ಮೈಸೂರು ದಸರಾ ಮೂಲ ಶ್ರೀರಂಗಪಟ್ಟಣ.. ಏನು ಹೇಳುತ್ತಿದೆ ಗತವೈಭವದ ಚರಿತ್ರೆ..!?

author-image
Ganesh
Updated On
ಮೈಸೂರು ದಸರಾ ಮೂಲ ಶ್ರೀರಂಗಪಟ್ಟಣ.. ಏನು ಹೇಳುತ್ತಿದೆ ಗತವೈಭವದ ಚರಿತ್ರೆ..!?
Advertisment
  • ಮೈಸೂರಲ್ಲಿ ಮುಗಿಲು ಮುಟ್ಟಿದೆ ನಾಡ ಹಬ್ಬದ ಸಂಭ್ರಮ
  • ದಸರಾ ಹಬ್ಬ ಮೊದಲು ಆರಂಭವಾಗಿದ್ದು ಎಲ್ಲಿ?
  • ಮೈಸೂರಲ್ಲಿ ಮೇಳೈಸಿದ ರಾಜ ಒಡೆಯರ ಸಂಸ್ಕೃತಿ

ನಾಡಹಬ್ಬ ದಸರಾ ಆಚರಣೆ ಮೈಸೂರಲ್ಲಿ ವಿಜ್ರಂಭಣೆಯಿಂದ ಸಾಗಿದೆ. ಅರಮನೆ ನಗರಿಯಲ್ಲಿ ಗತಕಾಲದ ರಾಜವೈಭವ ಮೇಳೈಸುವುದರ ಜೊತೆಗೆ ಸಾಂಸ್ಕೃತಿಕ ಕಲಾ ಲೋಕವೂ ಅನಾವರಣಗೊಂಡಿದೆ. ದೇಶ-ವಿದೇಶಗಳಿಂದ ‘ಮೈಸೂರು ದಸರಾ’ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಬರುತ್ತಿದ್ದಾರೆ. ‘ಮೈಸೂರು ದಸರಾ, ಎಷ್ಟೊಂದು ಸುಂದರ’ ಬಂದವರೆಲ್ಲ ಹಾಡಿನ ಸಾಲು ಒಂದನ್ನು ಪುನರುಚ್ಛರಿಸುತ್ತಿದ್ದಾರೆ.

ದಸರಾ ಮೊದಲು ಆರಂಭವಾಗಿದ್ದು ಎಲ್ಲಿ..?

ನಾಡಹಬ್ಬ ದಸರಾಗೆ ನೂರಾರು ವರ್ಷಗಳ ಇತಿಹಾಸ ಇದೆ. ಪ್ರಾಚೀನ ಕಾಲದಿಂದಲೂ ಪರಂಪರಾಗತವಾಗಿ ನಡೆದುಕೊಂಡು ಬರುತ್ತಿದೆ. ವಿಜಯನಗರ ಅರಸರ ಕಾಲದ ವೈಭವದ ಪರಾಕಷ್ಠೆಯಾಗಿ ಹೆಗ್ಗುರುತಿನೊಂದಿಗೆ ನವರಾತ್ರಿ ಉತ್ಸವ ಮೊದಲು ಆರಂಭವಾಗಿದ್ದು ವಿಜಯನಗರ ರಾಜಧಾನಿ ಹಂಪಿಯಲ್ಲಿ. ಹೊಯ್ಸಳರ ಕಾಲದಲ್ಲಿ ಯುದ್ಧವನ್ನು ಗೆದ್ದ ವಿಜೃಂಭಣೆಯ ಸಂಕೇತವಾಗಿ ದಸರಾ ಆಚರಣೆ ಶುರುವಾಗಿತ್ತು. ಹೊಯ್ಸಳರ ನಂತರ ವಿಜಯನಗರ ಅರಸರ ಕಾಲದಲ್ಲಿ ದಸರಾ ಹಬ್ಬ ವೈಭವದಿಂದ ನಡೆಯಿತು.

publive-image

ನಂತರದ ವರ್ಷಗಳಲ್ಲಿ ದಕ್ಷಿಣ ಭಾರತಕ್ಕೆ ಸುಲ್ತಾನರು ದಂಡೆತ್ತಿ ಬಂದ ಪರಿಣಾಮ ವಿಜಯನಗರ ಸಾಮ್ರಾಜ್ಯ ಪತನಗೊಂಡಿತು. ಪರಿಣಾಮ ದಸರಾ ಆಚರಣೆಯಂತಹ ಪರಂಪರಾಗತ ಹಿಂದೂ ಸಂಭ್ರಮಗಳು ತೆರೆಮರೆಗೆ ಸರಿದಿದ್ದವು. ವಿಜಯನಗರ ಅರಸರು ಮತ್ತು ದಕ್ಷಿಣದಲ್ಲಿರುವ ಸುಲ್ತಾನರುಗಳ ನಡುವೆ ತಾಳಿಕೋಟೆ ಯುದ್ಧ ನಡೆದು ವಿಜಯನಗರ ಸಾಮ್ರಾಜ್ಯ ಪತಗೊಂಡಿತ್ತು. ಹಿಂದೂ ಸಾಮ್ರಾಜ್ಯವೂ ಅಂತ್ಯಗೊಂಡಿತ್ತು.

publive-image

ಮೈಸೂರು ದಸರಾ ಎಂದು ಹೆಸರು

ಕೊನೆಗೆ ವಿಜಯನಗರ ಸಾಮ್ರಾಜ್ಯದ ದಕ್ಷಿಣ ಭಾಗಗಳಲ್ಲಿ ಮೈಸೂರಿನ ಒಡೆಯರ್‌ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾರೆ. ಮೈಸೂರಿನ ರಾಜಾ ಒಡೆಯರ್ ಶ್ರೀರಂಗಪಟ್ಟಣವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಳ್ತಾರೆ. ಆಗ ವಿಜಯನಗರದ ಪ್ರತಿನಿಧಿ ಶ್ರೀರಂಗರಾಯರು, ಹಂಪಿಯಲ್ಲಿ ನಡೆಯುತ್ತಿದ್ದ ನವರಾತ್ರಿ ಉತ್ಸವ ಶ್ರೀರಂಗಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಆರಂಭಿಸುತ್ತಾರೆ. 1610ನೇ ಇಸವಿಯಲ್ಲಿ ಶ್ರೀರಂಪಟ್ಟಣದ ಮಂಡಲಾಧೀಶರೂ ಆಗಿದ್ದ ಶ್ರೀ ರಂಗರಾಯರು ಮತ್ತು ಅವರ ಪತ್ನಿ ಅಲಮೇಲಮ್ಮ ‘ನವರಾತ್ರಿ ಉತ್ಸವ’ವನ್ನು ಮೊದಲ ಬಾರಿಗೆ ಶುರುಮಾಡುತ್ತಾರೆ. ಶ್ರೀ ರಂಗನಾಥಸ್ವಾಮಿ ದೇಗುಲದ ಪೂರ್ವ ದಿಕ್ಕಿನಲ್ಲಿರುವ ಕಾವೇರಿ ನದಿಯ ದಂಡೆಯಲ್ಲಿ ‘ಮಹಾನವಮಿ ದಿಂಬ ನಿರ್ಮಿಸಿ’ ಅದಕ್ಕೆ ‘ಬನ್ನಿ ಮಂಟಪ’ ಎಂದು ಹೆಸರಿಡುತ್ತಾರೆ. ಶ್ರೀರಂಗಪಟ್ಟಣ ಮೈಸೂರು ಸಾಮ್ರಾಜ್ಯಕ್ಕೆ ಸೇರುತ್ತಿರೋದ್ರಿಂದ ಅದಕ್ಕೆ ‘ಮೈಸೂರು ದಸರಾ’ ಎಂದೇ ಹೆಸರು ಬಂತು.

ಗತಕಾಲದ ಶ್ರೀರಂಗಪಟ್ಟಣದ ದಸರಾ ತುಂಬಾನೇ ಅದ್ಧೂರಿಯಾಗಿ ನಡೆಯುತ್ತಿತ್ತು. ಪುರವನ್ನು ಶೃಂಗರಿಸಲು ದೇಶ, ವಿದೇಶಗಳಿಂದ ಕಲಾವಿದರನ್ನು ಕರೆದುಕೊಂಡು ಬರಲಾಗುತ್ತಿತ್ತು. ದಸರಾ ಮಹೋತ್ಸವ ಆರಂಭ ಮಾಡಲೆಂದೇ, 56 ದೇಶಗಳ ವಿಧ್ವಾಂಸರಿಗೆ ಪ್ರತ್ಯೇಕ ಬಿಡಾರ ಮಾಡಲಾಗುತ್ತಿತ್ತು. ಬ್ರಾಹ್ಮಣರಿಗಾಗಿ ಭೋಜನಗ್ರಹ ನಿರ್ಮಾಣ ಮಾಡುತ್ತಿದ್ದರು. ಬಡವ, ಶ್ರೀಮಂತ ಎನ್ನದೇ ಎಲ್ಲರೂ ಈ ಸಂಭ್ರಮದಲ್ಲಿ ಭಾಗಿಯಾಗಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿತ್ತು.

ಸುಮಾರು 120 ವರ್ಷಗಳವರೆಗೂ ಈ ರಾಜ ಒಡೆಯರ ಸಂಸ್ಕೃತಿಯು ಶ್ರೀರಂಗಪಟ್ಟಣದಲ್ಲಿ ನಡೆದುಕೊಂಡು ಬಂದಿತ್ತು. ಕಂಠೀರವ ನರಸಿಂಹರಾಜ್ ಒಡೆಯರ್ ಕಾಲದವರೆಗೂ ಶ್ರೀರಂಗಪಟ್ಟಣದಲ್ಲಿ ನಡೆಯುತ್ತದೆ. ನಂತರ ಹೈದರ್ ಅಲಿ, ಟಿಪ್ಪು ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿ ರಾಜ್ಯಭಾರ ನಡೆಸುತ್ತಾರೆ. ಟಿಪ್ಪು ನಿಧನದ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ದಿವಾನ್ ಪೂರ್ಣಯ್ಯ ಅವರು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಎಲ್ಲವನ್ನೂ ವರ್ಗಾವಣೆ ಮಾಡಿಸುತ್ತಾರೆ. ಈಗ ಮೈಸೂರಲ್ಲಿ ನಡೆಯುತ್ತಿರುವ ಎಲ್ಲಾ ಗತವೈಭವಗಳು ಹಿಂದೆ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದವು. ಶ್ರೀರಂಗಪಟ್ಟಣದಲ್ಲಿ 1610ರಿಂದ ದಸರಾ ಆರಂಭವಾಗಿ 1799ರವರೆಗೂ ನಡೆಯುತ್ತದೆ. ಇದೀಗ ಕೆಲವು ವರ್ಷಗಳಿಂದ ಶ್ರೀರಂಗಪಟ್ಟಣದಲ್ಲಿ ಗತಕಾಲದ ಪರಂಪರೆ ಪುನರಾರಂಭವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment