‘ಸರ್ಪ್ರೈಸ್ ಕೊಡ್ತೀನಿ ಕಣ್ಣು ಮುಚ್ಚಿಕೋ ಅಂದ, ಆಮೇಲೆ ನೋಡಿದ್ರೆ..’ ನಟ ಮನು ಬಗ್ಗೆ ಸಂತ್ರಸ್ತೆ ಮತ್ತಷ್ಟು ಆರೋಪ

author-image
Ganesh
Updated On
‘ಸರ್ಪ್ರೈಸ್ ಕೊಡ್ತೀನಿ ಕಣ್ಣು ಮುಚ್ಚಿಕೋ ಅಂದ, ಆಮೇಲೆ ನೋಡಿದ್ರೆ..’ ನಟ ಮನು ಬಗ್ಗೆ ಸಂತ್ರಸ್ತೆ ಮತ್ತಷ್ಟು ಆರೋಪ
Advertisment
  • ಮಡೆನೂರು ಮನು ಮತ್ತು ಸಂತ್ರಸ್ತೆ ಎಷ್ಟು ವರ್ಷದಿಂದ ಸ್ನೇಹಿತರು?
  • ಸಪ್ರೈಸ್ ಅಂತಾ ತಾಳಿ ಕಟ್ಟಿ ಮಡೆನೂರು ಮನು ಏನು ಹೇಳಿದ್ರಂತೆ..?
  • ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು ಬ್ಲ್ಯಾಕ್ ಮೇಲ್ ಆರೋಪ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸ್ಯ ನಟ ಮಡೆನೂರು ಮನು ಅವರನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೆ ಒಳಗಾಗಿರುವ ನಟನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇತ್ತ, ಸಂತ್ರಸ್ತ ನಟಿ ತಮಗೆ ಆಗಿರುವ ಮೋಸದ ಬಗ್ಗೆ ನ್ಯೂಸ್​ಫಸ್ಟ್​ ಜೊತೆ ಎಳೆಎಳೆಯಾಗಿ ಹೇಳಿಕೊಂಡಿದ್ದಾರೆ. ನನಗೆ ಆಗಿರುವ ನೋವುಗಳನ್ನು ಪೊಲೀಸ್ ಅಧಿಕಾರಿಗಳಿಗೆ ಹೇಳಿಕೊಂಡಿದ್ದೇನೆ. ಆತ ನನ್ನ ಮೇಲೆ ಏನು ಆರೋಪ ಮಾಡಿದ್ದಾನೋ ಗೊತ್ತಿಲ್ಲ. ಕಳೆದ ಎರಡ್ಮೂರು ದಿನಗಳಿಂದ ನಾನು ಮೆಡಿಕಲ್ ಟೆಸ್ಟ್​ನಲ್ಲಿದ್ದೆ. ಆತ ನನ್ನನ್ನು ಎಲ್ಲಾ ರೀತಿಯಿಂದಲೂ ಬಳಸಿಕೊಂಡಿದ್ದಾನೆ ಎಂದು ದೂರಿದರು.

ಇದನ್ನೂ ಓದಿ: ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು ನಟಿಗೆ ಬ್ಲಾಕ್ ಮೇಲ್.. ಮಡೆನೂರು ಮನು ಮೇಲೆ ಸಾಲು ಸಾಲು ಆರೋಪ

publive-image

ನನ್ನ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ. ಕೊಲೆಗೆ ಯತ್ನಿಸಿದ್ದಾನೆ. ಹೊಡೆದಿದ್ದಾನೆ, ಬಡೆದಿದ್ದಾನೆ, ಚಿತ್ರಹಿಂಸೆ ನೀಡಿದ್ದಾನೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿ ಬಂದಿದ್ದೇನೆ ಎಂದರು.

ಪರಿಚಯ ಆಗಿದ್ದು ಹೇಗೆ..?

ಸಂತ್ರಸ್ತ ನಟಿ ಹೇಳುವಂತೆ.. ‘‘ನಾವಿಬ್ಬರು 7 ವರ್ಷಗಳಿಂದ ಸ್ನೇಹಿತರು. ಆತ ನನಗೆ ಬೆಸ್ಟ್​ ಫ್ರೆಂಡ್. ನಾವಿಬ್ಬರು ತುಂಬಾ ಕ್ಲೋಸ್ ಆಗಿದ್ವಿ. ನನಗೆ ಅಪ್ಪ, ಅಮ್ಮ ಯಾರೂ ಇಲ್ಲದಿರೋದನ್ನು ಮಿಸ್ ಯೂಸ್ ಮಾಡಿಕೊಳ್ಳಲು ಶುರುಮಾಡಿದ. 2022ರಲ್ಲಿ ಕಾರ್ಯಕ್ರಮ ಒಂದರ ಸಂಬಂಧ ಹಣ ನೀಡಲು ಬಂದು ಲೈಂಗಿಕ ದೌರ್ಜನ್ಯ ನಡೆಸಿದ. ಇದರಿಂದ ಆಘಾತಕ್ಕೆ ಒಳಗಾದೆ. ಏನು ಮಾಡಬೇಕು ಅಂತಾ ಗೊತ್ತಾಗಲಿಲ್ಲ. ಯಾಕೆಂದರೆ ಆತ ನನ್ನ ಬೆಸ್ಟ್​ ಫ್ರೆಂಡ್ ಆಗಿದ್ದ. ಪೊಲೀಸರಿಗೆ ಮಾಹಿತಿ ನೀಡಬೇಕೋ, ಬಿಡಬೇಕೋ ಎಂಬ ಚಿಂತೆಯಲ್ಲಿ ಬಿದ್ದಿದೆ’’.

ಇದನ್ನೂ ಓದಿ: ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು ನಟಿಗೆ ಬ್ಲಾಕ್ ಮೇಲ್.. ಮಡೆನೂರು ಮನು ಮೇಲೆ ಸಾಲು ಸಾಲು ಆರೋಪ

publive-image

ಈ ಘಟನೆ ನಡೆದು ಎರಡ್ಮೂರು ದಿನಗಳ ನಂತರ ಆತ ನಾನಿದ್ದಲ್ಲಿಗೆ ಮತ್ತೆ ಬಂದಿದ್ದ. ‘ನಿನಗೆ ಯೂಸ್ ಆಗುವ ಥರಾ ಏನೋ ಸರ್ಪ್ರೈಸ್ ಕೊಡ್ತೀನಿ. ಇದರಿಂದ ತುಂಬಾನೇ ಒಳ್ಳೆಯದು ಆಗಲಿದೆ’ ಎಂದ. ಆಗ ನಾನು ಏನೋ ಕೊಡಲು ಬಂದಿದ್ದಾನೆ ಅನ್ಕೊಂಡೆ. ಆತ ಕಣ್ಣು ಮುಚ್ಚಿಕೊಳ್ಳುವಂತೆ ಹೇಳಿದ. ನಾನು ಕಣ್ಮುಚ್ಚಿಕೊಂಡೆ. ಕೊನೆಗೆ ನೋಡಿದ್ರೆ ತಾಳಿ ಕಟ್ಟಿದ್ದ.

ಆಮೇಲೆ..

‘ನನ್ನ ಅಪ್ಪನಿಗೂ ಇಬ್ಬರು ಹೆಂಡತಿಯರು. ನನಗೂ ಇಬ್ಬರು ಪತ್ನಿಯರು. ಚಿಂತೆ ಮಾಡಬೇಡ. ನಾನು ನಿನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ತೇನೆ’ ಎಂದ. ‘ಮಾಡಬಾರದ ಅನಾಚಾರ ಮಾಡಿ ಈಗ ತಾಳಿ ಕಟ್ಟಿದ್ರೆ ಬೆಲೆ ಏನಿರುತ್ತೆ ಎಂದು ಕೇಳಿದೆ. ಇದನ್ನು ನಾನು ಒಪ್ಪಲ್ಲ. ನಿನಗೆ ಮದುವೆ ಆಗಿದೆ, ಮಕ್ಕಳಿದ್ದಾರೆ ಎಂದೆ’.

ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಆರೋಗ್ಯ ಇಲಾಖೆ ಗುಡ್​ನ್ಯೂಸ್.. ತಿಳಿದುಕೊಳ್ಳಲೇಬೇಕಾದ ಸ್ಟೋರಿ

publive-image

ಅದಕ್ಕೆ ಆತ.. ‘ನಾನು ನಿನ್ನೊಂದಿಗೆ 15 ದಿನ, ಮನೆಯಲ್ಲಿ 15 ದಿನ ಇರುತ್ತೇನೆ. ನನ್ನ ಹೆಂಡತಿ ನನಗೆ ಏನೂ ಹೇಳಲ್ಲ. ಔಟ್ ಸೈಡ್ ಏನು ಬೇಕಾದರೂ ಮಾಡಿಕೊಂಡು ಬನ್ನಿ, ನಮಗೆ ಸಂಬಂಧವಿಲ್ಲ. ಆದರೆ ಮನೆಯಲ್ಲಿರುವ ಮಕ್ಕಳು ಮತ್ತು ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾಳೆ. ಹಾಗಾಗಿ ಯಾವುದೇ ಸಮಸ್ಯೆ ಆಗಲ್ಲ. ಎರಡು ವರ್ಷ ಆದ್ಮೇಲೆ ನಾವಿಬ್ಬರೂ ಎಲ್ಲರಿಗೂ ಗೊತ್ತಾಗುವ ರೀತಿಯಲ್ಲಿ ಮದುವೆ ಆಗೋಣ’ ಎಂದಿದ್ದ.

‘ಈತನ ಇಂಥ ಮಾತಿಗೆ ನಂಬಿ ಮೋಸ ಹೋಗಿದ್ದು ಒಂದೆರಡು ಬಾರಿ ಅಲ್ಲ. ನನಗೆ ಎರಡು ಬಾರಿ ಅಬಾರ್ಟ್​ ಆಗಿದೆ. ನನ್ನನ್ನ ಬಳಸಿಕೊಂಡ ಆತ, ನನಗೆ ಬೆದರಿಕೆ ಹಾಕಿದ್ದಾನೆ. ಕೊಲೆಗೆ ಯತ್ನಿಸಿದ್ದಾನೆ. ಇದರಿಂದ ಒಮ್ಮೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದೆ. ಬರುಬರುತ್ತ ಈತನಿಗೆ ಬೇರೆ ಬೇರೆ ಹೆಣ್ಮಕ್ಕಳ ಸಹವಾಸ ಇರೋದು ಗೊತ್ತಾಗಿದೆ. ಇದನ್ನು ಪ್ರಶ್ನಿಸಿದಾಗಲೂ ಹಿಂಸೆ ನೀಡಿದ್ದಾನೆ. ಇತ್ತೀಚೆಗೆ ನಾನು ಆಸ್ಪತ್ರೆಗೆ ದಾಖಲಾಗಿ, ಡಿಸ್ಚಾರ್ಜ್ ಆಗಿ ಬಂದಿದ್ದೆ. ಮಾರ್ಚ್​​ನಲ್ಲಿ ನನ್ನನ್ನು ನೋಡಲು ಬಂದು ಮತ್ತೆ ಬಳಸಿಕೊಳ್ಳಲು ಯತ್ನಿಸಿದ. ಅಲ್ಲದೇ, ನನ್ನ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್​​ಗೆ ಯತ್ನಿಸಿದ ಎಂದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಕೈಕೊಟ್ಟ ಜಕೊಬ್ ಬೆಥಲ್.. ಆರ್​ಸಿಬಿಗೆ ಮತ್ತೊಬ್ಬ ಸ್ಫೋಟಕ ಬ್ಯಾಟರ್​ ಎಂಟ್ರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment