ಬೆಂಗಳೂರಿನಿಂದ ಹೊರಟಿದ್ದ ರೈಲಿಗೆ ಕಲ್ಲೆಸೆತ.. ಪ್ರಯಾಣಿಕ ಊಟ ಮಾಡ್ತಿದ್ದಾಗಲೇ ತೂರಿ ಬಂದ ಕಲ್ಲುಗಳು..

author-image
Ganesh
Updated On
ಬೆಂಗಳೂರಿನಿಂದ ಹೊರಟಿದ್ದ ರೈಲಿಗೆ ಕಲ್ಲೆಸೆತ.. ಪ್ರಯಾಣಿಕ ಊಟ ಮಾಡ್ತಿದ್ದಾಗಲೇ ತೂರಿ ಬಂದ ಕಲ್ಲುಗಳು..
Advertisment
  • ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್​ಪ್ರೆಸ್​ಗೆ ಕಲ್ಲೆಸೆತ
  • ರೈಲಿನ ಬಿ-4 ಕೋಚ್ ಮೇಲೆ ಕಲ್ಲು ತೂರಾಟವಾಗಿದೆ
  • ಶುಕ್ರವಾರ ರಾತ್ರಿ ದೆಹಲಿಗೆ ಹೊರಟಿದ್ದ ರಾಜಧಾನಿ ಎಕ್ಸ್​ಪ್ರೆಸ್

ಬೆಂಗಳೂರಿನಿಂದ ಹೊರಟಿದ್ದ ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್​ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಮಧ್ಯಪ್ರದೇಶ ರಾಣಿ ಕಮಲಾಪತಿ ನಿಲ್ದಾಣ ಹಾಗೂ ಭೋಪಾಲ್ ನಿಲ್ದಾಣದ ನಡುವೆ ಈ ಘಟನೆ ನಡೆದಿದೆ.

ರೈಲಿನ ಬಿ-4 ಕೋಚ್ ಮೇಲೆ ಕಲ್ಲು ತೂರಾಟವಾಗಿದ್ದು, ಯಾರಿಗೂ ಗಾಯಗಳಾಗಿಲ್ಲ. ಆದರೆ ರೈಲಿನ ಗಾಜುಗಳು ಪುಡಿಪುಡಿ ಆಗಿವೆ. ಕಳೆದ ಶುಕ್ರವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರೈಲು ದೆಹಲಿಯತ್ತ ಪ್ರಯಾಣ ಬೆಳೆಸಿತ್ತು. ರಾತ್ರಿ 10.30 ರ ಸುಮಾರಿಗೆ ರೈಲಿನ ಮೇಲೆ ಕಲ್ಲು ತೂರಾಟವಾಗಿದೆ.

ಇದನ್ನೂ ಓದಿ: ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿದ್ದ.. ಈಗ 2500 ಕೋಟಿ ಒಡೆಯ.. ಯಾರು ಈ ಸ್ಟಾರ್​ ಹೀರೋ?

ಪ್ರಯಾಣಿಕನೊಬ್ಬ ಊಟ ಮಾಡುತ್ತಿದ್ದಾಗಲೇ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಬಿ-4 ಕೋಚ್‌ನ ಸೀಟ್ ಸಂಖ್ಯೆ 41ರಲ್ಲಿದ್ದ ದೀಪಕ್ ಕುಮಾರ್ ಅನ್ನೋರು ಈ ಸಂಬಂಧ ದೂರು ನೀಡಿದ್ದರು. ಆರ್‌ಪಿಎಫ್ ಭೋಪಾಲ್ ವಿಭಾಗದ ಕಮಾಂಡೆಂಟ್ ಪ್ರಶಾಂತ್ ಯಾದವ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೊಂದು ವಿಚಾರ ಅಂದ್ರೆ ಇದೇ ಕೋಚ್​​ನಲ್ಲಿ ಮಹಾರಾಷ್ಟ್ರದ ಬಿಜೆಪಿ ನಾಯಕ ಚಂದನ್ ಗೋಸ್ವಾಮಿ ಕೂಡ ಇದ್ದರು. ಕಲ್ಲೆಸೆತದಿಂದ ಚಂದನ್ ಗೋಸ್ವಾಮಿ ಪಾರಾಗಿದ್ದಾರೆ.

ಇದನ್ನೂ ಓದಿ: ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿದ್ದ.. ಈಗ 2500 ಕೋಟಿ ಒಡೆಯ.. ಯಾರು ಈ ಸ್ಟಾರ್​ ಹೀರೋ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment