/newsfirstlive-kannada/media/post_attachments/wp-content/uploads/2024/11/TEAM-INDIA-7.jpg)
ಭಾರತ ವಿರುದ್ಧದ ಅಡಿಲೇಡ್ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ.
ನೆಟ್ಸ್ನಲ್ಲಿ ಬ್ಯಾಟಿಂಗ್ ಪ್ರಾಕ್ಟಿಸ್ ನಡೆಸ್ತಿದ್ದ ವೇಳೆ ಸ್ಟೀವ್ ಸ್ಮಿತ್ಗೆ ಮಾರ್ನಸ್ ಲಬುಷೇನ್ ಥ್ರೋ ಡೌನ್ ಮಾಡ್ತಿದ್ರು. ಈ ವೇಳೆ ಬಾಲ್ ಹೆಬ್ಬೆರಳಿಗೆ ಬಡಿದಿದೆ. ಬಳಿಕ ಅಭ್ಯಾಸ ಮೊಟಕುಗಳಿಸಿದ ಸ್ಮಿತ್, ನೆಟ್ಸ್ನಿಂದ ನಿರ್ಗಮಿಸಿದ್ದಾರೆ. ಈಗಾಗಲೇ ಮಿಚೆಲ್ ಮಾರ್ಷ್ ಹಾಗೂ ಜೋಷ್ ಹೇಜಲ್ವುಡ್ ಗಾಯಗೊಂಡಿದ್ದು, ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಅನುಮಾನವಾಗಿದ್ದಾರೆ. ಇದೀಗ ಸ್ಮಿತ್ ಇಂಜುರಿ ಆಸ್ಟ್ರೇಲಿಯಾಗೆ ಆತಂಕ ಸೃಷ್ಟಿಸಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಒಟ್ಟು ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ. ಈಗಾಗಲೇ ಪರ್ತ್ನಲ್ಲಿ ಮೊದಲ ಟೆಸ್ಟ್ ನಡೆದಿತ್ತು. ಮೊದಲ ಪಂದ್ಯದಲ್ಲಿ ಬೂಮ್ರಾ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿ ಹೊಸ ಹುಮ್ಮಸ್ಸಿನಲ್ಲಿದೆ. ಅದರ ಜೊತೆಗೆ ಮೊದಲ ಟೆಸ್ಟ್ಗೆ ಅಲಭ್ಯರಾಗಿದ್ದ ಕ್ಯಾಪ್ಟನ್ ರೋಹಿತ್ ಹಾಗೂ ಶುಬ್ಮನ್ ಗಿಲ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಇದು ಟೀಂ ಇಂಡಿಯಾಗೆ ಆನೆಬಲ ಬಂದಂತಾಗಿದೆ.
ಇದನ್ನೂ ಓದಿ:ಆರ್ಸಿಬಿಗೆ ಬಂತು ನೂರು ಆನೆ ಬಲ.. ಇಬ್ಬರು ಬ್ಯಾಟ್ಸಮನ್ಗಳು ವಿಧ್ವಂಸಕಾರಿ ಬ್ಯಾಟಿಂಗ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ