/newsfirstlive-kannada/media/post_attachments/wp-content/uploads/2024/08/glowing-skin.jpg)
ಪ್ರತಿಯೊಬ್ಬರೂ ತಾವು ಯಂಗ್​ ಮತ್ತು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಹೀಗಾಗಿ ಸಾಕಷ್ಟು ಕಸರತ್ತನ್ನು ನಡೆಸುತ್ತಾರೆ. ನಾನಾ ಬಗೆಯ ಕ್ರೀಮ್​ಗಳನ್ನು ಬಳಸಿ ತಮ್ಮ ಮುಖವನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ. ಇದಕ್ಕೆ ಮುಖ ಕಾರಣ ಕೂಡ ಇದೆ.
/newsfirstlive-kannada/media/post_attachments/wp-content/uploads/2024/08/glowing-skin2.jpg)
ಇದನ್ನೂ ಓದಿ:ನಿವೇದಿತಾ ಗೌಡ ಥರಾ ನಿಮ್ಮ ಕೂದಲು ಸದೃಢ ಆಗಬೇಕೆ..? ಮಿಸ್​ ಮಾಡದೇ ಈ ಟಿಪ್ಸ್ ಫಾಲೋ ಮಾಡಿ..
ಅತಿ ಸಣ್ಣ ವಯಸ್ಸಿನಲ್ಲಿ ವಯಸ್ಸಾದಂತೆ ಕಾಣುವುದು, ಕಣ್ಣಿನ ಸುತ್ತ ಕಪ್ಪು ವರ್ತುಲ, ಅಷ್ಟೇ ಏಕೆ ವಯಸ್ಸು ಹೆಚ್ಚಾದಂತೆ ಅದರ ಪರಿಣಾಮಗಳು ನಮ್ಮ ಮುಖದ ಮೇಲೆ ಗೋಚರಿಸುತ್ತವೆ. ಮುಖದ ಮೇಲೆ ಸುಕ್ಕುಗಳು, ಗೆರೆಗಳು ಮತ್ತು ಚರ್ಮವು ಕಪ್ಪಾಗುವುದು ಹೀಗೆ ಸಾಕಷ್ಟು ತೊಂದರೆಗಳು ಕಾಣಿಸುತ್ತವೆ. ಇದಕ್ಕೆ ಉತ್ತಮ ಪರಿಹಾರ ನಿಮ್ಮ ಕೈಯಲ್ಲಿದೆ. ನಿಮ್ಮ ಆಹಾರ ಕ್ರಮದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸುವುದರಿಂದ ನೀವು ದೀರ್ಘಕಾಲದವರೆಗೂ ಯಂಗ್​ ಆಗಿ ಇರಬಹುದಾಗಿದೆ.
/newsfirstlive-kannada/media/post_attachments/wp-content/uploads/2024/08/skin.jpg)
ಆರೋಗ್ಯವೇ ಭಾಗ್ಯ
ಆರೋಗ್ಯಕರ ಆಹಾರವು ನಿಮ್ಮನ್ನು ಯುವ ಮತ್ತು ದೀರ್ಘಕಾಲದವರೆಗೆ ಫಿಟ್ ಆಗಿ ಇರಿಸಬಹುದು. ನಿಮ್ಮ ಆಹಾರದಲ್ಲಿ ಹಣ್ಣುಗಳು, ಹಸಿರು ತರಕಾರಿಗಳು, ಒಣ ಹಣ್ಣುಗಳು, ಬೀಜಗಳು ಮತ್ತು ಡೈರಿ ಉತ್ಪನ್ನಗಳು ಇರಬೇಕು. ಅದರಲ್ಲೂ 30 ವರ್ಷದ ನಂತರ ಪ್ರತಿನಿತ್ಯ ಪೌಷ್ಟಿಕ ಆಹಾರ ಸೇವಿಸಬೇಕು. ನೀವು ಫೈಬರ್ ಸಮೃದ್ಧವಾಗಿರುವ ಪೌಷ್ಟಿಕ ಆಹಾರವನ್ನು ಸೇವಿಸಿದಾಗ, ನಿಮ್ಮ ಚರ್ಮವು ಒಳಗಿನಿಂದ ಆರೋಗ್ಯಕರವಾಗಿರುತ್ತದೆ ಮತ್ತು ವಯಸ್ಸಾದ ಚಿಹ್ನೆಗಳು ತ್ವರಿತವಾಗಿ ಕಂಡುಬರುವುದಿಲ್ಲ.
/newsfirstlive-kannada/media/post_attachments/wp-content/uploads/2024/05/HEALTH_2.jpg)
ದೈನಂದಿನ ವ್ಯಾಯಾಮ
ನೀವು ಫಿಟ್ ಆಗಿರಲು ಬಯಸಿದರೆ ಪ್ರತಿದಿನ ವ್ಯಾಯಾಮ ಮಾಡಿ. ಸಕ್ರಿಯ ಜೀವನಶೈಲಿಯೊಂದಿಗೆ, ನೀವು ದೀರ್ಘಕಾಲದವರೆಗೆ ಫಿಟ್ ಮತ್ತು ಯಂಗ್ ಆಗಿ ಕಾಣಬಹುದು. ನೀವು ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ಜಿಮ್‌ಗೆ ಹೋಗಬೇಕಂತ ಏನೂ ಇಲ್ಲ. ಮನೆಯಲ್ಲಿಯೂ ಕೂಡ ನೀವು ಕೆಲವು ಸಣ್ಣ ಪುಟ್ಟ ವ್ಯಾಯಾಮಗಳನ್ನು ಮಾಡಬಹುದು. ನಡಿಗೆ, ಯೋಗ ಮತ್ತು ಸೈಕ್ಲಿಂಗ್ ಮೂಲಕವೂ ನಿಮ್ಮನ್ನು ನೀವು ಫಿಟ್ ಆಗಿಟ್ಟುಕೊಳ್ಳಬಹುದು.
ಇದನ್ನೂ ಓದಿ:Almonds: ಬಾದಾಮ್ ಜಾಸ್ತಿ ತಿಂದ್ರು ಅಪಾಯ ಕಟ್ಟಿಟ್ಟ ಬುತ್ತಿ; ಒಂದು ದಿನಕ್ಕೆ ಎಷ್ಟು ತಿನ್ನಬೇಕು ಗೊತ್ತಾ?
/newsfirstlive-kannada/media/post_attachments/wp-content/uploads/2023/08/drinks.jpg)
ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ
ಮುಖ್ಯವಾಗಿ ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ತಪ್ಪಿಸಿ. ಆಲ್ಕೋಹಾಲ್, ತಂಬಾಕು ಮತ್ತು ಧೂಮಪಾನವು ನಿಮ್ಮ ವಯಸ್ಸನ್ನು ವೇಗವಾಗಿ ಹೆಚ್ಚಿಸುತ್ತದೆ. ಇದು ನಿಮ್ಮ ದೇಹಕ್ಕೆ ದೊಡ್ಡ ಹಾನಿ ಉಂಟುಮಾಡಬಹುದು. ಅತಿಯಾಗಿ ಕುಡಿಯುವವರಲ್ಲಿ, ವಯಸ್ಸಾದ ಚಿಹ್ನೆಗಳು ವೇಗವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಚಿಕ್ಕ ವಯಸ್ಸಿನಲ್ಲೇ ಅವರು ವಯಸ್ಸಾದವರಂತೆ ಕಾಣುತ್ತಾರೆ. ಇದು ತೂಕ ಸಂಬಂಧಿತ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಮತ್ತು ವಯಸ್ಸಾದ ವೇಗವನ್ನು ಹೆಚ್ಚಿಸುತ್ತದೆ.
/newsfirstlive-kannada/media/post_attachments/wp-content/uploads/2024/08/Pressure.jpg)
ಒತ್ತಡವೂ ಅಪಾಯಕಾರಿ
ಅತಿಯಾದ ಒತ್ತಡ ಮತ್ತು ಆತಂಕ ಕೂಡ ನಿಮಗೆ ಬೇಗ ವಯಸ್ಸಾಗುವಂತೆ ಮಾಡುತ್ತದೆ. ಯಾವುದೇ ಕೆಲಸ ಮಾಡಿದರೂ ಒತ್ತಡ ತೆಗೆದುಕೊಳ್ಳದೇ ಮಾಡಿದರೇ ಉತ್ತಮ. ಏಕೆಂದರೆ ಬತ್ತಡವು ನಿಮ್ಮನ್ನು ಬಹು ಬೇಗನೆ ಆಯಾಸಗೊಳ್ಳಿಸುತ್ತದೆ. ಇದರಿಂದ ನಿಮ್ಮಲ್ಲಿ ಉತ್ಸಾಹ ಇರುವುದಿಲ್ಲ. ಜೊತೆಗೆ ನಿಮ್ಮ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತವೆ. ಹೀಗಾಗಿ ಒತ್ತಡದಿಂದ ಆದಷ್ಟು ದೂರ ಇರಿ.
/newsfirstlive-kannada/media/post_attachments/wp-content/uploads/2024/07/sleep2-1.jpg)
ಸಾಕಷ್ಟು ನಿದ್ರೆ ಪಡೆಯಿರಿ
ನಿದ್ರೆಯು ಮನುಷ್ಯನ ಜೀವನದಲ್ಲಿ ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಚೆನ್ನಾಗಿ ನಿದ್ರೆ ಮಾಡುವವನಿಗೆ ಆರೋಗ್ಯದ ಸಮಸ್ಯೆಗಳೇ ಎದುರಾಗದು. ಏಕೆಂದರೆ ಒಬ್ಬ ವ್ಯಕ್ತಿಯು ಸರಿಯಾಗಿ ನಿದ್ದೆ ಮಾಡಿದರೆ ಮಾತ್ರ ಅವರು ಮರುದಿನ ಉತ್ಸಾಹದಿಂದ ಇರಲು ಸಾಧ್ಯವಾಗುತ್ತದೆ. ಅಷ್ಟೇ ಏಕೆ ಆರೋಗ್ಯಕರ ದೇಹ ಮತ್ತು ಚರ್ಮಕ್ಕಾಗಿ ನಿದ್ರೆ ಕೂಡ ಮುಖ್ಯವಾಗಿದೆ. ನೀವು ಸಾಕಷ್ಟು ನಿದ್ದೆ ಮಾಡಲು ಸಾಧ್ಯವಾಗದಿದ್ದರೆ, ನೀವು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತೀರಿ ಎಂದರ್ಥ. ನಿದ್ರೆಯ ಕೊರತೆಯು ಸಹ ಒತ್ತಡಕ್ಕೆ ಕಾರಣವಾಗಬಹುದು. ಉತ್ತಮ ನಿದ್ರೆ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ, ನಿದ್ರೆಯ ಕೊರತೆಯ ಜನರಲ್ಲಿ ಸಾಕಷ್ಟು ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ, ಅದರಿಂದ ದೂರವಿರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us