/newsfirstlive-kannada/media/post_attachments/wp-content/uploads/2024/11/PVC-Aadhar-card.jpg)
ಆಧಾರ್ ಕಾರ್ಡ್ ಒಂದು ಪ್ರಮುಖ ಡಾಕ್ಯುಮೆಂಟ್. ಅದರ ಪ್ರಯೋಜನಗಳು ತುಂಬಾನೇ ಇವೆ. ಸರ್ಕಾರಿ ಯೋಜನೆಯ ಲಾಭ ಪಡೆಯಲು ಆಧಾರ್ ಬೇಕೇಬೇಕು. ಒಂದ್ವೇಳೆ ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದರೆ ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಅಂತಹ ಮಹತ್ವದ ಮತ್ತು ವಿಶೇಷ ದಾಖಲೆಯನ್ನು ಸುರಕ್ಷಿತವಾಗಿಡಲು ಹಾಗೂ ಅದನ್ನು ವಿರೂಪಗೊಳಿಸದಂತೆ ರಕ್ಷಿಸಲು ಸರ್ಕಾರವು PVC ಆಧಾರ್ ಕಾರ್ಡ್ ಸೇವೆ ಒದಗಿಸುತ್ತಿದೆ. ಇದು ಆಧಾರ್ ಕಾರ್ಡ್ ATM ನಂತೆ ಬರುತ್ತದೆ. ಇದಕ್ಕಾಗಿ UIDAi ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ಅಲ್ಲಿ ಲಾಗಿನ್ ಮಾಡಬೇಕಾಗುತ್ತದೆ. ಅದರಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಬೇಕು.
ಇದನ್ನೂ ಓದಿ:ಆಕಾಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೂ ಕರ್ತವ್ಯ ಮರೆಯದ ಸುನೀತಾ ವಿಲಿಯಮ್ಸ್; ಮತದಾನ ಹೇಗೆ ಮಾಡ್ತಿದ್ದಾರೆ ಗೊತ್ತಾ?
ನಂತರ ನೀವು ‘ಮೈ ಆಧಾರ್’ ವಿಭಾಗಕ್ಕೆ ಹೋಗಿ ಆರ್ಡರ್ ಆಧಾರ್ PVC ಕಾರ್ಡ್ ಕ್ಲಿಕ್ ಮಾಡಬೇಕಾಗುತ್ತದೆ. ಮುಂದೆ ತೆರೆದುಕೊಳ್ಳುವ ಇನ್ನೊಂದು ಪುಟದಲ್ಲಿ ಆಧಾರ್ ಸಂಖ್ಯೆಯನ್ನು ನಮೂದು ಮಾಡಬೇಕಾಗುತ್ತದೆ. OTP ಯೊಂದಿಗೆ ವಿವರಗಳನ್ನು ಪರಿಶೀಲಿಸಿದ ನಂತರ ನಿಮ್ಮ PVC ಆಧಾರ್ ನೋಡಬಹುದು. ಈ ಆಧಾರ್ ಆರ್ಡರ್ ಮಾಡಲು 50 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಒಂದು ವಾರದಲ್ಲಿ ಎಟಿಎಂ ರೀತಿಯ ಆಧಾರ್ ಕಾರ್ಡ್ ಮನೆಯ ವಿಳಾಸಕ್ಕೆ ಬರಲಿದೆ.
ಇದನ್ನೂ ಓದಿ:ಈ ಜನರ ರೇಷನ್ ಕಾರ್ಡ್ ರದ್ದು! ಸರ್ಕಾರದ ಇಂಥ ನಿರ್ಧಾರಕ್ಕೆ ಕಾರಣ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ