/newsfirstlive-kannada/media/post_attachments/wp-content/uploads/2025/03/Steve_Smith_KOHLI.jpg)
ಟೀಮ್ ಇಂಡಿಯಾ ವಿರುದ್ಧ ಸೋತ ಆಸ್ಟ್ರೇಲಿಯಾ ತಂಡ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದೆ. ಇದ್ರ ಬೆನ್ನಲ್ಲೇ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಫ್ಯಾನ್ಸ್ಗೆ ಶಾಕ್ ಕೊಟ್ಟಿದ್ದಾರೆ. ಟೀಮ್ ಇಂಡಿಯಾ ವಿರುದ್ಧದ ಒಂದು ಸೋಲು ಆಸಿಸ್ ಲೆಜೆಂಡ್ ಒನ್ ಡೇ ಕ್ರಿಕೆಟ್ ಕರಿಯರ್ಗೆ ಫುಲ್ ಸ್ಟಾಫ್ ಇಟ್ಟಿದೆ. ಭಾರತದ ವಿರುದ್ಧ ಸೋತ ಬೇಸರದಲ್ಲಿ ಒನ್ ಡೇ ಕ್ರಿಕೆಟ್ಗೇ ಸ್ಟೀವ್ ಸ್ಮಿತ್ ಗುಡ್ ಬೈ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಸೆಮಿಸ್ನಲ್ಲಿ ಆಸ್ಟ್ರೇಲಿಯಾ ಎದುರು ಟೀಮ್ ಇಂಡಿಯಾ ಗೆದ್ದು ಬೀಗಿದೆ. ಗೆದ್ದ ರೋಹಿತ್ ಪಡೆ ಫೈನಲ್ಗೆ ಎಂಟ್ರಿ ಕೊಟ್ಟಿದ್ರೆ, ಸೋತ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರ ಬಿದ್ದಿದೆ. ನಿಜ ಹೇಳಬೇಕಂದ್ರೆ ಏಕದಿನ ವಿಶ್ವಕಪ್ನ ಹಾಲಿ ಚಾಂಪಿಯನ್ ಪಡೆ ಚಾಂಪಿಯನ್ ಆಟವನ್ನೇ ಆಡಲಿಲ್ಲ. ಬಿಗ್ ಟೂರ್ನಮೆಂಟ್, ಬಿಗ್ ಗೇಮ್ಗಳಲ್ಲಿ ಪಂಟರ್ಸ್ ಅಂತಾ ಬೆನ್ನುತ್ತಿಟ್ಟಿಕೊಳ್ಳೋ ಕಾಂಗರೂಗಳು ಸೆಮೀಸ್ನಲ್ಲಿ ಸುಲಭಕ್ಕೆ ಶರಣಾದರು.
ಒಂದು ಸೋಲು.. ಆಸಿಸ್ ಲೆಜೆಂಡ್ ಕರಿಯರ್ಗೆ ಫುಲ್ ಸ್ಟಾಫ್.!
ಟೀಮ್ ಇಂಡಿಯಾ ವಿರುದ್ಧ ಒಂದು ಮುಖಭಂಗ ಆಸ್ಟ್ರೇಲಿಯಾ ತಂಡದ ಖುಷಿಯನ್ನೇ ಕಿತ್ತುಕೊಂಡಿದೆ. 2023ರ ನವೆಂಬರ್ನಲ್ಲಿ ಟೀಮ್ ಇಂಡಿಯಾವನ್ನ ಸೋಲಿಸಿ ನಾವೇ ಎಲ್ಲಾ ಎಂದು ಮೆರೆದಾಡಿದ್ದ ಕಾಂಗರೂಗಳ ಕ್ಯಾಂಪ್ನ ಮೌನ ಆವರಿಸಿದೆ. ಸೋಲಿನ ಹತಾಶೆ, ಬೇಸರ, ನೋವು ಎಲ್ಲಾ ಆಟಗಾರರನ್ನ ಕಾಡ್ತಿದೆ. ಇದೇ ಬೇಸರದಲ್ಲಿ ಆಸಿಸ್ ಲೆಜೆಂಡ್ ಸ್ಟೀವ್ ಸ್ಮಿತ್ ನಿವೃತ್ತಿಯನ್ನೇ ಘೋಷಿಸಿಬಿಟ್ಟಿದ್ದಾರೆ. ಏಕದಿನ ಕ್ರಿಕೆಟ್ಗೆ ಸ್ಮಿತ್ ಗುಡ್ ಬೈ ಹೇಳಿದ್ದಾರೆ.
ಸ್ಪಿನ್ನರ್ ಆಗಿ ಎಂಟ್ರಿ, ಬ್ಯಾಟಿಂಗ್ ಲೆಜೆಂಡ್ ಆಗಿ ನಿರ್ಗಮನ.!
ಅಸಲಿಗೆ ಈ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡಕ್ಕೆ ಎಂಟ್ರಿ ಕೊಟ್ಟಿದ್ದು ಒಬ್ಬ ಸ್ಪಿನ್ನರ್ ಆಗಿ. ಲೆಗ್ ಬ್ರೇಕ್ ಬೌಲಿಂಗ್ನಿಂದ ಕಮಾಲ್ ಮಾಡಿ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಎಂಟ್ರಿ ಕೊಟ್ಟ ಸ್ಮಿತ್ ಆ ಬಳಿಕ ವಿಶ್ವದ ಟಾಪ್ ಕ್ಲಾಸ್ ಬ್ಯಾಟ್ಸ್ಮನ್ ಆಗಿ ಬದಲಾದರು. ಈ ಸ್ಟೀವ್ ಸ್ಮಿತ್ ಬ್ಯಾಟಿಂಗ್ಗೆ ಮಾರು ಹೋಗದ ಕ್ರಿಕೆಟ್ ಅಭಿಮಾನಿಗಳೇ ಇಲ್ಲ. ಮಾಡ್ರನ್ ಡೇ ಕ್ರಿಕೆಟ್‌ನ ಒನ್ ಆಫ್ ದ ಗ್ರೆಟೆಸ್ಟ್ ಬ್ಯಾಟರ್ಗಳಲ್ಲಿ ಸ್ಮಿತ್ ಕೂಡ ಒಬ್ಬರು. ಒನ್ ಡೇ ಕ್ರಿಕೆಟ್ನಲ್ಲಿ ಸ್ಮಿತ್ ಕಟ್ಟಿದ ಕ್ಲಾಸಿಕ್ ಇನ್ನಿಂಗ್ಸ್ಗಳು ಒಂದಾ.? ಎರಡಾ.?
ಏಕದಿನ ಮಾದರಿಯಲ್ಲಿ ಸ್ಟೀವ್ ಸ್ಮಿತ್
ಏಕದಿನ ಮಾದರಿಯಲ್ಲಿ 154 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ಸ್ಟೀವ್ ಸ್ಮಿತ್ 5,800 ರನ್ಗಳಿಸಿದ್ರು. 43.25ರ ಸಾಲಿಡ್ ಸರಾಸರಿ ಹೊಂದಿದ್ದ ಸ್ಮಿತ್, 12 ಶತಕ, 35 ಹಾಫ್ ಸೆಂಚುರಿ ಸಿಡಿಸಿದ್ದಾರೆ.
ಬಿಗ್ ಮ್ಯಾಚ್ ಪ್ಲೇಯರ್.! ಬಿಗ್ ಟೂರ್ನಿಯಲ್ಲಿ ಪಂಟರ್.!
ಐಸಿಸಿ ಟೂರ್ನಮೆಂಟ್ ಅಂದ್ರೆ ಸ್ಮಿತ್ ಬ್ಯಾಟ್ ಸಖತ್ ಸೌಂಡ್ ಮಾಡ್ತಿತ್ತು. 2015ರ ಏಕದಿನ ವಿಶ್ವಕಪ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಸತತವಾಗಿ 5 ಪಂದ್ಯಗಳಲ್ಲಿ 50+ ಸ್ಕೋರ್ ಕಲೆಹಾಕಿದ್ದ ಸ್ಮಿತ್ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ ವಿರುದ್ಧ 105 ರನ್ ಚಚ್ಚಿದ್ದರು. ಬಳಿಕ ಫೈನಲ್ನಲ್ಲಿ ಅಜೇಯ 56 ರನ್ಗಳಿಸಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಷ್ಟೇ ಅಲ್ಲ, 2023ರ ವಿಶ್ವಕಪ್ ಗೆಲುವಿನಲ್ಲೂ ಮೇಜರ್ ರೋಲ್ ಪ್ಲೇ ಮಾಡಿದ್ದರು. 15 ವರ್ಷಗಳ ಒನ್ ಡೇ ಕರಿಯರ್ನಲ್ಲಿ 2 ವಿಶ್ವಕಪ್ ಗೆದ್ದಿರೋದಕ್ಕಿಂದ ದೊಡ್ಡ ಸಾಧನೆ ಬೇಕಾ?.
ನಾಯಕನಾಗಿಯೂ ಸ್ಟೀವ್ ಸ್ಮಿತ್ ಸೂಪರ್.!
ನಾಯಕನಾಗಿ ಸ್ಮಿತ್ ಆಸ್ಟ್ರೇಲಿಯಾ ತಂಡವನ್ನ ಸಮರ್ಥವಾಗಿ ಮುನ್ನಡೆಸಿದ್ದರು. ನಾಯಕನಾಗಿ 64 ಏಕದಿನ ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದ ಸ್ಮಿತ್ 40 ಪಂದ್ಯಗಳಲ್ಲಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. 57.50ರ ಗೆಲುವಿನ ಸರಾಸರಿ ಹೊಂದಿದ್ದರು. ನಾಯಕತ್ವ ಹೊತ್ತ ಬಳಿಕ ಬ್ಯಾಟಿಂಗ್ನಲ್ಲೂ ಮಿಂಚಿದ್ದ ಸ್ಮಿತ್ 64 ಪಂದ್ಯಗಳಲ್ಲಿ 2,270 ರನ್ ಗಳಿಸಿದ್ರು.
ಇದನ್ನೂ ಓದಿ: ಶಾಕಿಂಗ್ ವಿಚಾರ ಹಂಚಿಕೊಂಡ ನಯನತಾರಾ; ಅಭಿಮಾನಿಗಳಿಗೆ ಕೈಮುಗಿದು ವಿನಂತಿಸಿದ ನಟಿ..!
ಸ್ಟೀವ್ ಸ್ಮಿತ್ ವೈಟ್ ಬಾಲ್ ಕರಿಯರ್ ಅಂತ್ಯ.?
ಏಕದಿನ ಫಾರ್ಮೆಟ್ಗೆ ಗುಡ್ ಬೈ ಹೇಳೋದ್ರಿಂದಿಗೆ ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್ ಕರಿಯರ್ ಬಹುತೇಕ ಅಂತ್ಯವಾಗಿದೆ. ಏಕದಿನಕ್ಕೆ ಗುಡ್ ಬೈ ಹೇಳಿರೋ ಸ್ಮಿತ್ ಟಿ20 ತಂಡದಿಂದಲೂ ಹೊರಬಿದ್ದು ವರ್ಷವಾಗಿದೆ. 2024ರ ವಿಶ್ವಕಪ್ ತಂಡದಿಂದ ಸ್ಮಿತ್ ಡ್ರಾಪ್ ಮಾಡಲಾಗಿತ್ತು. ಇದೀಗ ಏಕದಿನಕ್ಕೆ ಗುಡ್ ಬೈ ಹೇಳಿದ್ದು, ಇನ್ಮುಂದೆ ಟೆಸ್ಟ್ ಕ್ರಿಕೆಟ್ಗೆ ಮಾತ್ರ ಸ್ಮಿತ್ ಸೀಮಿತವಾಗಿರಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರ ಬಿದ್ದ ಬೆನ್ನಲ್ಲೇ ಸ್ಮಿತ್ ನಿವೃತ್ತಿ ಘೋಷಿಸಿರೋದ್ರ ಹಿಂದೆ ತಂಡದ ಹಿತದೃಷ್ಟಿ ಕೂಡ ಇದೆ. 2027ರ ಏಕದಿನ ವಿಶ್ವಕಪ್ಗೆ ಆಸ್ಟ್ರೇಲಿಯಾ ಈಗಲೇ ಸಿದ್ಧತೆ ಆರಂಭಿಸಿದೆ. ಹೊಸ ಆಟಗಾರರಿಗೆ ಅವಕಾಶ ಮಾಡಿಕೊಡೋದು ಕೂಡ ಸ್ಮಿತ್ ನಿರ್ಧಾರ ಹಿಂದಿನ ರೀಸನ್.!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ