ಸುನಿತಾರನ್ನು ​ಕರೆತಂದ ನೌಕೆಯ ಶಕ್ತಿ ಎಂಥದ್ದು..? ಅದರ ಯಶಸ್ವಿ ರೋಚಕ ಕಾರ್ಯಾಚರಣೆಗಳು ಏನೇನು?

author-image
Ganesh
Updated On
ಸುನಿತಾರನ್ನು ​ಕರೆತಂದ ನೌಕೆಯ ಶಕ್ತಿ ಎಂಥದ್ದು..? ಅದರ ಯಶಸ್ವಿ ರೋಚಕ ಕಾರ್ಯಾಚರಣೆಗಳು ಏನೇನು?
Advertisment
  • 49 ಬಾರಿ ಉಡಾವಣೆ, 7 ಗಗನಯಾತ್ರಿಗಳಿಗೆ ಆಸನ ವ್ಯವಸ್ಥೆ
  • ಇಲ್ಲಿಯವರೆಗೆ 12 ಡ್ರಾಗನ್ ಕ್ರೂ ಕ್ಯಾಪ್ಸೂಲ್ ನಿರ್ಮಾಣ
  • ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಹಿಂತಿರುಗಲು 2563 ಕೆಜಿ ಇಂಧನ

ತಾಂತ್ರಿಕ ದೋಷದಿಂದ ಬಾಹ್ಯಾಕಾಶದಲ್ಲಿ ಸಿಲುಕಿದ್ದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವಲ್ಲಿ NASA ಯಶಸ್ವಿಯಾಗಿದೆ. ಈ ರೋಚಕ ಕಾರ್ಯಾಚರಣೆ ಮೂಲಕ NASA ಹೊಸ ಮೈಲಿಗಲ್ಲು ಬರೆದಿದೆ.
ಜೂನ್ 5 ರಂದು ಸುನಿತಾ ಹಾಗೂ ಬುಚ್ ಬಾಹ್ಯಾಕಾಶಕ್ಕೆ ಹೋಗಿದ್ದರು. 8 ದಿನಗಳ ನಂತರ ಭೂಮಿಗೆ ವಾಪಸ್ ಬರಬೇಕಿತ್ತು. ಆದರೆ ಗಗನಯಾನಿಗಳನ್ನು ಹೊತ್ತೊಯ್ದಿದ್ದ ಬೋಯಿಂಗ್ ಸ್ಟಾರ್​ಲೈನರ್ ನೌಕೆಯಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಹೀಗಾಗಿ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ಪರ KL ರಾಹುಲ್ ಬ್ಯಾಟಿಂಗ್ ಆರ್ಡರ್​ ಬದಲಾವಣೆ

publive-image

49 ಬಾರಿ ಉಡಾವಣೆ

NASA ಮಾಡಿದ ಈ ಸಾಹಸದ ಹಿಂದೆ ಎಲಾನ್ ಮಸ್ಕ್​ ಅವರ ಸ್ಪೇಸ್​ಎಕ್ಸ್ (SpaceX) ಪಾತ್ರ ಕೂಡ ಗಣನೀಯ. ಗಗನಯಾನಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿರೋದು SpaceX ಅಭಿವೃದ್ಧಿಪಡಿಸಿದ ಕ್ರೂ ಕ್ಯಾಪ್ಸೂಲ್. (Capsule) ಗಗನಯಾನಿಗಳನ್ನು ಕರೆದುಕೊಂಡು ಬರಲು ನಾಸಾ ಆಯ್ಕೆ ಮಾಡಿಕೊಂಡಿದ್ದೇ ಸ್ಪೇಸ್​ಎಕ್ಸ್.

SpaceX Crew ಈ ಕ್ಯಾಪ್ಸೂಲ್ ನಿರ್ಮಾಣ ಆದಾಗಿಂದ ಬರೋಬ್ಬರಿ 49 ಬಾರಿ ಉಡಾವಣೆ ಆಗಿದೆ. 44 ಬಾರಿ ಅಂತಾರಾಷ್ಟ್ರಿಯ ಬಾಹ್ಯಾಕಾಶಕ್ಕೆ ಪ್ರಯಾಣಿಸಿದೆ. 29 ಬಾರಿ ಮರು ಹಾರಾಟ ಮಾಡಿದೆ. ಈ ಕ್ಯಾಪ್ಸೂಲ್ ಏಕಕಾಲದಲ್ಲಿ 7 ಗಗನಯಾತ್ರಿಗಳಿಗೆ ಆಸನದ ವ್ಯವಸ್ಥೆಯನ್ನು ಹೊಂದಿದೆ.

ಇದನ್ನೂ ಓದಿ: ರಂಜಿನಿ ರಾಘವನ್, ಭವ್ಯಾ ಗೌಡ, ಮೋಕ್ಷಿತಾ ಪೈ ಇವರ್ಯಾರೂ ಅಲ್ಲ ಕರ್ಣನ ನಾಯಕಿ; ಮತ್ಯಾರು?

publive-image

ವಿಶ್ವದ ಮೊದಲ ಖಾಸಗಿ ನೌಕೆ

ಇದು ವಿಶ್ವದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ. ನಿರಂತರವಾಗಿ ಗಗನಯಾತ್ರಿಗಳು ಮತ್ತು ಸರಕುಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಸಾಗಿಸುತ್ತಿದೆ. ಈ ನೌಕೆಯು 7700 ಕೆಜಿ ತೂಕ ಹೊಂದುತ್ತದೆ. ಸರಕು ಮತ್ತು ಗಗನಯಾತ್ರಿಗಳೊಂದಿಗೆ ಉಡಾವಣೆ ಆದಾಗ ಅದರ ಗರಿಷ್ಠ ತೂಕದ ಸಾಮರ್ಥ್ಯ 12,500 ಕೆಜಿ ಆಗಿದೆ. 6000 ಕೆಜಿ ತೂಕದ ವಸ್ತುಗಳನ್ನು ಕಕ್ಷೆಗೆ ಸುಲಭವಾಗಿ ತಲುಪಿಸುತ್ತದೆ. 3307 ಕೆಜಿ ತೂಕವನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಬಹುದು ಅಥವಾ ಹಿಂತಿರುಗಿಸಬಹುದು. ಸಾಮಾನ್ಯವಾಗಿ 2 ರಿಂದ 4 ಗಗನಯಾತ್ರಿಗಳು ಇದರಲ್ಲಿ ಕುಳಿತುಕೊಳ್ತಾರೆ.

ತುರ್ತು ಪರಿಸ್ಥಿತಿಯಲ್ಲಿ 7 ಗಗನಯಾತ್ರಿಗಳಿಗೆ ಅನುಕೂಲ

ತುರ್ತು ಸಂದರ್ಭದಲ್ಲಿ ಏಳು ಗಗನಯಾತ್ರಿಗಳಿಗೆ ಆಸನ ವ್ಯವಸ್ಥೆ ಮಾಡುತ್ತದೆ. ಭೂಮಿಯ ಕೆಳಗಿನ ಕಕ್ಷೆಯಲ್ಲಿರುವ ಬಾಹ್ಯಾಕಾಶದಲ್ಲಿ 10 ದಿನಗಳವರೆಗೆ ಉಳಿಯಬಹುದು. ಬಾಹ್ಯಾಕಾಶ ಕೇಂದ್ರಕ್ಕೆ ಸಂಪರ್ಕಗೊಂಡರೆ 210 ದಿನಗಳವರೆಗೆ ಬಾಹ್ಯಾಕಾಶದಲ್ಲಿ ಉಳಿಯಲಿದೆ.

12 ಡ್ರಾಗನ್ ಕ್ರೂ ಕ್ಯಾಪ್ಸೂಲ್ ನಿರ್ಮಾಣ

ಡ್ರ್ಯಾಗನ್ ಕ್ರೂ ಕ್ಯಾಪ್ಸೂಲ್​ನ ಎತ್ತರ 15 ಅಡಿ. ಅದು ಕೆಳಗಿನ ಪ್ರೊಪಲ್ಸನ್ ಸಿಸ್ಟಮ್ ಸೇರ್ಪಡೆಯೊಂದಿಗೆ ಅದರ ಎತ್ತರ 26.7 ಅಡಿ ಆಗುತ್ತದೆ. ಕ್ಯಾಪ್ಸೂಲ್​ನ ಒಳಭಾಗವು 13 ಅಡಿ ಆಳ ಮತ್ತು 12 ಅಡಿ ಅಗಲ ಹೊಂದಿದೆ. ಸ್ಪೇಸ್‌ಎಕ್ಸ್‌ ಇದರ ಹಲವಾರು ರೂಪಾಂತರ ನಿರ್ಮಿಸಿದೆ. ಇಲ್ಲಿಯವರೆಗೆ 12 ಕ್ಯಾಪ್ರೂಲ್​​ಗಳನ್ನು ನಿರ್ಮಿಸಿದೆ. ಅವುಗಳಲ್ಲಿ 6 ಸಿಬ್ಬಂದಿ, 3 ಸರಕು ಮತ್ತು 3 ಮೂಲ ಮಾದರಿಗಳಾಗಿವೆ.
ಪ್ರಸ್ತುತ 8 ಟ್ರ್ಯಾಗನ್ ಕ್ಯಾಪ್ಸೂಲ್ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ 4 ಸಿಬ್ಬಂದಿ ಕ್ಯಾಪ್ಸೂಲ್ಸ್​. ಮೂರು ಸರಕು ಸಾಗಿಸುವ ನೌಕೆ. ಒಂದು ಮೂಲ ಮಾದರಿ. ಮೂರು ಕ್ಯಾಪ್ಸೂಲ್​ಗಳು ನಿವೃತ್ತಿ ಪಡೆದಿವೆ.

ಇದನ್ನೂ ಓದಿ: ಸೇಫ್ ಲ್ಯಾಂಡಿಂಗ್, ರಕ್ಷಣೆಯೂ ಆಯ್ತು.. ಮುಂದಿನ 45 ದಿನ ಸುನಿತಾ ವಿಲಿಯಮ್ಸ್ ಏನೆಲ್ಲ ಮಾಡಬೇಕು?

publive-image

2019 ರಿಂದ ಯಶಸ್ಸಿನ ಹಾರಾಟ

ಈ ಕ್ಯಾಪ್ಸೂಲ್​ನ ಮೊದಲ ಮಾನವರಹಿತ ಹಾರಾಟವು ಮಾರ್ಚ್ 2, 2019 ರಂದು ನಡೆಯಿತು. ಮೊದಲ ಮಾನವಸಹಿತ ಹಾರಾಟ ಮೇ 20, 2020 ರಂದು ನಡೆಯಿತು. ಮೊದಲ ಸರಕು ಹಾರಾಟ ಡಿಸೆಂಬರ್ 6, 2020 ರಂದು ನಡೆಯಿತು. ಇವುಗಳನ್ನು ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ಬ್ಲಾಕ್ 5 ರಾಕೆಟ್‌ನಿಂದ ಉಡಾವಣೆ ಮಾಡಲಾಗುತ್ತದೆ. ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಹಿಂತಿರುಗಲು 2563 ಕೆಜಿ ಇಂಧನ ಹೊತ್ತೊಯ್ಯುತ್ತದೆ.

ಇದನ್ನೂ ಓದಿ: ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಬಂದ ಮನೆ ಮಗಳು.. ಜುರಸಾಲ್​​ ಗ್ರಾಮದಲ್ಲಿ ಸಂಭ್ರಮಾಚರಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment