newsfirstkannada.com

ಎಚ್ಚರ, ಎಚ್ಚರ..! ಭಯ ಹುಟ್ಟಿಸ್ತಿದೆ Stomach Flu; ದೆಹಲಿಯಲ್ಲಿ ತೀವ್ರವಾಗಿ ಹರಡ್ತಿದೆ ಈ ಹೊಟ್ಟೆ ಜ್ವರ..!

Share :

Published February 29, 2024 at 1:46pm

  ಡೇಂಜರಸ್​ ಸೋಂಕಿಗೆ ಮಕ್ಕಳು, ವೃದ್ಧರು ಬಲಿಯಾಗ್ತಿದ್ದಾರೆ

  ಸಾಂಕ್ರಾಮಿಕವಾಗಿ ಹರಡುತ್ತಿದ್ದು, ದೊಡ್ಡ ಸವಾಲ್ ಆಗಿದೆ

  ಹೊಟ್ಟೆ ಸೋಂಕಿನಿಂದ ದೂರ ಇರಲು ಏನು ಮಾಡಬೇಕು?

ಬೇಸಿಗೆಯ ಬಿಸಿಲಿನ ಆರ್ಭಟ ನಿಧಾನಕ್ಕೆ ಜೋರಾಗುತ್ತಿದೆ. ಇದರ ಮಧ್ಯೆ ರಾಷ್ಟ್ರರಾಜಧಾನಿ ದೆಹಲಿಯನ್ನು Stomach Flu ಆತಂಕ ಸೃಷ್ಟಿಸಿದೆ. ಹೊಟ್ಟೆಯಲ್ಲಿ ಕಾಣಿಸಿಕೊಳ್ತಿರುವ ಜ್ವರ ದೆಹಲಿಯಲ್ಲಿ ವೇಗವಾಗಿ ಹರಡುತ್ತಿದ್ದು, ಚಿಕ್ಕ ಮಕ್ಕಳು ಹಾಗೂ ವೃದ್ಧರನ್ನು ಬಲಿ ಪಡೆಯುತ್ತಿದೆ. ಒಬ್ಬರಿಂದ ಒಬ್ಬರಿಗೆ ಸಾಂಕ್ರಾಮಿಕವಾಗಿ ಹರಡುತ್ತಿರೋದ್ರಿಂದ ದೊಡ್ಡ ಸವಾಲ್ ಆಗಿದೆ.

ವರದಿಗಳ ಪ್ರಕಾರ.. ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರೋರು ಅಪಾಯಕ್ಕೆ ಸಿಲುಕಿಕೊಳ್ತಿದ್ದಾರೆ. ಹೊಟ್ಟೆಯೊಳಗೆ ಜ್ವರ, ನೋವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಾತ್ರವಲ್ಲ ಗ್ಯಾಸ್ಟ್ರೋಎಂಟರೈಟಿಸ್ ಸಮಸ್ಯೆ ಕೂಡ ಕಾಣಿಸಿಕೊಳ್ತಿದೆ. ಆಡುಭಾಷೆಯಲ್ಲಿ ಇದನ್ನು ಹೊಟ್ಟೆಯ ಕಾಯಿಲೆ ಅಥವಾ ಹೊಟ್ಟೆ ಜ್ವರ ಎಂದು ಕರೆಯಲಾಗುತ್ತಿದೆ. ಹೊಟ್ಟೆನೋವು, ಅತಿಸಾರ, ವಾಂತಿ ಪ್ರಮುಖ ಲಕ್ಷಣವಾಗಿದೆ.

ಕಾರಣ..?

 • ಹಳಸಿದ ಆಹಾರ ಸೇವಿಸುವುದರಿಂದ ಹೊಟ್ಟೆಯ ಸೋಂಕಿನ ಅಪಾಯ ಹೆಚ್ಚಿದೆ
 • ಕೊಳಕು ನೀರು ಕುಡಿಯುವುದರಿಂದ ಹೊಟ್ಟೆಯ ಸೋಂಕು ಬರುತ್ತದೆ
 • ಬೀದಿ ಆಹಾರ ಮತ್ತು ಸ್ವಚ್ಛತೆ ಕೂಡ ಪ್ರಮುಖ ಕಾರಣ
 • ಬೀದಿ ಆಹಾರವನ್ನು ತಿನ್ನುವುದು ದೇಹಕ್ಕೆ ಅಪಾಯಕಾರಿ
 • ಯಾರಿಗಾದರೂ ಈ ಜ್ವರ ಬಂದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು

ಹೊಟ್ಟೆ ಜ್ವರದ ಲಕ್ಷಣಗಳು
ಕರುಳಿನಲ್ಲಿ ಊತವನ್ನು ಉಂಟುಮಾಡುತ್ತದೆ. ನೀರಿನ ರೂಪದಲ್ಲಿ ರಕ್ತಸಿಕ್ತ ಅತಿಸಾರ ಆಗುತ್ತದೆ. ಸೆಳೆತ ಮತ್ತು ವಾಕರಿಕೆ ಬರುತ್ತದೆ. ಆರಂಭದಲ್ಲಿ ವಾಂತಿ ಮತ್ತು ಜ್ವರ ಕಾಣಿಸಿಕೊಳ್ಳುತ್ತದೆ. ಜೊತೆಗೆ ವೀಕ್ನೆಸ್, ತಲೆನೋವು ಮತ್ತು ತಲೆ ಸುತ್ತೋದು ಸಹ ಆಗುತ್ತದೆ.

ಹೊಟ್ಟೆ ಜ್ವರ ತಪ್ಪಿಸುವ ಮಾರ್ಗಗಳು..!

 • ದೇಹದಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು
 • ಪಾನೀಯ, ಶುಂಠಿ ಪಾನೀಯವನ್ನು ಕುಡಿಯಲು ಮರೆಯದಿರಿ
 • ವಾಂತಿ ತಡೆಯಲು ಸಣ್ಣ ಪ್ರಮಾಣದಲ್ಲಿ ನೀರನ್ನು ಆಗಾಗ ಕುಡಿಯುತ್ತಿರಬೇಕು
 • ಹಾಲು, ಮೊಸರು ಮತ್ತು ಚೀಸ್ ನಂತಹ ಡೈರಿ ಉತ್ಪನ್ನಗಳಿಂದ ದೂರ ಇರಬೇಕು
 • ಸದ್ಯದ ಪರಿಸ್ಥಿತಿಯಲ್ಲಿ ಮದ್ಯಪಾನ ಮಾಡೋದು ಒಳ್ಳೆಯದಲ್ಲ

ವೈರಸ್ ಹರಡೋದನ್ನು ತಡೆಯಲು ಕೈಗಳನ್ನು ಆಗಾಗ ತೊಳೆಯುತ್ತಿರಿ. ಹೊರಗಿನ ಆಹಾರ ಸೇವಿಸಬೇಡಿ. ಬಿಸಿ ವಾತಾವರಣದಲ್ಲಿ ಬೇಯಿಸಿದ ಬಿಸಿ ಆಹಾರ ಮಾತ್ರ ಸೇವಿಸಿ. ಈ ಸೋಂಕು ಇರುವ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಚ್ಚರ, ಎಚ್ಚರ..! ಭಯ ಹುಟ್ಟಿಸ್ತಿದೆ Stomach Flu; ದೆಹಲಿಯಲ್ಲಿ ತೀವ್ರವಾಗಿ ಹರಡ್ತಿದೆ ಈ ಹೊಟ್ಟೆ ಜ್ವರ..!

https://newsfirstlive.com/wp-content/uploads/2024/02/Stomach-Flu.jpg

Load More