ಮಹಾಕುಂಭದ ಬಗ್ಗೆ ಗೆಳೆಯನಿಗೆ ಜಾಬ್ಸ್​ ಬರೆದಿದ್ದ ಪತ್ರ ವೈರಲ್.. ಇಂದು ಮಹಾನ್ ವ್ಯಕ್ತಿಯ ಆಸೆ ಈಡೇರಿಸಿದ ಪತ್ನಿ

author-image
Ganesh
Updated On
ಮಹಾಕುಂಭದ ಬಗ್ಗೆ ಗೆಳೆಯನಿಗೆ ಜಾಬ್ಸ್​ ಬರೆದಿದ್ದ ಪತ್ರ ವೈರಲ್.. ಇಂದು ಮಹಾನ್ ವ್ಯಕ್ತಿಯ ಆಸೆ ಈಡೇರಿಸಿದ ಪತ್ನಿ
Advertisment
  • ಸ್ಟೀವ್ ಜಾಬ್ಸ್​ ಗೆಳೆಯನಿಗೆ ಬರೆದಿದ್ದ ಪತ್ರದಲ್ಲಿ ಏನಿದೆ..?
  • ಜಾಬ್ಸ್​ ಬರೆದಿದ್ದ ಪತ್ರ 4.32 ಕೋಟಿಗೆ ಇಂದು ಹರಾಜು
  • ಪತ್ರ ಬೆಳಕಿಗೆ ಬರ್ತಿದ್ದಂತೆಯೇ ಜಾಬ್ಸ್ ಪತ್ನಿ ಏನ್ ಮಾಡಿದ್ರು?

ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ಮಹಾಕುಂಭ (Maha kumbh) ನಡೆಯುತ್ತಿದೆ. ವಿಷಯ ಏನೆಂದರೆ, ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ (Steve jobs) ಕುಂಭ ಮೇಳಕ್ಕಾಗಿ ಭಾರತಕ್ಕೆ ಬರಲು ಇಚ್ಛಿಸಿದ್ದರು. ಈ ಹಿಂದೆ ತಮ್ಮ ಆತ್ಮೀಯ ಸ್ನೇಹಿತನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದು, ಇಂದು ಆ ಪತ್ರ ಹರಾಜಾಗಿದೆ.

ಸ್ಟೀವ್ ಜಾಬ್ಸ್ ಬರೆದಿರುವ ಪತ್ರವು ಹರಾಜಿನಲ್ಲಿ 500,312 ಡಾಲರ್ (ಸುಮಾರು ₹4.32 ಕೋಟಿ)ಗೆ ಮಾರಾಟವಾಗಿದೆ. ಅಂತಾರಾಷ್ಟ್ರೀಯ ಹರಾಜು ಸಂಸ್ಥೆ ಬೋನ್‌ಹಾಮ್ಸ್ (Bonhams) ಹರಾಜು ಪ್ರಕ್ರಿಯೆ ನಡೆಸಿದೆ. ಪತ್ರದಲ್ಲಿ ಜಾಬ್ಸ್ ಅವರಿಗಿದ್ದ ಆಧ್ಯಾತ್ಮಿಕ ಚಿಂತನೆಯ ಅಪರೂಪದ ನೋಟವನ್ನು ತೋರಿಸುತ್ತಿದೆ. ಜೊತೆಗೆ ಅವರಿಗಿದ್ದ ಹಿಂದೂ ಧರ್ಮ ಮತ್ತು ಭಾರತದ ಮೇಲಿನ ಆಸಕ್ತಿಯನ್ನು ತೋರಿಸುತ್ತಿದೆ.

ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಸ್ಟೀವ್ ಜಾಬ್ಸ್ ಪತ್ನಿ ಅಸ್ವಸ್ಥ.. ಪುಣ್ಯ ಸ್ನಾನಕ್ಕೆ ಬಂದಾಗ ಏನಾಯ್ತು..?

ಪತ್ರದಲ್ಲಿ ಏನಿದೆ..?

ಸ್ಟೀವ್ ಜಾಬ್ಸ್ ತಮ್ಮ ಬಾಲ್ಯದ ಗೆಳೆಯ ಟಿಮ್ ಬ್ರೌನ್​ಗೆ ಬರೆದ ಪತ್ರ ಇದಾಗಿದೆ. 19ನೇ ವರ್ಷದ ಹುಟ್ಟುಹಬ್ಬದ ಹಿಂದಿನ ದಿನ ಜಾಬ್ಸ್​ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಮಹಾಕುಂಭದಲ್ಲಿ ಭಾಗಿಯಾಗಲು ಭಾರತಕ್ಕೆ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಬ್ರೌನ್ ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಈ ಪತ್ರ ಬರೆದಿರುವಂತೆ ತೋರುತ್ತದೆ. ಏಪ್ರಿಲ್‌ನಲ್ಲಿ ಆರಂಭವಾಗಲಿರುವ ಕುಂಭಮೇಳಕ್ಕೆ ನಾನು ಭಾರತಕ್ಕೆ ತೆರಳಲು ಬಯಸುತ್ತೇನೆ. ಮಾರ್ಚ್‌ನಲ್ಲಿ ಹೋಗುತ್ತೇನೆ, ಈ ಬಗ್ಗೆ ಇನ್ನೂ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ. ಪತ್ರದ ಕೊನೆಯಲ್ಲಿ ‘ಶಾಂತಿ, ಸ್ಟೀವ್ ಜಾಬ್ಸ್’ ಎಂದು ಬರೆದಿದ್ದಾರೆ.

ಈ ಪತ್ರ ಬೆಳಕಿಗೆ ಬಂದ ನಂತರ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಪತಿಯ ಆಸೆ ಪೂರೈಸಲು ಮಹಾಕುಂಭಕ್ಕೆ ಬಂದು ಹೋಗಿದ್ದಾರೆ. ಪ್ರಯಾಗರಾಜ್​ಗೆ ಆಗಮಿಸಿದದ ಜಾಬ್ಸ್​ ಪತ್ನಿ, ಸ್ವಾಮಿ ಕೈಲಾಶಾನಂದ ಗಿರಿ ಅವರಿಂದ ಆಧ್ಯಾತ್ಮಿಕ ದೀಕ್ಷೆ ಪಡೆದುಕೊಂಡಿದ್ದಾರೆ. ಸ್ವಾಮಿ ಕೈಲಾಶಾನಂದ ಗಿರಿ ಲಾರೆನ್ ಪೊವೆಲ್‌ಗೆ ‘ಕಮಲಾ’ ಎಂಬ ಹಿಂದೂ ಹೆಸರನ್ನು ನೀಡಿದ್ದಾರೆ. ಮಹಾಕುಂಭವು ಜನವರಿ 13 ರಿಂದ ಪ್ರಾರಂಭವಾಗಿದೆ.

ಇದನ್ನೂ ಓದಿ: ಸ್ಟೀವ್ ಜಾಬ್ಸ್ ಪತ್ನಿಗೆ ಆಧ್ಯಾತ್ಮಿಕ ದೀಕ್ಷೆ ನೀಡಿದ ಸ್ವಾಮಿ ಕೈಲಾಶಾನಂದ ಗಿರಿ ಯಾರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment