/newsfirstlive-kannada/media/media_files/2025/09/21/tmk_mother-2025-09-21-18-12-51.jpg)
ತುಮಕೂರು: ಇಬ್ಬರು ಮಕ್ಕಳ ಜೀವ ತೆಗೆದು ತಾಯಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪಾವಗಡ ತಾಲೂಕಿನ ಕಡಪಲಕೆರೆ ಗ್ರಾಮದ ಸರಿತಾ ನೇಣು ಬಿಗಿದು ಪ್ರಾಣ ಬಿಟ್ಟಿದ್ದರು. ಈ ಸಂಬಂಧ ಆಕೆಯ ಗಂಡ ಸತೋಷ್, ಅಂಜಿನಮ್ಮ ಹಾಗೂ ಸಂತೋಷ್ ಅಜ್ಜಿ ಹನುಮಕ್ಕನನ್ನ ಪಾವಗಡದ ಪೊಲೀಸರು ಬಂಧಿಸಿದ್ದಾರೆ. ಮೃತ ಸರಿತಾಗೆ ಇವರೆಲ್ಲ ಸೇರಿ ಕಿರುಕುಳ ಕೊಡುತ್ತಿದ್ದರು. ಇದರಿಂದ ಮನನೊಂದು ಮಹಿಳೆ ಸಾವಿಗೆ ಶರಣಾಗಿದ್ದಾಳೆ ಎನ್ನುವ ಆರೋಪ ಇದೆ. ಹೀಗಾಗಿಯೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಕೂಡಲಸಂಗಮ ಪಂಚಮಸಾಲಿ ಪೀಠ; ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆ
ಮಹಿಳೆ ತನ್ನ ಎರಡು ಮಕ್ಕಳ ಜೊತೆ ಸೇರಿ ನಿನ್ನೆ ತಾನು ಕೂಡ ಜೀವ ಬಿಟ್ಟಿದ್ದಳು. ಕಡಪಲಕೆರೆ ಗ್ರಾಮದ ಸರಿತಾಳನ್ನ ಅದೇ ಗ್ರಾಮದ ಸಂತೋಷ್ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಳೆದ 6 ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು. ಆಟೋ ಚಾಲಕನಾಗಿದ್ದ ಸಂತೋಷ್, ಮದುವೆ ಆದಗಿಂದಲೂ ತನ್ನ ತಾಯಿ ಹಾಗೂ ಅಜ್ಜಿ ಜೊತೆ ಸೇರಿ ಕಿರುಕುಳ ಕೊಡುತ್ತಿದ್ದನು. ಹೀಗಾಗಿಯೇ ಮನನೊಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಸರಿತಾ ಜೀವ ಬಿಟ್ಟಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ