/newsfirstlive-kannada/media/post_attachments/wp-content/uploads/2024/08/Narsimha.jpg)
ಇವ್ನು ಅಂತಿಂಥ ಕಳ್ಳ ಅಲ್ಲ. ಕಳ್ಳರಲ್ಲೇ ಐನಾತಿ ಕಳ್ಳ, ಈ ಖತರ್ನಾಕ್​​​ ಕಳ್ಳ. ಕಳ್ಳತನದ ಮೇಲೆ ಕಳ್ಳತನ ಮಾಡ್ತಿದ್ದ. ಆದ್ರೆ ಪೊಲೀಸರ ಕೈಗೆ ಸಿಗ್ತಿರ್ಲಿಲ್ಲ. ಈ ಚೋರ ಲಾಕ್​ ಆಗಿದ್ದೇ ರೋಚಕವಾಗಿದ್ದು, ಇವನ ಚರಿತ್ರೆ ಕೇಳಿದ್ರೆ ನೀವೂ ಶಾಕ್​ ಆಗೋದು ಪಕ್ಕಾ.
ಹೆಸರು ನರಸಿಂಹ ರೆಡ್ಡಿ. ಇವನೆಂಥಾ ಐನಾತಿ ಅಂದ್ರೆ ಇವನನ್ನ ಹಿಡಿಯೋಕೆ ಪೊಲೀಸರೇ ಸುಸ್ತಾಗಿ ಹೋಗಿದ್ರು. ಊರೆಲ್ಲಾ ಹುಡುಕಿದ್ರೂ ಇವನನ್ನ ಪತ್ತೆ ಹಚ್ಚೋಕ್ಕೆ ಮಾತ್ರ ಆಗ್ತಿರಲಿಲ್ಲ. ಯಾರೂ ಊಹಿಸದ ಜಾಗವನ್ನೇ ಈತ ತನ್ನ ಆವಾಸ ಸ್ಥಾನ ಮಾಡ್ಕೊಂಬಿಟ್ಟಿದ್ದ.
ಸಿಟಿಯಲ್ಲಿ ಒಂಟಿ ಮನೆಗಳ ಕಳ್ಳತನ.. ಕಾಡಿನಲ್ಲಿ ವಾಸಸ್ಥಾನ
ಊರೆಲ್ಲಾ ತಿರುಗಿ ನಗರದಲ್ಲಿರೋ ಒಂಟಿ ಮನೆಗಳನ್ನೇ ಟಾರ್ಗೆಟ್​​ ಮಾಡ್ತಿದ್ದ ನರಸಿಂಹ. ಮನೆಯಲ್ಲಿ ಯಾರು ಇಲ್ಲದ ವೇಳೆ ಕನ್ನ ಹಾಕ್ತಿದ್ದ, ಬಳಿಕ ಕದ್ದ ಆಭರಣಗಳ ಸಮೇತ ಕಾಡಿಗೆ ಎಸ್ಕೇಪ್​ ಆಗ್ತಿದ್ದ. ಬೆಂಗಳೂರಿನ ಹೊರ ವಲಯದಲ್ಲಿರುವ ಕಾಡುಗಳನ್ನ ತನ್ನ ಹೈಡ್ ​​ಔಟ್​​ ಪ್ಲೇಸ್​​ ಮಾಡಿಕೊಂಡಿದ್ದ ಈ ಆಸಾಮಿ, ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿ ಅರಣ್ಯದನಲ್ಲಿ ವಾಸ ಮಾಡ್ತಿದ್ದ. ಬೆಳಗ್ಗಿನ ಹೊತ್ತು ಗಿಡ ಮರಗಳ ಕೆಳಗೆ ಆಶ್ರಯ ಪಡೆಯುತ್ತಿದ್ದ ಖದೀಮ, ರಾತ್ರಿ ಹೊತ್ತು ಬಂಡೆಗಳನ್ನೇ ಬೆಡ್​​ ಮಾಡಿಕೊಂಡು ಹಾಯಾಗಿ ಮಲಗ್ತಿದ್ದ.
/newsfirstlive-kannada/media/post_attachments/wp-content/uploads/2024/08/narsimha-1.jpg)
ಐನಾತಿ ಕಳ್ಳ ಪೊಲೀಸರ ಕೈಗೆ ಲಾಕ್​ ಆಗಿದ್ದೇ ರೋಚಕ
ಇದುವರೆಗೂ ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಪೊಲೀಸರಿಗೆ ಹಿಡಿಯುವುದೇ ದೊಡ್ಡ ಸವಾಲಾಗಿತ್ತು. ಆದರೆ ಈತ ಎಲ್ಲೆಲ್ಲಿ ಕಳ್ಳತನ ಮಾಡ್ತಿದ್ನೋ ಆ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಈತನ ಚಲವಲನ ಸೆರೆಯಾಗಿದ್ವು. ಜೊತೆಗೆ ಆತನ ಮೊಬೈಲ್​ ನೆಟ್​ವರ್ಕ್ ಸುಳಿವು ನೀಡಿತ್ತು. ಟವರ್​ ಲೊಕೇಷನ್​ ಆಧರಿಸಿ ಫೀಲ್ಡಿಗಿಳಿದ ಗಿರಿನಗರ ಪೊಲೀಸರು ಗುಡೇಮಾರನಹಳ್ಳಿ ಕಾಡಿನಲ್ಲಿ ಐನಾತಿ ನರಸಿಂಹ ರೆಡ್ಡಿಯನ್ನ ಲಾಕ್ ಮಾಡಿದ್ದಾರೆ.
ಬಂಧಿತನಿಂದ ಸುಮಾರು 70 ಲಕ್ಷದ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ನಾನೇ ಬೇರೆ ನನ್ನ ಸ್ಟೈಲೇ ಅಂತಿದ್ದ ಕಿಲಾಡಿ ಕಳ್ಳನನ್ನು ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us