/newsfirstlive-kannada/media/media_files/2025/08/02/prajwal-revanna6-2025-08-02-15-53-47.jpg)
ಅತ್ಯಾಚಾರ ಕೇಸ್ ನಲ್ಲಿ ಅಪರಾಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಹೈಕೋರ್ಟ್ ಮೊರೆ ಹೋದ್ರೆ ಜೀವಾವಧಿ ಶಿಕ್ಷೆಯಿಂದ ರಿಲೀಫ್​ ಪಡೆಯಬಹುದೇ ವಿನಃ, ಜೈಲಿನಿಂದ ಸದ್ಯಕ್ಕಂತೂ ವಾಪಸ್​ ಬರೋದಕ್ಕಾಗಲ್ಲ. ಯಾಕಂದ್ರೆ, ಪ್ರಜ್ವಲ್​ ವಿರುದ್ಧ ಬಂದಿರೋ ತೀರ್ಪು ಬರೀ ಒಂದು ಪ್ರಕರಣದಲ್ಲಷ್ಟೇ. ಬಾಕಿ ಇರೋ ಇನ್ನೂ 3 ಪ್ರಕರಣಗಳಲ್ಲಿ ಪ್ರಜ್ವಲ್​ ಜೈಲುವಾಸ ಮುಂದುವರಿಸಲೇಬೇಕು..ಅಷ್ಟಕ್ಕೂ, ಉಳಿದ ಆ ಮೂರು ಪ್ರಕರಣಗಳು ಯಾವುವು ಅಂತ ನಾವು ವಿವರಿಸುತ್ತೇವೆ.
ಪ್ರಜ್ವಲ್​ ಕೇಸ್​ 02
ಸಿಐಡಿ ಪೊಲೀಸ್​ ಸ್ಟೇಷನ್​ನಲ್ಲಿ ದಾಖಲಾಗಿರೋ ಕೇಸ್
ಹಾಸನ ಮೂಲದ ಮಹಿಳೆ ನೀಡಿರುವ ದೂರು
ಅತ್ಯಾಚಾರ, ಬೆದರಿಕೆ, ಲೈಂಗಿಕ ಕಿರುಕುಳ, ಇತರೆ
13/09/2024ರಂದು ದಾಖಲಿಸಿರುವ ದೂರು
ಪ್ರಕರಣದಲ್ಲಿ 126 ಸಾಕ್ಷಿಗಳ ವಿಚಾರಣೆ ಆಗಿದೆ
1690 ಪುಟಗಳ ಚಾರ್ಟ್​ಶೀಟ್ ಸಲ್ಲಿಕೆಯಾಗಿದೆ
ಪ್ರಜ್ವಲ್​ ವಿರುದ್ಧ ಇರೋ 2ನೇ ಪ್ರಕರಣ ಸಿಐಡಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ..ಹಾಸನ ಮೂಲದ್ದೇ ಮಹಿಳೆ ನೀಡಿರೋ ದೂರು ಅದಾಗಿದ್ದು, ಅದೂ ಕೂಡ ತುಂಬಾನೇ ಗಂಭಿರ ಸ್ವರೂಪದ ಪ್ರಕರಣವಾಗಿದೆ..ಅತ್ಯಾಚಾರ, ಬೆದರಿಕೆ, ಲೈಂಗಿಕ ಕಿರುಕುಳ ಸೇರಿ ಇತರೆ ಆರೋಪಗಳು ಪ್ರಜ್ವಲ್ ಮೇಲಿದೆ.13/09/2024ರಂದು ದಾಖಲಿಸಿರುವ ದೂರು ಇದಾಗಿದ್ದು, ಇಲ್ಲಿವರೆಗೂ ಪ್ರಕರಣದಲ್ಲಿ ಪ್ರಕರಣದಲ್ಲಿ 126 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ..ಸಿಐಡಿಯ ಎಸ್​ಐಟಿ ತಂಡ ಈ ಕೇಸಲ್ಲಿ ಈಗಾಗಲೇ 1690 ಪುಟಗಳ ಚಾರ್ಟ್​ಶೀಟ್ ಸಲ್ಲಿಸಿದೆ.
ಪ್ರಜ್ವಲ್​ ಕೇಸ್​ 03
ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ
3ನೇ ಸಂತ್ರಸ್ತೆ ನೀಡಿರುವ ದೂರಿನ ಮೇಲೆ FIR
ಲೈಂಗಿಕ ಕಿರುಕುಳ, ದೌರ್ಜನ್ಯ, ಕೊಲೆ ಬೆದರಿಕೆ
ತನಿಖೆ ಮುಗಿಸಿ 681 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ
74 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ
ಇನ್ನು, ಪ್ರಜ್ವಲ್​ ವಿರುದ್ಧದ ಮೂರನೇ ಪ್ರಕರಣ ನೋಡೋದಾದ್ರೆ, ಅದು ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರೋ ದೂರು..3ನೇ ಸಂತ್ರಸ್ತೆ ನೀಡಿರುವ ದೂರಿನ ಮೇಲೆ ಎಫ್​ಐಆರ್ ದಾಖಲಿಸಲಾಗಿದ್ದು, ಅದ್ರಲ್ಲೂ ಲೈಂಗಿಕ ಕಿರುಕುಳ, ದೌರ್ಜನ್ಯ, ಕೊಲೆ ಬೆದರಿಕೆಯಂತಹ ಘೋರ ಆರೋಪಗಳಿವೆ. ಆ ಪ್ರಕರಣದಲ್ಲಿ ತನಿಖೆ ಮುಗಿಸಿ 681 ಪುಟಗಳ ಚಾರ್ಜ್​ಶೀಟ್​​ನ ಸಿಐಡಿಯ ಎಸ್​ಐಟಿ ತಂಡ ಈಗಾಗಲೇ​ ಸಲ್ಲಿಕೆ ಮಾಡಿದೆ. 74 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಪ್ರಜ್ವಲ್​ ಕೇಸ್​ 04
ಹೊಳೆ ನರಸೀಪುರ ಟೌನ್ ಠಾಣೆಯಲ್ಲಿ ದೂರು ದಾಖಲು
2ನೇ ಸಂತ್ರಸ್ತೆಯಿಂದ ಪ್ರಜ್ವಲ್​, ರೇವಣ್ಣ ಇಬ್ಬರ ವಿರುದ್ಧ ದೂರು
ಲೈಂಗಿಕ ಕಿರುಕುಳ, ಅತ್ಯಾಚಾರ, ಬೆದರಿಕೆಗಳ ಆರೋಪ
2360 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ
ತನಿಖೆ ಮುಗಿದಿದ್ದು ವಿಚಾರಣೆಗೆ ನ್ಯಾಯಾಲಯಕ್ಕೆ ಮನವಿ
ನಾಲ್ಕನೇ ಪ್ರಕರಣ ನೋಡೋದಾದ್ರೆ, ಹೊಳೆ ನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಇದು. 2ನೇ ಸಂತ್ರಸ್ತೆಯಿಂದ ಪ್ರಜ್ವಲ್​ ಹಾಗೂ ತಂದೆ ರೇವಣ್ಣ ಇಬ್ಬರ ವಿರುದ್ಧವೂ ದೂರು ದಾಖಲಾಗಿತ್ತು.ಲೈಂಗಿಕ ಕಿರುಕುಳ, ಅತ್ಯಾಚಾರ, ಬೆದರಿಕೆಗಳ ಆರೋಪವೂ ಆ ದೂರಿನಲ್ಲಿದ್ದು, ಆ ಕೇಸಲ್ಲೂ ಬರೋಬ್ಬರಿ 2360 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. ತನಿಖೆ ಸಂಪೂರ್ಣ ಮುಗಿದಿದ್ದು ವಿಚಾರಣೆಗೆ ನ್ಯಾಯಾಲಯಕ್ಕೆ ಸಿಐಡಿ ಎಸ್​ಐಟಿ ಮನವಿ ಮಾಡಿದೆ.
ಪ್ರಜ್ವಲ್​ ವಿರುದ್ಧ ಉಳಿದ ಅತ್ಯಾಚಾರ ಪ್ರಕರಣಗಳ ಸ್ಟೇಟಸ್​ ಹೀಗಿದೆ..ಈಗ ಹೈಕೋರ್ಟ್​ ಮೊರೆ ಹೋದ್ರೂ ಕೂಡ ಪ್ರಜ್ವಲ್​ ಜೀವಾವಧಿ ಶಿಕ್ಷೆಗೆ ತಡೆಯಾಜ್ಞೆ ತರೋದಕ್ಕೆ ಹೋಗ್ಬೇಕೇ ವಿನಃ, ಬೇಲ್​​ಗಾಗಿ ಮನವಿ ಮಾಡೋದು ಸದ್ಯಕ್ಕಂತೂ ಕನಸಿನ ಮಾತೇ ಸರಿ ಅನ್ನೋದು ಕಾನೂನು ಪಂಡಿತರದ್ದೇ ಅಭಿಪ್ರಾಯ.
ಪ್ರಜ್ವಲ್​ ರೇವಣ್ಣ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು ಬರೀ ಅವರ ಕುಟುಂಬ ಹಾಗೂ ಪಕ್ಷ ಅಷ್ಟೇ ಅಲ್ಲ..ಜೆಡಿಎಸ್​ನ ದೋಸ್ತಿ ಪಕ್ಷ ಬಿಜೆಪಿಗೂ ಸಾಕಷ್ಟು ಮುಜುಗರ ತಂದ್ರೆ ಕಾಂಗ್ರೆಸ್ ಪಾಲಿಗೆ ಸಿಕ್ಕಿರೋ ಬ್ರಹ್ಮಾಸ್ತ್ರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ