Advertisment

ನಾಲ್ಕೇ ವರ್ಷಕ್ಕೆ ಸುಂದರ ಸಂಸಾರಕ್ಕೆ ಅಂತ್ಯ ಹಾಡಿದ ನಿವ್ವಿ-ಕುಕ್ಕಿ; ಇಬ್ಬರ ಮಧ್ಯೆ ನಡೆದಿದ್ದೇನು?

author-image
Veena Gangani
Updated On
ನಾಲ್ಕೇ ವರ್ಷಕ್ಕೆ ಸುಂದರ ಸಂಸಾರಕ್ಕೆ ಅಂತ್ಯ ಹಾಡಿದ ನಿವ್ವಿ-ಕುಕ್ಕಿ; ಇಬ್ಬರ ಮಧ್ಯೆ ನಡೆದಿದ್ದೇನು?
Advertisment
  • ಸಪ್ತಪದಿ ತುಳಿದ ನಾಲ್ಕು ವರ್ಷಕ್ಕೆ ಕ್ಯೂಟ್ ಜೋಡಿ ದಾಂಪತ್ಯದಲ್ಲಿ ಬಿರುಕು
  • ಮೈಸೂರು ದಸರಾದಲ್ಲಿ ಪ್ರಪೋಸ್ ಮಾಡಿ ಶಾಕ್​ ಕೊಟ್ಟಿದ್ದ ಸ್ಟಾರ್​ ಜೋಡಿ
  • ನೆನೆದಂತೆ ಬರುವವಳು ನೀನೇ ತಾನೇ ಹಾಡು ಬರೆದು ಪತ್ನಿಗೆ ಡೆಡಿಕೇಟ್

ಬಿಗ್​​ಬಾಸ್​ನಲ್ಲಿ ಪರಿಚಯ. ಮೈಸೂರು ದಸರಾದಲ್ಲಿ ಪ್ರಪೋಸ್ ಮಾಡಿ ಸಪ್ತಪದಿ ತುಳಿದಿದ್ದ ಕ್ಯೂಟ್ ಜೋಡಿಯ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದೆ. ಕೇವಲ ನಾಲ್ಕೇ ವರ್ಷಕ್ಕೆ ಸಂಸಾರದ ಜಂಜಾಟಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಗುಡ್ ಬಾಯ್ ಹೇಳಿದ್ದಾರೆ. ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಚಂದನ್‌ ಶೆಟ್ಟಿ ನಿವೇದಿತಾಗೆ ಕೊಟ್ಟಿದಂತಹ ಅತ್ಯಂತ ಬೆಲೆಬಾಳುವ ಗಿಫ್ಟ್ ಎಂದರೆ ನೆನೆದಂತೆ ಬರುವವನು ನೀನೇ ತಾನೇ ಹಾಡು. ಅವತ್ತಿಗೆ ಈ ಹಾಡು ರಿಯಾಲಿಟಿ ಶೋ ಎಲಿವೇಟ್‌ ಮಾಡಿತ್ತು.

Advertisment

publive-image

ಇದನ್ನೂ ಓದಿ: ಚಂದನ್ ಶೆಟ್ಟಿ, ನಿವೇದಿತಾ ಡಿವೋರ್ಸ್‌ಗೆ ಹೊಸ ಟ್ವಿಸ್ಟ್; ಬಿಗ್ ಶಾಕ್ ಕೊಟ್ಟ ಮಾಜಿ ಕಪಲ್ಸ್; ಏನಾಯ್ತು?

ಇನ್‌ಫ್ಯಾಕ್ಟ್‌, ಆ ವಾರದ ಎಪಿಸೋಡ್‌ನಲ್ಲಿ ಚಂದನಾ ಮತ್ತು ನಿವೇದಿತಾ ಗೌಡ, ಇಡೀ ರಾಜ್ಯದ ಜನರ ಮನಸ್ಸು ಗೆದ್ದಿದ್ದರು. ಅಂದು ಹಾಡಿನ ಮೂಲಕ ಪತ್ನಿಯನ್ನ ವರ್ಣಿಸಿದ್ದ ಚಂದನ್‌, ಕಣ್ಣೀರಿನ ಮೂಲಕ ಪತಿಯ ಪ್ರೀತಿಗೆ ಪ್ರತಿ ಉಡುಗೊರೆ ಕೊಟ್ಟಿದ್ದ ನಿವೇದಿತಾ ಇಬ್ಬರೂ ಈಗ ದೂರಾ ದೂರ ಆಗಿದ್ದಾರೆ. ಇವರಿಬ್ಬರ ನಡುವೆ ದೊಡ್ಡ ಬಿರುಗಾಳಿ ಬೀಸಿದೆ. ಈ ಇವರಿಬ್ಬರು ಡಿವೋರ್ಸ್‌ಗೆ ಮುಂದಾಗಿದ್ದಾರೆ.

ಈ ಕ್ಯೂಟ್‌ ಕಪಲ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಮದುವೆಯಾದ ನಾಲ್ಕೇ ವರ್ಷಕ್ಕೆ ಈ ಜೋಡಿ ನಾನೊಂದು ತೀರ ನೀನೊಂದು ತೀರ ಅಂದು ದೂರ ಆಗೋಕೆ ನಿರ್ಧಾರ ಮಾಡಿದೆ. ತಮ್ಮ ನಾಲ್ಕು ವರ್ಷದ ಸಾಂಸರಿಕ ಜೀವನಕ್ಕೆ ಇತಿಶ್ರೀ ಹಾಡಿದೆ. ಇಂತಹದೊಂದು ಸುದ್ದಿ ಬರಸಿಡಿಲಂತೆ ಎರಗಿದಾಗ ಯಾರೂ ನಂಬಿರಲಿಲ್ಲ.

Advertisment

publive-image

ಇಲ್ಲಿಯವರೆಗೂ ಇವರ ಬಗ್ಗೆ ಇಂತಹದೊಂದು ಸುದ್ದಿ ಗಂಭೀರವಾಗಿ ಕೇಳಿಬಂದಿರಲಿಲ್ಲ. ಯಾವಾಗ ಇವರಿಬ್ಬರು ಫ್ಯಾಮಿಲಿ ಕೋರ್ಟ್‌ನಲ್ಲಿದ್ದಾರೆ. ಗುರುವಾರವೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಅನ್ನೋ ಸುದ್ದಿ ಮಧ್ಯಾಹ್ನ ರಭಸವಾಗಿ ಎಲ್ಲೆಡೆ ಹರಡಿಬಿಟ್ಟಿತು. ಈ ಸುದ್ದಿ ತಿಳಿಯುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳೆಲ್ಲಾ ಫ್ಯಾಮಿಲಿ ಕೋರ್ಟ್‌ಗೆ ಹೋದರು. ಅಲ್ಲಿ ಎಲ್ಲಿ ನೋಡಿದರೂ ಇವರಿಬ್ಬರು ಕಾಣಿಸಿರಲಿಲ್ಲ. ಬಹುಶಃ ಈ ಸುದ್ದಿ ಸುಳ್ಳಿರಬೇಕು ಎಂದೇ ಎಲ್ಲರೂ ಭಾವಿಸಿದ್ದರು. ಯಾವಾಗ ಇವರಿಬ್ಬರು, ಕಾಣಿಸಿಕೊಂಡರೋ ಆಗ ಈ ಸುದ್ದಿ ಕನ್ಫರ್ಮ್ ಆಯ್ತು. ಈ ಜೋಡಿ ನಿನ್ನೆಯೇ ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

publive-image

ಆಶ್ಚರ್ಯ ಅಂದ್ರೆ.. ಕೋರ್ಟ್‌ ಹಾಲ್‌ನಲ್ಲಿ ಇವರಿಬ್ಬರು ಕೈ ಕೈ ಹಿಡಿದುಕೊಂಡೇ ಕುಳಿತುಕೊಂಡಿದ್ದರು. ಈ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಕಪಲ್‌ ನಾನೊಂದು ತೀರ ನೀನೊಂದು ತೀರ ರೀತಿ ಇರ್ತಿದ್ದನ್ನ ಎಲ್ಲರೂ ನೋಡ್ತಿದ್ದರು. ಇವರಿಬ್ಬರ ನಡುವೆ ಭಿನ್ನಾಭಿಪ್ರಾಯವೇ ಇಲ್ಲವೇನೋ ಅನ್ನೋ ರೀತಿ ಇದ್ದರು. ಇಬ್ಬರು ಕೈ ಕೈ ಹಿಡಿದುಕೊಂಡು ಪಕ್ಕದಲ್ಲಿಯೇ ಕುಳಿತ್ತಿದ್ದರು. ಡಿವೋರ್ಸ್​ಗಾಗಿ ಕೋರ್ಟ್​ ಮೆಟ್ಟಿಲೇರಿದ್ದ ನಿವ್ವಿ-ಚಂದನ್ ಹಿಂದೂ ಮ್ಯಾರೇಜ್ ಆ್ಯಕ್ಟ್‌ 13B ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು.

ಹೀಗಾಗಿ ಶುಕ್ರವಾರ ನಿವೇದಿತಾ ಮತ್ತು ಚಂದನಾ ನ್ಯಾಯಾಧೀಶರ ಮುಂದೆ ಹಾಜರಾಗಿದ್ರು. ಈ ವೇಳೆ ಮಧ್ಯಸ್ಥಿಕೆ ನಡೆಸುವ ಅರ್ಬಿಟ್ರೇಟರ್ ಅನಿತಾ ಮುಂದೆ ಇಬ್ಬರನ್ನ ವಿಚಾರಣೆ ನಡೆಸಲಾಗಿತ್ತು. ಇಬ್ಬರ ಮಧ್ಯೆ ಏನಾದ್ರೂ ಗೊಂದಲ ಇದ್ಯಾ? ಡಿವೋರ್ಸ್ ಪಡೆಯಲು ಕಾರಣಗಳೇನು ಅನ್ನೋ ವಿಚಾರದ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಇಬ್ಬರ ಮನವೊಲಿಕೆಗೆ ಕೋರ್ಟ್ ಪ್ರಯತ್ನಿಸಿದ್ರೂ ನಿವೇದಿತಾ ಮತ್ತು ಚಂದನ್ ತಮ್ಮ ನಿರ್ಧಾರ ಬದಲು ಮಾಡಲಿಲ್ಲ. ಕೊನೆಗೆ ನ್ಯಾಯಾಲಯ ಇಬ್ಬರ ಮನವಿಯನ್ನ ಪುರಸ್ಕರಿಸಿತು.

Advertisment

publive-image

ಇದನ್ನೂ ಓದಿ: OYO ರೂಮ್ ಬುಕ್ ಮಾಡಿದ ಸ್ನೇಹಿತ, ಭೇಟಿಗೆ ಬಂದಳು ಸ್ನೇಹಿತೆ.. ಮುಂದೆ ಆಗಿದ್ದು ನೀವು ಊಹಿಸೋಕೆ ಆಗಲ್ಲ

ನಾಲ್ಕು ವರ್ಷದ ದಾಂಪತ್ಯಕ್ಕೆ ಗುಡ್ ಬಾಯ್ ಹೇಳಿ ಡಿವೋರ್ಸ್​ಗಾಗಿ ಅರ್ಜಿ ಸಲ್ಲಿಸಿರುವ ನಿವೇದಿತಾ ಮತ್ತು ಚಂದನಾ ಅರ್ಜಿಯಲ್ಲಿ ಇಬ್ಬರ ಮಧ್ಯೆ ಕೆಲ ಭಿನ್ನಾಭಿಪ್ರಾಯಗಳಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಜೊತೆಗೆ ಕರಿಯರ್ ಬದಲಾವಣೆ ಬಗ್ಗೆ ಬರೆದಿರುವ ಬಿಗ್​ಬಾಸ್ ಜೋಡಿ ಪ್ರಮುಖ ಮೂರು ಅಂಶಗಳನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ. ನಿಮಗೆಲ್ಲ ಗೊತ್ತಿರುವ ಹಾಗೇ ತುಂಬಾ ಚಿಕ್ಕ ವಯಸ್ಸಿನಲ್ಲೇ ನಿವೇದಿತಾಗೌಡ ಚಂದನ್ ಶೆಟ್ಟಿಯನ್ನ ಮದುವೆಯಾಗಿದ್ರು. ಹೀಗಾಗಿ ಮದುವೆಯಾದ್ಮೇಲೆ ನಿವ್ವಿಗೆ ತಮ್ಮ ಕರಿಯರ್ ಕಡೆ ಗಮನ ಕೊಡೋದಕ್ಕೆ ಸಾಧ್ಯವಾಗಿಲ್ವಂತೆ. ಹೀಗಾಗಿ ಡಿವೋರ್ಸ್​ ಅರ್ಜಿಯಲ್ಲೂ ಇದೇ ಕಾರಣವನ್ನು ಉಲ್ಲೇಖಿಸಿರುವ ದಂಪತಿ ನಿವೇದಿತಾಗೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡೋ ಕನಸು ಇರೋದಾಗಿ ಹೇಳಿದೆ. ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿರುವ ಮೂರು ಅಂಶದಲ್ಲಿ ಈ ಕಾರಣವೂ ಕೂಡ ಒಂದು ಅಂತ ಬರೆದಿದೆ. ಈಗಾಗಲೇ ಚಂದನ್​ ಱಪರ್ ಆಗಿ ಗುರುತಿಸಿಕೊಂಡಿದ್ರು ಬಿಗ್ ಸಕ್ಸಸ್ ಯಾವುದೂ ಸಿಕ್ಕಿಲ್ಲ.

ಅತ್ತ ನಿವೇದಿತಾಗೌಡ ರಿಯಾಲಿಟಿ ಶೋಗಳಲ್ಲ ಕಾಣಿಸಿಕೊಂಡ್ರು ಅಂದುಕೊಂಡಷ್ಟು ಸಕ್ಸಸ್ ಸಿಕ್ಕಿಲ್ಲ. ಹೀಗಾಗಿ ಇಬ್ಬರ ಭವಿಷ್ಯದ ಸಲುವಾಗಿ ಕರಿಯರ್​ ಬದಲಾವಣೆ ವಿಚಾರವಾಗಿ ಅರ್ಜಿ ಸಲ್ಲಿಸಿರೋದಾಗಿ ನಿವೇದಿತಾ ಮತ್ತು ಚಂದನ್ ಡಿವೋರ್ಸ್​ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸಂಸಾರ ಅಂದ್ಮೇಲೆ ಸಣ್ಣ ಪುಟ್ಟ ಜಗಳಗಳು ಮನಸ್ತಾಪಗಳು ಇದ್ದೇ ಇರ್ತವೆ. ಆದ್ರೆ ನಿವೇದಿತಾ ಮತ್ತು ಚಂದನ್ ಸಂಸಾರದಲ್ಲೂ ಇಂಥಾದ್ದೆ ಭಿನ್ನಾಭಿಪ್ರಾಯಗಳಿವೆಯಂತೆ. ಹೀಗಾಗಿ ಈ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ವಿಚ್ಚೇಧನಕ್ಕೆ ಮೊರ ಹೋಗಿರೋದಾಗಿ ಇಬ್ಬರು ನ್ಯಾಯಾಲಯದ ಮುಂದೆ ಹೇಳಿದ್ದಾರೆ.

Advertisment

publive-image

ಕೋರ್ಟ್​ನಲ್ಲಿ ಬಿಗ್​ಬಾಸ್​ ಜೋಡಿ ಹೇಳಿದ್ದೇನು?

ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಚಾಕೋಲೆಟ್ ಹುಡುಗಿ ನಿವೇದಿತಾ ಮತ್ತು ಚಂದನ್ ಶುಕ್ರವಾರ ಶಾಂತಿನಗರದ ಫ್ಯಾಮಿಲಿ ಕೋರ್ಟ್​​ಗೆ ಆಗಮಿಸಿದ್ರು. ಈ ವೇಳೆ ಇಬ್ಬರಿಗೂ ವಿಚಾರಣೆ ನಡೆಸಿದ ಜಡ್ಜ್ ವಿಚ್ಚೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದು ಯಾಕೆ ಅಂತ ಕೇಳಿದ್ರು. ಇದಕ್ಕೆ ಉತ್ತರಿಸಿದ ಚಂದನ್ ದಂಪತಿ ಪರಸ್ಪರ ಒಪ್ಪಿ ವಿಚ್ಚೇಧನ ಪಡೆಯುತ್ತಿದ್ದೇವೆ. ಇಬ್ಬರ ಮಧ್ಯೆ ಸ್ವಲ್ಪ ಭಿನ್ನಾಭಿಪ್ರಾಯಗಳಿವೆ. ಹಾಗೇ ನಮ್ಮ ಕರಿಯರ್ ಬಗ್ಗೆ ಕೆಲ ಕನಸುಗಳಿದ್ದು, ಈಗ ನಾವಿಬ್ಬರು ಖುಷಿಯಾಗಿಯೇ ಬೇರೆಯಾಗಲು ನಿರ್ಧರಿಸಿದ್ದೇವೆ ಅಂತ ಹೇಳಿದ್ರು. ಬಳಿಕ ಕೋರ್ಟ್ ಸ್ವಲ್ಪ ಕಾಯಿರಿ ಅಂತ ಸೂಚಿಸಿ ಕೊನೆಗೆ ಚಂದನ್ ಮತ್ತು ನಿವೇದಿತಾ ವಿಚ್ಛೇಧನಕ್ಕೆ ಅನುಮತಿ ನೀಡ್ತು. ಸದ್ಯ ಕೋರ್ಟ್ ಇಬ್ಬರಿಗೂ ಡಿವೋರ್ಸ್​​ ಪಡೆಯಲು ಒಪ್ಪಿಗೆ ನೀಡಿದೆ. ಅಧಿಕೃತ ಆದೇಶ ಪ್ರತಿ ಬರುವುದು ಬಾಕಿಯಿದ್ದು, ಈ ಮಧ್ಯೆ ಇಬ್ಬರ ಮಧ್ಯೆ ಕೆಲ ಒಪ್ಪಂದಗಳಾಗಿವೆ.

publive-image

ಚಂದನ್ ಮತ್ತು ನಿವೇದಿತಾ ನಡುವಿನ ಒಪ್ಪಂದಗಳೇನು?

ಚಂದನ್ ಮತ್ತು ನಿವೇದಿತಾ ವಿಚ್ಛೇದನಕ್ಕೆ ನ್ಯಾಯಾಲಯ ಅನುಮತಿ ಕೊಟ್ಟಿದ್ರೂ ಇಬ್ಬರ ಪರಸ್ಪರ ಒಪ್ಪಂದಗಳು ಆಗಿವೆ. ಡಿವೋರ್ಸ್ ಬಳಿಕ ಆರೋಪ ಮತ್ತು ಪ್ರತ್ಯಾರೋಪ ಮಾಡುವಂತಿಲ್ಲ. ಮತ್ತು ವಿಚ್ಚೇದನದ ಬಳಿಕ ಯಾರೊಬ್ಬರು ಪರಿಹಾರ ಕೇಳುವಂತಿಲ್ಲ. ಇದಲ್ಲದೇ ಇಬ್ಬರ ಬಳಿ ಇರುವ ಮೌಲ್ಯ ವಸ್ತುಗಳನ್ನ ಮಧ್ಯ ವರ್ತಿಗಳ ಮೂಲಕ ಹಂಚಿಕೆ ಮಾಡಲು ಒಪ್ಪಂದವಾಗಿದೆ. ನಾಲ್ಕು ವರ್ಷ ಒಟ್ಟಿಗೆ ಸಂಸಾರ ಮಾಡಿದ್ದ ನಿವೇದಿತಾ ಮತ್ತು ಚಂದನ್ ದಾಂಪತ್ಯ ಜೀವನಕ್ಕೆ ಕೊನೆ ಹೇಳೋ ನಿರ್ಧಾರ ಮಾಡಿದ್ದಾರೆ. ವಿಚ್ಛೇದನಕ್ಕಾಗಿ ಇಬ್ಬರು ಖುಷಿಯಿಂದಲೇ ದೂರ ಆಗ್ತೀದ್ದೀವಿ ಅಂತ ಹೇಳಿದ್ದಾರೆ ಆದ್ರೆ, ನಿಜಕ್ಕೂ ನಡೆದಿದ್ದೇನು? ವಿಚ್ಚೇಧನಕ್ಕೆ ಅಸಲಿ ಕಾರಣಗಳೇನು ಅನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿರುವದಂತು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment