/newsfirstlive-kannada/media/post_attachments/wp-content/uploads/2025/02/HVR_BULL.jpg)
ಹಾವೇರಿ: ಬೆಳೆದ ಬೆಳೆಗಳಿಗೆ ಒಳ್ಳೆಯ ಬೆಲೆ ಸಿಗಲ್ಲ ಎಂದು ರೈತರು ನೊಂದುಕೊಳ್ಳುತ್ತಿದ್ದಾರೆ. ಒಂದು ವೇಳೆ ಮಳೆ ಸರಿಯಾಗಿಲ್ಲ ಎಂದರೆ ರೈತರಿಗೆ ಸಂಕಷ್ಟ. ಮನೆಯಲ್ಲಿರುವ ಯಾವುದಾದರೂ ಜಾನುವಾರ ಅನಾಹುತಕ್ಕೆ ಒಳಗಾದರೆ ಅದೂ ಕೂಡ ರೈತರಿಗೆ ದೊಡ್ಡ ಹೊರೆ ಆಗಿರುತ್ತದೆ. ಆದರೆ ಮನೆ ಮುಂದೆ ಕಟ್ಟಿದ ದನಕರುಗಳನ್ನು ಕಳ್ಳತನ ಮಾಡಿದರೆ ರೈತರು ಜೀವನ ಮಾಡೋದು ಹೇಗೆ?. ಇಂತಹ ಘಟನೆಯೊಂದು ಹಾವೇರಿಯಲ್ಲಿ ನಡೆದಿದೆ.
ರಾಣೇಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಗ್ರಾಮದ ರೈತ ಸಿದ್ದಪ್ಪ ನಿಂಗಪ್ಪ ಎರೆಸೀಮೆ ಎನ್ನುವರಿಗೆ ಸೇರಿದ ಎತ್ತನ್ನು ಮನೆಯ ಹೊರಗೆ ಕಟ್ಟಲಾಗಿತ್ತು. ಮಧ್ಯೆರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಕಟ್ಟಿದ್ದ ಎತ್ತನ್ನು ಬಿಚ್ಚಿದ್ದಾರೆ. ಬಳಿಕ ಅದನ್ನು ತಾವು ತಂದಿದ್ದ ಕಾರಿನಲ್ಲಿ ಹತ್ತಿಸಿಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಪಾಕ್ ವಿರುದ್ಧ ಫೀಲ್ಡಿಂಗ್, ಕನ್ನಡಿಗನ ತಲೆಯಿಂದ ಸುರಿದ ರಕ್ತ.. ರಚಿನ್ ರವೀಂದ್ರಗೆ ಅಸಲಿಗೆ ಏನಾಯಿತು?
ಕಳ್ಳತನ ಆಗಿರುವ ಎತ್ತು ಸುಮಾರು 1 ಲಕ್ಷ ರೂಪಾಯಿ ಮೌಲ್ಯದ್ದು ಆಗಿದೆ. ಕಳ್ಳರು ಎತ್ತನ್ನು ಕಾರಿನಲ್ಲಿ ಹಾಕಿಕೊಂಡು ಹೋಗುತ್ತಿರುವ ಎಲ್ಲ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಕಾರಿನಲ್ಲಿ ಒಂದು ಎತ್ತು ಅನ್ನು ಹಾಕಿಕೊಂಡು ಹೋಗಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಏಕೆಂದರೆ ಕಾರಿನಲ್ಲಿ ನಾಲ್ವರು ಪ್ರಯಾಣಿಕರು ಕೂರುವುದೇ ದೊಡ್ಡದು. ಆದರೆ ಒಂದು ಎತ್ತು ತುಂಬಿಕೊಂಡು ಹೋಗಿದ್ದಾರೆ ಎಂದರೆ ಸಾಮಾನ್ಯದ ಕೆಲಸ ಅಲ್ಲವೇ ಅಲ್ಲ. ಸದ್ಯ ಖದೀಮರ ಕೃತ್ಯದಿಂದ ಸುತ್ತಮುತ್ತಲಿನ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ