newsfirstkannada.com

Viksit Bharat ಅಡಿಯಲ್ಲಿ ಜನರಿಗೆ ವಾಟ್ಸ್​​ಆ್ಯಪ್ ಮೆಸೇಜ್ ಕಳುಹಿಸುತ್ತಿದ್ದ ಕೇಂದ್ರಕ್ಕೆ ಬಿಗ್ ಶಾಕ್..!

Share :

Published March 21, 2024 at 2:14pm

    ಕೇಂದ್ರ ಸರ್ಕಾರದ ಪ್ರಚಾರಕ್ಕೆ ಕೇಂದ್ರ ಚುನಾವಣಾ ಆಯೋಗ ಬ್ರೇಕ್

    ವಿಕಸಿತ್ ಭಾರತ್ ಹೆಸರಲ್ಲಿ ಜನರ ಮೊಬೈಲ್‌ಗೆ ಮೆಸೇಜ್‌ ಬರುತ್ತಿತ್ತು

    ಕೇಂದ್ರ ಸರ್ಕಾರದ ಐಟಿ ಇಲಾಖೆಗೆ ಖಡಕ್ ಸೂಚನೆ ಕೊಟ್ಟ EC

ಕೇಂದ್ರ ಸರ್ಕಾರದ ‘ವಿಕಸಿತ್ ಭಾರತ್’ (Viksit Bharat) ಪ್ರಚಾರಕ್ಕೆ ಕೇಂದ್ರ ಚುನಾವಣಾ ಆಯೋಗ ಬ್ರೇಕ್ ನೀಡಿದೆ. ‘ವಿಕಸಿತ್ ಭಾರತ್’ ಬಗ್ಗೆ ಜನರ ಮೊಬೈಲ್‌ಗೆ ಬರುತ್ತಿರುವ ವಾಟ್ಸ್​ಆ್ಯಪ್ ಸಂದೇಶವನ್ನು ತಕ್ಷಣ ನಿಲ್ಲುವಂತೆ ಸೂಚನೆ ನಿಡಿದೆ.

ಕೇಂದ್ರ ಚುನಾವಣಾ ಆಯೋಗವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ನೀತಿ ಸಂಹಿತೆ ಜಾರಿಯಾದ ನಂತರವೂ ವಿಕಸಿತ ಭಾರತಕ್ಕೆ ಸಂಬಂಧಿಸಿದ ಸಂದೇಶಗಳನ್ನು ಜನರು ಸ್ವೀಕರಿಸುತ್ತಿದ್ದರೆ, ಅವುಗಳನ್ನು ತಕ್ಷಣವೇ ನಿಲ್ಲಿಸಬೇಕು. ಈ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿ ಎಂದು ತಿಳಿಸಿದೆ.

ಏನಿದು ಕೇಂದ್ರ ಸರ್ಕಾರದ ಸಂದೇಶ..?
‘ವಿಕಸಿತ್ ಭಾರತ್ ಸಂಪರ್ಕ್’ ಅಭಿಯಾನದ ಅಡಿಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ನಡೆದಿದೆ. ವಿಕಸಿತ್ ಭಾರತ್ ಸಂಕಲ್ಪ್ ಹೆಸರಿನ ಅಧಿಕೃತ ವಾಟ್ಸ್​ಆ್ಯಪ್ ಖಾತೆ ಮೂಲಕ ಪ್ರಧಾನಿ ಮೋದಿಯವರ ಪತ್ರವನ್ನು ಕೋಟ್ಯಾಂತರ ಜನರಿಗೆ ಕಳುಹಿಸಲಾಗಿತ್ತು. ಕಳೆದ 10 ವರ್ಷಗಳಲ್ಲಿ ದೇಶದ 80 ಕೋಟಿಗೂ ಅಧಿಕ ನಾಗರಿಕರು ವಿವಿಧ ಯೋಜನೆಗಳ ನೇರ ಲಾಭ ಪಡೆದಿದ್ದಾರೆ. ಭಾರತ ಸರ್ಕಾರ ಭವಿಷ್ಯದಲ್ಲಿ ದೇಶದ ನಾಗರಿಕರನ್ನು ಭೇಟಿಯಾಗೋದನ್ನು ಮುಂದುವರಿಸುತ್ತದೆ. ಅಭಿವೃದ್ಧಿ ಹೊಂದಿದ ಭಾರತ ಆಗಲು, ನಿಮ್ಮ ಸಲಹೆ ಸೂಚನೆಗಳು ನಮಗೆ ಮುಖ್ಯ. ಹೀಗಾಗಿ ನಿಮ್ಮ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ ಎಂದು ಅಭಿಪ್ರಾಯವನ್ನು ಕೇಳಲಾಗುತ್ತಿತ್ತು.

ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದರೂ, ದೇಶದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದರೂ ಈ ಸಂದೇಶಗಳು ವಾಟ್ಸ್​​ಆ್ಯಪ್​​ಗೆ ಬರುತ್ತಿವೆ ಎಂಬ ದೂರು ಕೇಳಿಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ, ಕೇಂದ್ರ ಸರ್ಕಾರಕ್ಕೆ ನಿಲ್ಲಿಸುವಂತೆ ತಾಕೀತು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Viksit Bharat ಅಡಿಯಲ್ಲಿ ಜನರಿಗೆ ವಾಟ್ಸ್​​ಆ್ಯಪ್ ಮೆಸೇಜ್ ಕಳುಹಿಸುತ್ತಿದ್ದ ಕೇಂದ್ರಕ್ಕೆ ಬಿಗ್ ಶಾಕ್..!

https://newsfirstlive.com/wp-content/uploads/2024/03/MODI-5-1.jpg

Load More