/newsfirstlive-kannada/media/post_attachments/wp-content/uploads/2025/05/ETHICHAL-HACKING.jpg)
SSLC ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ. ಕಾರಣ 1ನೇ ಕ್ಲಾಸಿನಿಂದ SSLCವರೆಗೂ ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಆಯ್ಕೆಗಳು ಇರೋದಿಲ್ಲ. ಎಲ್ಲರೂ ಎಲ್ಲವನ್ನೂ ಓದಬೇಕು. ಮೊದಲ ಬಾರಿಗೆ SSLC ಬಳಿಕ ಇವರಿಗೆ ಬೇಕಾದ ಕೋರ್ಸ್ ಮಾಡಬಹುದು. ತುಂಬಾ ಆಪ್ಷನ್ಸ್ ಇರೋದರಿಂದ ಯಾವ ಕೋರ್ಸ್ ಮಾಡಬೇಕು ಅನ್ನೋ ಸಂದಿಗ್ಧ ಪ್ರಶ್ನೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎದುರಾಗೋದು ಕಾಮನ್.
ಸಾಮಾನ್ಯವಾಗಿ SSLC ಬಳಿಕ ಎಲ್ಲರೋ ಚೂಸ್ ಮಾಡೋದು ಪಿಯುಸಿ. ಪಿಯುಸಿಯಲ್ಲಿ ಬೇರೆಬೇರೆ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಬಹುದು. ಈ ಕೋರ್ಸ್‌ನಲ್ಲಿ ಮೂರು ವಿಭಾಗಗಳಲ್ಲಿ ಎಂದರೆ ಸೈನ್ಸ್, ಕಾಮರ್ಸ್, ಆರ್ಟ್ಸ ವಿಭಾಗಗಳಲ್ಲಿ ಓದಬಹುದು. ನಿಮಗೆ ಯಾವುದು ಸೂಕ್ತ ಎನಿಸುತ್ತದೆ ಆ ಕೋರ್ಸ್‌ನಲ್ಲಿ ಅಧ್ಯಯನ ಮಾಡಬಹುದು. ಇಷ್ಟೇ ಅಲ್ಲ ಎಸ್ಎಸ್ಎಲ್ಸಿ ನಂತರ ಡಿಪ್ಲೊಮ ಇಂಜಿನಿಯರಿಂಗ್ ಮಾಡುವುದಕ್ಕೂ ಅವಕಾಶವಿದೆ. ಅದರಲ್ಲೂ ಡಿಪ್ಲೋಮಾ ಇನ್ ಎಥಿಕಲ್ ಹ್ಯಾಕಿಂಗ್ ಕೋರ್ಸ್ ಮಾಡಬಹುದು. ಕಂಪ್ಯೂಟರ್ ಮತ್ತು ಐಟಿ ಕ್ಷೇತ್ರದಲ್ಲಿ ಈ ಕೋರ್ಸ್ಗೆ ಭಾರೀ ಡಿಮ್ಯಾಂಡ್.
ಇದನ್ನೂ ಓದಿ: ಬೇಡಿಕೆ ಕಳೆದುಕೊಂಡ ಇಂಜಿನಿಯರಿಂಗ್.. ಆಘಾತಕಾರಿ ಎಚ್ಚರಿಕೆ ಕೊಡ್ತಿದೆ ಕಳೆದ ಬಾರಿಯ ಅಡ್ಮಿಷನ್ ಸಂಖ್ಯೆ..!
ಏನಿದು ಡಿಪ್ಲೋಮಾ ಇನ್ ಎಥಿಕಲ್ ಹ್ಯಾಕಿಂಗ್..?
ಇಡೀ ಕಂಪ್ಯೂಟರ್ ಜಗತ್ತನ್ನೇ ಬೆಚ್ಚಿಬೀಳಿಸೋ ಸಾವಿರಾರು ಹ್ಯಾಕರ್‌ಗಳು ಜಗತ್ತಿನಲ್ಲಿದ್ದಾರೆ. ಕೋಟಿ ಕೋಟಿ ವ್ಯವಹಾರ ನಡೆಸೋ ಕಂಪನಿಗಳು ಇಂತಹ ಹ್ಯಾಕರ್‌ಗಳಿಗೆ ಭಯಬೇಕಾಗುತ್ತದೆ. ಕಾರಣ ಎಷ್ಟೋ ಬಾರಿ ಈ ಹ್ಯಾಕರ್‌ಗಳು ದುರುದ್ದೇಶಪೂರಿತವಾಗಿ ಕಂಪನಿಗಳ ಲಕ್ಷಾಂತರ ಬಳಕೆದಾರರ ಮಾಹಿತಿಯನ್ನು ಕದಿಯುತ್ತವೆ. ಇಂತಹ ಅಪಾಯದಿಂದ ಪಾರಾಗಲು ಬಹುತೇಕ ಕಂಪನಿಗಳು ತಮ್ಮ ಕಂಪ್ಯೂಟರ್ ವ್ಯವಸ್ಥೆ ಅಥವಾ ನೆಟ್‌ವರ್ಕ್ ವ್ಯವಸ್ಥೆಯನ್ನು ಬಲಪಡಿಸಲು ನಂಬಿಗಸ್ಥ ನೈತಿಕ ಹ್ಯಾಕರ್ಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಅದಕ್ಕಾಗಿ ಎಥಿಕಲ್ ಹ್ಯಾಕಿಂಗ್ ಕೋರ್ಸ್ ಮಾಡಬೇಕಾಗುತ್ತದೆ. ಕೋರ್ಸ್‌ನಲ್ಲಿ ಕಳ್ಳ ಹ್ಯಾಕರ್‌ಗಳು ಬಳಸುವ ಹಲವು ತಂತ್ರಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಎಥಿಕಲ್ ಹ್ಯಾಕಿಂಗ್ ಮುಖ್ಯ ಉದ್ದೇಶ ಕಂಪನಿಯ ನೆಟ್‌ವರ್ಕ್ ವ್ಯವಸ್ಥೆಯನ್ನು ಕಾಪಾಡುವುದು. ಈ ಕೋರ್ಸ್ ಮಾಡಿದವರಿಗೆ ಜಾಬ್ ಮಾರ್ಕೆಟ್ನಲ್ಲಿ ಭಾರೀ ಡಿಮ್ಯಾಂಡ್ ಇದೆ.
ಎಥಿಕಲ್ ಹ್ಯಾಕಿಂಗ್ ಕೋರ್ಸ್‌ನಲ್ಲಿ ಏನು ಕಲಿಯಬಹುದು..?
ಹ್ಯಾಕಿಂಗ್ ಯಾವುದೇ ಮಂತ್ರ ವಿದ್ಯೆಯಲ್ಲ. ಒಂದು ರಾತ್ರಿಯಲ್ಲಿ ಎಥಿಕಲ್ ಹ್ಯಾಕರ್ ಆಗಲು ಸಾಧ್ಯವಿಲ್ಲ. ಇದು ಇತರ ಕೋರ್ಸ್‌ಗಳಂತೆ ಶ್ರದ್ಧೆಯಿಟ್ಟು ಕಲಿತು ಪಡೆದುಕೊಳ್ಳಬಹುದಾದ ಪರಿಣತಿಯಾಗಿದೆ. ಎಥಿಕಲ್ ಹ್ಯಾಕಿಂಗ್ ಕಲಿಯಲು ನಿಮಗೆ ಅಪರೇಟಿಂಗ್ ಸಿಸ್ಟಮ್, ಕಂಪ್ಯೂಟರ್ ನೆಟ್‌ವರ್ಕ್‌ಗಳು, ಕಂಪ್ಯೂಟರ್ ಭದ್ರತೆ ಇತ್ಯಾದಿಗಳ ಬಗ್ಗೆ ಉತ್ತಮ ಜ್ಞಾನ ಇರಬೇಕು. ಅಮೆರಿಕದ ಇಸಿ ಕೌನ್ಸಿಲ್‌ನಡಿ ನೈತಿಕವಾಗಿ ಹ್ಯಾಕಿಂಗ್ ಮಾಡಲು ಕಲಿಸಿಕೊಡುವ ಹಲವು ಶಿಕ್ಷಣ ಸಂಸ್ಥೆಗಳು ಭಾರತದಲ್ಲಿ ಇವೆ.
ಇಂಟ್ರೊಡಕ್ಷನ್ ಟು ಎಥಿಕಲ್ ಹ್ಯಾಕಿಂಗ್, ಫೂಟ್ ಪ್ರಿಂಟಿಂಗ್ ಆ್ಯಂಡ್ ರೆಕೊನಸಿನ್ಸ್, ಸ್ಕ್ಯಾನಿಂಗ್ ನೆಟ್‌ವಕ್ಸ್, ಇನ್ಯುಮೆರೆಷನ್, ಸಿಸ್ಟಮ್ ಹ್ಯಾಕಿಂಗ್, ಟ್ರೊಜನ್ಸ್ ಆ್ಯಂಡ್ ಬ್ಯಾಕ್‌ಡೋರ್ಸ್, ವೈರಸಸ್ ಆ್ಯಂಡ್ ವರ್ಮ್ಸ್, ಸ್ನಿಫರ್ಸ್, ಸೋಷಿಯಲ್ ಎಂಜಿನಿಯರಿಂಗ್, ಡೆನಿಯಲ್ ಆಫ್ ಸರ್ವೀಸ್, ಸೆಸನ್ ಹೈಜಾಕಿಂಗ್, ಹೈಜಾಕಿಂಗ್ ವೆಬ್ ಸರ್ವರ್ಸ್, ಹ್ಯಾಕಿಂಗ್ ವೆಬ್ ಅಪ್ಲಿಕೇಷನ್ಸ್, ಎಸ್‌ಕ್ಯೂಎಲ್ ಇಂಜೆಕ್ಷನ್, ಹ್ಯಾಕಿಂಗ್ ವೈರ್‌ಲೆಸ್ ನೆಟ್‌ವರ್ಕ್ಸ್, ಇವಾಡಿಂಗ್ ಐಡಿಎಸ್, ಫೈರ್‌ವಾಲ್ಸ್ ಆ್ಯಂಡ್ ಹನಿ ಪಾಟ್ಸ್, ಬಫರ್ ಓವರ್‌ಫ್ಲೋ, ಕ್ರಿಪ್ಟೊಗ್ರಫಿ ಮತ್ತು ಪೆನೆಟ್ರೇಷನ್ ಟೆಸ್ಟಿಂಗ್ ಬಗ್ಗೆ ಕಲಿಯಬಹುದು.
ಇದನ್ನೂ ಓದಿ: ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್.. ಸರ್ಕಾರದ ಈ ನಿರ್ಧಾರದಿಂದ ಫೀಸ್ ಡಬಲ್ ಆಗೋ ಸಾಧ್ಯತೆ
ಉದ್ಯೋಗಾವಕಾಶಗಳು ಹೇಗಿವೆ..?
ಬಹುಕೋಟಿ ವ್ಯವಹಾರ ನಡೆಸುವ ಬಹುತೇಕ ಕಂಪನಿಗಳು ಸುರಕ್ಷತೆಯ ದೃಷ್ಟಿಯಿಂದ ‘ನೈತಿಕ ಹ್ಯಾಕರ್’ಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ಎಥಿಕಲ್ ಹ್ಯಾಕರ್‌ಗಳಿಗೆ ಸೆಕ್ಯೂರಿಟಿ ಥ್ರೆಟ್ಸ್, ರಿಸ್ಕ್ ಮತ್ತು ಕೌಂಟರ್‌ಮೆಷರ್‌ಗಳ ಜ್ಞಾನ ಇರುವುದು ಅಗತ್ಯ. ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಸೆಕ್ಯುರಿಟಿ ಅಡಿಟರ್, ಹ್ಯಾಕಿಂಗ್ ಟೂಲ್ ಅನಾಲಿಸ್ಟ್‌ಗಳಿಗಿಂತ ಹೆಚ್ಚು ಜ್ಞಾನ ಬಯಸುವ ಉದ್ಯೋಗವಿದು. ಹೆಚ್ಚಿನ ಕಂಪನಿಗಳು ಪ್ರತಿಭಾನ್ವಿತ ನೈತಿಕ ಹ್ಯಾಕರ್‌ಗಳಿಗೆ ತಮ್ಮ ಕಂಪನಿಯಲ್ಲಿ ಸ್ಥಾನ ನೀಡುತ್ತವೆ. ಹೀಗಾಗಿ ಉದ್ಯೋಗಾವಕಾಶ ಉತ್ತಮವಾಗಿದೆ.
ಕೋರ್ಸ್ ಅವಧಿ ಏನು? ಕಲಿಯೋದು ಎಲ್ಲಿ? ಫೀಸ್ ಎಷ್ಟು?
Indira Gandhi National Open University, ಅಮಿಟಿ (Amity) University, Lovely Professional University, Jain University (Bangalore), Manipal University, ಇಂಡಿಯನ್ ಸ್ಕೂಲ್ ಆಫ್ ಎಥಿಕಲ್ ಹ್ಯಾಕಿಂಗ್, ಬೆಂಗಳೂರಿನ ಜಯನಗರದಲ್ಲಿರೋ ಎಥಿಕಲ್ ಹ್ಯಾಕಿಂಗ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್, ಎಚ್‌ಎಸ್‌ಆರ್ ಬಡಾವಣೆಯಲ್ಲಿರೋ ಸಿಂಪ್ಲಿ ಲರ್ನ್ ಟ್ರೈನಿಂಗ್ ಸೆಂಟರ್, ಕ್ಯೂಸ್ಟ್ ಇನ್‌ಸ್ಟಿಟ್ಯೂಟ್ ಆಫ್ ನಾಲೆಡ್ಜ್, ಸಿಎಂಎಸ್ ಕಂಪ್ಯೂಟರ್ ಇನ್‌ಸ್ಟಿಟ್ಯೂಟ್ ಸೇರಿದಂತೆ ಹಲವು ವಿವಿಗಳಲ್ಲಿ ಕೋರ್ಸ್ ಲಭ್ಯವಿದೆ. ಇದು 1 ವರ್ಷದಿಂದ 3 ವರ್ಷದ ಡಿಪ್ಲೋಮಾ ಕೋರ್ಸ್ ಆಗಿದೆ. ಫೀಸ್ 20 ಸಾವಿರದಿಂದ 2 ಲಕ್ಷದವರೆಗೂ ಇರಲಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್.. 1 ಕೋಟಿವರೆಗೂ ಎಜುಕೇಷನ್ ಲೋನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ