/newsfirstlive-kannada/media/media_files/2026/01/17/ex-minister-raju-gowda-car-accident-2026-01-17-16-56-44.jpg)
ಮಾಜಿ ಸಚಿವ ರಾಜು ಗೌಡ ಕಾರ್ ಅಪಘಾತ
ಮಾಜಿ ಸಚಿವ ರಾಜುಗೌಡ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ರಾಜುಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಸಿಎಲ್ ಪಂದ್ಯ ಮುಗಿಸಿ ಬರುವಾಗ ಕಾರು ಅಪಘಾತಕ್ಕೀಡಾಗಿದೆ.
ಯಾದಗಿರಿ ನಗರದ ಗಂಜ್ ಪ್ರದೇಶದ ಬಳಿ ಅಪಘಾತವಾಗಿದೆ. ಆಂಧ್ರದ ವಿಶಾಖಪಟ್ಟಣದಿಂದ ಸಿಸಿಎಲ್ ಪಂದ್ಯ ಮುಗಿಸಿ ವಾಪಸ್ ಆಗ್ತಿದ್ದ ಮಾಜಿ ಸಚಿವ ರಾಜೂಗೌಡ ಕಾರಿಗೆ ಟ್ರಕ್ ಹಿಂಬದಿಯಿಂದ ಗುದ್ದಿದೆ. ಪರಿಣಾಮವಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಾಜುಗೌಡರಿಗೆ ತರುಚಿದ ಗಾಯಗಳಾಗಿವೆ. ಯಾದಗಿರಿ ನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾಜುಗೌಡ ಅವರು ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಮಾಜಿ ಶಾಸಕರು. 2023ರ ಅಸೆಂಬ್ಲಿ ಚುನಾವಣೆ ಹಾಗೂ 2024 ರಲ್ಲಿ ನಡೆದ ಸುರಪುರ ಅಸೆಂಬ್ಲಿ ಉಪಚುನಾವಣೆಯಲ್ಲಿ ರಾಜುಗೌಡ ಸೋತಿದ್ದಾರೆ.
ಕಾರು ಅಪಘಾತದ ಬಳಿಕ ಮಾಜಿ ಸಚಿವ ರಾಜುಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ರಾಜುಗೌಡ ಧೈರ್ಯ ತುಂಬಿದ್ದಾರೆ. ಅಭಿಮಾನಿಗಳು, ಕಾರ್ಯಕರ್ತರ ಆಶೀರ್ವಾದದಿಂದ ನನಗೆ ಏನೂ ಆಗಿಲ್ಲ. ಕೊಡೆಕಲ್ ಬಸವಣ್ಣಪ್ಪನ ಆಶೀರ್ವಾದ, ಕಾರ್ಯಕರ್ತರ ಆಶೀರ್ವಾದ ಇರುವವರೆಗೂ ಏನೂ ಆಗಲ್ಲ. ಎಳ್ಳಷ್ಟು ನನಗೆ ಗಾಯವಾಗಿಲ್ಲ. ಕಾರು ಪೋಟೋ ನೋಡಿ ಸಾಕಷ್ಟು ಜನರು ಆತಂಕಕ್ಕೊಳಗಾಗಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಆಶೀರ್ವಾದದಿಂದ ನನಗೆ ಏನೂ ಆಗಿಲ್ಲ ಎಂದು ರಾಜುಗೌಡ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us