯ ಸರ್ಕಾರದತ್ತ ಬೆಟ್ಟು ಮಾಡ್ತಾರೆ, ಕಾಂಗ್ರೆಸ್‌ನವರು ಕೇಂದ್ರ ಸರ್ಕಾರದತ್ತ ಬೆಟ್ಟು ಮಾಡ್ತಾರೆ.

HK_PATIL



ರೈತರಿಗೆ ನ್ಯಾಯಬೇಕು V/S ಬೆಲೆ ನಿಗದಿ ಕೇಂದ್ರದ್ದು
ಹೋರಾಟಕ್ಕೆ ವಿಜಯೇಂದ್ರ ಸಾಥ್‌, ಸಿದ್ದರಾಮಯ್ಯ ಅಲರ್ಟ್‌!
ಸಚಿವರು ಅಲರ್ಟ್ ಆಗಿರುವಂತೆ ಸಿದ್ದರಾಮಯ್ಯ ಹುಕುಂ!
ರೈತರ ಹೋರಾಟ, ಪ್ರತಿಭಟನೆಗಳು ಆರಂಭವಾಗುವುದು ಗೊತ್ತಾಗುತ್ತೆ. ಆದ್ರೆ, ಅಂತ್ಯ ಎಲ್ಲಾಗುತ್ತೆ? ಯಾವ ರೂಪದಲ್ಲಿ ಆಗುತ್ತೆ? ಅನ್ನೋದನ್ನ ಊಹಿಸೋದ್‌ ಕಷ್ಟ. ಏನಾದ್ರೂ ಅಪ್ಪಿ ತಪ್ಪಿ ಸಮಸ್ಯೆ ಆಯ್ತು ಅಂತಾದ್ರೆ ನೇರವಾಗಿ ಏಟು ಬೀಳೋದು ಸರ್ಕಾರದ ಬುಡಕ್ಕೆ. ಅದ್ರಲ್ಲಿಯೂ ರೈತರ ಹೋರಾಟಕ್ಕೆ ಪ್ರತಿಪಕ್ಷ ಸಾಥ್‌ ನೀಡ್ತು ಅಂತಾದ್ರೆ ಧಗಧಗಿಸೋದು ಪಕ್ಕಾ. ಇದೀಗ ರಾಜ್ಯದಲ್ಲಿ ನಡೀತಾ ಇರೋ ಕಬ್ಬು ಬೆಳೆಗಾರರ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಾಥ್‌ ನೀಡಿದ್ದಾರೆ. ರೈತರ ಜೊತೆ ಅಹೋರಾತ್ರಿ ಧರಣಿಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡ್ಸಿದ್ದಾರೆ.
ರೈತರ ಹೋರಾಟಕ್ಕೆ ವಿಜಯೇಂದ್ರ ಸಾಥ್‌ ನೀಡಿರೋ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಹುಕುಂ ಹೊರಡಿಸಿದ್ದಾರೆ. ಹೌದು, ಈಗಾಗಲೇ ಕೃಷಿ ಸಚಿವ ಚೆಲುವರಾಯಸ್ವಾಮಿ ಜೊತೆಗೆ ಸಿಎಂ ಚರ್ಚೆ ನಡೆಸಿದ್ದಾರೆ. ಸಕ್ಕರೆ ಮತ್ತು ಉಸ್ತುವಾರಿ ಸಚಿವರಿಗೂ ರೈತರ ಜೊತೆ ಮಾತುಕತೆ ನಡೆಸುವಂತೆ ಕಟ್ಟಾಜ್ಞೆ ಮಾಡಿದ್ದಾರೆ. ಸಿಎಂ ನಿರ್ದೇಶನದ ಮೇರೆಗೆ ಹೆಚ್.ಕೆ.ಪಾಟೀಲ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕಬ್ಬು ಬೆಳೆಗಾರರು ತಮ್ಗೆ ಬೆಂಬಲ ಬೆಲೆ ನೀಡಿ ಅಂತ ಡಿಮ್ಯಾಂಡ್‌ ಮಾಡ್ತಿದ್ರೆ ರಾಜ್ಯ ಸರ್ಕಾರ ಕೇಂದ್ರದತ್ತ ಬೆಟ್ಟು ಮಾಡ್ತಿದೆ. ಬಿಜೆಪಿಗರು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ಮಾಡ್ತಿದ್ದಾರೆ. ಅದೇನೇ ರಾಜಕೀಯ ಇರಲಿ. ಸಿಹಿ ಕಬ್ಬು ಬೆಳೆಯೋ ರೈತರ ಕಹಿ ಸತ್ಯ ಏನು ಅನ್ನೋದ್‌ ಗೊತ್ತಾದ್ರೆ, ರೈತರ ಕಿಚ್ಚಿನ ಇಂದಿರೋ ನೋವು ಏನು? ಸಂಕಟ ಎಂಥಾದ್ದು? ಅನ್ನೋ ಆಳ ಅಗಲ ತೆರೆದುಕೊಳ್ಳುತ್ತೆ.

ಬೆಳಗಾವಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕಬ್ಬು ಬೆಳೆ!
ಕಬ್ಬು ವಾರ್ಷಿಕ ಮತ್ತು ವಾಣಿಜ್ಯ ಬೆಳೆ. ವರ್ಷಕ್ಕೊಮ್ಮೆ ನಿಚ್ಚಳವಾಗಿ ದೊಡ್ಡ ಆದಾಯ ತಂದುಕೊಡುತ್ತದೆ.‌ ಹಾಗಾಗಿ, ನೀರಾವರಿ ಸೌಲಭ್ಯ ಹೊಂದಿರುವ ರೈತರು ಆದಾಯ ಮೂಲದ ಖಾತ್ರಿಗಾಗಿ ಹೆಚ್ಚಾಗಿ ಕಬ್ಬು ಬೆಳೆಯಲು ಮುಂದಾಗ್ತಾರೆ. ಅದರಲ್ಲೂ ಬೆಳಗಾವಿ ಜಿಲ್ಲೆ ಕಬ್ಬು ಬೆಳೆಯಲ್ಲಿ ರಾಜ್ಯಕ್ಕೆ ನಂಬರ್‌ ಓನ್‌.
ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಪ್ರಮುಖ ಬೆಳೆ. ಇಲ್ಲಿ ಸುಮಾರು 2.90 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಕಬ್ಬನ್ನ ಬೆಳೆಯುತ್ತಿದ್ದಾರೆ. ನಾವು ಕಳೆದ ವರ್ಷದ ಲೆಕ್ಕಾಚಾರ ಹೇಳ್ಬೇಕು ಅಂದ್ರೆ, ಜಿಲ್ಲೆಯಲ್ಲಿರೋ 29 ಕಾರ್ಖಾನೆಗಳು ಸುಮಾರು 1 ಕೋಟಿ 7.91 ಲಕ್ಷ ಟನ್‌ ಕಬ್ಬನ್ನ ನುರಿಸಿವೆ. ಅದರಿಂದ ಸುಮಾರು 8 ಲಕ್ಷ 77,357 ಟನ್‌ ಸಕ್ಕರೆಯನ್ನ ಬೆಳಗಾವಿ ಜಿಲ್ಲೆಯಲ್ಲಿ ಉತ್ಪಾದನೆ ಮಾಡಲಾಗಿದೆ ಅನ್ನೋದನ್ನ ಅಂಕಿ ಅಂಶ ಹೇಳುತ್ತೆ. ಇನ್ನು ಬೆಂಬಲ ಬೆಲೆ ಹೇಗೆ ನಿಗದಿಯಾಗುತ್ತೆ ಅಂದ್ರೆ, ಪ್ರತಿವರ್ಷ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಆಯಾ ರಾಜ್ಯ ಸರ್ಕಾರಗಳಿಗೆ ಆದೇಶ ಹೊರಡಿಸಲಾಗುತ್ತೆ. ಕನಿಷ್ಠ ಶೇ.10.25 ಇಳುವರಿಗೆ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 3,550 ರೂ. ನಿಗದಿ ಪಡಿಸುತ್ತದೆ. ಶೇ.10.25 ಮೇಲ್ಪಟ್ಟು ಶೇ.1ರಷ್ಟು ಇಳುವರಿಗೆ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 346 ರೂ. ಬೆಲೆ ನಿಗದಿ ಪಡಿಸಲಾಗಿದೆ. ಇದರಿಂದ ಟನ್ ಕಬ್ಬಿಗೆ 3896 ರೂ. ಆಗುತ್ತದೆ. ಅದೇ ರೀತಿ ಶೇ.10.25ಕ್ಕಿಂತ ಕಡಿಮೆ ಹಾಗೂ ಶೇ.9.50ರೊಳಗೆ ಇಳುವರಿ ಬಂದರೆ 346 ರೂ. ಕಡಿತವಾಗಿ, ಟನ್​ಗೆ 3204 ರೂ. ದರ ಸಿಗುತ್ತದೆ. ಇದರಲ್ಲಿ ಸಾಗಾಣಿಕೆ ಮತ್ತು ಕಟಾವು ವೆಚ್ಚ 750 ರೂಪಾಯಿಯೂ ಸೇರಿರುತ್ತದೆ. ಇದರಿಂದ 2454 ರೂ. ರೈತರ ಕೈ ಸೇರುತ್ತದೆ.
ಈ ಬಾರಿ ನಡೆದ ಸಂಧಾನ ಸಭೆಯಲ್ಲಿ ಕಾರ್ಖಾನೆ ಮಾಲಿಕರು 2900 ರೂಪಾಯಿ ನೀಡುವುದಕ್ಕೆ ಒಪ್ಪಿ ಕೊಂಡಿದ್ದಾರೆ. ಆದ್ರೆ, ರೈತರಿಗೆ ಅದು ನ್ಯಾಯದ ಬೆಲೆ ಅಲ್ಲ. ಅನ್ನದಾತನಿಗೆ ಲಾಭ ಬೇಕು ಅಂತಾದ್ರೆ ಪ್ರತಿ ಟನ್‌ಗೆ ಕನಿಷ್ಠ 3500 ರೂಪಾಯಿ ಬೆಂಬಲ ಬೆಲೆ ಅಗತ್ಯವಿದೆ. 

Advertisment

ಕಬ್ಬು ವಾರ್ಷಿಕ ಮತ್ತು ವಾಣಿಜ್ಯ ಬೆಳೆ. ಆದ್ರೆ, ಅದರಲ್ಲಿ ರೈತರು ಲಾಭ ಕಾಣೋದಕ್ಕಿಂತ ನಷ್ಟ ಅನುಭವಿಸೋದೇ ಜಾಸ್ತಿ. ಅದೆಲ್ಲವನ್ನು ಸಹಿಸಿಕೊಂಡಿದ್ದ ರೈತರ ತಾಳ್ಮೆಯ ಕಟ್ಟೆ ಒಡೆದಿದೆ. ರೈತರ ನೋವು  ಬೀದಿಗೆ ಬಂದಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

sugarcane farmers demand hike in support price
Advertisment
Advertisment
Advertisment