/newsfirstlive-kannada/media/media_files/2026/02/26/mallikarjuna-mutya-2026-02-26-14-05-17.jpg)
ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ತೋರಿದ ಕೇಸ್ ನಲ್ಲಿ ಮಲ್ಲಿಕಾರ್ಜುನ ಮುತ್ಯಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರವಾಗಿದೆ. ಯಾದಗಿರಿ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ಇದರಿಂದ ಮಲ್ಲಿಕಾರ್ಜುನ ಮುತ್ಯಾ ಮತ್ತು ಭಕ್ತರಿಗೆ ತೀವ್ರ ಶಾಕ್ ಆಗಿದೆ. ಮಲ್ಲಿಕಾರ್ಜುನ ಮುತ್ಯಾಗೆ ಜಾಮೀನು ನೀಡದಂತೆ ಸರ್ಕಾರಿ ವಕೀಲರಿಂದ ಪ್ರಬಲ ವಾದ ಮಂಡನೆ ನಡೆದಿತ್ತು. ಮುತ್ಯಾನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಯಾದಗಿರಿ ಜಿಲ್ಲೆಯ ಗೋಗಿ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ನಿರೀಕ್ಷಣಾ ಜಾಮೀನು ಸಿಗುವ ವಿಶ್ವಾಸದಲ್ಲಿ ಇದ್ದ ಮುತ್ಯಾಗೆ ಭಾರಿ ಆಘಾತ ಎದುರಾಗಿದೆ.
ಪೊಲೀಸ್ ವಿಚಾರಣೆ ವೇಳೆ ಮುತ್ಯಾನ ಮೊಬೈಲ್ ಅನ್ನು ತನಿಖಾಧಿಕಾರಿ ಶರಣಗೌಡ ನಾಮನವರ್ ಅವರು ಜಫ್ತಿ ಮಾಡಿದ್ದಾರೆ. ಪೊಲೀಸರು ಈಗಲಾದರೂ ಮುತ್ಯಾನ ಬಂಧಿಸುತ್ತಾರೋ ಇಲ್ಲವೋ ಎಂಬುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಕೋರ್ಟ್ ನ ಇಂದಿನ ಆದೇಶವು ಮಲ್ಲಿಕಾರ್ಜುನ ಮುತ್ಯಾ ಹಾಗೂ ಭಕ್ತರಿಗೆ ಭಾರಿ ಅಘಾತ ತಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us