/newsfirstlive-kannada/media/post_attachments/wp-content/uploads/2024/08/NEERAJ.jpg)
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದ ಶೂಟಿಂಗ್ ಕ್ವೀನ್ ಮನು ಭಾಕರ್ ಮತ್ತು ಬೆಳ್ಳಿ ಪದಕ ಗೆದ್ದ ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್ ಚೋಪ್ರಾ ಸುದ್ದಿಯಲ್ಲಿದ್ದಾರೆ. ಇವರ ಮದುವೆಗೆ ಸಂಬಂಧಿಸಿದಂತೆ ಒಂದಷ್ಟು ಗಾಸಿಪ್ಗಳು ಹರಿದಾಡುತ್ತಿವೆ.
ಇದೀಗ ತಮ್ಮ ಮೇಲೆ ನಡೆಯುತ್ತಿರುವ ಗಾಸಿಪ್ ಬಗ್ಗೆ ಮುನು ಭಾಕರ್ ಮಾತನಾಡಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು.. ಮದುವೆ ವಿಚಾರಕ್ಕೆ ಉತ್ತರ ನೀಡಿದ್ದಾರೆ. ನೀರಜ್ ಚೋಪ್ರಾ ಜೊತೆಗಿನ ಮದುವೆ ಕುರಿತ ಪ್ರಶ್ನೆಗೆ ಮನು ಭಾಕರ್ ಉತ್ತರಿಸಿದರು. ಆದರೆ ಅವರ ಉತ್ತರಕ್ಕಿಂತ ಪ್ರತಿಕ್ರಿಯೆ ಹೆಚ್ಚು ಚರ್ಚೆಯಾಗಿದೆ. ಯಾಕೆಂದರೆ ಮನು ಭಾಕರ್ ಪ್ರಶ್ನೆಗೆ ಉತ್ತರಿಸುವ ವೇಳೆ ನಾಚಿಕೊಂಡಿದ್ದಾರೆ.
ಇದನ್ನೂ ಓದಿ:ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಆಗಸ್ಟ್ 15; ಈ ದಿನವನ್ನು ನಿರ್ಧರಿಸಿದ್ದು ಹೇಗೆ ಗೊತ್ತಾ..?
ನಸುನಗುತ್ತಲೇ ಉತ್ತರಿಸಿರುವ ಮನು ಭಾಕರ್.. ನೀರಜ್ ಮತ್ತು ನಾನು ಹೆಚ್ಚು ಮಾತನಾಡಿಲ್ಲ. ನಾವು ಕೆಲವು ಸ್ಪರ್ಧೆ ಅಥವಾ ಕಾರ್ಯಕ್ರಮಗಳಲ್ಲಿ ಮಾತ್ರ ಭೇಟಿಯಾಗಿದ್ದೇವೆ. ನೀವು ಅಂದುಕೊಂಡಂತೆ ಅಲ್ಲ ಎಂದಿದ್ದಾರೆ. ಈ ವೇಳೆ ಅವರು ನಾಚಿಕೊಂಡಿರುವ ರೀತಿ ಭಾರೀ ಚರ್ಚೆ ಆಗ್ತಿದೆ. ಮನು ಭಾಕರ್ ಅಭಿಮಾನಿಗಳು ವಿಡಿಯೋ ಕ್ಲಿಪ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ. ಇದೇ ವೇಳೆ ನೀರಜ್ ಚೋಪ್ರಾ ಜೊತೆ ಮನು ತಾಯಿ ಬಗ್ಗೆ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿ ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದಿದ್ದಾರೆ.
https://twitter.com/Piyushkant16611/status/1822949373870805084
ಪ್ರೀತಿಯ ಚರ್ಚೆ ಶುರುವಾಗಿದ್ದು ಹೇಗೆ?
ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ನೀರಜ್ ಚೋಪ್ರಾ ಮತ್ತು ಮನು ಭಾಕರ್ ಪರಸ್ಪರ ಮಾತನಾಡುತ್ತಿದ್ದರು. ಈ ವೇಳೆ ಪರಸ್ಪರ ಮುಖ ನೋಡಿಕೊಂಡು ಮಾತನಾಡುತ್ತಿರಲಿಲ್ಲ. ಬೆನ್ನಲ್ಲೇ ಇಬ್ಬರ ಬಗ್ಗೆ ಚರ್ಚೆ ಜೋರಾಗಿದೆ.
ಇದನ್ನೂ ಓದಿ:ಕೊಹ್ಲಿ, ರೋಹಿತ್ ಬೆನ್ನಲ್ಲೇ ದುಲೀಪ್ ಟ್ರೋಫಿಗೆ ಕೈಕೊಟ್ಟ ಇನ್ನಿಬ್ಬರು ಸ್ಟಾರ್..!
ಆ ವಿಡಿಯೋ ಬೆನ್ನಲ್ಲೇ ಮನು ತಾಯಿ ಮತ್ತು ನೀರಜ್ ವಿಡಿಯೋ ವೈರಲ್ ಆಗಿದೆ. ಮನು ಮತ್ತು ನೀರಜ್ ಮದುವೆ ಬಗ್ಗೆ ಚರ್ಚೆ ಶುರುವಾಗಿದೆ. ಈ ವಿಡಿಯೋದಲ್ಲಿ ಮನು ತಾಯಿ ಸುಮೇಧಾ ಭಾಕರ್ ಕೂಡ ನೀರಜ್ ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡುತ್ತಿರೋದು ಕಂಡುಬಂದಿದೆ.
ಇದನ್ನೂ ಓದಿ:ದುಲೀಪ್ ಟ್ರೋಫಿಗೆ ತಂಡ ಪ್ರಕಟ; ತಂಡದಲ್ಲಿ ಟೀಂ ಇಂಡಿಯಾ ಸೂಪರ್ ಸ್ಟಾರ್ಗಳೇ ಹೆಚ್ಚು..!
Manu Bhaker’s Mother with Neeraj Chopra. pic.twitter.com/SDWbaWeOG7
— Avinash Aryan (@avinasharyan09) August 11, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ