newsfirstkannada.com

ಅಮೆರಿಕಾಗೆ ಹೋಗಲು ವೀಸಾ ನೀಡದಿದ್ದಕ್ಕೆ ಕೋಪಗೊಂಡ ಭಾರತೀಯ ಮಾಡಿದ್ದೇನು ಗೊತ್ತಾ?

Share :

Published May 28, 2024 at 6:10am

    ಅಮೆರಿಕದ ಎತ್ತರದ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಈಗ ಪಂಜಾಬ್​ನಲ್ಲಿ!

    ಇನ್ಮುಂದೆ ಅಮೆರಿಕಾಗೆ ಹೋಗುವ ಅವಶ್ಯಕತೆ ಇಲ್ಲ ಎಂದ ನೆಟ್ಟಿಗರು

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಸ್ಟ್ಯಾಚ್ಯೂ ವಿಡಿಯೋ

ಅಮೆರಿಕದ ಎತ್ತರದ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಯಾರಿಗೆ ತಾನೇ ಗೊತ್ತಿಲ್ಲ. ನ್ಯೂಯಾರ್ಕ್‌ನ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ ಈ ಸ್ಟ್ಯಾಚ್ಯೂ ಆಫ್ ಲಿಬರ್ಟಿ. ಇದನ್ನು ನೋಡಲು ವಿಶ್ವದ ಮೂಲೆ ಮೂಲೆಯಿಂದ ಜನರು ಬರುತ್ತಾರೆ. ಆದರೆ ಅಮೆರಿಕದ ಎತ್ತರದ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಈಗ ಭಾರತದಲ್ಲಿ ನಿರ್ಮಾಣವಾಗಿದೆ ಎಂದರೆ ನಂಬಲು ಸಾಧ್ಯವೆ.

ಇದನ್ನೂ ಓದಿ: ಭೀಕರ ಅಪಘಾತ: 24 ಗಂಟೆಯಲ್ಲಿ ರಾಜ್ಯದ 51 ಮಂದಿ ದಾರುಣ ಸಾವು; ಬೆಚ್ಚಿ ಬೀಳಿಸಿದ ವರದಿ

ಹೌದು, ಸ್ಟ್ಯಾಚ್ಯೂ ಆಫ್ ಲಿಬರ್ಟಿಯನ್ನು ಪಂಜಾಬ್‌ನ ಟಾರ್ನ್ ತರನ್ ನಿವಾಸಿಗಳು ಭಾರತದಲ್ಲೇ ಮರುಕಳಿಸಿದ್ದಾರೆ. ಆದರೆ ಈ ನಿರ್ಮಾಣಕ್ಕೂ ಒಂದು ಮುಖ್ಯ ಕಾರಣ ಕೂಡ ಇದೆ. ಪಂಜಾಬ್‌ನ ವ್ಯಕ್ತಿಯೊಬ್ಬರಿಗೆ ಅಮೆರಿಕಾದ ಪೌರತ್ವ ಸಿಗದ್ದಕ್ಕೆ ಆಕ್ರೋಶಗೊಂಡು ಹೀಗೆ ತಮ್ಮ ಮನೆಯ ಮೇಲ್ಬಾಗದಲ್ಲೇ ಸ್ಟ್ಯಾಚ್ಯೂ ಆಫ್ ಲಿಬರ್ಟಿ ನಿರ್ಮಾಣ ಮಾಡಿದ್ದಾರೆ. ಕ್ರೇನ್​​ನ ಮೂಲಕ ಎತ್ತರದ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಸ್ಥಾಪಿಸುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಭಾರತದಿಂದ ಸಾಕಷ್ಟು ಜನರು ಉದ್ಯೋಗ, ಉತ್ತಮ ಜೀವನ ಕಟ್ಟಿಕೊಳ್ಳಲು ವಿದೇಶಕ್ಕೆ ವಲಸೆ ಹೋಗುವುದು ಸಾಮಾನ್ಯ. ಆದರೆ ಪಂಜಾಬ್‌ನ ಜನರು ಹೆಚ್ಚಾಗಿ ಕೆನಡಾಗೆ ವಲಸೆ ಹೋಗುತ್ತಾರೆ. ಆದರೆ ವ್ಯಕ್ತಿಯೊಬ್ಬರಿಗೆ ಅಮೆರಿಕಾದ ಪೌರತ್ವ ನೀಡಲಿಲ್ಲ ಅಂತ ಸಿಟ್ಟಾಗಿ ಹೀಗೆ ತಮ್ಮ ಮನೆಯ ಮೇಲೆ ಸ್ಟ್ಯಾಚ್ಯೂ ಆಫ್ ಲಿಬರ್ಟಿ ನಿರ್ಮಾಣ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಫುಲ್​ ಶಾಕ್​ ಆಗಿದ್ದಾರೆ. ಇನ್ನು ಇದಕ್ಕೆ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಕಾಮೆಂಟ್​ ಮಾಡಿದ್ದಾರೆ. ಇನ್ಮುಂದೆ ಸ್ಟ್ಯಾಚ್ಯೂ ಆಫ್ ಲಿಬರ್ಟಿಯನ್ನು ನೋಡಲು ಅಮೆರಿಕಾಗೆ ಹೋಗುವ ಅವಶ್ಯಕತೆ ಇಲ್ಲ. ಸ್ಟ್ಯಾಚ್ಯೂ ನೋಡಲು ಪಂಜಾಬ್​ಗೆ ಹೋದರೆ ಸಾಕು ಅಂತ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕಾಗೆ ಹೋಗಲು ವೀಸಾ ನೀಡದಿದ್ದಕ್ಕೆ ಕೋಪಗೊಂಡ ಭಾರತೀಯ ಮಾಡಿದ್ದೇನು ಗೊತ್ತಾ?

https://newsfirstlive.com/wp-content/uploads/2024/05/us1.jpg

Load More