newsfirstkannada.com

ಟೀಂ ಇಂಡಿಯಾಗೆ ನಾಳೆ ಮತ್ತೊಂದು ಅಗ್ನಿ ಪರೀಕ್ಷೆ; ಡ್ರೆಸ್ಸಿಂಗ್ ರೂಮ್​​ ಟೆಂಪ್ರೆಚರ್ ಹೆಂಗಿದೆ..?

Share :

Published October 28, 2023 at 12:32pm

    ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಫುಲ್​ ಜೋಷ್​..!

    ನೋ ಟೆನ್ಶನ್​.. ಬಿ ಹ್ಯಾಪಿ.. ನೋ ಬಿಪಿ..!

    ರೈಟ್​ ಆರ್ಮ್​ ಕ್ವಿಕ್​ ಬೌಲರ್​ ಅವತಾರದಲ್ಲಿ​ ಕೊಹ್ಲಿ

ಆನ್​​ಫೀಲ್ಡ್​ನಲ್ಲಿ ರಣಭೇಟೆಗಾರರಂತೆ ಹೋರಾಡೋ ಟೀಮ್​ ಇಂಡಿಯಾ ಆಟಗಾರರು ಆಫ್​ ಫೀಲ್ಡ್​ನಲ್ಲಿ ಫುಲ್​ ಕೂಲ್​ ಕೂಲ್​. ಮುಂಬರುವ ಇಂಗ್ಲೆಂಡ್​ ವಿರುದ್ಧ ಮಹತ್ವದ ಪಂದ್ಯಕ್ಕೂ ಮುನ್ನವೂ ಟೀಮ್​ ಇಂಡಿಯಾ ಫುಲ್​​​ ರಿಲ್ಯಾಕ್ಸ್​ ಮೂಡ್​ನಲ್ಲಿದೆ.

ವಿಶ್ವಕಪ್​ ಮೆಗಾ ಟೂರ್ನಿಯಲ್ಲಿ ಅಜೇಯ ಓಟ ಮುಂದುವರೆಸಿರೋ ಟೀಮ್​ ಇಂಡಿಯಾ ಮುಂದೆ ನಾಳೆ ಕಠಿಣ ಸವಾಲಿದೆ. ಸಾಲು ಸಾಲು ಸೋಲುಗಳನ್ನ ಅನುಭವಿಸಿ ಗಾಯಗೊಂಡ ಸಿಂಹದಂತಾಗಿರೋ ಇಂಗ್ಲೆಂಡ್​ ಎದುರು ನಾಳೆ ಟೀಮ್​ ಇಂಡಿಯಾ ಕಣಕ್ಕಿಳಿಯಲಿದೆ. ವಿಶ್ವದ ಬಲಿಷ್ಟ ತಂಡಗಳ ಕಾದಾಟಕ್ಕೆ ಲಕ್ನೋದಲ್ಲಿ ವೇದಿಕೆ ಸಜ್ಜಾಗಿದೆ.

ಮೆಗಾ ಟೂರ್ನಿಯಲ್ಲಿ ಆಡಿದ ಐದಕ್ಕೆ ಐದೂ ಪಂದ್ಯ ಗೆದ್ದಿರುವ ಟೀಮ್​ ಇಂಡಿಯಾ ಫುಲ್​ ಜೋಷ್​ನಲ್ಲಿದೆ. ಕಪ್​ ಜಯಿಸೋ ಅಗಾಧ ಆತ್ಮವಿಶ್ವಾಸದಲ್ಲಿರೋ ರೋಹಿತ್​ ಪಡೆ, ಇಂಗ್ಲೆಂಡ್​ ಎದುರಿನ ಪಂದ್ಯಕ್ಕೂ ಮುನ್ನ ಫುಲ್​ ರಿಲ್ಯಾಕ್ಸ್​ ಮೂಡ್​ಗೆ ಜಾರಿದೆ. ಟೆನ್ಶನ್​​ಗೆ ಗೋಲಿ ಮಾರ್​ ಅಂತಿರೋ ಪ್ಲೇಯರ್ಸ್​, BE HAPPY, NO BP ಅಂತಿದ್ದಾರೆ.

ಯಾರ್ಕರ್​ ಸ್ಪೆಷಲಿಸ್ಟ್​ ಅಲ್ಲ.. ಲೆಫ್ಟ್​ ಆರ್ಮ್​ ಸ್ಪಿನ್ನರ್​ ಬೂಮ್ರಾ

ಹೌದು.. ರೈಟ್​ ಆರ್ಮ್​ ಪೇಸ್​ ಬೌಲರ್​ ಬೂಮ್ರಾ ಲೆಫ್ಟ್​ ಸ್ಪಿನ್ನರ್​ ಆಗಿ ಬದಲಾಗಿದ್ದಾರೆ. ಲೆಫ್ಟ್​ ಆರ್ಮ್​​ ಸ್ಪಿನ್ನರ್​ಗಳಾದ ರವಿಂದ್ರ ಜಡೇಜಾ, ಕುಲ್​​ದೀಪ್​ ಯಾದವ್​ ರೈಟ್​ ಆರ್ಮ್​ ಸ್ಪಿನ್ನರ್​ ಆಗಿ ಬಿಟ್ಟಿದ್ದಾರೆ. ಟೀಮ್​ ಇಂಡಿಯಾ ಪ್ರಾಕ್ಟಿಸ್​ ಸೆಷನ್​ನ ಝಲಕ್​ ಇದು. ಕೊಹ್ಲಿ ನಾನು ರೈಟ್​ ಆರ್ಮ್​ ಕ್ವಿಕ್​ ಬೌಲರ್​ ಅಂದಿದ್ದು ಅಂಡರ್​ 19 ವಿಶ್ವಕಪ್​​ ಸಮಯದಲ್ಲಿ.. ಆಗಿನಿಂದ ಈವರೆಗೆ ಕೊಹ್ಲಿ ಬೌಲಿಂಗ್​ ಮಾಡಿದ್ದು ಬೆರಳೆಣಿಕೆಷ್ಟು ಪಂದ್ಯದಲ್ಲಿ ಮಾತ್ರ. ಈ ವಿಶ್ವಕಪ್​ನಲ್ಲಿ ಅದ್ಯಾಕೋ ಕೊಹ್ಲಿಗೆ ಬೌಲಿಂಗ್​ ಮೇಲೆ ವ್ಯಾಮೋಹ ಬಂದು ಬಿಟ್ಟಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್​ ಮಾಡಿದ ಕೊಹ್ಲಿ, ಇದೀಗ ನೆಟ್ಸ್​​ನಲ್ಲೂ ಬೌಲಿಂಗ್​ಗೆ ಹೆಚ್ಚು ಆದ್ಯತೆ ಕೊಡ್ತಿದ್ದಾರೆ.

ಯುವರಾಜ ಗಿಲ್​ಗೂ ಬೌಲಿಂಗ್​ ಕ್ರೇಜ್

ಪ್ರಿನ್ಸ್​ ಶುಭ್​ಮನ್​ ಗಿಲ್​ ಕೂಡ ಅಭ್ಯಾಸದ ಅಖಾಡದಲ್ಲಿ ಬ್ಯಾಟ್​ ಬಿಟ್ಟು ಬೌಲ್ ಹಿಡಿದಿದ್ದಾರೆ. ಎಲ್ಲರೊಂದಿಗೆ ದೀರ್ಘಕಾಲ ಬೌಲಿಂಗ್​ ಅಭ್ಯಾಸ ನಡೆಸಿ ಗಮನ ಸೆಳೆದಿದ್ದಾರೆ. ಸೂರ್ಯ ಕುಮಾರ್​​ ಯಾದವ್​ ಕೂಡ ಚೆಂಡು ಹಿಡಿದ ದಾಳಿ ನಡೆಸಿದ್ದಾರೆ. ಅಲ್ಲಿಗೆ ಪ್ರಾಕ್ಟಿಸ್​ ಸೆಷನ್​ ಫುಲ್​ ತಮಾಷೆಯಲ್ಲಿ ಅಂತ್ಯವಾಗಿದೆ ಅನ್ಕೋಬೇಡಿ.. ಇಂಟೆನ್ಸಿವ್​ ಅಭ್ಯಾಸವೂ ನಡೆದಿದೆ. ಪ್ರಾಕ್ಟಿಸ್​ ನೋಡಿದ್ರೆನೆ ಎದುರಾಳಿ ಬೆಚ್ಚಿ ಬೀಳಬೇಕು ಹಾಗೆ ನಡೆದಿದೆ.

ಆಫ್​ ಫೀಲ್ಡ್​ನಲ್ಲಿ ಫುಲ್​​ ಮಸ್ತಿ, ಆನ್​ಫೀಲ್ಡ್​ನಲ್ಲಿ ಕುಸ್ತಿ

ಟೀಮ್​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ ಹಿಂದೆಂದಿಗಿಂತ ಸಖತ್​ ಜೋಷ್​ನಲ್ಲಿದೆ. ಆಫ್​ ಫೀಲ್ಡ್​ನಲ್ಲಿ ಫನ್ ವಾತಾವರಣ ತಂಡವನ್ನ ಆವರಿಸಿದೆ. ಇದು ತಂಡದ ಒಗ್ಗಟ್ಟನ್ನ ಹೆಚ್ಚಿಸಿದ್ದು, ಗುರಿ ತಲುಪೋ ಛಲ, ಹಠವನ್ನ ದುಪ್ಪಟ್ಟು ಮಾಡಿದೆ. ಆನ್​ ಫೀಲ್ಡ್​ನ ಗುರಿಯನ್ನ ಯಾರೂ ಮರೆತಿಲ್ಲ. ವಿಶ್ವಕಪ್​ ಗೆಲ್ಲೋದೇ ಆಟಗಾರರೆಲ್ಲರ ಟಾರ್ಗೆಟ್​​ ಆಗಿದ್ದು, ಆ ಗುರಿಯನ್ನ ತಲುಪಲಿ ಅನ್ನೋದೇ ಅಭಿಮಾನಿಗಳ ಪ್ರಾರ್ಥನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾಗೆ ನಾಳೆ ಮತ್ತೊಂದು ಅಗ್ನಿ ಪರೀಕ್ಷೆ; ಡ್ರೆಸ್ಸಿಂಗ್ ರೂಮ್​​ ಟೆಂಪ್ರೆಚರ್ ಹೆಂಗಿದೆ..?

https://newsfirstlive.com/wp-content/uploads/2023/10/teamindia-1.jpg

Load More